Thursday 28 June 2012

ಕೇಂಬ್ರಿಡ್ಜ್- ಪ್ರವಾಸಿ ಕಥನ

ಕೇಂಬ್ರಿಡ್ಜ್ ಹೆಸರು ಕೇಳದವರಾರಿಲ್ಲ?  ಜಗತ್ಪ್ರಸಿದ್ಧಿ ಪಡೆದ ಕೇಂಬ್ರಿಡ್ಜ್ ನಲ್ಲಿ ಓದುವ ಅವಕಾಶವಂತು ಸಿಗಲಿಲ್ಲ ನೋಡುವ ಅವಕಾಶ ಇರುವಾಗ ಬಿಡಬಾರದೆಂದು ತೀರ್ಮಾನಿಸಿ ಕೇಂಬ್ರಿಡ್ಜ್ ಗೆ ಇತ್ತೀಚಿಗೆ ಹೋಗಿದ್ದೆವು.ಲಂಡನ್ ನಿಂದ  ಕೇಂಬ್ರಿಡ್ಜ್ ಗೆ ಸುಮಾರು ೮೦ ಕಿಲೋಮೀಟರ್ . ಕೇಂಬ್ರಿಡ್ಜ್ ಅನ್ನು ಒಂದು ದಿನದಲ್ಲಿ ನೋಡಿ ಮುಗಿಸಬಹುದು. ಹಾಗೆ ನಾವು ಹೊರಟಿದ್ದು ಒಂದು ವೀಕೆಂಡ್ ನಲ್ಲಿ. ಕೇಂಬ್ರಿಡ್ಜ್  ಯುನೈಟೆಡ್ ಕಿಂಗ್ಡಮ್ ನಲ್ಲಿರುವ ಒಂದು ಪುಟ್ಟ ಸಿಟಿ . ಇಲ್ಲಿ ಎಲ್ಲಿ ನೋಡಿದರು ಕಾಲೇಜು ಗಳು .ಕೇಂಬ್ರಿಡ್ಜ್ ಕಾಲೇಜುಗಳಿಗೆ ಹೆಸರುವಾಸಿ ನಿಜ ಆದರೆ ಇದೊಂದು ಪ್ರವಾಸಿ ತಾನವಾಗ್ ಮಾರ್ಪಟ್ಟಿದೆ .
ಕೇಂಬ್ರಿಡ್ಜ್ ನಲ್ಲಿ ಸ್ಟೇಜ್ ಕೋಚ್ ಬಸ್ ಇದೆ ಇದರಲ್ಲಿ ಒಮ್ಮೆ ಟಿಕೆಟ್ ತೆಗೆದುಕೊಂಡರೆ ಬೆಳಗಿನಿಂದ ಸಂಜೆಯವರೆಗೆ ಎಲ್ಲಿ ಬೇಕಾದರೂ ಸುತ್ತಬಹುದು ಇದರಲ್ಲಿ  ಕೇಂಬ್ರಿಡ್ಜ್ ನ ನೋಡಬೇಕಾದ ಪ್ರವಾಸಿ ತಾಣಗಳಿಗೆ ಕರೆದುಕೊಂಡು ಹೋಗಲಾಗುತ್ತದೆ ಜೊತೆಗೆ ಗೈಡ್ ಕೂಡ ನೀಡಲಾಗುತ್ತದೆ. ಹೀಗೆ ನಾವು ಮೊದಲು ಹೋದ ಸ್ಥಳವೆಂದರೆ ಕೇಂಬ್ರಿಡ್ಜ್ ಬಟಾನಿಕಲ್ ಗಾರ್ಡನ್ ಇದೊಂದು ಅದ್ಭುತ ಉದ್ಯಾನವನ ಇಡೀ ಉದ್ಯಾನವನವನ್ನು ಸರಿಯಾಗಿ  ನೋಡಲು ಅರ್ಧ ದಿನವೇ ಬೇಕಾಗಬಹುದು.೧೮೪೬ ರಲ್ಲಿ ಇದನ್ನು ತೆರೆಯಲಾಯಿತು ಇಲ್ಲಿ ಒಳಹೊಕ್ಕರೆ ವಿವಿಧ ಬಗೆಯ, ವಿವಿದ ಬಣ್ಣಗಳ ಹೂಗಳನ್ನು ಕಾನವಹುದು ಜೊತೆಗೆ ಕೊಳ ಮತ್ತು ಕಾರಂಜಿಯನ್ನು ಒಳಗೊಂಡಿದೆ ಇದು ಒಂಬತ್ತು ರಾಷ್ಟ್ರಗಳ ಬೇರೆಬೇರೆ ರೀತಿಯ ಗಿಡಗಳ ಸಂಗ್ರಹವನ್ನು ಒಳಗೊಂಡಿರುವುದು ಇಲ್ಲಿಯ ವಿಶೇಷವೆ ಸರಿ. ಸ್ಟೇಜ್ ಕೋಚ್ ಬಸ್ ನಲ್ಲಿಯೇ ಇದರ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಅಲ್ಲಿಂದ ೧೫ ನಿಮಿಷಗಳ ಬಸ್ ಪ್ರಯಾಣದ ನಂತರ ನಮಗೆ ಸಿಗುವುದೇ ಅಮೆರಿಕನ್ ಸೇಮೆಟರಿ. ೧೯೫೬ರಲ್ಲಿ ಇದನ್ನು ಸ್ಥಾಪಿಸಲಾಯಿತು .೨ ನೆ ಮಹಾಯುದ್ದದಲ್ಲಿ ಮಡಿದ ಅಮೆರಿಕನ್ ಸೈನಿಕರ ಸ್ಮರಣಾರ್ಥವಾಗಿ ಇದನ್ನು ನಿರ್ಮಿಸಲಾಗಿದೆ ಇದರ ಜೊತೆಗೆ ಇಲ್ಲಿ ಮೆಮೋರಿಯಲ್ ಕೂಡ ಕಟ್ಟಲಾಗಿದ್ ಇದನ್ನು ಪೋರ್ಟ್ ಲ್ಯಾಂಡ್ ಕಲ್ಲಿನಿಂದ ಕೆತ್ತಲಾಗಿದೆ . ಸುತ್ತಲು ಹಸಿರಿನಿಂದ ಕೂಡಿದ ಈ ಪ್ರದೇಶದ  ಮಧ್ಯದಲ್ಲಿ  ಸಾವಿರಾರು ಹುತಾತ್ಮರ  ಗೋರಿಯನ್ನು ನೋಡಬಹುದು .
ಇಲ್ಲಿಂದ ಸುಮಾರು ೧೦ ನಿಮಿಷಗಳ ಬಸ್ ಪ್ರಯಾಣಿಸಿದರೆ ಸಿಗುವುದೇ ಪಂಟಿಂಗ್ ಇದು ಕೇಂಬ್ರಿಡ್ಜ್ ನ ಆಕರ್ಷಕ ಸ್ಥಳ ಕೇಂಬ್ರಿಡ್ಜ್ ಗೆ ಬಂದವರು ಪಂಟಿಂಗ್ ಮಾಡದೆ ಹಿಂದಿರುಗುವುದಿಲ್ಲ.ಕೇಂಬ್ರಿಡ್ಜ್ ನ  ಪ್ರಸಿದ್ಧಿ ಪಡೆದ ವಿಶ್ವವಿಧ್ಯಾಲಯಗಳ ಹಿಂಬದಿಯಲ್ಲಿ ಒಂದು ಹರಿಯುವ ಕೊಳವನ್ನು ನಿರ್ಮಿಸಲಾಗಿದೆ ಬೋಟ್ ಹುಟ್ಟು ಹಾಕಲು ಅಭ್ಯಾಸವಿದ್ದಲ್ಲಿ ನಾವೇ ಬೋಟ್ ನಡೆಸಿಕೊಂಡು ಹೋಗಬಹುದು ಅದಿಲ್ಲದಿದ್ದಲ್ಲಿ ೪೫ ನಿಮಿಷಗಳ ಬೋಟ್ ಟ್ರಿಪ್ ಗೆ ಹೋಗಬಹುದು  ಇದರ ಜೊತೆ ಗೈಡ್ ಕೂಡ ನೀಡಲಾಗುತ್ತದೆ. ಕ್ವೀನ್ಸ ಕಾಲೇಜಿನಿಂದ ಪ್ರಾರಂಭಿಸಿ ಕಿಂಗ್ಸ್ ಕಾಲೇಜ್ ,ಟ್ರಿನಿಟಿ ಕಾಲೇಜ್, ಮತ್ತು ಸೈಂಟ್ ಜೋನ್ಸ್ ಕಾಲೇಜ್ ಗಳವರೆಗೆ ಎಲ್ಲ ಕಾಲ್ಲೆಗೆಗಳನ್ನು ಕೂಡ ನೋಡಬಹುದು. ಇದರಲ್ಲಿ ಟ್ರಿನಿಟಿ ಕಾಲೇಜ್ ಪ್ರಪಂಚದಲ್ಲೇ ಅತ್ಯಂತ ದುಭಾರಿ ಕಾಲೇಜ್ ಎಂಬುದು ಅಲ್ಲಿ ಸಿಕ್ಕ ಮಾಹಿತಿ. ಜೊತೆಗೆ ಇದು ಅತ್ಯಂತ ವಿಶಾಲವಾದ ಕಾಲೇಜ್ ಕೂಡ ಹೌದು. ಇದರ ಒಳ ಭಾಗದಲ್ಲಿ ಚರ್ಚ್ ಕೂಡ ಇದೆ . ೨೦ನೆ ಶತಮಾನದಲ್ಲಿ ಇಲ್ಲಿ ಓದಿದ ೩೧ ಜನರಿಗೆ ನೊಬೆಲ್ ಪ್ರಶಸ್ತಿ ದೊರೆತಿದೆ ಎಂಬುದು ಟ್ರಿನಿಟಿ ಕಾಲೇಜ್ ನ ಹೆಮ್ಮೆ.  ೧೨ ನೆ ಶತಮಾನದಲ್ಲಿ ಮೊದಲ ಭಾರಿಗೆ ಕೇಂಬ್ರಿಡ್ಜ್ ವಿಶ್ವವಿಧ್ಯಾಲಯ ವನ್ನು ಸ್ಥಾಪಿಸಲಾಯಿತು. ಪೀಟರ್ ಹೌಸ್ ಎಂಬುದು ಮೊತ್ತ ಮೊದಲು ಪ್ರಾರಂಭವಾದ ಕಾಲೇಜ್ ಎಂಬುದು ಇಲ್ಲಿ ಸಿಕ್ಕ ಮಾಹಿತಿ.೧೨೪೮ರಲ್ಲಿ ಮೊದಲ ಕಾಲೇಜ್ ಪ್ರಾರಂಭವಾಗಿದೆ. ಇದಲ್ಲದೆ ಕಿಂಗ್ಸ್ ಮತ್ತು ಸೈಂಟ್ ಜೋನ್ಸ್ ಕಾಲೇಜು ಗಳು ಕೂಡ ಅಷ್ಟೇ ಪ್ರಖ್ಯಾತಿಯನ್ನು ಪಡೆದಿದೆ.ಹೀಗೆ ಒಂದರ ಪಕ್ಕದಲ್ಲಿ ಒಂದು ಎಂಬಂತೆ ೪-೫ ಕಾಲೇಜ್ ಗಳನ್ನೂ ನೋಡಬಹುದು. ೧೨-೧೩ ನೆ ಶತಮಾನದ ಅತಿ ಪ್ರಾಚೀನ ಕಟ್ಟಡಗಳು ಇಂದಿಗೂ ಹಾಗೆಯೇ ಇರುವುದು ವಿಶೇಷತೆ ಎನಿಸದಿರದು.ಆರಂಭದಲ್ಲಿ ಕೇಂಬ್ರಿಡ್ಜ್ ನಲ್ಲಿ ಕೇವಲ ಪುರುಷರಿಗೆ ಮಾತ್ರ ಓದುವ ಅವಕಾಶವಿತ್ತು ೧೮೬೯ ರಲ್ಲಿ ಮೊದಲ ಭಾರಿಗೆ ಗ್ರಿತನ್ ಕಾಲೇಜ್ ನಲ್ಲಿ ಮಹಿಳೆಯರಿಗೆ ವಿದ್ಯಾಭ್ಯಾಸದ ಅವಕಾಶ ಕಲ್ಪಿಸಲಾಯಿತು ಜೊತೆಗೆ ಜಗತ್ಪ್ರಸಿದ್ಧಿ ಹೊಂದಿರುವುದರಲ್ಲಿ ಮೆಚ್ಚೆಲೇ ಬೇಕಾದ ಸಂಗತಿ. ಜೊತೆಗೆ ೪೫ ನಿಮಿಷಗಳ ಪಂಟಿಂಗ್ ಕುಶಿ ಕೊಡುವುದಂತೂ ನಿಜ. ಪಂಟಿಂಗ್ ಕೇಂಬ್ರಿಡ್ಜ್ ನ ಜನಪ್ರಿಯತೆಯನ್ನು ಹೆಚ್ಚಿಸಿದೆ .ಇಲ್ಲಿ ಬಂದವರೆಲ್ಲರೂ ಎಲ್ಲಿ ಹೋಗಲಾಗದಿದ್ದರೂ  ಕೇಂಬ್ರಿಡ್ಜ್ ನ ಬೋಟಿಂಗ್ ನಲ್ಲಿ ಹೋಗಿ ಎಲ್ಲ ಕಾಲೇಜ್ ಗಳನ್ನೂ ನೋಡಿ ಬರುತ್ತಾರೆ. ಪ್ರತಿ ಕಾಲೇಜ್ ನ ಲೈಬ್ರರಿಗಳು ಕೂಡ ಅಷ್ಟೇ ಪ್ರಸಿದ್ಧಿ ಪಡೆದಿದೆ.


.
ಇಲ್ಲಿಂದ ೧೦ ನಿಮಿಷಗಳ ಅಂತರದಲ್ಲಿ ರೌಂಡ್ ಚರ್ಚ್ ಎಂಬ ಚರ್ಚ್ ಇದೆ ಇದು ಕೇವಲ
ಕೇಂಬ್ರಿಡ್ಜ್ ನಲ್ಲೆ ಅಲ್ಲ ಇಂಗ್ಲೆಂಡ್ ನಲ್ಲೆ ೨ ನೆಯ ಅತಿ ಹಳೆಯ ಕಟ್ಟಡ ಎನ್ನಲಾಗಿದೆ. ಹೆಸರೇ ಹೇಳುವಂತೆ  ಕಲ್ಲಿನಿಂದ ಕೆತ್ತಿದ ವೃತ್ತಾಕಾರದ ಚರ್ಚ್ ಇದು. ಇದು ಕೂಡ ಇಲ್ಲಿನ ಪ್ರಸಿದ್ಧ ಚರ್ಚ್ ಆಗಿದೆ .ಫಿಟ್ಸ್ ವಿಲಿಯಂ ಮ್ಯೂಸಿಯಂ ಇಲ್ಲಿಯ ಮತ್ತೊಂದು ಆಕರ್ಷಣೆ. ಇಲ್ಲಿ ಪ್ರತಿ ತಿನ್ಗಲಿನಲ್ಲು ಬೇರೆ ಬೇರೆ ರೀತಿಯ ವಸ್ತು ಪ್ರದರ್ಶನವನ್ನು ನೀಡಲಾಗುತ್ತದೆ ಹೆಚ್ಚಾಗಿ ಕಲ್ಲಿನಿಂದ ಮಾಡಿದ ವಿವಿದ ರೀತಿಯ ವಿಗ್ರಹಗಳನ್ನು ಕಾಣಬಹುದು  .
ಕ್ವೀನ್ಸ ಕಾಲೇಜ್ ನ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋಗಲು ಒಂದು ಬ್ರಿಡ್ಜ್ ಅನ್ನು ಕಟ್ಟಲಾಗಿದೆ ಅದನ್ನು ಮ್ಯಾತಮೆಟಿಕಾಲ್  ಬ್ರಿಡ್ಜ್ ಎಂದು ಕರೆಯಲಾಗುತ್ತದೆ. ಇದನ್ನು ತ್ರಿಬುಜಾಕಾರದಲ್ಲಿ ಮರದ ಕೋಲನ್ನು ಉಪಯೋಗಿಸಿ ಗಣಿತ ಶಾಸ್ತ್ರದ ಪ್ರಕಾರ ಎಷ್ಟೇ ಭಾರವಾದರೂ ಸಹಿಸುವಂತೆ ಬಲಯುತವಾಗಿ ಕಟ್ಟಲಾಗಿದೆ ಆದ್ದರಿಂದ ಇದಕ್ಕೆ ಈ ಹೆಸರು ಬಂದಿದೆ ಎಂಬುದು ಇಲ್ಲಿ ಸಿಗುವ ಮಾಹಿತಿ .



ಒಟ್ಟಾರೆಯಾಗಿ ಒಂದು ದಿನದಲ್ಲಿ ನೋಡಿ ಮುಗಿಸಬಹುದಾದ ಮನಸ್ಸಿಗೆ ಮುದ ನೀಡುವ ತಾಣ ಕೇಂಬ್ರಿಡ್ಜ್ .




Wednesday 20 June 2012

ಬೇಸ್ತು ಬೀಳಿಸಿದ ಕಾಲೇಜಿನ ಮೊದಲ ದಿನ


ಈ ನನ್ನ ಲೇಖನವು ೬/೬/೨೦೧೨ ರ ವಿಜಯ ನೆಕ್ಸ್ಟ್ ನಲ್ಲಿ ಪ್ರಕಟಗೊಂಡಿದೆ  http://www.vijayanextepaper.com/svww_zoomart.php?Artname=20120706a_019101003&ileft=39&itop=701&zoomRatio=130&AN=20120706a_019101003



ಹೈ ಸ್ಕೂಲ್ ಮುಗಿದ ನಂತರ ಕಾಲೇಜಿಗೆ ಸೇರಿದಾಗ ಊರಿನಲ್ಲೇ ಕಾಲೇಜಿಗೆ ಹೋಗುತ್ತಿದ್ದ ಸಿನಿಯರ್ಸ್ ಕಾಲೇಜಿನಲ್ಲಿ ಹುಡುಗರು ಹಾಗಿರುತ್ತಾರೆ ಹೀಗಿರುತ್ತಾರೆ ಎಂದು ಹೇಳುತ್ತಿದ್ದರು ಹಾಗೆ ನಾನು ಸೇರಿದ್ದ ಕಾಲೇಜು ಮನೆಯಿಂದ ಹತ್ತಿರವೇ ಇದ್ದದ್ದರಿಂದ ನಮ್ಮ ಹಳ್ಳಿಯ ಎಲ್ಲ ಸೀನಿಯರ್ಸ್ ಅದೇ ಕಾಲೇಜಿನಲ್ಲಿ ಓದುತ್ತಿದ್ದರು .ನಮ್ಮ ಪಕ್ಕದಮನೆಯ ಅಕ್ಕ ಹಿಂದಿನ ವರ್ಷದಲ್ಲಿ ಕಾಲೇಜಿಗೆ ಮೊದಲಭಾರಿ ಸೇರಿದ್ದರು .ಕಾಲೇಜಿನ ಮೊದಲ ದಿನ ಒಬ್ಬ ಹುಡುಗ ಒಂದು ಪುಸ್ತಕವನ್ನು ಹಿಡಿದು ಒಳ ಬಂದಾಗ ಲೆಕ್ಚರರ್ ಎಂದು ತಿಳಿದು ಎದ್ದು ನಿಂತಿದ್ದೆವು ಆ ನಂತರ ನಿಜವಾದ ಲಕ್ಚರರ್ ಬಂದಾಗಲೇ ಗೊತ್ತಾಗಿದ್ದು ಅವನು ನಮ್ಮನ್ನು ಬೇಸ್ತು ಬೀಳಿಸಲು ಮಾಡಿದ ನಾಟಕವೆಂದು ಎಂದು ಹೇಳಿ ಆ ದಿನ ನಡೆದ ಘಟನೆಯ ವಿವರ ನೀಡಿ ನಾವೆಲ್ಲಾ ಸೇರಿ ನಕ್ಕಿದ್ದೆವು , ನೀನು ಕೂಡ ಹುಷಾರಾಗಿರು ಒಮ್ಮೊಮ್ಮೆ ಸೀನಿಯರ್ಸ್ ಸುಳ್ಳು ಹೇಳಿ ಎಲ್ಲರನ್ನು ನಗುವಂತೆ ಮಾಡುತ್ತಾರೆ ಎಂದು ಬುದ್ದಿ ಹೇಳಿದ್ದಳು .
ಸರಿ ನಾನು ಮೊದಲ ದಿನ ಹೋದ ಸ್ವಲ್ಪ ಸಮಯದಲ್ಲೇ ಇನ್ನು ತರಗತಿ ಪ್ರಾರಂಭವಾಗುವ ಮೊದಲೇ ಒಬ್ಬರು ಒಂದು ನೋಟ್ ಬುಕ್ ಹಿಡಿದು ಬಂದರು ನನಗೆ ಅಕ್ಕ ಹೇಳಿದ್ದು ನೆನಪಿನಲ್ಲಿದ್ದದ್ದರಿಂದ ಎದ್ದು ನಿಲ್ಲದೆ ಸುಮ್ಮನೆ ಕುಳಿತಿದ್ದೆ .ಉಳಿದವರೆಲ್ಲರೂ ಎದ್ದು ನಿಂತಿದ್ದರು . ನನಗೆ  ಮನದಲ್ಲಿ ಕುಶಿಯಾಗಿತ್ತು ಇವರೆಲ್ಲರೂ ಬೇಸ್ತು ಬೀಳುತ್ತಿದ್ದಾರೆ ನಾನು ಬೀಳಲಿಲ್ಲ ಎಂದು ,ಆದರೆ ಬಂದವರು ನಿಜವಾಗಿಯೂ ಲಕ್ಚರರ್ ಆಗಿದ್ದರು ಎಂದು ಅವರು ತಮ್ಮ ಪರಿಚಯ ಮಾಡಿಕೊಂಡಾಗ ತಿಳಿಯಿತು . ಸಧ್ಯ ಅವರು ನಾನು ಎದ್ದು ನಿಲ್ಲದಿದ್ದ ಬಗ್ಗೆ ಗಮನಹರಿಸಿಲ್ಲದಿದ್ದರಿಂದ ನಾನು ಬಚಾವ್ ಆಗಿದ್ದೆ .ಈ ಭಾರಿ ನಾನು ಕೂಡ ಬೇಸ್ತು ಬಿದ್ದಿದ್ದೆ .



ಅರ್ಪಿತಾ ಹರ್ಷ

Tuesday 19 June 2012

ಅಮರ ಮಧುರ ಸ್ನೇಹ

ಈ ನನ್ನ ಲೇಖನವು ಅವಧಿ ಮ್ಯಾಗಜಿನ್ ನಲ್ಲಿ ಪ್ರಕಟಗೊಂಡಿದೆ  http://avadhimag.com/?p=55895

ಆಕೆ ನನಗೆ ಬಹಳ ಆತ್ಮೀಯ ಗೆಳತಿ ಬಹಳ ದಿನಗಳ ವರೆಗೆ ಒಟ್ಟಿಗೆ ಕೆಲಸ ಮಾಡಿದವರು ನಾವು . ಇಬ್ಬರು ಸದಾಕಾಲ ನಗುತ್ತ , ಮಾತನಾಡುತ್ತ ಮುಂದಿನ ದಿನಗಳ ಬಗ್ಗೆ ಯೋಚಿಸುತ್ತ ಕಳೆದ ದಿನಗಳು ಬಹಳ. ಅನಿವಾರ್ಯ ಕಾರಣದಿಂದ ಕೆಲಸ ಬಿಟ್ಟು ಹೋಗಿದ್ದರಿಂದ ಫೋನ್ ಕೂಡ ಮಾಡದ ಪರಿಸ್ಥಿತಿ ಬಂದೊದಗಿತ್ತು. ಸುಮಾರು ಒಂದು ವರೆ ವರ್ಷದ ನಂತರ ಮತ್ತೊಮ್ಮೆ ಫೋನ್ ಮಾಡಿದಾಗ ಆಕೆಗಾದ ಸಂತೋಷ ನೋಡಿ ಇಷ್ಟು ದಿನ ಫೋನ್ ಮಾಡದೆ ಏನೋ ಒಂದು ವಸ್ತುವನ್ನು ನಾನೇ ಕೈಯಾರೆ ಮಿಸ್ ಮಾಡಿಕೊಂಡಂತೆ ಅನಿಸಿತ್ತು. ಸುಮಾರು ಒಂದು ಗಂಟೆ ಹಳೆಯ ಸುಂದರ ದಿನಗಳ ಮೆಲುಕು ಹಾಕಿದೆವು ಆ ದಿನಗಳು ಮತ್ತೆ ಬರಲಾರದು ನಿಜ ಆದರೆ ಅಂತಹ ದಿನಗಳ ನೆನಪೇ ಎಷ್ಟೊಂದು ಸಂತೋಷ ನೀಡುತ್ತದೆ ಎಂದು ಮತ್ತೆ ಮತ್ತೆ ನೆನಪಿಸಿಕೊಂಡೆವು.
ಇಷ್ಟೆಲ್ಲಾ ಪೀಠಿಕೆ ಏಕೆಂದರೆ ಸುಮ್ಮನೆ ಕುಳಿತು ಯೋಚಿಸುತ್ತಿದ್ದೆ ಹಿಂದೆ ಕಳೆದ ದಿನಗಳು ಯಾವಾಗಲು ಸುಮಧುರ . ಅಂತಹ ಸುಮಧುರ ದಿನಗಳಿಗೆ ಕಾರಣರಾದವರು ನಿಜಕ್ಕೂ ಮಧುರ. ಸ್ನೇಹಿತರು ಎಲ್ಲಿ ಹೋದರು ಸಿಕ್ಕಿಯಾರು ಹೊಸ ಸ್ನೇಹ ಮಾಡಿಕೊಲ್ಲುವುದೇನು ಕಷ್ಟದ ಕೆಲಸವಲ್ಲ ಆದರೆ ಮಾಡಿಕೊಂಡ ಸ್ನೇಹವನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ .ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ದೂರವಾಗಬೇಕಾಗುತ್ತದೆ. ಇನ್ನು ಕೆಲವೊಮ್ಮೆ ನಾವೇ ಕಾರಣ ಹುಡುಕಿ ದೂರವಾಗಿಬಿಡುತ್ತೇವೆ. ಕೆಲವೊಮ್ಮೆ ಬೇರೆ ಕೆಲಸ ಕ್ಕೆ ಸೇರಿದರೆ ಅಥವಾ ಮದುವೆ ಆಗಿ ಬೇರೆ ಸ್ಥಳಗಳಿಗೆ ಹೋದರೆ ಹೀಗೆ ನಾನಾ ಕಾರಣಗಳಿಗೆ ದೂರವಾಗುವುದುಂಟು . ಆದರೆ ಈಗ ಮೊಬೈಲ್ ಎನ್ನುವುದು ಹಳ್ಳಿಗಳಲ್ಲೂ ಕೂಡ ಎಲ್ಲರ ಮನೆಗಳಲ್ಲೂ ಇದ್ದೆ ಇರುತ್ತದೆ. ಪ್ರತಿ ದಿನ ಫೋನ್  ಮಾಡಲಾಗದಿದ್ದರೂ ತಿಂಗಳಿಗೊಮ್ಮೆಯಾದರೂ ಆತ್ಮೀಯ ಸ್ನೇಹಿತರಿಗೆ ಫೋನ್ ಮಾಡುತ್ತಿರಬೇಕು ಇದರಿಂದ ಬಾಂಧವ್ಯ ಯಾವತ್ತು ಮುರಿದುಬೀಳುವುದಿಲ್ಲ. ಆ ಗೆಳತಿ ಎಲ್ಲಿ ಹೋದಳೋ ಹೇಗಿದ್ದಾಳೋ ಎಂಬ ಯೋಚನೆ ಇರುವುದಿಲ್ಲ. ಹಳೆಯ ಸ್ನೇಹ ಯಾವತ್ತಿಗೂ ಗಟ್ಟಿ . ಬಾಲ್ಯದಿಂದಲೂ ಬೆಳೆದು ಬಂದ ಸ್ನೇಹ ಎಂದಿಗೂ ನೆನಪಿರುವನ್ತದ್ದು .ಇಂತಹ ಸ್ನೇಹ ಗಟ್ಟಿ ಕೂಡ .ನಮ್ಮ ಜೀವನದ ಪ್ರತಿಹಂತದಲ್ಲೂ ಸ್ನೇಹಿತರು ಬೇಕೇ ಬೇಕು . ಕಷ್ಟ ಸುಖ ಹಂಚಿಕೊಳ್ಳಲು ಸ್ನೇಹಿತರೆ ಬೇಕು . ಕೇವಲ ಕಷ್ಟದ ಕಾಲದಲ್ಲಿ ಸಹಾಯ ಪಡೆದು ಮರೆತುಬಿಡುವುದು ಸೂಕ್ತವಲ್ಲ . ಈಗಂತೂ ಫೇಸ್ ಬುಕ್ ,ಮೊಬೈಲ್ ,ಸ್ಕೈಪ್ , ಹೀಗೆ ಸಾಕಷ್ಟು ಅವಕಾಶಗಳಿವೆ ಸ್ನೇಹವನ್ನು ಉಳಿಸಿಕೊಳ್ಳಲು ಮತ್ತು ಬೆಳೆಸಿಕೊಳ್ಳಲು ಆದ್ದರಿಂದ ಸ್ನೇಹವನ್ನು ಉಳಿಸಿಕೊಳ್ಳೋಣ .ಬೆಳೆಸಿಕೊಳ್ಳೋಣ .ಸ್ನೇಹ ಅವಶ್ಯಕತೆಗೆ ಮಾತ್ರವಾಗಿರದೆ
  ಅಮರವಾಗಿರಲಿ .




ಅರ್ಪಿತಾ ಹರ್ಷ .

Thursday 14 June 2012

ನೆರೆಹೊರೆಯವರೊಂದಿಗಿನ ಸಲುಗೆಗೆ ಮಿತಿ ಇರಲಿ

ಸ್ವಂತ ಮನೆಯಿಲ್ಲದವರಿಗೆ ಎಷ್ಟೋ ಭಾರಿ ತಕ್ಷಣಕ್ಕೆ ಬೇರೆ ಮನೆಯೊಂದಕ್ಕೆ ಶಿಫ್ಟ್ ಆಗುವ ಅನಿವಾರ್ಯತೆ ಬಂದೊದಗುತ್ತದೆ . ಹಲವಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ವಾಸವಾಗಿದ್ದು ಬೇರೆ ಸ್ಥಳಕ್ಕೆ ಹೋಗಬೇಕಾದಾಗ ಎಲ್ಲವೂ ಹೊಸದು. ಪರಿಚಯವಾದ ಹಲವಾರು ಸ್ನೇಹಿತರು ದೂರವಾಗುವುದು ಅನಿವಾರ್ಯವಾಗುತ್ತದೆ.ಹೊಸ ಮನೆ ಹೊಸ ಜಾಗಗಳಿಗೆ ಹೋಗಬೇಕಾಗುವುದು ಅನಿವಾರ್ಯ ಆದರೆ ಹೋದ ಬಳಿಕ ಜಾಗರೂಕರಾಗಿರಬೇಕು . ಹೊಸ ಜಾಗಗಳಿಗೆ ಹೋದಮೇಲೆ ಹೊಸ ಪರಿಚಯ ಆಗಲೇ ಬೇಕು . ಅದರಲ್ಲೂ ಮನೆಯಲ್ಲಿಯೇ ಇರುವ ಮಹಿಳೆಯರಿಗೆ ಜೊತೆಗಾರರು ಬೇಕೇ ಬೇಕು . ಅಕ್ಕ -ಪಕ್ಕ ಇರುವವರ ಪರಿಚಯ ಮಾಡಿಕೊಳ್ಳಬೇಕಾಗುತ್ತದೆ . ಒಂಟಿಯಾಗಿ ಇರುವ ಸಂದರ್ಭಗಳು ಬಂದಾಗ ಪರಿಚಯದವರು ಅಕ್ಕಪಕ್ಕದಲ್ಲಿದ್ದಾರೆ ಎಂದರೆ ಏನೋ ಒಂದು ರೀತಿಯ ಧೈರ್ಯ . ದಿನದಲ್ಲಿ ಕೆಲವು ಕ್ಷಣ ಗಳನ್ನಾದರು
ಮಾತನಾಡುತ್ತ ಕಳೆಯಬಹುದು ಮನಸ್ಸನ್ನು ಫ್ರೆಶ್ ಮಾಡಿಕೊಳ್ಳಬಹುದು .
ಆದರೆ ಹೀಗೆ ಅಪರಿಚಿತರನ್ನು ಪರಿಚಯ ಮಾಡಿಕೊಳ್ಳುವಲ್ಲಿ ಎಚ್ಚರವಿರಬೇಕು . ಸ್ನೇಹಿತರನ್ನಾಗಿ ಮಾಡಿಕೊಳ್ಳುವುದು ಹೆಚ್ಚು ಹೊತ್ತಿನ ಕೆಲಸವಲ್ಲ. ಆದರೆ ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಕಷ್ಟದ ಕೆಲಸ. ಎಲ್ಲರ ಮನೋಭಿಪ್ರಾಯಗಳು ಒಂದೇ ರೀತಿಯಾಗಿ ಇರುವುದಿಲ್ಲ. ಕೆಲವೊಮ್ಮೆ ಗುರುತು ಪರಿಚಯ ಇಲ್ಲದವರು ಬೇಗ ಸ್ನೇಹಿತರಾಗುತ್ತಾರೆ ಇನ್ನು ಕೆಲವೊಮ್ಮೆ ಅನುಮಾನಸ್ಪದವಾಗಿ ವರ್ತಿಸುತ್ತಾರೆ. ದಿನ ಕಳೆಯಲು ಒಂದು ಸಾಥ್ ಬೇಕು ನಿಜ .ಆದರೆ ಈಗಿನ ಕಾಲದಲ್ಲಿ ಸ್ನೇಹಿತರನ್ನು ಮಾಡಿಕೊಲ್ಲುವಾಗ ಕೂಡ ಬಹಳಷ್ಟು ಎಚ್ಚರಿಕೆ ಇಟ್ಟಿರುವುದು ಒಳ್ಳೆಯದು.
ನೆರೆಹೊರೆಯವರೊಂದಿಗೆ ಸಂಪರ್ಕ ಬೆಳೆಸುವ ಮುನ್ನ ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು .
1.ದಿನವನ್ನು ಒಳ್ಳೆಯ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಹರಟೆ ಹೊಡೆಯುವುದು ಮನೆಯ ವಿಷಯಗಳನ್ನು ಇತರರೊಂದಿಗೆ ಹೇಳಿಕೊಳ್ಳುವುದು ಮಾಡುವುದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ ಕಷ್ಟದಲ್ಲಿ ಸಾಂತ್ವನ ಅಥವಾ ಕನಿಕರದ ಮಾತನಾಡಬಹುದು ಆದರೆ ನಮ್ಮ ಸಮಸ್ಯೆಗಳಿಗೆ ನಾವೇ ಉತ್ತರ ಕಂಡುಕೊಳ್ಳಬೇಕು. 
2.ದಿನದ ಕೆಲವಷ್ಟು ಗಂಟೆಗಳನ್ನು ಪುಸ್ತಕ ಓದುವುದು ಅಥವಾ ಬರವಣಿಗೆ ಅಥವಾ ಕಸೂತಿ ಹೀಗೆ ಸದುಪಯೋಗಪಡಿಸಿಕೊಂಡರೆ ಬೇಸರವೆನಿಸುವುದಿಲ್ಲ . ಜೊತೆಗೆ ದಿನದಲ್ಲಿ ಒಂದಾದರು ಒಳ್ಳೆಯ ಕೆಲಸ ಮಾಡಿದ್ದರ ಸಂತೋಷ ಸಿಗುತ್ತದೆ.
 3.ಅಕ್ಕಪಕ್ಕದವರೊಂದಿಗೆ ಹೆಚ್ಚು ಸಲಿಗೆ ಬೇಡ.
4.ಆದಷ್ಟು ಕುಶಲೋಪರಿ ಮತ್ತು ಲೋಕಾಭಿರಾಮ ವಿಷಯಗಳನ್ನು ಮಾತ್ರ ಮಾತನಾಡುವುದು ಸೂಕ್ತ.
ಮನೆಯ ಒಳಗಿನ  ವಿಷಯಗಳನ್ನು ಹೇಳುವುದು ಮತ್ತು ಅವರ ಮನೆಯ ವಿಷಯಗಳನ್ನು 
ಕೇಳುವುದು ಎರಡು ಹಿತಕರವಲ್ಲ. ಸಣ್ಣ ವಿಷಯಗಳು ಬಿನ್ನಭಿಪ್ರಾಯ ತಂದಿಡಬಹುದು.
5.ಎಲ್ಲರಿಗೂ ಹೆಚ್ಚು ಸಲುಗೆ ಕೊಡಬಾರದು. ಒಂದು ಎರಡು ಜನರನ್ನು ಮಾತ್ರ ಸ್ನೇಹಿತರನ್ನಾಗಿ ಮಾಡಿಕೊಂಡರೆ ಉತ್ತಮ.
ಒಟ್ಟಾರೆಯಾಗಿ ಅಕ್ಕಪಕ್ಕದವರು ಜೊತೆಗೆ ಬೇಕು ನಿಜ ಅವರೊಂದಿಗೆ ಸಂಪರ್ಕದಲ್ಲಿರುವುದರಲ್ಲಿ ತಪ್ಪಿಲ್ಲ ಆದರೆ ಅವರ ವ್ಯಕ್ತಿತ್ವವನ್ನು ಮೊದಲು ಅರಿತು ನಂತರ ಗಾಢ ಸ್ನೇಹ ಮಾಡಿಕೊಳ್ಳುವುದು ಉತ್ತಮ ಇಲ್ಲವಾದಲ್ಲಿ ನೆರೆ ನಿಜವಾದ ಹೊರೆಯಾಗಿಬಿದಬಹುದು .


ಅರ್ಪಿತಾ ಹರ್ಷ .

Thursday 7 June 2012

ಗೆಣಸಿನ ಹಲ್ವಾ


ಈ ನನ್ನ ಲೇಖನವು ಈ ಕನಸು ವಿನಲ್ಲಿ ಪ್ರಕಟಗೊಂಡಿದೆ http://www.ekanasu.com/2012/06/blog-post_4372.html



ಸಿಹಿಯಾದ ಗೆಣಸಿನ ಹಲ್ವಾ ಬೇರೆ ಹಲ್ವಗಳಿಗಿಂತ ಹೆಚ್ಚು ರುಚಿ ನೀಡುತ್ತದೆ . ಮಾಡುವ ವಿಧಾನವು ಕೂಡ ಬಲು ಸುಲಭ . ಮನೆಯಲ್ಲಿಯೇ ಮಾಡಿ ಸವಿಯಿರಿ 

ಬೇಕಾಗುವ ಸಾಮಗ್ರಿಗಳು 

ಗೆಣಸು -೪-೫
ಸಕ್ಕರೆ - ೧ ಕಪ್
ತುಪ್ಪ - ಅರ್ಧ ಕಪ್
ಏಲಕ್ಕಿ ಪುಡಿ - ಸ್ವಲ್ಪ 
ಗೋಡಂಬಿ ಮತ್ತು ದ್ರಾಕ್ಷಿ ಅಲಂಕರಿಸಲು 

ಗೆಣಸನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಬೇಕು . ಬೇಡ ನಂತರ ಸಿಪ್ಪೆ ತೆಗೆದು ನುರಿಯ ಬೇಕು . ಆ ನಂತರ ಬಾಣಲೆಗೆ ತುಪ್ಪವನ್ನು ಹಾಕಿ ನುರಿದಿಟ್ಟ ಗೆಣಸನ್ನು ಹಾಕಿ ಹುಟ್ಟಿನಿಂದ ಚೆನ್ನಾಗಿ ಕಲಸುತ್ತಿರಬೇಕು . ಈಗ ಸಕ್ಕರೆಯನ್ನು ಹಾಕಿ ಮಿಶ್ರ ಮಾಡಬೇಕು , ಸಕ್ಕರೆ ಕರಗಿ ಚೆನ್ನಾಗಿ ಮಿಶ್ರಗೊಂಡು ನಂತರ ಏಲಕ್ಕಿ ಪುಡಿಯನ್ನು ಹಾಕಿ ಹಲ್ವದ ಹದ ಬರುವವರೆಗೆ ಸೌಟಿನಿಂದ ಚೆನ್ನಾಗಿ ತಿರಿಸಬೇಕು. ನಂತರ ಗೋಡಂಬಿ ಮತ್ತು ದ್ರಾಕ್ಷಿಯನ್ನು ಹುರಿದು ಹಾಕಬೇಕು . 
ಪ್ಲೇಟ್ ನಲ್ಲಿ ಹಾಕಿ ಚೌಕಾಕಾರವಾಗಿ ಕತ್ತರಿಸಲು ಬಹುದು ಅಥವಾ ಬೌಲ್ ನಲ್ಲಿ ಹಾಕಿಯೂ ತಿನ್ನಬಹುದು .



ಅರ್ಪಿತಾ ಹರ್ಷ 
ಲಂಡನ್ 

ಇಂಗ್ಲೆಂಡ್ ನ ಒಂದು ಹಳ್ಳಿ ಚಿಚೆಸ್ಟರ್

ಈ ನನ್ನ ಲೇಖನವು ಜೂನ್ ೮ ರ ವಿಜಯ ನೆಕ್ಸ್ಟ್ ನಲ್ಲಿ ಪ್ರಕಟವಾಗಿದೆ ----


ನಮ್ಮ ಭಾರತಕ್ಕೆ ಹೋಲಿಸಿದರೆ ಹೊರದೇಶಗಳಲ್ಲಿ ಆಧುನೀಕತೆ ಹೆಚ್ಚು ಎಂದೆನಿಸುತ್ತದೆ ಜೊತೆಗೆ ಬಹುಬೇಗ ಅಭಿವೃದ್ಧಿಹೊಂದಿದ ದೇಶಗಳು ಹಾಗೆ ಇಂಗ್ಲೆಂಡ್ ಹಲವಾರು ದೇಶಗಳ ಮೇಲೆ ದಬ್ಬಾಳಿಕೆ ನಡೆಸಿ ಬಹುಬೇಗ ಅಭಿವೃದ್ಧಿಪಡೆದುಕೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯಹೀಗೆ ಅಭಿವೃದ್ಧಿ ಹೊಂದಿದ ನಾಡಿಗೆ ಬಂದು ನೆಲಸಿದ ಮೇಲೆ ಇಲ್ಲಿಯಹಳೆಯ ಕಾಲದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಹೆಚ್ಚಾಗಿತ್ತುಅದಕ್ಕೋಸ್ಕರವೇ ನಾವು ಹೋಗಿದ್ದು   ಚಿಚೆಸ್ಟರ್ ಎಂಬ ಪ್ರವಾಸಿಸ್ಥಳಕ್ಕೆಚಿಚೆ ಸ್ಟರ್ ಇರುವುದು ದಕ್ಷಿಣ ಇಂಗ್ಲೆಂಡ್ ನಲ್ಲಿಇದೊಂದು ಹಳ್ಳಿ ಎಂಬುದು ಇಲ್ಲಿಯ ಜನರ ಅಭಿಪ್ರಾಯ ಹಾಗೆಂದರೆ ಇದುನಮ್ಮ ಹಳ್ಳಿಗಳ ರೀತಿ ಇರುವುದಿಲ್ಲ ನಮಗೆ ಇದೊಂದು ದೊಡ್ಡ ಸಿಟಿ ಎಂದೇ ಎನಿಸಿತುಚಿಚೆ ಸ್ಟರ್ ಅನ್ನು ಕ್ಯಥೆದ್ರಾಲ್ ಸಿಟಿಎಂದು ಕರೆಯುತ್ತಾರೆ ಹೆಸರೇ ಹೇಳುವಂತೆ ಇಲ್ಲಿಯ ಕ್ಯಥೆದ್ರಾಲ್ ತುಂಬಾ ಪ್ರಖ್ಯಾತಿ ಹೊಂದಿದೆ .  
ಚಿಚೆ ಸ್ಟರ್ ಬಹಳ ಹಳೆಯ ಇತಿಹಾಸ ಹೊಂದಿರುವ ಸ್ಥಳ ಇದು ಲಂಡನ್ ನಿಂದ ೮೫ ಕಿಲೋಮೀಟರ್ ದೂರದಲ್ಲಿದೆ . ಲಂಡನ್ನಿಂದ ರೈಲಿನಲ್ಲಿ ಹೋದರೆ (ಇಲ್ಲಿಯ ಟ್ರೈನ್ ತುಂಬಾ ಫಾಸ್ಟ್ ಆಗಿರುವುದರಿಂದ  )   ಗಂಟೆಗಳು ಬೇಕಾಗುತ್ತದೆ . ಚಿಚೆ ಸ್ಟರ್ರೈಲ್ವೆ ಸ್ಟೇಷನ್ ನಿಂದ ಕೇವಲ ೧೫ ನಿಮಿಷದ ನಡುಗೆಯಷ್ಟೇ ಕ್ಯಾಥೆಡ್ರಲ್ ತಲುಪಲು . ಸೈಂಟ್ ರಿಚರ್ಡ್ ಎಂಬುವವರುಹುಟ್ಟುಹಾಕಿದ ಚುರ್ಚ್ ಇದುಇದರ ಪಕ್ಕದಲ್ಲೇ ಒಂದು ಉದ್ಯಾನವನವು ಇದೆ ಇದನ್ನು ಪ್ಯಾಲೇಸ್ ಗಾರ್ಡನ್ ಎಂದುಕರೆಯಲಾಗುತ್ತದೆ ಸುಮಾರು 5 ಎಕರೆಯಷ್ಟು ಜಾಗವನ್ನು ಸುಂದರ ಹೂವು ಮತ್ತು ಹಸಿರುಗಳಿಂದ ತುಂಬಿರುವಂತಹಉದ್ಯಾನವನವಾಗಿ ನಿರ್ಮಿಸಲಾಗಿದೆ.
ಇದು ಇರುವುದು ಚಿಚೆ ಸ್ಟರ್  ಸಿಟಿ  ಮಧ್ಯದಲ್ಲಿ . ಅಲ್ಲಿಂದ ಬಸ್ ನಲ್ಲಿ ಸುಮಾರು ಅರ್ಧಗಂಟೆ ಯಷ್ಟು ಪ್ರಯಾಣಿಸಿದರೆ ಒಂದು ಮ್ಯೂಸಿಯಂ ಇದೆ . ಇದನ್ನು ವೀಲ್ಡ್ ಡೊನಾಲ್ಡ್ ಮ್ಯೂಸಿಯಂ ಎಂದು ಕರೆಯಲಾಗಿದೆವೀಲ್ಡ್ ಡೊನಾಲ್ಡ್ ಮ್ಯೂಸಿಯಂ೫೦ ಎಕರೆಯಷ್ಟು ವಿಸ್ತಾರವಾಗಿದೆ.ಇದು ಓಪನ್ ಏರ್ ಮ್ಯೂಸಿಯಂ .ಇಲ್ಲಿ ಸುಮಾರು ೫೦ ಐತಿಹಾಸಿಕ ಮನೆಗಳನ್ನುಕಾಣಬಹುದು.
೧೭ರ ದಶಕದಲ್ಲಿ ಇಂಗ್ಲಂಡ್ ಹೇಗಿತ್ತು ಎಂಬುದರ ಸಚಿತ್ರವನ್ನು ಇಲ್ಲಿ ಕಾಣಬಹುದು.ಜೊತೆಗೆ ನೂರಾರು ವರ್ಷಗಳ ಹಿಂದೆಯೇಮಾಡುತ್ತಿದ್ದ ಗ್ಲಾಸ್ ಪೇಂಟಿಂಗ್ , ಅಡುಗೆ ಪದ್ಧತಿ ಇವುಗಳೆಲ್ಲ ಇಂದು ಕೂಡ ಅದೇ ರೀತಿಯಲ್ಲಿ ಕಾಪಾಡಿಕೊಂಡು ಬಂದಿರುವುದುವಿಶೇಷವೆ ಸರಿ.ನಮ್ಮ ಹಳ್ಳಿಗಳಲ್ಲಿ ನೋಡಬಹುದಾದ ಸೋಗೆ ಮನೆಗಳು ಇಲ್ಲೂ ಕೂಡ ಇದ್ದವುಸ್ವಲ್ಪ ಶ್ರೀಮಂತರಮನೆಗಳಾದರೆ ಮನೆಯ ಮೇಲೊಂದು ಮಹಡಿ ಜೊತೆಗೆ ಮಕ್ಕಳಿಗೊಂದು ಕೊಠಡಿ , ಬಾಳಂತಿ ಯಾರಿಗಾಗಿಯೇ ಒಂದು ಕೊಠಡಿ,ಅಡುಗೆ ಮನೆ , ಇವುಗಳೆಲ್ಲ ಇದ್ದವು ಎಂಬುದಕ್ಕೆ ಸಾಕ್ಷಿ ರೂಪದಲ್ಲಿ ನೋಡಬಹುದು.
ಮನೆಯ ನೆಲವು ಕೂಡ ಮಣ್ಣಿನ ನೆಲವಾಗಿತ್ತು ಜೊತೆಗೆ ಶ್ರೀಮಂತರ ಮನೆ ಹಂಚಿನ ಮನೆಯಾಗಿತ್ತುಮನೆಯ ಹಿಂಬದಿಯಲ್ಲಿತರಕಾರಿಗಳನ್ನು ಬೆಳೆಯುತ್ತಿದ್ದರುಮತ್ತು ಮನೆಯ ಎದುರು ಅಥವಾ ಪಕ್ಕದಲ್ಲಿ ಒಂದು ಕೊಟ್ಟಿಗೆ ಯನ್ನು ನಿರ್ಮಿಸಲಾಗಿತ್ತು ಅಲ್ಲಿಕೋಳಿ , ಕುದುರೆಹಸುಹಂದಿಇವುಗಳೆಲ್ಲ ಇದ್ದವು ಎಂಬುದಕ್ಕೆ ನಿದರ್ಶನವಾಗಿ ಈಗಲೂ ಕೂಡ ಅಲ್ಲಿ ಅವೆಲ್ಲವನ್ನುಸಾಕುತ್ತಿದ್ದಾರೆ
ಇಲ್ಲಿ ಕುದುರೆ ಗಾಡಿಗಳಿದ್ದವು ಜನರು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆರೆಳಲು ಕುದುರೆ ಗಾಡಿಗಳನ್ನೇಬಳಸುತ್ತಿದ್ದರುನಮ್ಮ ಹಳ್ಳಿಗಳಲ್ಲಿ ಎತ್ತಿನ ಗಾಡಿ ಇದ್ದ ಹಾಗೆ ) .
ಜೊತೆಗೆ ಸಂತೆಗಳು ನಡೆಯುತ್ತಿದ್ದವು ,
ಜೊತೆಗೆ ಇಲ್ಲಿಯ ಹಳೆಯ ಕಾಲದ ಶಾಲೆಗಳು ಕೂಡ ಹೇಗಿದ್ದವು ಎಂಬುದನ್ನು ಕೂಡ ನೋಡಬಹುದಾಗಿದೆಇಲ್ಲಿ ಪ್ರಾಥಮಿಕಶಾಲೆಗಳಲ್ಲಿ ಅಂದಿನ ಕಾಲದಲ್ಲೇ ಕಡ್ಡಾಯವಾಗಿ ಅಬ್ಯಾಕಸ್ ಅನ್ನು ಹೇಳಿಕೊಡುತ್ತಿದ್ದರುಮನೆಗಳಲ್ಲಿ ಅತ್ತಗಳು ಇರುತ್ತಿದ್ದವುಹಳೆಯ ಬುತ್ತಿಗಳನ್ನು ಬೇಡದ ವಸ್ತುಗಳನ್ನು ಅತ್ತಗಳಲ್ಲಿ ಹಾಕಿ ಇಡುತ್ತಿದ್ದರುಮನೆಗಳು ಕೂಡ ನಮ್ಮ ಹಳ್ಳಿಗಳಲ್ಲಿ ಇರುವ ಹಾಗೆಒಂದೊಂದು ಮಾರಿನಲ್ಲಿ ಒಂದೊಂದು ಮನೆಗಳಿವೆಮನೆಯ ಎದುರು ಬೇಲಿಗಳಿವೆ. ಒಂದು ಹಳ್ಳಿಯಲ್ಲಿ ಇರುವಂತೆ ಇಲ್ಲೂ ಕೂಡಕೆರೆ ಇರುತ್ತಿತ್ತು .
ಇವೆಲ್ಲವುಗಳಲ್ಲಿ ನಮ್ಮ ತಂಡದ ಮನಸೆಳೆದದ್ದೆಂದರೆ ಅಡುಗೆ ಮನೆಹಳೆಯ ಕಾಲದ ಅಡುಗೆ ಮನೆಗಳು ಪಿಂಗಾಣಿ ಪತ್ರೆಗಳಿಂದಕೂಡಿದೆಈಗಲೂ ಅಲ್ಲಿ ಹಳೆಯ ಕಾಲದಲ್ಲಿ ಹೇಗೆ ಈಗಿನಂತೆ ಎಲೆಕ್ಟ್ರಿಕ್ ಒಲೆಗಳನ್ನು ಬಳಸದೆ ಸೌದೆ ಒಲೆಗಳಿಂದ ಅಡುಗೆಮಾಡುತ್ತಿದ್ದರು ಎಂಬುದನ್ನು ತೋರಿಸುತ್ತಾರೆಈಗ ಇಲ್ಲಿ ಎಲ್ಲರ ಮನೆಗಳಲ್ಲಿ ಓವೆನ್ ಗಳು ಮೈಕ್ರೊವೊವನ್ ಗಳುಖಂಡಿತವಾಗಿ ಇದ್ದೆ ಇರುತ್ತದೆಆದರೆ ಆಗಿನಕಾಲದಲ್ಲಿ ತವಾದಲ್ಲಿ ಬ್ರೆಡ್  ಅನ್ನು ಕೈಯಲ್ಲಿ ತಟ್ಟಿ(ನಾವು ರೊಟ್ಟಿ ತಟ್ಟುವಂತೆ)ತಯಾರಿಸುತ್ತಿದ್ದರು . ಸೋಪ್ಪುಗಳನ್ನೆಲ್ಲ ಮನೆಯ ಹಿಂಬಾಗದಲ್ಲೇ ಬೆಳೆಯುತ್ತಿದ್ದರು ಅವುಗಳಿಂದ ಸಲಾಡ್ ಗಳನ್ನೂ ತಯಾರಿಸಿತಿನ್ನುತ್ತಿದ್ದರು .
ಇಲ್ಲಿಯ ಚಳಿಗಾಲಗಳಲ್ಲಿ ಹೀಟರ್ ಗಳಿಲ್ಲದೆ ಬದುಕುವುದು ಕಷ್ಟ ಎಲ್ಲ ಮನೆಗಳಲ್ಲೂ ಎಲೆಕ್ಟ್ರಿಕ್ ಹೀಟರ್ ಗಳು ಇದ್ದೆ ಇರುತ್ತದೆ.ಆಗಿನ ಕಾಲದಲ್ಲಿ ಚಿಮಣಿಗಳು ಇರುತ್ತಿತ್ತುಮನೆಯ ಒಂದು ಭಾಗದಲ್ಲಿ ಕಟ್ಟಿಗೆಗಳನ್ನು ಹಾಕಿ ಬೆಂಕಿ ಹಚ್ಹ್ಚಿಡುತ್ತಿದ್ದರು  ಬೆಂಕಿ ಇಡೀಕೊಠಡಿಯನ್ನು ಬೆಚ್ಚಗೆ ಇಡುತ್ತಿತ್ತು ಎಂಬುದನ್ನು  ಮ್ಯೂಸಿಯಂ ನಲ್ಲಿ ಪ್ರತ್ಯಕ್ಷವಾಗಿ ನೋಡಬಹುದು.
ಇಲ್ಲಿನ ಮಹಿಳೆಯರು ಕಸೂತಿ ಹೊಲಿಗೆಗಳನ್ನು ಮಾಡುತ್ತಿದ್ದರು ಎಂಬುದನ್ನು ತೋರಿಸಲು ಒಂದು ಪ್ರತ್ಯೇಕ ಮನೆಯನ್ನೇನಿರ್ಮಿಸಿದ್ದಾರೆಇಂಗ್ಲೆಂಡ್ ನಲ್ಲಿ ಪ್ರಮುಖವಾಗಿ ಬೆಳೆಯುವ ಬೆಳೆ ಓಟ್ಸ್ ಮತ್ತು ಗೋದಿ ಅದನ್ನು ಶೇಕರಿಸಿ ಇಡಲು ಪ್ರತಿಮನೆಯಲ್ಲೂ ಒಂದು ಪಣತ ಇರುತ್ತಿತ್ತು.
೫೦ ಎಕರೆಯ ಜಾಗದಲ್ಲಿ ೧೭  ಶತಮಾನದಲ್ಲಿ ಲಂಡನ್  ಹಳ್ಳಿಗಳು ಹೇಗಿದ್ದವು ಎಂಬುದನ್ನು ಈಗ ಓಪನ್ ಏರ್ ಮ್ಯೂಸಿಯಂ ಮಾಡಿದ್ದಾರೆ ದೇಶದವರು ಬೇಗ ಅಭಿವೃದ್ಧಿ ಹೊಂದಿದ್ದಾರೆ ನಾವು ಅಭಿವೃದ್ಧಿ ಹೊಂದುತ್ತಿದ್ದೇವೆ ಅಷ್ಟೇ ವ್ಯತ್ಯಾಸ .
ಚಿಚೆ ಸ್ಟರ್ ನೋಡಲು ಸಾಕಷ್ಟು ಸ್ಥಳಗಳಿವೆ ಕನಿಷ್ಠ  ದಿನಗಳಾದರೂ ಬೇಕು . ಓಪನ್ ಏರ್ ಮ್ಯೂಸಿಯಂ ನಿಂದ ಅರ್ಧಗಂಟೆಬಸ್ ನಲ್ಲಿ ಬಂದರೆ ಅಲ್ಲಿ ವೆಸ್ಟ್ ವಿಟ್ಟೆರಿಂಗ್ ಎಂಬ ಬೀಚ್ ಇದೆಮೇ ತಿಂಗಳು ಇಲ್ಲಿ ಸೂರ್ಯ ಬಿಸಿಲು ಬಿಡುವ ಕಾಲವಾದದ್ದರಿಂದ(ಸ್ಪ್ರಿಂಗ್ಹಿಮ , ಚಳಿಯಿಂದ ಹೊರಹೊರಡಲಾರದೆ ಬೇಸತ್ತ ಇಲ್ಲಿಯ ಜನ ಮೇ ತಿಂಗಳಿನಲ್ಲಿ ಬೀಚ್ ಗಳಿಗೆ ಹೋಗಿ ಸನ್ ಬಾತ್ಮಾಡಲು ಇಷ್ಟ ಪಡುತ್ತಾರೆ . ಮೇ , ಜೂನ್ ತಿಂಗಳಿನಲ್ಲಿ  ಬೀಚ್ ಜನರಿಂದ ಗಿಜಿಗುಟ್ಟುತ್ತಿರುತ್ತದೆ.
ಒಟ್ಟಾರೆ ಚಿಚೆ ಸ್ಟರ್ ಹಸಿರಿನಿಂದ ತುಂಬಿದ ಒಂದು ಹಳ್ಳಿ .



ಅರ್ಪಿತಾ ಹರ್ಷ 
ಲಂಡನ್ 

ಲಂಡನ್ ನಲ್ಲಿ ನೆಲೆಸಿರುವ ಭಾರತೀಯರ ಮನೋಭಿಪ್ರಾಯ

ಈ ನನ್ನ ಲೇಖನವು ಜೂನ್ ೮ ರ ವಿಜಯ ನೆಕ್ಸ್ಟ್ ನಲ್ಲಿ ಪ್ರಕಟವಾಗಿದೆ -----   
                                                         
 "ನಮ್ಮ ಹೊಟ್ಟೆ ಪಾಡಿಗಾಗಿ ಏನಾದರು ಒಂದು ಮಾಡಿಕೊಳ್ಳಲೇ ಬೇಕು ಎಂಬ ಉದ್ದೇಶದಿಂದ ಇಲ್ಲಿ ಬಂದು ಬಿಸಿನೆಸ್ಸ್ ಪ್ರಾರಂಭಿಸಿದೆ  ! ೧೮ ವರ್ಷದ ವರೆಗೆ ಮಕ್ಕಳು ನಮ್ಮ ವಾಬ್ದಾರಿ  ನಂತರ ಜೊತೆಗೆ ಇರಲಿ ಎಂದು ನಾವು ಕಟ್ಟು ಬೀಳುವಂತಿಲ್ಲ ಇಷ್ಟಕ್ಕೂ ಮಕ್ಕಳು ಸ್ವಂತ ಕಾಲ ಮೇಲೆ ತಾವು ನಿಂತರೆ ತಂದೆ ತಾಯಿಗೆ ಕುಶಿಯೇ ಲ್ವ ? ನನ್ನ  ಮಕ್ಕಳು ಅವರದೇ ಆದ ್ವಂತ ಮನೆ ಕಟ್ಟಿಕೊಂಡಿದ್ದಾರೆ . ನಾವು ಇಲ್ಲಿ ಬಂದಾಗ ಮಕ್ಕಳಿನ್ನು ಬಹಳ ಚಿಕ್ಕವರು ಈಗ ನನಗೆ - ವರ್ಷದ ಮೊಮ್ಮಕ್ಕಳಿದ್ದಾರೆಎನ್ನುತ್ತಾರೆ ಕ್ಯಾಟರಿಂಗ್ ಬಿಸಿನೆಸ್ ಮಾಡಿಕೊಂಡಿರುವ ಮೂಲತಃ ಗುಜರಾತ್ ನವರಾದ ಅರವತ್ತು ರ್ಷದ ವಿಷ್ಣು ಪ್ರಸಾದ್ ರವರುತಮ್ಮದೇ ಸ್ವಂತ ಮನೆಯಲ್ಲಿ ಹೆಂಡತಿಯೊಡನೆ ವಾಸಿಸುತ್ತಿದ್ದಾರೆಭಾರತೀಯ ಶೈಲಿ ಅಡುಗೆಗಳನ್ನು ಆರ್ಡರ್ ತೆಗೆದುಕೊಂಡು  ಪ್ರತಿ ಮನೆಗೇ ಹೋಗಿ ತಲುಪಿಸುತ್ತಾರೆ. “ಕೆಲವೊಮ್ಮೆ ೫೦ ಜನರ ಆರ್ಡರ್ ಗಳು ರುತ್ತವೆ ಕೆಲವೊಮ್ಮೆ  ಜನರ ಆರ್ಡರ್ ಕೂಡ ಇರುತ್ತದೆ ಆದರೆ ನಮ್ಮ ಭಾರತೀಯರಿಗೆ ಅಡುಗೆ ಮಾಡಿ ಕೊಡುವುದೇ ಒಂದು ಸಂಭ್ರಮ” ಎನ್ನುತ್ತಾರೆ ವಿಷ್ಣು ಪ್ರಸಾದ್.
ಅವರು ಇಲ್ಲಿ ಬಂದು ನೆಲೆಸಿ ೪೦ ವರ್ಷಗಳೇ ಕಳೆದಿದ್ದರೂ ಕೂಡ  ತಾಯ್ನಾಡಿನ ವ್ಯಾಮೋಹ ಇದ್ದೆ ಇದೆ ಅದಕ್ಕೋಸ್ಕರವೇ ಭಾರತೀಯ ಶೈಲಿಯ ಅಡುಗೆ ಮಾಡಿ ಲ್ಲಿ ನೆಲೆಸಿರುವ  ಭಾರತೀಯರ ಮನೆಗಳಿಗೆ ತಲುಪಿಸುವುದರ ಮೂಲಕ ಅವರೊಂದಿಗೆ ಭಾಂದವ್ಯ ಬೆಳೆಸಿಕೊಳ್ಳುತ್ತಾರೆ.
ಹಳೆಯ   ಕಾಲಮಾನದವರಿಗೂ ಈಗಿನವರಿಗೂ ಸರಿಬರುವುದಿಲ್ಲ ಹೊಂದಾಣಿಕೆ ಸ್ವಲ್ಪ ಕಷ್ಟ ಜೊತೆಗೆ ಇದ್ದು ಸಾಕಷ್ಟು ತೊಂದರೆ ಆಗುವುದಕ್ಕಿಂತ ದೂರ ದೂರ ಬದುಕಿ ಸಂಬಂಧವನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಸರಿ. ಹಬ್ಬಗಳು , ಹುಟ್ಟುಹಬ್ಬಗಳಿಗೆಲ್ಲ ಒಟ್ಟು ಸೇರಿ ಸಂತೋಷದಿಂದ ಆಚರಿಸಿದರೆ ಮನಸ್ಸಿಗೂ ನೆಮ್ಮದಿ ಇರುತ್ತದೆ ಇಲ್ಲಿಯ ಪದ್ಧತಿಯೇ ಾಗೆ ಮಕ್ಕಳು ಬೆಳೆದು ದೊಡ್ದವರಾಗುತ್ತಿದ್ದಂತೆ ಅವರಿಗೆ ತಮ್ಮದೇ ಆದ ಸ್ವತಂತ್ರತೆ ಇರುತ್ತದೆ ಆಗಾಗ ಬಂದು ಹೋಗುತ್ತಿರುವುದೇ ಒಂದು ಖುಷಿ ಎಂಬುದು ಇಲ್ಲಿಯೇ ಸೆಟಲ್ ಆದ ಹಿರಿಯರ  ಅಭಿಪ್ರಾಯ.ಹಣದ ದಾಹ ತೀರಿಸಿಕೊಳ್ಳಲಿಕ್ಕಾಗಿ  ಬಂದ ಎಷ್ಟೋ ಭಾರತೀಯರು ಹಣ ಕೈ ೇರುವುದರ ಜೊತೆಗೆ ಯಾವುದೇ ಜಂಜಡ ಇಲ್ಲದ ಬದುಕು ಸಿಗುತ್ತಿದೆ ಬಿಟ್ಟು ಹೋಗುವುದೇಕೆ ಎಂಬ ನಿರ್ಧಾರದಿಂದ ಇಲ್ಲಿಯೇ ನೆಲೆಸಲು ನಿರ್ಧರಿಸಿದ್ದಾರೆ.
“ಭಾರತದಲ್ಲಿ ಕೆಲಸ ಮಾಡುತ್ತಿದ್ದೆ ಂಬಳ ಸಾಕಾಗುತ್ತಿರಲಿಲ್ಲ ಅಲ್ಲಿಂದ ಲ್ಲಿ ಬರುವಾಗ - ತಿಂಗಳು ಇದ್ದು ೋದರಾಯಿತು ಎಂದು ಸಂಸಾರ ಸಮೇತ  ಬಂದಿದ್ದೆ ಆದರೆ ಇಲ್ಲಿಯ ವಾತಾವರಣ ಯಾವುದೇ ಚಿಂತೆಯಿಲ್ಲದಸ್ಟ್ರೆಸ್ ಇಲ್ಲದ ಜೀವನ ಇಷ್ಟವಾಯಿತು ಹಾಗಾಗಿ ಇಲ್ಲೇ ಸೆಟಲ್ ಆಗುವ ಯೋಜನೆ ಮಾಡಿದ್ದೇನೆ ನನ್ನ ತಂದೆಗೆ ನಾನಿಲ್ಲಿರುವುದು ಇಷ್ಟವಿಲ್ಲ ಆದರೆ ಇಲ್ಲಿಯ ಜೀವನಕ್ಕೆ ಒಗ್ಗಿ ಹೋಗಿದ್ದೇವೆ ವರ್ಷದಲ್ಲಿ ತಿಂಗಳು ಅವರೇ ಇಲ್ಲಿ ಬಂದಿರುತ್ತಾರೆ  ವರ್ಷಕ್ಕೊಮ್ಮೆ ನಾವು ಭಾರತಕ್ಕೆ ಹೋಗಿ ಬರುತ್ತೇವೆ ನನ್ನ ಮಗ ಕೂಡ ಇಲ್ಲೇ ಹುಟ್ಟಿರುವುದು ಅವನಿಗೆ ಭಾರತಕ್ಕೆ ಹೋದರೆ ಅಲ್ಲಿಯ ವಾತಾವರಣ ಹಿಡಿಸುವುದಿಲ್ಲ ಅದಕ್ಕೆ ನಾವು ಇಲ್ಲೇ ಒಂದು ್ವಂತ ಮನೆ ಕೊಂಡುಕೊಂಡಿದ್ದೇವೆ” ಎನ್ನುತ್ತಾರೆ  ೩೮ ವರ್ಷದ ಮೂಲತಃ ಮಹಾರಾಷ್ಟ್ರದವರಾದ ಮಂದಾರ ಎನ್ನುವವರು .
ಇನ್ನು ಕೆಲವರು ಇಲ್ಲಿ ಒಂಟಿ ಎನಿಸುತ್ತದೆ ಈಗಿನ ಮಕ್ಕಳಿಗೆ ಸಂಬಂಧಿಕರ ೊತೆ ಯಾವುದೇ ರೀತಿಯ ಸಂಪರ್ಕವೇ ಇರುವುದಿಲ್ಲ . ಅಜ್ಜ ಅಜ್ಜಿ ತುಂಬು ಸಂಸಾರದಲ್ಲಿ ಬೆಳೆಯುವ ಮಕ್ಕಳು ಹೆಚ್ಚು ಚಟುವಟಿಕೆ ಯಿಂದ ಕೂಡಿರುತ್ತದೆ ಆದರ ಇಲ್ಲಿ ಯಾರ ಸಂಪರ್ಕವು ಇರುವುದಿಲ್ ಕೇವಲ ಅಪ್ಪ ಅಮ್ಮ ಇದರಿಂದ ಮಕ್ಕಳು ಬೇರೆಯವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟಪಡುತ್ತಾರೆ ಒಂದು ಎರಡ ವರ್ಷಗಳವರೆಗೆ ಇಲ್ಲಿದ್ದರೆ ಸರಿ ದರೆ ಮಕ್ಕಳು ಶಾಲೆಗೆ ಹೋಗುವಂತಾದ ಮೇಲೆ ಭಾರತವೇ ಚಂದ ನಮ್ಮ ಭಾರತದಲ್ಲಿ ಿಕ್ಕುವಷ್ಟು ವಿದ್ಯಾಭ್ಯಾಸ ಇಲ್ಲಿ ಿಗುವುದಿಲ್ಲ ಇಲ್ಲಿ ಮಕ್ಕಳಿಗೆ ಆಟಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ ಆದರೆ ಮಧ್ಯದಲ್ಲಿ ಬಿಟ್ಟು ಭಾರತಕ್ಕೆ ಹಿಂತಿರುಗಿ ಹೋದರೆ ಮಕ್ಕಳ ಓದಿಗೆ ಕಷ್ಟವಾಗುತ್ತದೆ ಭಾರತದಲ್ಲಿ  ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಮಕ್ಕಳ ಪ್ರಾರಂಭದ ವಿದ್ಯಾಭ್ಯಾಸ ಭಾರತದಲ್ಲೇ ಆಗಬೇಕು ಆಗ ಮಕ್ಕಳು  ಇನ್ನೂ ಬುದ್ಧಿವಂತರಾಗುತ್ತಾರೆ ಇಲ್ಲದಿದ್ದರೆ  ಕಷ್ಟವಾಗುತ್ತದೆ ಎನ್ನುತ್ತಾರೆ ೧-೨ ವರ್ಷದ ಮಕ್ಕಳಿರುವ  ತಾಯಂದಿರು.
ನಮ್ಮ ದೇಶದಲ್ಲೇ ಹುಟ್ಟಿ ಬೆಳೆದು ಓದಲು ಅಥವಾ ಮನೆಕಟ್ಟಲು ಮಾಡಿಕೊಂಡ  ಸಾ ತೀರಿಸಲು ಅಥವಾ ಹಣಕ್ಕೋಸ್ಕರ ಬಂದ ಎಷ್ಟೋ ಮಂದಿ ಹೆಂಡತಿ ಮಕ್ಕಳನ್ನು ಅಲ್ಲೇ ಬಿಟ್ಟು ಇಲ್ಲಿ ಒಂಟಿ ಜೀವನ ಸಾಗಿಸುತ್ತಿದ್ದಾರೆಹಣಕ್ಕಾಗಿ ಏನಾದರು ಹೊಂದಾಣಿಕೆ ಮಾಡಿಕೊಳ್ಳಲೇ ಬೇಕು. ಭಾರತದಲ್ಲಿ ಗಗನಕ್ಕೆ ಏರುತ್ತಿರುವ ಎಲ್ಲ ವಸ್ತುಗಳ ಬೆಲೆ ಹಿಂತಿರುಗಿ ೋಗಲು ಭಯ ಹುಟ್ಟಿಸುತ್ತದೆ ಎಂದು ಹೇಳುವವರೂ ಇದ್ದಾರೆಅಲ್ಪ ಸಮಯಕ್ಕೊಸ್ಕರ ಬಂದು  ತಿಂಗಳು ಗಳಿದ್ದು ಕೂಡ  ಮಾಡಿಕೊಂಡು ಹೋಗಬಹುದು ಆದರೆ ಅದರಿಂದ ಒಂದು ಹಂತದ ಸಾಲಗಳನ್ನು ತೀರಿಸಬಹುದಷ್ಟೇ ಆದ್ದರಿಂದ ,ಬಂದರೆ ಕೊನೆಪಕ್ಷ ಒಂದು ವರ್ಷಕ್ಕಾದರೂ ಬರಬೇಕು .ಕುಟುಂಬ ಸಮೇತ ಬಂದು ನೆಲೆಸಿ ದೇಶ ನೋಡಿಕೊಂಡು ಹೋಗಲು  ದೇಶ ಸೂಕ್ತ ,ಇಲ್ಲೇ ಪೆರ್ಮನೆಂಟ್ ಆಗಿ ನೆಲೆಸಲು ಕಷ್ಟ ಎಂಬುದು ಇಲ್ಲಿ ಹೊಸದಾಗಿ ಬಂದ ಅಂದರೆ - ವರ್ಷಗಳಿಂದ ಇಲ್ಲಿರುವ ೩೦-೩೫ ಆಸುಪಾಸಿನವರ ಅಭಿಪ್ರಾಯ .
 ಆದರೆ ಬಹಳ ಹಿಂದೆಯೇ ಅಂದರೆ ಭಾರತಕ್ಕೆ ಸ್ವತಂತ್ರ ಸಿಗುವ ಸಂದರ್ಭದಲ್ಲಿ ಬಂದು ನೆಲೆಸಿದ ಹಿರಿಯರು ಇಲ್ಲಿಯ ಬದುಕಿನ ರೀತಿಗೆ ಹೊಂದಿಕೊಂಡು ಬಿಟ್ಟಿದ್ದಾರೆ ಇಲ್ಲಿಯೇ ಸಾಕಷ್ಟು ಭಾರತದವರಿದ್ದಾರೆ ದೇವಸ್ಥಾನಗಳಿವೆ ವಾಕಿಂಗ್ ಗಳಿಗೆ ಪಾರ್ಕ್ ಗಳಿವೆ . ಲಂಡನ್ ನಲ್ಲಿ ಒಂದು ಈಸ್ಟ್ಹ್ ಹ್ಯಾಮ್ ಎಂಬ ಸ್ಥಳದಲ್ಲಿ ಕೇವಲ ಏಷ್ಯ ದವರೆ  ಇರುವುದು ಅದರಲ್ಲೂ ಹೆಚ್ಚು ಭಾರತೀಯರು ,ಅಲ್ಲಿ ಹೋಟೆಲ್ ಗಳು ಕೂಡ ಭಾರತದ್ದೆ  ದೇವಸ್ಥಾನಗಳು ಹತ್ತಿರದಲ್ಲೇ ಇದೆಇಲ್ಲಿ ನಮಗೆ ಏನು ತೊಂದರೆ ಎನಿಸುವುದೇ ಇಲ್ಲ ಬೇಕಾದಷ್ಟು ಸ್ನೇಹಿತರು ಸಿಗುತ್ತಾರೆ ಭಾರತಕ್ಕೆ ನಾವು ಹೋಗುವುದೇ ಇಲ್ಲ ಎನ್ನುತ್ತಾರೆ ಹಿರಿಯರು .
ಲಂಡನ್ ನಲ್ಲಿ ಕರ್ನಾಟಕದ ಜನರ ಸಂಖ್ಯೆ ಕಡಿಮೆಯೇ ಎನ್ನಬಹುದು ಇಲ್ಲಿ ಹೆಚ್ಚು ತಮಿಳುನಾಡಿನವರನ್ನು ನೋಡಬಹುದು ಅದರಲ್ಲೂ ಬಹಳ ವರ್ಷಗಳಿಂದ ಇಲ್ಲಿಯೇ ನೆಲೆ ಹೊಂದಿರುವವರಲ್ಲಿ ತಮಿಳಿನವರು ಹೆಚ್ಚು .
"ನಮ್ಮ ಮಗ ಇಲ್ಲೇ ಮನೆ ತೆಗೆದುಕೊಂಡಿದ್ದಾನೆ ಭಾರತೀಯ ಹುಡುಗಿಯನ್ನೇ ನೋಡಿ ಮಾಡುವೆ ಮಾಡಿದೆವು ಈಗ ಒಂದು ಮಗು ಇದೆ ಅದನ್ನು ನೋಡಿಕೊಳ್ಳಲು ಇಲ್ಲಿ ಬಂದಿದ್ದೇವೆ ಇಲ್ಲಿಯ ವಾತಾವರಣ ನಮಗೆ ಸರಿ ಹೋಗುವುದಿಲ್ಲ ತುಂಬಾ ಚಳಿ ಹೊರಗೆ ಕಾಲಿಡಲಾಗದು, ಮನೆಯಲ್ಲಿಯೇ ಕುಳಿತು ಬೇಜಾರು ಎಷ್ಟಾದರೂ ನಮ್ಮ ನಾಡೆ ನಮಗೆ ಚಂದ ಮಕ್ಕಳು ಜೊತೆಗಿಲ್ಲ ಎಂದು ಬೇಸರವಾಗುತ್ತದೆ ಆದರು ಬೇರೆ ದಾರಿ ಇಲ್ಲ ಇರಲೇ ಬೇಕು "ಎಂಬುದು  ಭಾರತದಿಂದ ೨-೩ ತಿಂಗಳಿಗೆ ಬಂದಿರುವ  ದೆಹಲಿಯ  ವರುಣ್ ಶರ್ಮ ರವರ ಅಳಲು .
ಜನರೇಶನ್ ಗ್ಯಾಪ್ ಎಲ್ಲ ಕಡೆ ಇದೆ ಇಲ್ಲಿಯೇ ನೆಲೆಸಿರುವ ಹಿರಿಯರು ಮತ್ತು ಕಿರಿಯರ ನಡುವೆ ಇದರ ಬಗ್ಗೆ ವಿಚಾರಿಸಿದಾಗ ಹಿರಿಯರಿಂದ  ಕೇಳಿಬಂದ ಮಾತುಗಳೆಂದರೆ " ನಾವು ಭಾರತದಿಂದ ಹೊರಗಿದ್ದರೂ ನಮ್ಮ ಆಚಾರ ಸಂಸ್ಕೃತಿಗಳನ್ನು ಬಿಟ್ಟಿಲ್ಲ ಪ್ರತಿದಿನ ದೇವರ ಪೂಜೆ , ಭಾರತೀಯ ಅಡುಗೆ , ಹಬ್ಬ ಗಳನ್ನೂ ತಪ್ಪದೆ ಆಚರಿಸಿಕೊಂಡು ಬರುತ್ತಿದ್ದೇವೆ ನಾವು ಇಲ್ಲೇ ನೆಲಸಿದರು ನಮ್ಮ ಭಾರತದ ಆಚರಣೆ ಎಂದಿಗೂ ಬಿಡಲಾರೆವು ಆದರೆ ಮಕ್ಕಳು ಕುಡಿತ ಸಿಗರೇಟ್ ಇವುಗಳೆಲ್ಲ ಇಲ್ಲಿ ಸಾಮಾನ್ಯ ಎನ್ನುತ್ತಾರೆ ನಮ್ಮ ಮನಸ್ಥಿತಿ ಅವರೊಂದಿಗೆ ಸ್ವಲ್ಪವು ಹೊಂದಾಣಿಕೆ ಬರುವುದಿಲ್ಲ " ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಅದೇ ರೀತಿ ಯುವಕರನ್ನು ಕೇಳಿದರೆ ನಾವು ಬೆಳೆದಿದ್ದು ಇಲ್ಲಿಯೇ ಸ್ನೇಹಿತರೆಲ್ಲ ಇಲ್ಲಿನವರೇ ಅವರೊಂದಿಗೆ ಬೆರೆಯಲೇ ಬೇಕು ಸಿಗರೆಟ್, ಕುಡಿತ ಇವೆಲ್ಲ ಇಲ್ಲಿ ಸಾಮಾನ್ಯವಾದುದು ಇಲ್ಲಿಯ ರೂಲ್ಸ್ ಗಳೇ ಹಾಗೆ ಮಕ್ಕಳು ಬೆಳೆದು ದೊಡ್ದವರಾಗುತ್ತಿದ್ದಂತೆ ಅವರಿಗೆ ಸ್ವತಂತ್ರರಾಗಲು ಹಕ್ಕಿದೆ ಅದಕ್ಕೆ ನಮ್ಮ ದಾರಿ ನಮಗೆ .ತಂದೆ ತಾಯಿ ಬಗ್ಗೆ ಗೌರವ ಇದೆ ಸಮಯವಿದ್ದಾಗ ಹೋಗಿ ನೋಡಿಕೊಂಡು ಬರುತ್ತೇವೆ . ಈಗಿನ ವಾತಾವರಣಕ್ಕೆ ತಕ್ಕ ಹಾಗೆ ಇರಬೇಕು ಎಂಬ ಉಡಾಫೆಯ ಮಾತು ಕೂಡ ಕೇಳಿಬಂತು .
ಒಟ್ಟಾರೆಯಾಗಿ ಇಲ್ಲಿಯೇ ಬಂದು ಪೆರ್ಮನೆಂಟ್ ಆಗಿ ಸೆಟಲ್ ಆದ ಹಿರಿಯರು ಮತ್ತು ಯುವಕರಿಗೆ ಭಾರತಕ್ಕೆ ಹೋಗುವ ಬಗ್ಗೆ ಯಾವುದೇ ಯೋಜನೆಯಿಲ್ಲ ಅವರು ಇಲ್ಲಿಯ ವಾತಾವರಣ ಮತ್ತು ಪರಿಸ್ಥಿತಿಗಳಿಗೆ ಸಂಪೂರ್ಣವಾಗಿ ಹೊಂದಿಕೊಂಡಿದ್ದಾರೆ ಇಲ್ಲಿಯ ಜೀವನ ಚೆನ್ನಾಗಿದೆ ಯಾವುದೇ ಟೆನ್ಶನ್ ಗಳಿಲ್ಲ  ಎನ್ನುತ್ತಾರೆ  . ಆದರೆ ಭಾರತದಲ್ಲೇ ಹುಟ್ಟಿ ಬೆಳೆದು ಅಲ್ಲೇ ವಿಧ್ಯಾಭ್ಯಾಸ ಮಾಡಿ ಹಣಕ್ಕೋಸ್ಕರ ಇಲ್ಲಿ ಬಂದಿರುವ ಇತ್ತೀಚಿನ ಹೆಚ್ಚಿನ  ಯುವಕರಲ್ಲಿ ನಮ್ಮ ನಾಡೇ ಚಂದ ಇಲ್ಲಿ ಇದ್ದರೆ ಸಂಬಂಧಗಳು ಚೆನ್ನಾಗಿರುವುದಿಲ್ಲ  ಸಂಬಂಧಿಕರೊಂದಿಗೆ ಯಾವುದೇ ರೀತಿಯ ಒಡನಾಟವಿರುವುದಿಲ್ಲ ಸ್ವಲ್ಪ ದಿನಗಳ ವರೆಗೆ ಇರಲು ಇದು ಸೂಕ್ತ  ಎಂಬ ಅಭಿಪ್ರಾಯವಿದೆ .



 - ಅರ್ಪಿತಾ ಹರ್ಷ