Tuesday 13 March 2012

ರಗಡ ಪಟ್ಟೀಸ್

ಈ ನನ್ನ ಲೇಖನವು ವಿಜಯ ನೆಕ್ಸ್ಟ್ ನಲ್ಲಿ ಪ್ರಕಟಗೊಂಡಿದೆ : http://www.vijayanextepaper.com//svww_zoomart.php?Artname=20120413a_018101003&ileft=633&itop=94&zoomRatio=130&AN=20120413a_018101003


ರಾಗಡಾ ಪಟ್ಟೀಸ್ ಉತ್ತರ ಭಾರತದ ಕಡೆಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಚಾಟ್. ತಿನ್ನಲೂ ಬಲು ರುಚಿ.ನೋಡಲು ಆಕರ್ಷಕ ವಾಗಿರುವುದು ಜೊತೆಗೆ ಮಕ್ಕಳು ವಯಸ್ಕರು ಎಲ್ಲ ಇಷ್ಟಪಡುವಂತ ಚಾಟ್ ಇದು . ನೀವೂ ಮಾಡಿ ನೋಡಿ .



ಬೇಕಾಗುವ ಸಾಮಗ್ರಿಗಳು :
ರಗಡ ಮತ್ತು ಪಟ್ಟೀಸ್ :-
ಬಟಾಣಿ ೧ ಕಪ್
ಆಲುಗಡ್ಡೆ ೪
ಬ್ರೆಡ್ ೧ (ಬೇಕಿದ್ದಲ್ಲಿ)
ಗರಂ ಮಸಾಲ ೧/೨ ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಅರಿಶಿನ ಪುಡಿ ೧ ಚಮಚ
ಇಂಗು ಚಿಟಕಿ

ಬಟಾಣಿ ಯನ್ನು ಬೇಯಿಸಿಕೊಳ್ಳಿ . ಒಗ್ಗರಣೆಗೆ ಸಾಸಿವೆ ಉದ್ದಿನಬೇಳೆ ಹಾಕಿ ಬೆಂದ ಬಟಾಣಿಯನ್ನು ಹಾಕಿ ಸ್ವಲ್ಪ ನೀರು ಬೇಕಾದಲ್ಲಿ ಹಾಕಬಹುದು ನಂತರ ಗರಂ ಮಸಾಲ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಕುದಿಸಿ ಪಕ್ಕದಲ್ಲಿಟ್ಟುಕೊಳ್ಳಿ .
ಈಗ ಆಲುಗಡ್ಡೆಯನ್ನು ಬೇಯಿಸಿಕೊಳ್ಳಿ ಸಿಪ್ಪೆತೆಗೆದು ನುರುಚಿ ಅದಕ್ಕೆ ಉಪ್ಪು ಮತ್ತು ಅರಿಶಿನಪುಡಿ ಇಂಗು ಬೆರೆಸಿ. ಬೇಕಿದ್ದಲ್ಲಿ ಬ್ರೆಡ್ ಅನ್ನು ನೀರಿನಲ್ಲಿ ಅದ್ದಿ ಹಿಂಡಿ ಇದರೊಂದಿಗೆ ಮಿಶ್ರ ಮಾಡಬಹುದು .ನಂತರ ಈ ಮಿಶ್ರಣವನ್ನು ಚಪಾತಿ ಉಂಡೆಗಳಂತೆ ಮಾಡಿ ಎಣ್ಣೆಯಲ್ಲಿ ಹಾಕಿ ಕಂದುಬಣ್ಣ ಬರುವವರೆಗೆ ಕರಿಯಿರಿ.

ಸಿಹಿ ಚಟ್ನಿ :
ಹುಣಸೆ ಹಣ್ಣು ಸ್ವಲ್ಪ
ಬೆಲ್ಲ ೪ ಚಮಚ
ಕೆಂಪು ಮೆಣಸಿನ ಪುಡಿ ೧ chamacha
ಉಪ್ಪು

ನೀರಿನಲ್ಲಿ ಹುಣಸೇಹಣ್ಣನ್ನು ನೆನಸಿಟ್ಟು ಅದಕ್ಕೆ ಬೆಲ್ಲ ಮೆಣಸಿನಪುಡಿ ಸ್ವಲ್ಪ ಉಪ್ಪು ಹಾಕಿ ನುಣ್ಣಗೆ ರುಬ್ಬಿ ಸಿಹಿ ಚಟ್ನಿ ತಯಾರಿಸಿಕೊಳ್ಳಿ .

ಖಾರ ಚಟ್ನಿ :
ಹಸಿಮೆಣಸು ೪
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು

ಹಸಿಮೆಣಸು ಮತ್ತು ಕೊತ್ತುಂಬರಿ ಸೊಪ್ಪನ್ನು ಹೆಚ್ಚಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ನುಣ್ಣಗೆ ರುಬ್ಬಿದರೆ ಖಾರ ಚಟ್ನಿ ರೆಡಿ .

ತಯಾರು ಮಾಡಿಟ್ಟ ೨ ಆಲೂ ಪಟ್ಟೀಸ್ ಅನ್ನು ಪ್ಲೇಟ್ ಗೆ ಹಾಕಿ ಅದರ ಮೇಲೆ ಖಾರ ಚಟ್ನಿ ಮತ್ತು ಸಿಹಿ ಚಟ್ನಿ ಒಂದೊಂದು ಚಮಚ ಹಾಕಿ ಮೇಲಿನಿಂದ ಬಟಾಣಿಯ ರಗಡವನ್ನು ಹಾಕಿ . ಅಲಂಕಾರಕ್ಕೆ ಸೇವ್ ಮತ್ತು ಸಣ್ಣಗೆ ಹೆಚ್ಚಿತ್ತ ಈರುಳ್ಳಿ ,ಕೊತ್ತಂಬರಿ ಸೊಪ್ಪು ಉದುರಿಸಿ.
ಈಗ ರುಚಿಯಾದ ಚಾಟ್ ರೆಡಿ .


ಅರ್ಪಿತಾಹರ್ಷ



No comments:

Post a Comment