Tuesday 13 March 2012

ಲಂಡನ್ ಜನಜೀವನ

ವಿಜಯ ನೆಕ್ಸ್ಟ್ ನಲ್ಲಿ ಪ್ರಕಟಗೊಂಡಿದೆ http://www.vijayanextepaper.com//svww_zoomart.php?Artname=20120427a_019101002&ileft=41&itop=97&zoomRatio=130&AN=20120427a_019101002

ಲಂಡನ್ ಜನರ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ ಕಲಿಯುವುದು ಇದೆ ಇಲ್ಲಿ ಅವಕಾಶಗಳ ಮಹಾಪೂರವೇ ಇದೆ ಎನ್ನಬಹುದು.
ಬರಿ ಅವಕಾಶಗಳಿದ್ದರೆ ಸಾಲದು ಅದನ್ನು ಹುಡುಕುವ ಹಂಬಲ ಮತ್ತು ಕೆಲಸದ ಬಗ್ಗೆ ಗೌರವ ಇರಬೇಕು. ಇಲ್ಲಿಯ ಯುವಪೀಳಿಗೆಯನ್ನು ಗಮನಿಸಿದಾಗ ಕಂಡುಬಂದ ವಿಷಯವೆಂದರೆ ಅವರಲ್ಲಿರುವ ಆಸಕ್ತಿ
ರೆಸ್ಟೋರೆಂಟ್ ಕೆಲಸ , ಟಿಕೆಟ್ ಮಾರಾಟ ,ಪೇಪರ್ ಹಾಕುವುದು ಇವುಗಳನ್ನೆಲ್ಲ ಒಂದು ಗೌರವಾನ್ವಿತ ಕೆಲಸ ಎಂದೇ ಭಾವಿಸಿ ಮಾಡುತ್ತಾರೆ ಇದರಿಂದ ತಮಗೆ ಓದಲು ಬೇಕಾಗುವ ಹಣ ಗಳಿಸಿಕೊಳ್ಳುತ್ತಾರೆ.ನಮ್ಮ ದೇಶದಿಂದ ಎಂ ಬಿ ಎ ಮತ್ತಿತರ ಉನ್ನತ ಹುದ್ದೆಗಳನ್ನು ಓದಲು ಬರುವ ಯುವಕರು ಕೂಡ ತಮ್ಮ ಬಿಡುವಿನ ವೇಳೆಯಲ್ಲಿ ಪಾರ್ಟ್ ಟೈಮ್ ಕೆಲಸಕ್ಕೋಸ್ಕರ ಇಂತಹ ಕೆಲಸಗಳಿಗೆ ಸೇರುತ್ತಾರೆ ಕಷ್ಟಪಟ್ಟು ದುಡಿಯುತ್ತಾರೆ. ಇಲ್ಲಿ ಯಾವುದಕ್ಕೂ ಮೇಲು ಕೀಳು ಎಂಬ ಭಾವನೆಗಳಿಲ್ಲ ಯಾರು ಯಾರನ್ನು ನಿನ್ನ ಕೆಲಸವೇನು ಎಂದು ಪ್ರಶ್ನಿಸುವಂತಿಲ್ಲ .
ಜೊತೆಗೆ ಇಲ್ಲಿ ಐಟಿ ಕಂಪೆನಿಗಳ ಸಂಖ್ಯೆ ದೊಡ್ಡದಿಲ್ಲದಿದ್ದರುಆರ್ಥಿಕವಾಗಿ ಮುಂದುವರೆದಿದೆ .ಹಾಗಾಗಿ ಬೇರೆಬೇರೆ ದೇಶಗಳೊಂದಿಗೆ ಟೈ ಅಪ್ ಆಗುವುದರ ಜೊತೆ ಅಲ್ಲಿನ ಜನರನ್ನು ಕೈಬೀಸಿ ಕರೆಯುತ್ತಾರೆ ನಮ್ಮ ದೇಶಗಳಲ್ಲಿ ಬುದ್ದಿವಂತರ ಸಂಖ್ಯೆ ಹೆಚ್ಚಿದೆ ಆದರೆ ಅವಕಾಶಗಳು ಕಡಿಮೆ ಇಂಜಿನಿಯರಿಂಗ್ ಓದಿಕೊಂಡರು ಕೆಲಸ ಸಿಗುವುದು ಕಷ್ಟ . ಈ ದೇಶದಲ್ಲಿ ಬಂಡವಾಳ ಹೂಡಿಕೆ ಯು ಇದೆ ಅದರಿಂದ ಲಾಭವನ್ನು ಪಡೆಯುತ್ತಾರೆ ಬೇರೆ ದೇಶದ ಬುದ್ದಿವಂತ ರಿಂದ ದುಡಿಸಿಕೊಂಡು ಹೊಸ ಆವಿಷ್ಕಾರಗಳನ್ನು ಮಾಡುತ್ತಾರೆ ಹೆಸರು ಗಳಿಸಿಕೊಳ್ಳುತ್ತಾರೆ .
ಇಲ್ಲಿಯೂ ನಿರುದ್ಯೋಗಿಗಳಿದ್ದಾರೆ ಬಡವರಿದ್ದಾರೆ ಆದರೆ ಇಲ್ಲಿ ಒಂದು ಹಂತದ ವಿದ್ಯಾಭ್ಯಾಸ ಮುಗಿದ ನಂತರ ಕೆಲಸ ಸಿಗದಿದ್ದಲ್ಲಿ ಸರ್ಕಾರವೇ ಅವರ ಖರ್ಚನ್ನು ಭರಿಸುತ್ತದೆ ಇದರಿಂದ ಇಲ್ಲಿ ಯಾರು ಬಡವರು ಎನ್ನಿಸಿಕೊಳ್ಳುವುದೇ ಇಲ್ಲ . ಜನರಿಂದ ತೆಗೆದುಕೊಳ್ಳುವ ಟ್ಯಾಕ್ಸ್ ಅನ್ನು ಈ ರೀತಿ ಉಪಯೋಗಿಸಿಕೊಳ್ಳುತ್ತದೆ ೧೮ ವರ್ಷ ತುಂಬುತ್ತಿದ್ದಂತೆ ಮಕ್ಕಳನ್ನು ಅವರ ಜೀವನ ಅವರು ನೋಡಿಕೊಳ್ಳುವಷ್ಟು ಸ್ವಾವಲಂಬಿಯನ್ನಾಗಿ ರೂಪಿಸಿ ಬಿಟ್ಟಿರುತ್ತಾರೆ . ತಮ್ಮ ಬದುಕಿಗೆ ಬೇಕಾಗುವಷ್ಟು ದುಡಿಮೆಯನ್ನು ಅವರೇ ದುಡಿದುಕೊಳ್ಳುತ್ತಾರೆ. ನಮ್ಮ ದೇಶದ ರೀತಿ ರಾಜಕೀಯಗಳಿರುವುದಿಲ್ಲ ಹಣವನ್ನು ಎಲ್ಲೂ ದುರುಪಯೋಗ ಮಾಡುವ ಅವಕಾಶಗಳಿಲ್ಲ .
ಭಾರತದಂತ ದೇಶಗಳಲ್ಲಿ ಯುವಕರಿಗೆ ಜೀವನದ ಬಗ್ಗೆ ಹೆಚ್ಚು ಆಸಕ್ತಿ ಇರುತ್ತದೆ ಮುಂದೇನು ಎಂಬುದರ ಬಗ್ಗೆ ಯೋಚನೆ ಇರುತ್ತದೆ ಇಲ್ಲಿಯ ಜನರಿಗೆ ಮಾಡುವ ಕೆಲಸದಲ್ಲಿ ಆಸಕ್ತಿ , ಶ್ರದ್ದೆ ಇರುತ್ತದೆ ನಿಜ ಆದರೆ ಜೀವನದ ಬಗ್ಗೆ ಗಂಭೀರತೆ ಇರುವುದಿಲ್ಲ ಕೆಲಸ ಸಿಗದಿದ್ದರೂ ಸರ್ಕಾರದಿಂದ ದೊರಕುವ ಭತ್ಯೆ ಯಲ್ಲಿಯೇ ಕಾಲ ಕಳೆಯಬಹುದೆಂಬ ನಿರ್ಧಾರ ಇರುತ್ತದೆ. ಜೊತೆಗೆ ಇಲ್ಲಿನ ಜನ ಮಕ್ಕಳಿಗೆ ಅಥವಾ ಜೀವನದ ಮುಂದಿನ ದಿನಗಳಿಗಾಗಿ ಏನನ್ನು ಕೂಡಿ ಇಡುವುದಿಲ್ಲ ಬಂದ ಹಣವನ್ನೆಲ್ಲ ಪ್ರವಾಸಗಳಿಗೆ ಅಥವಾ ಇತರ ರೀತಿಯ ಮನೋರಂಜನೆಗಳಿಗೆ ಬಳಸುತ್ತಾರೆ ಇದರಿಂದ ವರ್ತಮಾನದಲ್ಲಿ ಸಂತೋಷ ವನ್ನು ಅನುಭವಿಸುತ್ತಾರೆ ಮುದಿನ ದಿನಗಳ ಬಗ್ಗೆ ಅವರಲ್ಲಿ ಯಾವುದೇ ರೀತಿಯ ನಿರೀಕ್ಷೆಗಳಾಗಲಿ ಭಯಗಳಾಗಲಿ ಇರುವುದಿಲ್ಲ .ಹಾಗಾಗಿ ಇಲ್ಲಿನ ಜನರಿಗೆ ಜೀವನದಲ್ಲಿ ಏನಾದರೊಂದನ್ನು ಸಾಧಿಸಬೇಕೆಂಬ ಹಂಬಲ ಅಷ್ಟೊಂದಿರುವುದಿಲ್ಲ.ಜೊತೆಗೆ ಇಲ್ಲಿ ಆರ್ಥಿಕವಾಗಿ ಮುಂದಿರುವುದರಿಂದ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತಾರೆ ಎನ್ನಬಹುದು .ನಮ್ಮ ದೇಶದಲ್ಲಿ ವಿದ್ಯಾವಂತರು ಹೆಚ್ಚಿದ್ದಾರೆ ಆದರೆ ಅವರು ಅವಕಾಶಗಳಿಗೊಸ್ಕರ ಕಾಯುತ್ತಾರೆ ಅದು ಹೊರದೇಶಗಳಲ್ಲಿ ಸಿಕ್ಕಾಗ ದೇಶ ಬಿಟ್ಟು ಹೊರದೇಶಗಳಲ್ಲಿ ನೆಲೆ ಹೂಡುವ ಪ್ರಯತ್ನ ಮಾಡುತ್ತಾರೆ .ಇದರಿಂದ ಅವರ ವೈಯಕ್ತಿಕ ಜೀವನಕ್ಕೆ ಲಾಭವಾಗುತ್ತದೆ ಆದರೆ ದೇಶಕ್ಕೆ ನಷ್ಟ ಏಕೆಂದರೆ ದೇಶ ಒಂದು ಒಳ್ಳೆಯ ಪ್ರತಿಭೆಯನ್ನು ಕಳೆದುಕೊಳ್ಳುತ್ತದೆ . ಪ್ರತಿಭಾ ಪಲಾಯನವಾಗುತ್ತಿದೆ .


No comments:

Post a Comment