Monday 19 March 2012

ಅಣ್ಣನಿಗೊಂದು ಅಂತರಾಳದ ಮಾತು

೧೯/೦೫/೨೦೧೨ ರ ಹೊಸದಿಗಂತದಲ್ಲಿ ಪ್ರಕಟಗೊಂಡಿದೆ 

ಪ್ರೀತಿಯ ಅಣ್ಣ
ಬಹಳ ದಿನಗಳ ನಂತರ ದಿನಗಳ ನಂತರವೇನು ಇದೆ ಮೊದಲ ಭಾರಿಗೆ ನಿನಗೆ ಪತ್ರ ಬರೆಯುವ ಸಾಹಸಕ್ಕೆ ಕೈ ಹಾಕಿದ್ದೇನೆ . ಆಶ್ಚರ್ಯವಾಗುತ್ತಿರಬಹುದು ಜೊತೆಗೆ ಸಂತೋಷವು ಆದೀತೆಂಬ ನಂಬಿಕೆ .ಕಳೆದ ಕೆಲ ದಿನಗಳಿಂದ ನಿನ್ನಲ್ಲದ ಬದಲಾವಣೆಯನ್ನು ಗಮನಿಸಿದೆ ದೂರವಿದ್ದರು ರಕ್ತಸಂಬಂಧ ನೋಡು ಮಾತಿನಲ್ಲೇ ಮನಸ್ಸು ತಿಳಿಯುವ ಸಣ್ಣ ಪ್ರಯತ್ನ ಮಾಡಿದೆ . ಮೊದಲಿನಂತಿಲ್ಲ ನೀನು . ನಿನ್ನೊಟ್ಟಿಗೆ ಕಲಿತ ಪಾಠ, ಆಡಿದ ಆಟ, ಮಾಡಿದ ಜಗಳ, ಇವೆಲ್ಲ ಇಂದಿಗೂ ಹಚ್ಚ ಹಸಿರು .ನೀನು ಅಷ್ಟೇ ನಿನ್ನ ಕಣ್ಣ ಬಿಂದುವಿನಂತೆ ನನ್ನ ನೋಡಿಕೊಂಡೆ ಜೀವನದಲ್ಲಿ ಎಷ್ಟೋ ಭಾರಿ ಮನ ನೋಯಿಸಲೆಂದೇ ಕೆಲವರು ಆಡಿದ ಮಾತುಗಳಿಂದ ನೊಂದಾಗ ಜೊತೆ ನೀಡಿದವ ನೀನು, ಚಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ಬುದ್ಧಿ ಹೇಳಿದವ ನೀನು . ಕಣ್ಣಲ್ಲಿ ನೀರು ತುಂಬಿದ್ದನ್ನು ಯಾರು ಗಮನಿಸದಿದ್ದರು ನೀನೆ ಗಮನಿಸಿ ಇದಕ್ಕೆಲ್ಲ ಒಂದೇ ಉತ್ತರ ಸಾಧಿಸಿ ತೋರಿಸು ಎಂದು ಹುರಿದುಂಬಿಸಿದವ ನೀನು . ಏನಿದ್ದರು ಮನಸ್ಸಿನಲ್ಲಿಟ್ಟುಕೊಳ್ಳ ಬೇಡ ನಾನಿರುವೆ ನಿನ್ನ ಅಣ್ಣ ಎಂದು ಸಾಂತ್ವನ ನೀಡಿದವ . ಚಿಕ್ಕಂದಿನಿಂದಲೂ ಅಳುವಿನಲ್ಲೂ ನಗಿಸಿದವ ನೀನು . ನಿನ್ನ ನೋಡಿದರೆ ನನಗೊಂದು ಹೆಮ್ಮೆ .
ಆದರೆ ಇತ್ತೀಚಿಗೆ ನೀನು ಮೊದಲಿನಂತಿಲ್ಲ ಸಾಕಷ್ಟು ಬದಲಾಗಿದ್ದೀಯ .ಕೆಲವೊಮ್ಮೆ ಇಲ್ಲೇ ಇದ್ದು ಎಲ್ಲೊ ಕಳೆದು ಹೋದಂತಿರುತ್ತೀಯ ಇನ್ನೊಮ್ಮೆ ಮಾತನಾಡಿಸಿದರೆ ಏನೋ ಅಡಚಣೆ ಏನೋ ಎಂಬಂತೆ ವರ್ತಿಸುತ್ತೀಯ ನಿನ್ನ ಈ ರೀತಿಯ ವರ್ತನೆ ನನಗೆ ತೀರ ಹೊಸದು .ಮೊದಲೆಲ್ಲ ಹೀಗಿರಲಿಲ್ಲ ನೀನು ಮಾತು ಸಾಕು ಎಂಬಲ್ಲಿವರೆಗೆ ಹರಟುತ್ತಿದ್ದೆ . ಇನ್ನು ನಗಲು ಸಾಧ್ಯವೇ ಇಲ್ಲ ಎಂಬಷ್ಟು ನಗಿಸುತ್ತಿದ್ದೆ . ಮನಬಿಚ್ಚಿ ಹರಟುತ್ತಿದ್ದೆ . ನನಗು ಆಗೆಲ್ಲ ನಿನ್ನೊಂದಿಗೆ ಹಂಚಿಕೊಳ್ಳಲು ಸಾಕಷ್ಟು ವಿಷಯಗಳಿರುತ್ತಿದ್ದವು. ಆದರೆ ಈಗ ನೀನು ತುಂಬಾ ಗಂಭೀರ ಮೊದಲಿನ ನಗು ಇಲ್ಲ ಮಾತೂ ಇಲ್ಲ . ಏಕೆ ಹೀಗೆ ಎಂಬ ಪ್ರಶ್ನೆಗೆ ಮಾತ್ರ ಇಂದು ಉತ್ತರ ದೊರಕಲಿಲ್ಲ . ನಾವು ಬದುಕಿನಲ್ಲಿ ಏನಾದರು ಸಾಧಿಸಬೇಕು ಎಂಬ ಪ್ರಯತ್ನ ದಲ್ಲಿದ್ದಾಗ ಹಲವಾರು ತೊಂದರೆಗಳು ಅಡ್ಡಬರುವುದು ಸಹಜ ಕೆಲವೊಮ್ಮೆ ಕೊಂಕು ನುಡಿಗಳೂ ಕೇಳಬೇಕಾಗುವುದು ಆದರೆ ಅವನ್ನೆಲ್ಲ ಗಣನೆಗೆ ತೆಗೆದುಕೊಳ್ಳದೆ ಮುನ್ನುಗ್ಗಿ ಬದುಕನ್ನು ಹಸನಾಗಿಸಿಕೊಂಡು ಹೋಗುವುದೇ ಜೀವನ . ನೀನೇನು ಮಾಡಬೇಕೆಂಬುದು ನಿನ್ನ ಹಿಡಿತದಲ್ಲಿದ್ದರೆ ಎಲ್ಲವೂ ಸುಲಭ ನಿನ್ನ ದಾರಿ ಸುಗಮವಾಗಿಸಿಕೊಳ್ಳುವುದು ನಿನ್ನ ಕೈಯಲ್ಲೇ ಇದೆ . ಮುನ್ನುಗ್ಗಿ ನಿನ್ನ ಜೀವನ ವನ್ನು ಯಶಸ್ವಿಯಾಗಿಸಿಕೊ. ಎಂತಹ ಸಂದರ್ಭದಲ್ಲೂ ಧ್ರುತಿಗೆಡಬೇಡ .ಇವೆಲ್ಲ ನಿನಗೆ ಗೊತ್ತಿರುವ ವಿಚಾರಗಳೇ ನೀನೆ ನನಗೆ ಹೇಳಿಕೊಟ್ಟ ವಿಚಾರಗಳು ಆದರು ತಂಗಿಯಾಗಿ ಇದಿಷ್ಟನ್ನು ಒಮ್ಮೆ ನೆನಪಿಸುವ ಸಣ್ಣ ಪ್ರಯತ್ನ ಮಾಡಿದ್ದೇನೆ .
ಎಂದು ನಿನಗೆ ಪತ್ರ ಬರೆದಿರಲಿಲ್ಲ ನಿನ್ನ ಎದುರು ಕುಳಿತು ಹೇಳಬೇಕು ಎಂದುಕೊಂಡಿರುವುದೆಲ್ಲ ಹೇಳಿಬಿಡುತ್ತಿದ್ದೆ. ಒಂದು ಆತ್ಮೀಯ ಹರಟೆ ಅಲ್ಲಿರುತ್ತಿತ್ತು ಇತ್ತೀಚಿಗೆ ನಿನ್ನೆದುರು ಇದನ್ನೆಲ್ಲಾ ಹೇಳುವ ಪ್ರಯತ್ನ ಮಾಡಿ ಸೋತಿದ್ದೇನೆ ಅದಕ್ಕಾಗಿ ಈ ಪತ್ರ ಎದುರು ಹೇಳಲಾಗದುದನ್ನು ಇಲ್ಲಿ ಹೇಳುತ್ತಿದ್ದೇನೆ .ಓದಿ ಉತ್ತರಿಸು.



ಇಂತಿ ನಿನ್ನ ತಂಗಿ
ಅರ್ಪಿತಾ ಹರ್ಷ



No comments:

Post a Comment