Tuesday 24 April 2012

ಡಬ್ಬಿಂಗ್ ಮಾರಕ ಅಲ್ಲವೇ ಅಲ್ಲ

ದಟ್ಸ್ ಕನ್ನಡದಲ್ಲಿ ಪ್ರಕಟಗೊಂಡಿದೆ http://kannada.oneindia.in/movies/news/2012/04/25-kannada-needs-dubbing-films-says-arpita-rao-aid0052.html

ಬೇರೆ ಭಾಷೆಯಲ್ಲಿ ಬರುವ ಕಾರ್ಯಕ್ರಮಗಳನ್ನು ಅಥವಾ ಸಿನೆಮಾಗಳನ್ನು ಡಬ್ಬಿಂಗ್ ಮಾಡುವುದು ಪೂರಕವೋ ಅಥವಾ ಮಾರಕವೋ ಎಂಬ ಬಗ್ಗೆ ದಟ್ಸ್ ಕನ್ನಡದಲ್ಲಿ ನಡೆದ ಚರ್ಚೆಗೆ ಬರೆದ ಲೇಖನವಿದು .

ಡಬ್ಬಿಂಗ್ ಎನ್ನುವುದು ಕೇವಲ ಕನ್ನಡ ರಂಗದಲ್ಲಿ ಮಾತ್ರ ಇರುವಂತಹದಲ್ಲ ಇದು ಎಲ್ಲ ಭಾಷೆಗಳಲ್ಲೂ ಇದೆ .ಬೇರೆಬೇರೆ ಭಾಷೆಗಳಲ್ಲಿ ಪ್ರಸಿದ್ಧಿ ಪಡೆದ ಕಾರ್ಯಕ್ರಮಗಳು ಸಿನಿಮಾಗಳನ್ನು ತಮ್ಮ ಭಾಷೆಗೆ ಡಬ್ಬಿಂಗ್ ಮಾಡುವುದು ಹೊಸತಲ್ಲ .ಹೀಗಿರುವಾಗ ಕನ್ನಡದಲ್ಲೂ ಮಾಡಿದರೆ ಇದರಲ್ಲಿ ಯಾವುದೇ ರೀತಿಯ ತಪ್ಪಿಲ್ಲ . ಜೊತೆಗೆ ಇಲ್ಲಿ ಮಾರಕವಾಗುವುದು ಏನೂ ಇಲ್ಲ. ನಮ್ಮ ಕರ್ನಾಟಕದಲ್ಲಿರುವವರಿಗೆ ಕನ್ನಡಿಗರಿಗೆ ತಮ್ಮ ಮಾತೃ ಭಾಷೆ ಕನ್ನಡ ಎಲ್ಲರಿಗೂ ಗೊತ್ತಿರುತ್ತದೆ ಎಲ್ಲೊ ಓದಿದವರಿಗೆ ಬೇರೆ ಭಾಷೆಯ ಒಡನಾಟ ಇರುವವರಿಗೆ ಕನ್ನಡವಲ್ಲದೆ ಹಲವು ಭಾಷೆ ತಿಳಿದಿರುತ್ತದೆ ಮತ್ತು ಅಂತವರು ಬೇರೆ ಭಾಷೆಯಲ್ಲಿ ಜನಪ್ರಿಯತೆ ಹೊಂದಿದ ಕಾರ್ಯಕ್ರಮಗಳನ್ನು ಅಥವಾ ಚಲನಚಿತ್ರಗಳನ್ನು ವೀಕ್ಷಿಸಬಹುದು. ಆದರೆ ಕೇವಲ ಕನ್ನಡವೊಂದೆ ತಿಳಿದಿರುವವರು ಬೇರೆ ಭಾಷೆಯ ಕಾರ್ಯಕ್ರಮಗಳನ್ನು ನೋಡುವ ಪ್ರಯತ್ನ ಮಾಡುವುದಿಲ್ಲ. ಅದರಲ್ಲೂ ಹಳ್ಳಿಗಳಲ್ಲಿರುವ ಕನ್ನಡಿಗರು  ಕನ್ನಡ ಚಲನಚಿತ್ರಗಳನ್ನು  ಥಿಯೇಟರ್ ಗಳಿಗೆ ಹೋಗಿ ವೀಕ್ಷಿಸುವುದು ಬಹಳ ಕಡಿಮೆ ಇನ್ನು ಬೇರೆ ಭಾಷೆಯ ಚಲನಚಿತ್ರಗಳನ್ನು ಅಥವಾ ಟಿವಿ ಕಾರ್ಯಕ್ರಮಗಳನ್ನು ನೋಡುವುದು ಸತ್ಯಕ್ಕೆ ದೂರದ ಸಂಗತಿ .ಉದಾಹರಣೆಗೆ ನಾಗವಲ್ಲಿ ಅಂತಹ ಚಲನಚಿತ್ರಗಳು ತಮಿಳು ತೆಲುಗಿನಲ್ಲಿ ಪ್ರಸಿದ್ಧಿ ಪಡೆದಿದ್ದರೂ ಕೂಡ ಕನ್ನಡದಲ್ಲಿ ಇದನ್ನು ತರದಿದ್ದರೆ ಕನ್ನಡ ಚಿತ್ರರಂಗಕ್ಕೆ ಒಂದು ನಷ್ಟವಾಗುತ್ತಿತ್ತು .
ಇನ್ನು ಡಿಸ್ಕವರಿ ಪೋಗೋ ದಂತ ಚಾನೆಲ್ ಗಳು ಜನರಿಗೆ ಒಳ್ಳೆಯ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಪ್ರಕತಿಸುವುದರಿಂದ ಅಂತಹದನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡುವುದರಿಂದ ಎಲ್ಲ ಕನ್ನಡಿಗರು ನೋಡಲು ಪ್ರಾರಂಭಿಸುತ್ತಾರೆ ಮತ್ತು ಇದರಿಂದ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳುತ್ತಾರೆ . ಜೊತೆಗೆ ಕೆಲವೊಂದು ಸಿನೆಮಾಗಳಲ್ಲು ಕೂಡ ತಿಳಿದುಕೊಳ್ಳುವುದು ಇರುತ್ತದೆ ಅಂತಹವನ್ನು ಡಬ್ಬಿಂಗ್ ಮಾಡುವುದರಿಂದ ಅನುಕೂಲವೇ ಹೊರತು ಯಾವುದೇ ರೀತಿಯ ಅನಾನುಕೂಲತೆಗಳು ಇಲ್ಲ  .ಆದ್ದರಿಂದ ಡಬ್ಬಿಂಗ್ ಯಾವುದೇ ರೀತಿಯಲ್ಲೂ ಕೂಡ ಮಾರಕವಾಗಲಾರದು .


Monday 23 April 2012

ಯುರೋಪ್ ಪ್ರವಾಸಿ ಕಥನ ಭಾಗ ೨



 
ಒಂದು ರಾತ್ರಿ ಪೂರ್ತಿ ಬಸ್ ನಲ್ಲಿ ಪ್ರಯಾಣಿಸಿದ ನಂತರ ಬೆಳಗ್ಗೆ ಸುಮಾರು .೩೦  ಹೊತ್ತಿಗೆ ನಮಗೆ  ಜರ್ಮನಿ  ಒಂದು ಹೋಟೆಲ್ ಅಲ್ಲಿ ಸ್ನಾನ ಮತ್ತು ತಿಂಡಿಗಾಗಿ ನಿಲ್ಲಿಸಿದ್ದರು ಅಲ್ಲಿ ಸುಮಾರು  ತಾಸುಗಳ ವಿರಾಮ ಇತ್ತುಜರ್ಮನಿ ಯಲ್ಲಿ ಸಸ್ಯಾಹಾರ ಗಳು ಸಿಗುವುದು ಬಹಳ ಕಷ್ಟ ಎಂಬುದು ಮೊದಲೇ ತಿಳಿದಿತ್ತ್ತಾದರು ಇಷ್ಟೊಂದು ಕಷ್ಟವೆಂದುಕೊಂಡಿರಲಿಲ್ಲ ಒಂದು ಹೊತ್ತಿನ ತಿಂಡಿಗೊಸ್ಕರ ಎಲ್ಲ ಅಂಗಡಿಗಳನ್ನು ಹತ್ತಿ ಇಳಿಯುವ ಪರಿಸ್ಥಿತಿ ಬಂದಿತ್ತು ಕೊನೆಗೂ ಒಂದು ಅಂಗಡಿಯಲ್ಲಿ ಸಸ್ಯಾಹಾರ ಸಿಕ್ಕಿದ್ದು ಕುಷಿ ನೀಡಿ ಜೊತೆಗೆ ಕಾಫಿ ಕುಡಿದು ಅಲ್ಲಿಂದ ಹೊರಟೆವು.

ಮೊದಲು ನಮ್ಮ ಟೀಮ್ ಹೊರಟಿದ್ದು ಜರ್ಮನಿ  ಕುಕ್ಕೂಸ್ ಕ್ಲಾಕ್ ಇರುವ ಸ್ಥಳಕ್ಕೆ . ಇದೆ ಸ್ಥಳದಲ್ಲಿ ಪ್ರಪಂಚದಾದ್ಯಂತ ಹೆಸರು ಪಡೆದಿರುವ ಕುಕ್ಕೂಸ್ ಕ್ಲಾಕ್ ತಯಾರಿಸುತ್ತಿರುವುದು . ಅದನ್ನು ಒಂದು ಮ್ಯೂಸಿಯಂ ನಂತೆ ಇಡಲಾಗಿದೆ ಜೊತೆಗ್ ಕ್ಲಾಕ್ ಮಾರಾಟವು ನಡೆಯುತ್ತದೆ . ಕುಕ್ಕೂಸ್ ಕ್ಲಾಕ್ ಅನ್ನು ಹೇಗೆ ಮಾಡುವುದು ಎಂಬ ಬಗ್ಗೆ ಕೂಡ ಮಾಹಿತಿ ಗಳಿಸಿದ ಬಳಿಕ ನಾವು  ಅಲ್ಲೇ ಸುತ್ತ ಇರುವ ಬ್ಲಾಕ್ ಫಾರೆಸ್ಟ್ ನಲ್ಲಿ ಒಂದು ಸುತ್ತು ಹೊಡೆದು ಅದರ ಸವಿ ಸವಿದು ಹೊರಟೆವು ಬ್ಲಾಕ್ ಫಾರೆಸ್ಟ್ ದತ್ತ ಅರಣ್ಯ ಕಣ್ಣೆತ್ತಿ ನೋಡಿದರೆ ಆಕಾಶದೆತ್ತರಕ್ಕೆ ಬೆಳೆದು ನಿಂತ ಮರಗಳು  ಮರಗಳಿಂದಲೇ ಕುಕ್ಕೂಸ್ ಕ್ಲಾಕ್ ಅನ್ನು ತಯಾರಿಸಲಾಗುತ್ತಿದೆ.
 ಮತ್ತು ಇದು ಕೋಗಿಲೆ ಕೂಗುವ ಹಾಗೆ ಪ್ರತಿ ಗಂಟೆಗೊಮ್ಮೆ ಕೂಗುವಂತೆ ಮಾಡಿರುವುದರಿಂದ ಇದಕ್ಕೆ ಕುಕ್ಕೂಸ್ ಕ್ಲಾಕ್ ಎಂಬ ಹೆಸರನ್ನು ಇಡಲಾಗಿದೆ .ಇದನ್ನು ಮೊದಲ ಭಾರಿಗೆ ಯಾರು ಕಂಡು ಹಿಡಿದರು ಎಂಬ ಬಗ್ಗೆ ಮಾಹಿತಿ ಇಲ್ಲದಿದ್ದರೂ ಇದನ್ನು ೧೮ ನೆ ಶತಮಾನದಲ್ಲಿ ಪ್ರಾರಂಬಿಸಲಾಯಿತು ಎಂದು ಹೇಳಲಾಗುತ್ತದೆ.ಇಂದು ಅದು  ಜಗತ್ಪ್ರಸಿದ್ಧಿ ಹೊಂದಿದೆ. ಜರ್ಮನಿ ಯ ಅತಿ ಮುಖ್ಯ ಪ್ರವಾಸಿ ಸ್ಥಳವಾಗಿ ಮಾರ್ಪಟ್ಟಿದೆ .ಜರ್ಮನಿ ಗೆ ಹೋದವರು ಇಲ್ಲಿ ಬೇಟಿ ನೀಡದೆ ಇರಲಾರರು. ಸುತ್ತಲು ಕಾಡಿನಿಂದ ಸುತ್ತುವರೆದು ಮಧ್ಯದಲ್ಲಿ ಇದನ್ನು ತಯಾರಿಸುವ ಪ್ರದೇಶವಿದೆ.ಕುಕ್ಕೂಸ್ ಕ್ಲಾಕ್ ನ ಮ್ಯೂಸಿಯಂ ಕೇವಲ ಜರ್ಮನಿ ಯಲ್ಲಿ ಮಾತ್ರವಲ್ಲದೆ ಬೇರೆಬೇರೆ ದೇಶಗಳಲ್ಲೂ ಇವೆ.
ಅಲ್ಲಿಂದ ನಾವು ಹೊರಡುವಾಗ  ಸುಮಾರು 12 ಗಂಟೆ ಯಾಗಿದ್ದರಿಂದ  ನಂತರ ನಾವು ಸ್ವಿಸ್ಸ್ ನ  ರೈನ್ ಫಾಲ್ಸ್ ಅನ್ನು ತಲುಪುವಷ್ಟರಲ್ಲಿ ೨.೩೦ ದಾಟಿ ಊಟದ  ಸಮಯವಾಗಿತ್ತು ರೈನ್ ಫಾಲ್ಸ್ ನಲ್ಲಿ ಜಲಪಾತದ  ಎದುರಿನಲ್ಲೇ ಒಂದು ಹೋಟೆಲ್ ಇದೆ ಅಲ್ಲಿ ಹೋಗಿ ಊಟ ಮಾಡಿ ನಂತರ ರೈನ್ ಫಾಲ್ಸ್ ಅನ್ನು ನೋಡಲು ಹೊರಟೆವು. 
ರೈನ್ ಫಾಲ್ಸ್ ಎಂಬುದು ಒಂದು ಜಲಪಾತ  ಜೊತೆಗೆ ನದಿಯು ಕೂಡ ಇದೆ ಜಲಪಾತದ ಹತ್ತಿರದವರೆಗೆ ಲಾಂಚ್ ನ ಮೂಲಕ ಹೋಗಬಹುದು. ನಾವು ಲಾಂಚ್ ಮೂಲಕ ಒಂದು ದಡದಿಂದ ಇನ್ನೊಂದು ದಡಕ್ಕೆ ಹೋದೆವು .ಅಲ್ಲಿ ಜಲಪಾತವನ್ನು ಹತ್ತಿರದಿಂದ ನೋಡಲು ಒಂದು ಕಟ್ಟೆಯನ್ನು ಕಟ್ಟಲಾಗಿದೆ ಅಲ್ಲಿ ನಿಂತು ನೋಡಬಹುದು. ಹಾಗೆ ನಾವು ಅಲ್ಲಿ ಹೋಗಿ ಹತ್ತಿರದಿಂದ ಛಾಯಾಚಿತ್ರಗಳನ್ನು ತೆಗೆದುಕೊಂಡು ಜೊತೆಗೊಂದಿಷ್ಟು ವೀಡಿಯೋ ಕೂಡ ತೆಗೆದುಕೊಂಡೆವು ಅಲ್ಲಿಯ ಅನುಭವ  ವರ್ಣಿಸಲು ಕಷ್ಟ  ದುಮ್ಮಿಕ್ಕುವ ನೀರಿನ ಭರದಿಂದ  ಜೋರಾಗಿ ಶಬ್ದ ಕಿವಿಗೆ ರಾಚುತ್ತಿತ್ತು. 
ಅಲ್ಲೀ ಒಂದು ಸುತ್ತು ಹಾಕಿಕೊಂಡು ನಂತರ ನಾವು ಹೊರಟಿದ್ದು ಸ್ವಿಸ್ಸ್ ನ  ಯೆನ್ಗಲ್ಬರ್ಗ್  ಎಂಬ  ಸ್ಥಳಕ್ಕೆ ಅಲ್ಲಿ ನಮಗೆ ರಾತ್ರಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು .

ಯುರೋಪ್ ಪ್ರವಾಸಿ ಕಥನ ಭಾಗ ೧




 
ಲಂಡನ್ ನಲ್ಲಿ ಇದ್ದು ಬಹಳ ದಿನಗಳಾದ ಮೇಲೆ ಯುರೋಪ್ ಗೆ ಅದರಲ್ಲೂ ಸ್ವಿಸ್ಸ್ ಎಂಬ ಕನಸಿನ ಸ್ಥಳಕ್ಕೆ ಒಮ್ಮೆ ಭೇಟಿ ನೀಡಲೇ ಬೇಕು ಎಂದು ಮನಸ್ಸು ಮಾಡಿದ್ದಾಗಿತ್ತು . ಹಾಗೆಯೇ ಸುಮಾರು ದಿನಗಳ ಮೀನಾ ಮೇಶಗಳ ನಂತರ ಹೋಗುವುದು ಎಂಬುದನ್ನು ಖಚಿತ ಪಡಿಸಿಕೊಂಡು ಭಾರತದವರದ್ದೆ ಆದ ಸ್ಟಾರ್ ಟೂರ್ಸ್ ಎಂಬ ಪ್ರವಾಸಿ ವಿಭಾಗದವರನ್ನು ಫೋನ್ ಮೂಲಕ ವಿಚರಿಸಿದ್ದಾಯಿತು . ಅವರು ಹೇಳುವ ಪ್ರಕಾರ ಸ್ಟಾರ್ ಟೂರ್ಸ್ ನಲ್ಲೆ ಹೋದರೆ ಅವರದೇ ಆದ ಬಸ್ ಎಲ್ಲ ಸ್ಥಳಗಳಿಗೆ ಕರೆದುಕೊಂಡು ಹೋಗಿ ಸರಿಯಾದ ಮಾಹಿತಿ ನೀಡುತ್ತದೆ ಜೊತೆಗೆ ಊಟದ ಮತ್ತು ತಿಂಡಿಯ ವ್ಯವಸ್ಥೆ ಕೂಡ ಇರುತ್ತದೆ ಹೊಸ ಸ್ಥಳ ಗಳಾಗಿದ್ದರಿಂದ ಎಲ್ಲಿ ಹೋಗಬೇಕು ಹೇಗೆ ಹೋಗಬೇಕು ಎಂಬ ಗೊಂದಲಗಳಿರುವುದಿಲ್ಲ ಎಲ್ಲ ದೃಷ್ಟಿ ಇಂದ ಸ್ಟಾರ್ ಟೂರ್ಸ್ ನಲ್ಲಿ ಹೋಗುವುದೇ ಒಳ್ಳೆಯದು ಎಂಬ ನಿರ್ಧಾರಕ್ಕೆ ಬಂದ ನನ್ನ ಪತಿ ಹರ್ಷ  ಇಬ್ಬರಿಗೂ ಟಿಕೆಟ್ ಬುಕ್ ಮಾಡಿದರು. ಅಲ್ಲಿಂದ ಪ್ರಾರಂಭವಾಯಿತು ನಮ್ಮ ಸ್ವಿಡ್ಜ್ ರ್ ಲ್ಯಾಂಡ್  ಗೆ ಹೋಗುವ ಸಂಭ್ರಮ
ಹೋಗುವ ತೀರ್ಮಾನ ವನ್ನು ಸುಮಾರು  ತಿಂಗಳ ಮೊದಲೇ ಅಂದರೆ ಫೆಬ್ರವರಿ ಯಲ್ಲೇ ಮಾಡಿದರೂ ಅದಕ್ಕೆ ವೀಸಾ ನಮ್ಮ ಕೈ ಸೇರಲು ಸುಮಾರು  ತಿಂಗಳು ಹಿಡಿಯಿತು . ಅದಾದ ನಂತರ ನಮ್ಮ ಶಾಪಿಂಗ್ ಮಾಡುವ ಆಸೆಯನ್ನು ತೀರಿಸಿಕೊಂಡದ್ದು ಆಯಿತು .ಸುಮಾರು ದಿನಗಳಿಂದ ಮನಸಿನಲ್ಲೇ ಇದ್ದ ಆಸೆಗಳೆಲ್ಲ ಗರಿಗೆದರಿ ಎಲ್ಲ ಆಸೆ ಯನ್ನು ಸಾಧ್ಯವಾದಷ್ಟು ತೀರಿಸಿಕೊಳ್ಳುವ ಪ್ರಯತ್ನವನ್ನು ನಾನು ಮಾಡಿದ್ದೆ.ಇದು ಮುಗಿಯದ ಆಸೆ ಎಂದು  ಅರಿತೋ ಏನೋ ಹರ್ಷ ಇನ್ನೊಮ್ಮೆ ಎಲ್ಲವನ್ನು ಕೊಡಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿ ಮನೆಗೆ ಕರೆದುಕೊಂಡು ಬಂದಿದ್ದರು. ಬಟ್ಟೆ ಕೊಂದು ತಂದರೆ ಮುಗಿಯಿತೇ ಯಾವ ದಿನ ಯಾವ ಬಟ್ಟೆ ಹಾಕಿಕೊಳ್ಳಬೇಕು ಎಷ್ಟು ಬಟ್ಟೆ ತೆಗೆದುಕೊಳ್ಳಬೇಕು ಹೀಗೆ ಜಿಜ್ಞಾಸೆ ಯೊಂದಿಗೆ ಪ್ಯಾಕಿಂಗ್ ಕೂಡ ಭರದಿಂದಲೇ ಆರಂಭಿಸಿ ಬೇಗ ಮುಗಿಸಿದ್ದು ಆಯಿತು
ಬೆಳಗ್ಗಿನ ತಿಂಡಿ ಮತ್ತು ರಾತ್ರಿಯ ಊಟದ ವ್ಯವಸ್ಥೆಯನ್ನು ಪ್ಯಾಕೇಜ್ ಟೂರ್ ನವರೇ ಕೊಡುವುದಾಗಿ ಹೇಳಿದ್ದರಿಂದ ಎನನ್ನು ಹೊಸದಾಗಿ ಮಾಡುವ ಅವಶ್ಯಕತೆ ಇರಲಿಲ್ಲ. ಅದು ಅಲ್ಲದೆ ಅವರು ಅಪ್ಪಟ ಭಾರತದ ಆಹಾರ ನೀಡುವುದಾಗಿ ಹೇಳಿದ್ದು ಪ್ರವಾಸಕ್ಕೆ ಹೋಗಲು ಇನ್ನಷ್ಟು ಹುಮ್ಮಸ್ಸು ನೀಡಿತ್ತು .
ಹೊರದೇಶಗಳಲ್ಲಿ ಭಾರತದ ಆಹಾರ ಸಿಗುವುದು ಅದರಲ್ಲೂ ಸಸ್ಯಾಹಾರಿ ಆಹಾರ ಸಿಗುವುದು ಬಹಳ ಕಷ್ಟ ನನಗೆ ಅಡುಗೆಯ ಬಗ್ಗೆ ಹೆಚ್ಚು ಆಸಕ್ತಿ ಇದೆ ಆದರು ಎಲ್ಲವನ್ನು ಒಂದೇ ಭಾರಿ ಮಾಡುಲು ಆಗುವುದಿಲ್ಲ ಮತ್ತು ಕೆಲವೊಮ್ಮೆ ಹೋಟೆಲ್ ಗಳಿಗೆ ಹೋದರು ಸಿಕ್ಕಾಪಟ್ಟೆ ದುಭಾರಿ ಆದದ್ದರಿಂದ ಎಲ್ಲವನ್ನು ತಿನ್ನಲು ಆಗುವುದಿಲ್ಲ ಆದ್ದರಿಂದ ಪ್ಯಾಕೆಜ್ ಟೂರ್ ನಲ್ಲಿ ಹೋದರೆ ಭಾರತೀಯ ಊಟ ಸಿಗುವುದು ಎಂಬುದು ಸಂತೋಷ ನೀಡಿತ್ತು.ಎಪ್ರಿಲ್ ತಿಂಗಳಿನಲ್ಲಿ ಸ್ವಿಸ್ಸ್ ತುಂಬಾ ಚೆನ್ನಾಗಿರುತ್ತದೆ ಅಲ್ಲಿಯ ವಾತಾವರಣ ಬೇಸಿಗೆಯು ಅಲ್ಲ ಚಳಿಗಾಲವು ಅಲ್ಲ ಹಾಗಿರುತ್ತದೆ ಆದ್ದರಿಂದ ಈಗ ಹೋಗುವುದೇ ಒಳಿತು ಎಂದು ಏಪ್ರಿಲ್ನಲ್ಲೇ ಹೊರಟಿದ್ದೆವು . 
ಮೊದಲ ದಿನ ರಾತ್ರಿ ನಮ್ಮ ಪ್ರವಾಸ ಪ್ರಾರಂಭವಾಯಿತು ನಾವಿರುವುದು ಗ್ರೇಟರ್ ಲಂಡನ್ ನಲ್ಲಾಗಿರುವುದರಿಂದ ಲಂಡನ್  ಈಸ್ಟ್ ಹ್ಯಾಮ್ ಎಂಬಲ್ಲಿಗೆ ಹೋಗಲು ಸುಮಾರು  ತಾಸುಗಳು ಬೇಕು ಅದ್ದರಿಂದ .೩೦ ಕ್ಕೆ ಅಲ್ಲಿ ಸೇರಬೇಕೆಂದು  ಗಂಟೆಗೆ ಹೊರಟೆವು ಅಲ್ಲಿ ಹೋಗಿ ಊಟ ಮಾಡುವಷ್ಟು ಸಮಯ ಇರುವುದಿಲ್ಲ ಎಂದು ಮನೆಯಲ್ಲಿಯೇ ಸ್ವಲ್ಪ ಊಟ ಮಾಡಿ ಹೊರಟೆವು . ನಮ್ಮ ಮನೆಯಿಂದ ಈಸ್ಟ್ ಹ್ಯಾಮ್ ಅನ್ನು ತಲುಪಲು ಕನಿಷ್ಠ  ಟ್ರೈನ್ ಅನ್ನು ಹತ್ತಿ ಇಳಿಯಲೇ ಬೇಕು ಹಾಗೆಯೇ ನಾವು ಅಲ್ಲಿ ತಲುಪುವಷ್ಟರಲ್ಲಿ ಊಟ ಮಾಡಿರುವುದು ಮರೆತುಹೊದಂತಾಗಿತ್ತುಇನ್ನು ಬೆಳಗಿನವರೆಗೂ ಹೇಗೆ ಕಳೆಯುವುದು ಎಂಬ ಚಿಂತೆ ಬೇರೆ ಸರಿ ಅಲ್ಲಿಯೇ ಇದ್ದ ಮೆಕ್ ದೊನಾಲ್ದ್ಸ್ ಅನ್ನು ಹೊಕ್ಕು ತಕ್ಕ ಮಟ್ಟಿಗೆ ಹೊಟ್ಟೆ ತುಂಬಿಸಿಕೊಂಡು ಹೊರಟೆವು.ಅಷ್ಟರಲ್ಲಿ ಬಸ್ ಹೊರಡಲು ತಯಾರಾಗಿ ನಮ್ಮನ್ನು ಬಿಟ್ಟು ಇನ್ನೊಂದಿಬ್ಬರು ಬರುವವರು ಇದ್ದದ್ದರಿಂದ ಕಾಯುತ್ತಿದ್ದರುಬಸ್ ನಲ್ಲಿ ನಮಗೆ ನಿಗದಿ ಇರಿಸಿದ ಸೀಟ್ ಅನ್ನು ಹಿಡಿದು ಆಸೀನರಾದೆವು . ಅಲ್ಲಿಂದ ಪ್ರಾರಂಭವಾಯಿತು ನಮ್ಮ ಪ್ರವಾಸ.




ಅರ್ಪಿತಾ ಹರ್ಷ 

Sunday 22 April 2012

ಒಂದು ಸುಂದರ ಸಂಜೆ

ಹೊರಗೆ ಸಣ್ಣಗೆ ಮಳೆ . ಸುಮಾರು ೩ ತಾಸು ಮಳೆ ಸುರಿತುತ್ತಲೇ ಇತ್ತು ಮಳೆ ಎಂದರೆ ನಮ್ಮ ಮಲೆನಾಡಿನಲ್ಲಿ ಸುರಿಯುವ ಮಳೆಯಲ್ಲ .ಲಂಡನ್ ನಲ್ಲಿ ಹಾಗೇನಾದರು ಮಳೆ ಬಂದರೆ ಬಹುಷಃ ನೆರೆ ಬಂದಿತೆಂದು ಘೋಷಿಸಿಬಿಡಬಹುದು , ಇಲ್ಲಿ ಬರುವ ಮಳೆ ಕೇವಲ ಹನಿಗಳ ರೂಪದಲ್ಲಿ .ಆದರೂ ಸುಂದರವಾಗಿತ್ತು ಆ ಸಂಜೆ ಮಲೆನಾಡ ಸಂಜೆಯನ್ನು ನೆನಪಿಸುವಂತದ್ದು. ಮಲೆನಾಡುಗಳಲ್ಲಿ ಬೋರ್ಗರೆಯುತ್ತ ಬಂದ ಮಳೆ ಒಮ್ಮೆ ನಿಂತಾದೊಡನೆ ಹೊರ ಹೊರಟರೆ ಅದರ ಆನಂದವೇ ಬೇರೆ . ಮಣ್ಣಿನ ಘಮ ಒಂದು ಕಡೆಯಾದರೆ ಕೆಸರಿನ ಗಿಜಿಗಿಜಿ ಜೊತೆ ಸೇರಿಸುತ್ತದೆ . 
ಲಂಡನ್ ಅಲ್ಲಿ ಮಣ್ಣಿನ ಸುವಾಸನೆ ಬರಲು ಸಾಧ್ಯವಿಲ್ಲ ಏಕೆಂದರೆ ಇಲ್ಲಿ ಎಲ್ಲ ಟಾರ್ ರಸ್ತೆಗಳು ಹಾಗೆ ಮಲೆನಾಡಿನಂತೆ ಎಡೆಬಿಡದೆ ಸುರಿಯುವ ಮಳೆಯೂ ಇಲ್ಲಿ ಸುರಿಯುವುದಿಲ್ಲ ಆದರೆ ಈ ಸಂಜೆ ಒಂದು ರೀತಿಯಲ್ಲಿ ಮಲೆನಾಡನ್ನು ನೆನಪಿಸಿತು. ಬಹಳ ದಿನಗಳ ನಂತರ ನಾನು ನನ್ನವರ ಕೈ ಹಿಡಿದು ಹೊರ ಹೊರಟಿದ್ದು, ಅದರಲ್ಲೂ  ಇಂತಹ ಸಂಜೆ, ಮಳೆ ಬಂದು ನಿಂತ ಸಂಜೆಗಳಲ್ಲಿ ಹೊರಹೊರಡುವುದು ಬಹಳ ಅಪರೂಪ . ಇಂದು ಸಣ್ಣ ಜುಮುರು ಮಳೆ ಬೀಳುತ್ತಿರುವುದು ಗೊತ್ತಿದ್ದೂ ಹೊರಹೊರಟೆವು ಹಾಗೆ ಒಂದು ಸುತ್ತು .ತಂಪಾಗಿ ಬೀಸುವ ಗಾಳಿ ಕೊರೆಯುವ ಚಳಿ ಇಲ್ಲದಿದ್ದರೂ ತಣ್ಣನೆಯ ಗಾಳಿ ಇನ್ನಷ್ಟು ಸ್ವಲ್ಪ ಹೆಚ್ಚೇ ಚಳಿ ನೀಡಿತ್ತು .

 ಏಪ್ರಿಲ್ ತಿಂಗಳಿನಲ್ಲಿ ಇಲ್ಲಿ ಎಲ್ಲಿ ನೋಡಿದರು ಹಸಿರು ಗಿಡಗಳೆಲ್ಲ ಸೊಂಪಾಗಿ ಚಿಗುರಿ ಹೂವು ಬಿಡುವ ಕಾಲವಿದು ಎಲ್ಲಿ ನೋಡಿದರು ಕೆಂಪು ಹಸಿರು ಚಿಗುರು ಮೊಳೆತಿರುವ ಮರಗಳು . ಜೊತೆಗೆ ಟುಲಿಪ್ ಹೂವು . ಕೆಂಪು, ಬಿಳಿ, ಹಳದಿ, ಕೇಸರಿ ಹೀಗೆ ಹಲವು ಬಣ್ಣಗಳ ಟುಲಿಪ್ ಹೂವುಗಳು ನಗುನಗುತ್ತ ರಸ್ತೆಯ ಬದಿಗಳಲ್ಲಿ ನಿಂತಿರುತ್ತವೆ. ಇಲ್ಲಿ ಪಾರ್ಕ್ ಗಳಿಗೇನು ಬರವಿಲ್ಲ ಎಲ್ಲಿ ನೋಡಿದರು ಹೂವಿನ ಪಾರ್ಕ್ ಇಲ್ಲದಿದ್ದರೆ ಚಿಕ್ಕ ಮಕ್ಕಳಿಗೆ ಆಟವಾಡಲು ಮಕ್ಕಳ ಪಾರ್ಕ್ ಗಳು ಕಾಣಸಿಗುತ್ತವೆ. ನಾವು ಹೀಗೆ ಒಂದು ಸುತ್ತು ಪಾರ್ಕ್ ಗೆ ಹೋಗಿ ಅಲ್ಲಿ ಸುತ್ತಲಿನ ಹಸಿರು ಜೊತೆಗೆ ಟುಲಿಪ್ ಹೂವುಗಳ ಫೋಟೋಗಳನ್ನು ತೆಗೆದುಕೊಂಡು ಅಷ್ಟರಲ್ಲೇ ಸ್ವಲ್ಪ ಮಳೆ ಕಡಿಮೆ ಆದದ್ದರಿಂದ ಅಲ್ಲೇ ಕುಳಿತು ಭಾರತದಲ್ಲಿ ಕಳೆದ ದಿನಗಳ ಮೆಲಕು ಹಾಕಿ ಅಲ್ಲಿಂದ ಹೊರಟು ಬಂದೆವು . ಹೋಗುವಾಗ ಸಣ್ಣಗೆ ಜುಮುರುತ್ತಿದ್ದ ಮಳೆ ಈಗ ಮಾಯವಾಗಿತ್ತು ಜೊತೆಗೆ ಕತ್ತಲಾಗುತ್ತಾ ಬಂದಿತ್ತಾದ್ದರಿಂದ ಸೂರ್ಯ ಮುಳುಗುತ್ತಿದ್ದ ಆಗಸವೆಲ್ಲ್ಲ ಕೆಂಪು ಕೆಂಪು . ಹೀಗೆ ಒಂದು ಸುಂದರ ಸಂಜೆ ಆಗಾಗ ಬರುತ್ತಿರಲಿ ಎಂದು ಕೊಳ್ಳುತ್ತಾ ಮನೆ ತಲುಪಿದೆವು .

Wednesday 18 April 2012

ಸೂರ್ಯಾಸ್ತ

ಒಂದು ಸಂಜೆ ಸೂರ್ಯ ಮುಳುಗುತ್ತಿರುವಾಗ ತೆಗೆದ ಛಾಯಚಿತ್ರ






ಅರ್ಪಿತಾ ಹರ್ಷ

ಈ ಕನಸುವಿನಲ್ಲಿ ಪ್ರಕಟಗೊಂಡಿದೆ http://www.ekanasu.com/2012/04/blog-post_2397.html

Monday 16 April 2012

ಪ್ರವಾಸಿ ಕಥನ -ಲಂಡನ್ ನ ಮೇಡಂ ಟುಸ್ಸಾಡ್ಸ್


ಈ ನನ್ನ ಲೇಖನವು ಈ ಕನಸುವಿನಲ್ಲಿ ಪ್ರಕಟಗೊಂಡಿದೆ http://www.ekanasu.com/2012/04/blog-post_17.html



ಲಂಡನ್ ನ ಆಕರ್ಷಕ ಸ್ಥಳಗಳಲ್ಲಿ ಮೇಡಂ ಟುಸ್ಸಾಡ್ಸ್ ಕೂಡ ಒಂದು . ಲಂಡನ್ ಗೆ ಭೇಟಿ ನೀಡಿದವರು ಈ ಸ್ಥಳವನ್ನು ಖಂಡಿತ ಭೇಟಿ ಮಾಡದೆ ಇರಲಾರರು . ನಾವು ಕೂಡ ಒಂದು ವಾರಾಂತ್ಯದಲ್ಲಿ ಮೇಡಂ ಟುಸ್ಸಾಡ್ಸ್ ನೋಡಬೇಕೆಂದು ನಿರ್ಧರಿಸಿದೆವು . ಅದಕ್ಕೆಂದೇ ಆನ್ಲೈನ್ ಟಿಕೆಟ್ ಕೂಡ ಮೊದಲೇ ಕರೀದಿಸಿ ಹೊರಡಲು ತಯಾರಾಗಿದ್ದೆವು . ಇದು ಸೆಂಟ್ರಲ್ ಲಂಡನ್ ನಲ್ಲೆ ಇರುವುದರಿಂದ ಹುಡುಕುವ ಅನಿವಾರ್ಯತೆ ಇರಲಿಲ್ಲ.ಬೆಳಗ್ಗೆ ೯ ಗಂಟೆಗೆಲ್ಲ ಮನೆಯಿಂದ ಹೊರಟು ಅಲ್ಲಿ ಸೇರುವಷ್ಟರಲ್ಲಿ ೧೧ ಗಂಟೆ ಯಾಗಿತ್ತು .ಮೊದಲೇ ಟಿಕೆಟ್ ಕರೀದಿಸಿದ್ದರಿಂದ ಸಾಲಿನಲ್ಲಿ ಕಾಯುವ ಕೆಲಸವಿರಲಿಲ್ಲ . ಇಲ್ಲದಿದ್ದರೆ ಸುಮಾರು 5೦೦ ಜನರ ಸಾಲುಗಳು ಟಿಕೆಟ್ ಗಾಗಿ ಕಾಯುತ್ತಾ ನಿಂತಿದ್ದವು . ಒಳಹೋಗಲು ಕನಿಷ್ಠ ೨ ಗಂಟೆ ಬೇಕಾಗಿತ್ತು .ನಾವು ಡೈರೆಕ್ಟ್ ಆಗಿ ಒಳಗೆ ಹೋದೆವು .

ಮೇಡಂ ಟುಸ್ಸಾಡ್ಸ್ ದೊಡ್ಡ ವ್ಯಕ್ತಿಗಳ ಅಥವಾ ಹೆಸರುವಾಸಿ ವ್ಯಕ್ತಿಗಳ (ಸೆಲೆಬ್ರಿಟಿಗಳ)ಆಕೃತಿಗಳನ್ನು ಮೇಣದಿಂದ ಕೆತ್ತಿರುವ ಮತ್ತು ಅದಕ್ಕಾಗಿಯೇ ಮೀಸಲಿಟ್ಟಿರುವ ಒಂದು ಮ್ಯೂಸಿಯಂ . ಇದು ಮರ್ಲೆಬೋನ ರಸ್ತೆಯಲ್ಲಿದೆ .ಇದನ್ನು ಮೊದಲ ಭಾರಿಗೆ ಮರ್ಲಿನ್ ತುಸಾದ್ಸ್ ಎಂಬುವವರು ಪ್ರಾರಂಭಿಸಿದರು ಇದು ಮೆರ್ಲಿನ್ ಎಂಟರ್ ಟೈನ್ ಮೆಂಟ್ ಎಂಬುವವರು ನೋಡಿಕೊಳ್ಳುತ್ತಿದ್ದಾರೆ .ಪ್ರತಿದಿನ ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೭ ಗಂಟೆಯವರೆಗೆ ವೀಕ್ಷಿಸುವ ಅವಕಾಶವಿರುತ್ತದೆ .ಇಲ್ಲಿ ಜಗತ್ಹ್ಪ್ರಸಿದ್ದಿ ಪಡೆದ ಎಲ್ಲ ವ್ಯಕ್ತಿಗಳ ಚಿತ್ರಣವನ್ನು (ಆಕೃತಿಯನ್ನು) ಮೆನದಲ್ಲಿ ಕೆತ್ತುವುದರ ಮೂಲಕ ಒಂದು ದೊಡ್ಡ ಮ್ಯೂಸಿಯಂ ಅನ್ನು ನಿರ್ಮಿಸಿದ್ದಾರೆ . ಮೇರಿ ತುಸ್ಸಾದ್ ಎಂಬ ಮಹಿಳೆಯು ಇದನ್ನು ಪ್ರಾರಂಬಿಸಿದಳು. ೧೮೩೫ರಲ್ಲಿ ಮೇರಿ ಯವರು ಲಂಡನ್ ನ ಬೇಕರ್ ಬೀದಿಯಲ್ಲಿ ಮೊದಲ ಬಾರಿಗೆ ಸುಮಾರು ೪೦೦ ಆಕೃತಿಗಳನ್ನು ಮಾಡುವುದರ ಮೂಲಕ ಪ್ರಸಿದ್ಧಿ ಪಡೆದಿದ್ದಳು .ಆದರೆ ೧೯೨೫ ರಲ್ಲಿ ಬೆಂಕಿ ಬಿಳುವುದರ ಮೂಲಕ ಹಲವಾರು ಹಳೆಯ ಆಕೃತಿಗಳು ಸುತ್ತು ಹೋಗಿದ್ದವು .ನಂತರ ಹೊಸ ಆಕೃತಿಗಳನ್ನು ಮಾಡಲಾಯಿತು ಎಂಬುದ ಮೇಡಂ ಟುಸ್ಸಾಡ್ಸ್ ಬಗ್ಗೆ ಇರುವ ಇತಿಹಾಸ .ಇಂದು ಇದು ಪ್ರಪಂಚದ ಅತಿ ಮುಖ್ಯ ಪ್ರವಾಸಿ ಸ್ಥಳವಾಗಿ ಮಾರ್ಪಟ್ಟಿದೆ .
ಹೆಮ್ಮೆಯ ವಿಷಯವೆಂದರೆ ನಮ್ಮ ದೇಶದ ಪ್ರಖ್ಯಾತ ವ್ಯಕ್ತಿಗಳ ಚಿತ್ರಣವನ್ನು ಕೂಡ ಕೆತ್ತಿದ್ದಾರೆ . ರಾಜಕೀಯ ವಿಭಾಗದಲ್ಲಿ ಮಹಾತ್ಮ ಗಾಂಧಿಜಿ , ಇಂದಿರಾ ಗಾಂಧಿ ಆಕೃತಿ ನಿಜವೇನೋ ಎಂಬಷ್ಟು ಅದ್ಬುತವಾಗಿ ಕೆತ್ತಲಾಗಿದೆ .ಮತ್ತು ಸೆಲೆಬ್ರಿಟಿ ಗಳಾಗಿ ಬಾಲಿವುಡ್ ನ ಹೃತಿಕ್ ರೋಶನ್ ,ಸಲ್ಮಾನ್ ಖಾನ್, ಶಾರುಖ್ ಖಾನ್, ಅಮಿತಾಬ್ ಬಚ್ಚನ್ , ಐಶ್ವರ್ಯ ರೈ, ಚಿತ್ರಣ ವನ್ನು ಮೇಣದಿಂದ ಕೆತ್ತಿ ಇಡಲಾಗಿದೆ .ಸ್ಪೋರ್ಟ್ಸ್ ಗೆ ಸಂಭಂದಿಸಿದಂತೆ ನಮ್ಮ ದೇಶದ ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್ ಅನ್ನು ಆಕೃತಿ ಕೂಡ ಕಾಣಬಹುದು .
ಇಲ್ಲಿ ಸುಮಾರು ೫೦೦ ಆಕೃತಿಗಳನ್ನು ಮೇಣದಿಂದ ಕೆತ್ತಿ ಪ್ರದರ್ಶನಕ್ಕೆ ಇಡಲಾಗಿದೆ ಎಲ್ಲ ದೇಶಗಳ ಪ್ರಸಿದ್ಧಿ ಪಡೆದ ವ್ಯಕ್ತಿಗಳ ಚಿತ್ರಣ ನೋಡಬಹುದು . ಮೇಡಂ ಟುಸ್ಸಾಡ್ಸ್ ಎಂಬುದು ಕೇವಲ ಲಂಡನ್ ನಲ್ಲಿ ಮಾತ್ರವಲ್ಲ ೯ ಮುಖ್ಯ ಪಟ್ಟಣಗಳಲ್ಲಿ ಇದನ್ನು ತೆರೆಯಲಾಗಿದೆ .ಯಾಮ್ಸ್ತರ್ದ್ಯಂ ,ಬಂಗ್ಕಾಕ್ ,ಬರ್ಲಿನ್ ,ಹಾಂಗ್ಕಾಂಗ್ ,ಶಾಂಗೈ , ನ್ಯುಯಾರ್ಕ್ ,ಲಾಸ್ ವೇಗಾಸ್,ಹಾಲಿವುಡ್ ,ವಾಶಿಂಗ್ ಟನ್ ,ವಿಯೆನ್ನಾ ಮತ್ತು ೨೦೧೧ ರಲ್ಲಿ ಇಂಗ್ಲೆಂಡ್ ನ ಬ್ಲಾಕ್ ಪೂಲ್ ಎಂಬಲ್ಲಿ ಕೂಡ ಬ್ರಾಂಚ್ ಗಳನ್ನೂ ತೆರೆಯಲಾಗಿದೆ .
ಸುಮಾರು ೫೦೦ ಮೇಣದ ಅಕ್ರುತಿಗಳಿಂದ ಕುಡಿದ ಈ ಮ್ಯೂಸಿಯಂ ಅನ್ನು ನೋಡಲು ೨ ಗಂಟೆಗಳೇ ಬೇಕು. ಸದಾ ಜನರಿಂದ ತುಂಬಿ ತುಳುಕುತ್ತಿರುವ ಈ ಸ್ಥಳದಲ್ಲಿ ನಿಜವಾದ ಮನುಷ್ಯರು ಯಾರು ಆಕೃತಿಗಳು ಯಾವುವು ಎಂದು ತಿಳಿಯಲು ಕ್ಷಣಗಳೇ ಬೇಕಾಗಬಹುದು . ೨ ಗಂಟೆಗಳ ಕಾಲ ಎಲ್ಲ ಆಕೃತಿಗಳನ್ನು ನೋಡಿ ಜೊತೆಗೆ ಛಾಯಾಚಿತ್ರಗಳನ್ನು ಸೆರೆಹಿಡಿದು ಹೊರಬಂದೆವು .



ಅರ್ಪಿತಾ ಹರ್ಷ
ಲಂಡನ್