Wednesday 30 May 2012

ಏಕಾಂಗಿ



ಭಾರತದಲ್ಲಿದ್ದಾಗ ಕೇಳಿದ್ದೆ ಪಾಶ್ಚಾತ್ಯ ದೇಶಗಳಲ್ಲಿ ಮಕ್ಕಳು ಹದಿನೆಂಟು ದಾಟಿದ ನಂತರ ಜೊತೆಗೆ ಇರುವಂತಿಲ್ಲ ಎಂದು. ಲಂಡನ್ ಗೆ  ಬಂದ ಮೇಲೆ ತಿಳಿಯಿತು ಕೆಲವರು ಜೊತೆಗಿಲ್ಲದಿದ್ದರು ಮಕ್ಕಳು ಕೂಡ ತಪ್ಪದೆ ಸಂಭಂದವನ್ನು ಉಳಿಸಿಕೊಂಡಿರುತ್ತಾರೆ. ಅವರಲ್ಲೂ ಅತಿ ಹೆಚ್ಚು ಪ್ರೀತಿ ಕಾಳಜಿಗಳು ಇರುತ್ತವೆ ಎಂಬುದು. ಆದರೆ ಕೆಲವೊಂದು ಕುಟುಂಬದಲ್ಲಿ ಮಾತ್ರ .
 ಪ್ರತಿ ದಿನ ಸಂಜೆ ೫ ಗಂಟೆಯಾಗುತ್ತಿದ್ದಂತೆ ಎಲ್ಲಿದ್ದರು ಮನೆಯ ಆ ಕಿಟಕಿಯ ಬಳಿ ನಿಂತು ನೋಡುತ್ತಿರುತ್ತಿದ್ದೆ. ಸುಮಾರು ೧ ವರ್ಷದಿಂದ ಹೆಚ್ಚು ಕಡಿಮೆ ಒಂದು ದಿನವು ಮಿಸ್ ಮಾಡಿಕೊಂಡಿಲ್ಲವೆನ್ನಬಹುದು.ಕಣ್ಣಲ್ಲೊಂದು ನಿರೀಕ್ಷೆ . ಇವತ್ತು ಇನ್ನು ಬಂದೆ ಇಲ್ಲವಲ್ಲ ಮೊದಲೇ ಹೋಗಿಬಿಟ್ಟರ ಎಂಬ ಆತಂಕ. ನಾನು ಹೇಳಹೊರಟಿರುವುದು ನಮ್ಮ ಮನೆಯಿಂದ  ೧ ಮಾರು ದೂರದ ಮನೆಯಲ್ಲಿರುವ  ವೃದ್ಧ ದಂಪತಿಗಳ ಬಗ್ಗೆ. ಪ್ರತಿ ದಿನ ನಮ್ಮ ಮನೆಯ ಹತ್ತಿರದಿಂದ ಸರಿಯಾಗಿ ೫ ಗಂಟೆಗೆ ಒಂದು ವೃದ್ಧ ದಂಪತಿಗಳು ಜೊತೆಗೂಡಿ ನಡೆದುಕೊಂಡು ಹೋಗುತ್ತಿದ್ದರು . ಅಜ್ಜನಿಗೆ ಸುಮಾರು ೮೦ ವರ್ಷವಂತೂ ಆಗಿರಬಹುದು ಆತ ನಡೆಯಲಾರದ ಸ್ಥಿತಿ . ಇಲ್ಲಿ ವೃದ್ಧರಿಗಾಗಿ ಸಿಗುವ ತಳ್ಳು ಗಾಡಿಯಲ್ಲಿ ಅಜ್ಜಿ ತಳ್ಳಿಕೊಂಡು ಹೋಗುತ್ತಿದ್ದರು .ವಯಸ್ಸಾದ ಬಳಿಕ ನೋಡಿಕೊಳ್ಳಲು ಜೊತೆಯಲ್ಲಿ ಯಾರು ಇಲ್ಲದೆ ಅಜ್ಜ ಅಜ್ಜಿ ಇಬ್ಬರೇ ಇದ್ದರೆನ್ನುವುದು ನನ್ನ ಊಹೆ . ಪ್ರತಿದಿನ ೫ ಗಂಟೆ ಅವರ ವಾಕಿಂಗ್ ನ ಸಮಯ . ೫ ಗಂಟೆಗೆ ಹೊರಟರೆ ಮತ್ತೆ ಬರುವುದು ೭.೩೦ ರ ಸಮಯಕ್ಕೆ . ಹೋಗುವಾಗ ತಳ್ಳು ಗಾಡಿಯಲ್ಲಿ ಅಜ್ಜನನ್ನು ಕುಳ್ಳಿರಿಸಿಕೊಂಡು ತಳ್ಳುತ್ತ ಹೋಗುವ ಅಜ್ಜಿ ಬರುವಾಗ ಆತನ ಕೈ ಹಿಡಿದು ಒಂದೊಂದೇ ಹೆಜ್ಜೆ ನಡೆಸಿಕೊಂಡು ಬರುತ್ತಿದ್ದರು ಜೊತೆಗೆ ಇನ್ನೊಂದು ಕೈಯಲ್ಲಿ ಗಾಡಿಯನ್ನು ತಳ್ಳುತ್ತಿರುತ್ತಾರೆ ಗಾಡಿಯ ಒಳಗೆ ತರಕಾರಿಗಳ ಚೀಲ . ಅವರ ಆ ಸ್ಥಿತಿಯಲ್ಲಿ ನೋಡಿದರೆ ಎಂತವರಿಗೂ ಹೃದಯ ನೋವಾಗದಿರದು . 
ಒಂದು ದಿನ ಆ ದಂಪತಿಗಳನ್ನು ನೋಡದಿದ್ದರೆ ಏನೋ ಒಂದು ರೀತಿ ಕಳೆದುಕೊಂಡಂತೆ ಮರುದಿನ ನೋಡುವ ವರೆಗೂ ಅವರಿಬ್ಬರೂ ಬಂದಿದ್ದರೋ ಇಲ್ಲವೋ ಎಂಬ ಆತಂಕ . ವಾಕಿಂಗ್ ಬಂದಿದ್ದಾರೆಂದರೆ ಅವರು ಕ್ಷೇಮವಾಗಿ   ಇದ್ದಾರೆ ಎಂದು ಮನಸ್ಸಿಗೆ ನಿಶ್ಚಿಂತೆ. ತಂದೆ  ತಾಯಿ ಮಕ್ಕಳಿಗೋಸ್ಕರ ಎಷ್ಟೊಂದು ಹೆಣಗಾಡುತ್ತಾರೆ ಮಾಡುವುದೆಲ್ಲ ಮಕ್ಕಳಿಗೋಸ್ಕರವೇ ಆದರೆ ಅವರ ಅತಿ ಮುಪ್ಪಿನ ಕಾಲದಲ್ಲಿ ಜೊತೆಗಿರಬೇಕಾದ ಮಕ್ಕಳಿಗೆ ತಂದೆ ತಾಯಿ  ಹೊರೆಯಾದಂತೆ ವರ್ತಿಸುತ್ತಾರೆ. ಇಲ್ಲಿ ಅಂತವರಿಗೊಸ್ಕರವೇ ವೃದ್ಧಾಶ್ರಮಗಳ ಸಂಖ್ಯೆ ದೊಡ್ಡದಿದೆ .ಆದರೆ ಗಂಡ ಹೆಂಡತಿ ಇಬ್ಬರು ಜೊತೆಗಿರುವ ಅವಕಾಶ ಇಲ್ಲದಿದರಿಂದಲೋ ಏನೋ ಇವರಿಬ್ಬರು ತಮ್ಮದೇ ಮನೆಯಲ್ಲಿದ್ದಾರೆ . ಪ್ರತಿದಿನ ಅವರು ಮಾತನಾಡುತ್ತಾ ನಗುತ್ತ ಜೊತೆ ಹೋಗುವಾಗ ಮನದೊಳಗೆ ಎಷ್ಟೊಂದು ನೋವಿರಬಹುದು ಎಂದೆನಿಸುತ್ತದೆ .
 ನನ್ನ ಆತ್ಮೀಯ ಗೆಳತಿಯ ಜೊತೆ ಅವರ ಬಗ್ಗೆ ಹೇಳಿಕೊಂಡಿದ್ದೆ  ಎಷ್ಟೋ ಭಾರಿ ಇಬ್ಬರು ಜೊತೆ ಕುಳಿತು ಅವರನ್ನು ನೋಡುವುದಕ್ಕೊಸ್ಕರವೇ ಕಾಯುತ್ತ ಕುಳಿತ್ತದ್ದು ಇದೆ . ಅವರ ಬಗ್ಗೆಯೇ ಮಾತನಾಡುತ್ತ ಸಮಯ ಕಳೆದದ್ದು ಇದೆ . ಆದರೆ ಈಗೊಂದು ತಿಂಗಳಿನಿಂದ  ಆ  ದಂಪತಿಗಳು ಇತ್ತ ಸುಳಿಯುತ್ತಲೇ ಇರಲಿಲ್ಲ  ಸಂಜೆ ಅದೇ ಸಮಯಗಳಲ್ಲಿ ಕಾದರು ಒಂದು ದಿನವು ಕಾಣಿಸಿಕೊಂಡಿಲ್ಲ . ಅವರ ಮನೆಯೆದುರು ಹಾದು ಹೋಗುವಾಗಲೆಲ್ಲ ಎಲ್ಲಾದರು ಕಾಣಬಹುದು ಎಂದೆನಿಸಿ ನೋಡುತ್ತಿದ್ದೆ.  ವಯಸ್ಸಾದ ನಂತರ ಜೊತೆಗೆ ನೋಡಿಕೊಳ್ಳಲು ಯಾರು ಇಲ್ಲದಿದ್ದರೆ ಎಷ್ಟೊಂದು ಕಷ್ಟ .ಏನಾಯಿತೆಂದು ಯಾರು ವಿಚಾರಿಸುವವರಿರುವುದಿಲ್ಲ. ಪ್ರತಿದಿನ ದೂರದಿಂದ ನೋಡುತ್ತಿದ್ದೆನಾದರು ಏನೋ ಒಂದು ರೀತಿಯ ಭಾವನಾತ್ಮಕ ಸಂಭಂದ ಜೊತೆಗಿದ್ದಂತಿತ್ತು. 
ಈಗ ಒಂದು ವಾರದಿಂದ ಪ್ರತಿದಿನ ಅಜ್ಜಿ ಮಾತ್ರ ನಡೆದುಕೊಂಡು ಹೋಗಿ ತರಕಾರಿ ತರುತ್ತಾರೆ. ಜೊತೆಗೆ ಸಾಥ್ ನೀಡುತ್ತಿದ್ದ ಅಜ್ಜ ಬರುತ್ತಿಲ್ಲ .ಅಜ್ಜಿ ಈಗ ಏಕಾಂಗಿ .ಏಕೋ ಏನೋ ಗೊತ್ತಿಲ್ಲ ಅಜ್ಜಿಯೊಬ್ಬಳನ್ನೇ ನೋಡಿ  ನೋಡಿದರೆ ಕಣ್ಣಲ್ಲಿ ನೀರು ತುಂಬುತ್ತದೆ.


ಅರ್ಪಿತಾ ಹರ್ಷ 

ಈ ನನ್ನ ಲೇಖನವು ಅವಧಿ ಮ್ಯಾಗಜಿನ್ ನಲ್ಲಿ ಪ್ರಕಟಗೊಂಡಿದೆ . http://avadhimag.com/?p=54443

Friday 25 May 2012

ಸಧ್ಯ ಇನ್ನು ಪ್ರಳಯವಾಗಲಿಲ್ಲ !!

ಈ ನನ್ನ ಲೇಖನವು ಅವಧಿ ಮ್ಯಾಗ್ಜಿನ್ ನಲ್ಲಿ ಪ್ರಕಟ ಗೊಂಡಿದೆ . http://avadhimag.com/?p=53997


ಒಬ್ಬ ವ್ಯಕ್ತಿಯಿಂದ ದೂರವಾದಾಗಲೇ  ವ್ಯಕ್ತಿಯ ಮಹತ್ವ ತಿಳಿಯುವುದು ಅಂತ ಹಿರಿಯರು ಹೇಳಿದ್ದ ಮಾತು ಕೇಳಿದ್ದೆ . ಆದರೆ ಪ್ರಾಕ್ಟಿಕಲ್ ಆಗಿ ಪ್ರಯೋಗಿಸಲು ಹೋಗಿರಲಿಲ್ಲ . ಆದರು ಬೇಡವೆಂದರೂ ಹೆಣ್ಣುಮಕ್ಕಳಿಗೆ ಮದುವೆ ಅನ್ನುವುದೊಂದು ಆಗಿಬಿಟ್ಟರೆ ಇದರ ಅನುಭವ ತನ್ನಿಂದ ತಾನೇ ಆಗಿಬಿಡುತ್ತದೆ, ಹಾಗೆ ನನಗೂ ಕೂಡ . ಕಾಲೇಜಿನ ಮೆಟ್ಟಿಲು ಹತ್ತುತ್ತಿದ್ದಂತೆ ಅಪ್ಪ ಅಮ್ಮ ನಿಗೆ ಮಗಳು ಮದುವೆಗೆ ಬಂದುಬಿಟ್ಟಳು ಅನ್ನಿಸುವುದು ಅದೇಕೋ ನಾ ಕಾಣೆ .ಕಾಲೇಜು ಮುಗಿಸಿ ಡಿಗ್ರೀ ಎಂಬುದೊಂದನ್ನು ತೆಗೆದುಕೊಂಡು ಮನೆಗೆ ಬಂದ ದಿನದಿಂದಲೇ ಮುಂದೇನು ಎಂಬ ಯೋಚನೆ ಕಾಡಬಾರದು ಎಂದು ವರಾನ್ವೇಷಣೆ ಪ್ರಾರಂಭಿಸಿಬಿಟ್ಟರು.ಅಂತು ಒಂದು ಒಳ್ಳೆಯ ವರ (ಅಪ್ಪ ಅಮ್ಮ ಪಾಲಿಗೆ ) ಸಿಕ್ಕಿಬಿಟ್ಟ ಕುಶಿಯಲ್ಲಿ ಮದುವೆಯನ್ನು ಆದಷ್ಟು ಬೇಗ ಮಾಡಿಮುಗಿಸಬೇಕು ಎಂಬ ತರಾತುರಿಯಲ್ಲಿದ್ದರು. ನನ್ನ ಅದೃಷ್ಟ ಸ್ವಲ್ಪ ಚೆನ್ನಾಗಿತ್ತೋ ಏನೋ ಇನ್ನೊಂದು ಸ್ವಲ್ಪದಿನ ಸ್ವತಂತ್ರವಾಗಿರಲಿ ಎನಿಸಿರಬೇಕು ದೇವರಿಗೆ ಅದೇಸಮಯದಲ್ಲಿ ಹತ್ತಿರದವರೊಬ್ಬರ ತಿಥಿ ಅಡ್ಡಬಂದಿತ್ತು. ನಂತರ ಆಷಾಡ,ಅಸ್ತ,ಮಳೆಗಾಲ  ಏನೇನೊ ಅಡ್ಡ ಬಂದಿತ್ತು  ನಾನು ಕೂಡ ಕಾದು ಕಾದು ಬಹುಷಃ ೨೦೧೨ ರಲ್ಲಿ ಪ್ರಳಯ ಎನ್ನುತ್ತಿದ್ದರಲ್ಲ ಇದೆ ಇರಬಹುದೇ ಎಂಬ ಸಂಶಯಕ್ಕೆ ಬಿದ್ದು ಕಂಗಾಲಾಗಿ ಬಿಟ್ಟಿದ್ದೆ . ಹೆಚ್ಚು ಕಡಿಮೆ ಒಂದು ವರ್ಷದ ನಂತರ ಮತ್ತೆ ಒಂದು ಮುಹೂರ್ತ ನೋಡಿ ಮದುವೆಯೂ ನಡೆಯಿತು 
ಅಂತು ಬಂತು ಎಲ್ಲರೂ ಕಾಯುತ್ತಿದ್ದ ಸಮಯ ಅಪ್ಪ ಅಮ್ಮನಿಗೆ ಎಲ್ಲಿಲ್ಲದ ಸಂತೋಷ ಮಗಳನ್ನು ಅಳಿಯನೊಂದಿಗೆ ಲಂಡನ್ ಗೆ ಕಳಿಸುವ ಸಂಭ್ರಮ ಕಣ್ಣಲ್ಲಿ ಕುಣಿಯುತ್ತಿದ್ದರೆ  ನನಗೋ ಕಣ್ಣಲ್ಲಿ ನೀರು . ಲಂಡನ್ ಗೆ ಬಂದಾಗ ಇಲ್ಲಿ ಎಲ್ಲ ಹೊಸತು. ಗುರುತು ಪರಿಚಯದವರು ಯಾರು ಇರದ ದೇಶ. ಗಂಡ, ಫೇಸ್ಬುಕ್ ,ಜೊತೆಗೊಂದಿಷ್ಟು ಹೊಸ ಸ್ಥಳಗಳ ಭೇಟಿ .ಎಲ್ಲದಕ್ಕೂ ಹೊಸಹುರುಪು . ಆದರು ಯಾವುದೇ ಸ್ಥಳಗಳಿಗೆ ಭೇಟಿ  ಇತ್ತರು ಮೊದಲು ನೆನಪಾಗುವುದು ನಮ್ಮ ನಾಡು ಅಲ್ಲಿಯ ಹಸಿರು , ಮಲೆನಾಡಿನ  ಭೋರ್ಗರೆತದ ಮಳೆ , ಅಲ್ಲಿಯ ಹಸನ್ಮುಖಿ ಜನರು, ಪರಿಚಯವಿಲ್ಲದಿದ್ದರು ಮಾತನಾಡಿಸುವ  ಪರಿ ಬಹಳ ಸೊಗಸು ಇದನ್ನೆಲ್ಲಾ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದ ಹಾಗೆ ಪ್ರಳಯವೆಂದರೆ ಭಾರತ ಬಿಟ್ಟು ಹೊರಹೊಗುವುದೇ ಇರಬೇಕು ಎಂದುಕೊಂಡಿದ್ದು ಇದೆ .ದೂರ ಬಂದಾಗ ನಮ್ಮವರ ಮೇಲೆ ಹೆಚ್ಚು ಪ್ರೀತಿ ಎಂಬಂತೆ ಮನೆಗೆ ಫೋನ್ ಮಾಡಿದಾಗಲೆಲ್ಲ ಅಪ್ಪ ಅಮ್ಮ ತೋರಿಸುವ ಅತಿ ಪ್ರೀತಿನೀನೆ ಕಣ್ಣಮುಂದೆ ಬಂದೆ ಎಂಬುದನ್ನೆಲ್ಲ  ನೋಡಿ ಇದು ಪ್ರಳಯದ ಮುನ್ಸೂಚನೆ ಇರಬಹುದೇ ಎಂದು ಕೂಡ ಅನ್ನಿಸಿದ್ದುಂಟು .
ಮದುವೆಯ ಮೊದಲು ನನಗೆ ನಾನೇ ಕೇಳಿಕೊಳ್ಳುತ್ತಿದ್ದ ಪ್ರಳಯವೆಂದರೆ ಇದಾ ? ಎಂಬ ಪ್ರಶ್ನೆ ಮದುವೆಯ ನಂತರ ನನಗೆ ಸಾಥ್ ನೀಡಿದ ನನ್ನವನಲ್ಲಿ  ಕೇಳಲು ಪ್ರಾರಂಭಿಸಿದ್ದೆಪ್ರತಿ ಭಾರಿ ಬೇಸರಿಸಿಕೊಳ್ಳದೆ ಅವರು ನಗುತ್ತ  ಉತ್ತರಿಸುತ್ತಿದ್ದರು ಪ್ರಳಯವಾದ ದಿನ ಹೇಳುತ್ತೇನೆ ಎಂದು .೨೦೧೧ ಡಿಸೆಂಬರ್ ೩೧  ರಾತ್ರಿ ಇಡೀ ಲಂಡನ್ ಫೈರ್ ವರ್ಕ್ ನಿಂದ ಕಂಗೊಳಿಸುವ ಸಂಭ್ರಮವನ್ನು ಮೊದಲ ಭಾರಿ ನೋಡಿ ಆನಂದ ಗೋಳ್ಳುವುದರ ಜೊತೆಗೆ ಅಲ್ಲೇ ಜೊತೆಗಿದ್ದ ನನ್ನ ಪತಿದೇವರಿಗೆ ನಾಳೆ ಪ್ರಳಯ ಎಂಬುದನ್ನು ನೆನಪಿಸಿ ಬೈಯಿಸಿಕೊಂದದ್ದು ಆಯಿತು.ನನ್ನ  ಎಲ್ಲ ಗೊಂದಲಗಳಿಗೆ ನನ್ನವರು ಬಹಳ ತಾಳ್ಮೆಯಿಂದ  ಹಾಗೇನು ಆಗುವುದಿಲ್ಲ ಎಂಬ ಧೈರ್ಯ ತುಂಬಿದ್ದರಿಂದ  ಬಹುಬೇಗ  ಮದುವೆಯ ವಾರ್ಷಿಕೋತ್ಸವವು  ಕುಶಿಯಲ್ಲೇ ಮುಗಿದು ನನ್ನವರು ಮುಂದಿನ ವಾರ್ಷಿಕೋತ್ಸವದ ಪ್ಲಾನ್ ಏನು ಎಂದು ಯೋಚಿಸುತ್ತಿದ್ದರೆ  ನಾನು   ಸಧ್ಯ ಇನ್ನು ಪ್ರಳಯವಾಗಲಿಲ್ಲ ಎಂಬ ಸಂತೋಷದ  ಜೊತೆಗೆ ೨೦೧೨ ಮುಗಿಯಲು ಇನ್ನು ಸಾಕಷ್ಟು ತಿಂಗಳುಗಳು ಇವೆಯಲ್ಲವೇ ಎಂಬ ಗೊಂದಲದಲ್ಲಿದ್ದೇನೆ!!!



ಅರ್ಪಿತಾ ಹರ್ಷ 
ಲಂಡನ್ 


Friday 18 May 2012

ಐ ಪಿ ಎಲ್ ಕ್ರಿಕೆಟ್ ಒಂದು ಬಿಸ್ನೆಸ್


ಈ ನನ್ನ ಲೇಖನವು ೧೮/೦೫/೨೦೧೨ ರ ವಿಜಯ ನೆಕ್ಸ್ಟ್ ನಲ್ಲಿ ಪ್ರಕಟಗೊಂಡಿದೆ .


ಐ ಪಿ ಎಲ್ ಕ್ರಿಕೆಟ್ ಬಗ್ಗೆ ಅಭಿಪ್ರಾಯ ಕೇಳಿದ ವಿಜಯ ನೆಕ್ಸ್ಟ್ ಗೆ ಬರೆದು ಕಳಿಸಿದ ಲೇಖನ :

ಐ ಪಿ ಎಲ್ ಕ್ರಿಕೆಟ್ ಒಂದು ಬಿಸ್ನೆಸ್ ರೀತಿ ನಡೆಯುತ್ತಿದೆ.ಇದು ಕೇವಲ ಹಣಕ್ಕೋಸ್ಕರ ಆಡುವ ಆಟವಾಗಿದೆ.ಟೆಸ್ಟ್, ಏಕದಿನಗಳ ಆಸಕ್ತಿಯನ್ನು ಐ ಪಿ ಎಲ್ ಕಡಿಮೆ ಮಾಡಿದೆ.ಆಟಗಾರರು ಕೂಡ ಹಣಕ್ಕೋಸ್ಕರ ಐ ಪಿ ಎಲ್ ಗೆ ಮಹತ್ವ ಕೊಡುತ್ತಿದ್ದಾರೆ.ಅದೇ ದೇಶಕ್ಕೋಸ್ಕರ ಆಡುವಾಗ ಈ ಕಾಳಜಿ ಅಷ್ಟೊಂದು ಕಾಣುತ್ತಿಲ್ಲ.ಕಳೆದ ಕೆಲ ವರ್ಷಗಳಿಂದ ಏಕ ದಿನ ಅಥವಾ ಟೆಸ್ಟ್ ಪಂದ್ಯಗಳಲ್ಲಿ ಆಟಗಾರರು ಗಾಯಾಳುಗಳಾಗಿ ಪಂದ್ಯದಿಂದ ಹೊರಗುಳಿಯುತ್ತಿದ್ದಾರೆ. ಆದರೆ ಐ ಪಿ ಎಲ್ ನಲ್ಲಿ ಇಂತಹ ಸಮಸ್ಯೆ ಬಹಳ ಕಡಿಮೆ . ದೇಶದಲ್ಲಿ ಐ ಪಿ ಎಲ್ ಹೆಚ್ಚು ಜನಪ್ರಿಯವಾಗುತ್ತಿದೆ.ಅದಕ್ಕೆ ಪಂದ್ಯದಲ್ಲಿರುವ ರೋಮಾಂಚನ ಮತ್ತು ಕಡಿಮೆ ಸಮಯದಲ್ಲಿ ಆಟ ಮುಗಿಯುವುದೇ  ಕಾರಣವಾಗಿದೆ 

ಅರ್ಪಿತಾ ಹರ್ಷ 
ಲಂಡನ್ 


Wednesday 16 May 2012

ಯುರೋಪ್ ಪ್ರವಾಸಿ ಕಥನ ಭಾಗ -5

ಲುಸರ್ನ್ ಅಲ್ಲಿ ಸಾಕಷ್ಟು ಚಲನ ಚಿತ್ರದ ಶೂಟಿಂಗ್ ಗಳನ್ನೂ ಮಾಡಲಾಗಿದೆ ಅಲ್ಲಿ ಚಾಪಲ್ ಬ್ರಿಡ್ಜ್ ಎಂಬ ಬ್ರಿಡ್ಜ್ ಪ್ರಸಿದ್ಧಿ . ಜೊತೆಗೆ ಸ್ವಲ್ಪ ದೂರದಲ್ಲಿ ಲಯನ್ ಮಾನ್ಯುಮೆಂಟ್ ಇದೆ ಅಲ್ಲಿ ಒಂದು ಸಿಂಹವಿದೆ .ಎತ್ತರದಲ್ಲಿ ಸಿಂಹವಿದೆ ಕೆಳಗೆ ಸಾಕಷ್ಟು ನೀರಿನ ಒಂದು ದೊಡ್ಡ ಕೊಳವಿದೆ. ಆ ಕೊಳದ ದಡದಲ್ಲಿ ನಿಂತು ಆಚೆ ದಡದಲ್ಲಿರುವ ಸಿಂಹದ ಬಾಯಿಗೆ ಹಣವನ್ನು ತಲುಪಿಸಿದರೆ ನಾವು ಮನಸ್ಸಿನಲ್ಲಿ ಕೇಳಿಕೊಂಡಿರುವುದು ನೆರವೇರುತ್ತದೆ ಎಂಬ ಮಾತಿದೆ. ನಮ್ಮ ಟೀಮ್ ಅಲ್ಲಿ ಸುಮಾರು ಜನರು ಏನೇನೊ ಕೇಳಿಕೊಂಡು ಚಿಲ್ಲರೆ ಎಸೆದರು ಅದು ಸಿಂಹದ ಹತ್ತಿರ ಕೂಡ ಹೋಗಲಿಲ್ಲ. ಕೊಳ ಅಷ್ಟೊಂದು ದೊಡ್ಡದಿತ್ತು. ನಾವು ಅಲ್ಲಿರುವಾಗಲೇ ಹನಿ ಹನಿ ಯಾಗಿ ಮಂಜು ಬೀಳಲು ಪ್ರಾರಂಭವಾಯಿತು. ಆದ್ದರಿಂದ ಹೆಚ್ಚು ಹೊತ್ತು ಯಾರು ಹೊರಗೆ ಸುತ್ತಲು ಹೋಗಲಿಲ್ಲ .ಎಲ್ಲರೂ ಬೇಗ ಬಂದು ಬಸ್ ಏರಿದೆವು. ಅಷ್ಟು ಹೊತ್ತಿಗಾಗಲೇ ಅಲ್ಲಿ ಸಂಜೆಯಾಗಿತ್ತು. ನಾವು ಅಲ್ಲಿಂದ ಜುರಿಕ್ ಗೆ ಹೊರಟೆವು . ಜುರಿಕ್ ತಲುಪುವಷ್ಟರಲ್ಲಿ ರಾತ್ರಿಯ ದೀಪಗಳು ಹೊತ್ತಿ ಉರಿಯಲು ಪ್ರಾರಂಭಿಸುತ್ತಿದ್ದವು. ಅಲ್ಲಿಯೇ ಇರುವ ಭಾರತದ ಮಹಾರಾಣಿ ಹೋಟೆಲ್ ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಎಲ್ಲರೂ ೪ ದಿನಗಳಿಂದ ಸುತ್ತಿ ದಣಿದಿದ್ದರು ಜೊತೆಗೆ ಅದು ಕೊನೆಯ ದಿನದ ಊಟ ಆದದ್ದರಿಂದ ಹೊಟ್ಟೆ ತುಂಬಾ ತಿಂದು ಅಲ್ಲಿಂದ ನಮ್ಮ ಪ್ರಯಾಣ ಜುರಿಕ್ ನಿಂದ ಸ್ವಲ್ಪ ಹೊರವಲಯದಲ್ಲಿರುವ ಪಾರ್ಕ್ ಇನ್ ಎಂಬ ಹೋಟೆಲ್ ಗೆ ಹೋಗಿ ಅಲ್ಲೇ ಉಳಿದುಕೊಳ್ಳಲು ರೂಂ ಗಳ ವ್ಯವಸ್ಥೆ ಮಾಡಲಾಗಿತ್ತು. ಜುರಿಕ್ ನ ಸಿಟಿಯಲ್ಲಿ ಸ್ವಲ್ಪ ಓಡಾಡಿ ಕೊನೆಯದಿನವಾದದ್ದರಿಂದ ಸ್ನೇಹಿತರೆಲ್ಲರೂ ಸೇರಿ ರಾತ್ರಿ ೧೧ ರವರೆಗೆ ಹರಟೆ ಹೊಡೆದು ನಂತರ ನಮ್ಮ ನಮ್ಮ ರೂಂಗಳಿಗೆ ತೆರಳಿದೆವು. 
ಮರುದಿನ ಬೆಳಗ್ಗಿನ ತಿಂಡಿ ಅದೇ ಹೋಟೆಲ್ ನಲ್ಲೆ ವ್ಯವಸ್ಥೆ ಮಾಡಿದ್ದರು. ಅಲ್ಲಿಂದ ಸುಮಾರು ೮.೩೦ ರ ಹೊತ್ತಿಗೆ ಹೊರಡುವುದಾಗಿ ಮೊದಲೇ ತಿಳಿಸಿದ್ದರಿಂದ ಎಲ್ಲರೂ  ರೂಂ ಖಾಲಿ ಮಾಡಿ ಹೊರಟೆವು.ಎಲ್ಲರ ನೆನಪಿಗೆ ಕೊನೆಯಲ್ಲಿ ಒಂದು ಗ್ರೂಪ್ ಫೋಟೋ ತೆಗೆಯಲಾಯಿತು.  ಅಲ್ಲಿಂದ ಬಸ್ ಹತ್ತಿ ಹೋರಾಟ ನಮ್ಮ ಪ್ರಯಾಣ ದಾರಿ ಉದ್ದಕ್ಕೂ ಹಾಡು ನೃತ್ಯದೊಡನೆ ಸಾಗಿತು. ಮಧ್ಯಾನ ಸುಮಾರು ೨ ಗಂತೆಯಷ್ಟರಲ್ಲಿ ಫ್ರಾನ್ಸ್ ದೇಶವನ್ನು ತಲುಪಿದ್ದೆವು. ಅಲ್ಲಿ ಊಟಕ್ಕಾಗಿ ನಿಲ್ಲಿಸಿದ್ದರು. ಆದರೆ ಅಲ್ಲಿಯ ಜನರಿಗೆ ಕೇವಲ ಫ್ರಾನ್ಸ್ ಭಾಷೆ ಬರುತ್ತಿದ್ದರಿಂದ ಎಲ್ಲರಿಗೂ ಬೇಕಾಗಿರುವುದು ಸಿಗಲಿಲ್ಲ. ಜೊತೆಗೆ ಸಸ್ಯಾಹಾರಿಗಳಿಗೆ ಯಾವುದೇ ಆಹಾರ ಸಿಗುವುದು ಅಲ್ಲಿ ಸ್ವಲ್ಪ ಕಷ್ಟ. ಫ್ರಾನ್ಸ್ ನಿಂದ ನಾವು ಲಂಡನ್ ಗೆ ಬಂದು ತಲುಪಲು ಸುಮಾರು ೬ ತಾಸುಗಳಾಯಿತು. ಜೊತೆಗೆ ಸ್ವಲ್ಪ ಮಟ್ಟಿಗೆ ಮಳೆ ಕೂಡ ಬಂದದ್ದರಿಂದ ಸಂಚಾರ ಸ್ವಲ್ಪ ನಿಧಾನವಾಯಿತು.ನಾವು ಲಂಡನ್ ಗೆ ಬಂದು ತಲುಪುವಷ್ಟರಲ್ಲಿ ಸುಮಾರು ೧೦ ಗಂಟೆಯಾಗಿತ್ತು. ಅಲ್ಲಿಂದ ಎಲ್ಲರಿಗೂ ಗುಡ್ ಬೈ ಹೇಳಿ ಮನೆ ತಲುಪುವಷ್ಟರಲ್ಲಿ ರಾತ್ರಿ ೧೨ ಗಂಟೆಯಾಗಿತ್ತು.



ಅರ್ಪಿತಾ ಹರ್ಷ 

ಇದು ಪಾಶ್ಚಾತ್ಯರ ಲೈಫ್ ಸ್ಟೈಲ್



ಹೆಣ್ಣಿಗೆ ಮಗುವಿನ ಆರೈಕೆ ಲಾಲನೆ ಪಾಲನೆಯಲ್ಲಿ ಎಷ್ಟು ಸಂತೋಷವಿರುತ್ತದೋ ಅಷ್ಟೇ ಕಾಳಜಿ ಕೂಡಹೆಣ್ಣು ತಾಯಿಯಾಗುತ್ತಿದ್ದಂತೆ ಎಲ್ಲಿಲ್ಲದ ಕಾಳಜಿಪ್ರಾರಂಭವಾಗುತ್ತದೆ.ನಮ್ಮ ಭಾರತದಲ್ಲಿ ಮಗುವಿನ ಆರೈಕೆ ಗೆ ಬಹಳ ಪ್ರಾಮುಖ್ಯತೆ ಕೊಡುತ್ತಾರೆಮಗು ಮತ್ತು ತಾಯಿ ಇಬ್ಬರಿಗೂ ವಿಶೇಷ ರೀತಿಯಲ್ಲಿ ಆರೈಕೆಮಾಡಲಾಗುತ್ತದೆ.   ನಮ್ಮ ದೇಶದಲ್ಲಿ ಮಗು ಹುಟ್ಟಿದ ನಂತರ ಕನಿಷ್ಠ  ತಿಂಗಳು ಮನೆಯಿಂದ ಹೊರಬರುವುದಿಲ್ಲ ತಾಯಿ ಮಗು ಇಬ್ಬರನ್ನು ಒಂದು ಕೋಣೆಯಲ್ಲಿಮಲಗಿಸಿಡುತ್ತಾರೆಜೊತೆಗೆ ಪಥ್ಯ ಕೂಡ ಮಾಡಲಾಗುತ್ತದೆ
ಆದರೆ ಪಾಶ್ಚಾತ್ಯ ದೇಶಗಳಲ್ಲಿ  ರೀತಿಯಲ್ಲ . ಮಗು ಹುಟ್ಟಿದ ತಕ್ಷಣ ತಾಯಿ ಕೆಲಸ ಪ್ರಾರಂಭಿಸಿಬಿದುತ್ತಾಳೆತಾಯಿ ಹೆಚ್ಚು ಚಟುವತಿಕೆಯಿಂದಿದ್ದಷ್ಟು ಮಕ್ಕಳುಹೆಚ್ಚು ಚುರುಕಾಗಿರುತ್ತಾರೆ ಎಂಬುದು ಅವರ ನಂಬಿಕೆಇದು ಸತ್ಯ ಕೂಡ .  ಕೇವಲ ಮಕ್ಕಳು ಮಾತ್ರವಲ್ಲ ತಾಯಂದಿರು ಕೂಡ.  ಇಂಗ್ಲೆಂಡ್ ನಂತ ದೇಶಗಳಲ್ಲಿಮಗು ಹುಟ್ಟಿದ ಒಂದು ವಾರದಲ್ಲಿ ಪ್ರವಾಸಗಳಿಗೆ ಹೋಗಲು ತಯಾರಾಗುತ್ತಾರೆ
ಒಮ್ಮೆ ಲಂಡನ್   ಮೇಡಂ ಟುಸ್ಸಾದ್ ಅನ್ನು ನೋಡಲು ಸ್ನೇಹಿತರ ಜೊತೆಗೂಡಿ ಹೋಗಿದ್ದೆವುಅಲ್ಲಿ ಟಿಕೆಟ್ ತೆಗೆದುಕೊಳ್ಳಲು ಸುಮಾರು  ಗಂಟೆ ಸಾಲಿನಲ್ಲಿನಿಂತು ಕಾಯಬೇಕಾಯಿತುಹೀಗೆ ಕಾಯುತ್ತಿರುವಾಗ ನಮ್ಮ ಮುಂದೆ ಒಬ್ಬ ಹೆಣ್ಣುಮಗಳು ಸಣ್ಣ ಮಗುವೊಂದನ್ನು ಎತ್ತಿಕೊಂಡು ನಿಂತಿದ್ದಳು .  ಮಗುಸೂರ್ಯನ ಕಿರಣಗಳಿಗೆ ಕಣ್ಣು  ಬಿಡಲು ಹೆದರುತ್ತಿತ್ತುಮಗು ನೋಡಿದರೆ ಹೇಳಬಹುದು ಇದು - ದಿನದ ಹಿಂದೆ ಹುಟ್ಟಿದ ಮಗುವಿರಬಹುದು ಎಂದುಹಾಗೆ ಮಹಿಳೆಯೊಡನೆ ಕೇಳಿದರೆ  ವಾರದ ಮಗು ಎಂದು ಉತ್ತರಿಸಿದಳುಒಂದು ವಾರದ ಮಗುವನ್ನು ಕೈಯಲ್ಲಿ ಹಿಡಿದು  ಮಗುವಿನ ತಾಯಿ  ಗಂಟೆಗಳ ಕಾಲಕ್ಯುಅಲ್ಲಿ ನಿಂತು ನಂತರ ಒಳ ಹೋದ ನಂತರ  ತಾಸು ಓಡಾಡಿದ ಆಕೆಯನ್ನು ನಿಜಕ್ಕೂ ಮೆಚ್ಚಬೇಕು.  
ಇಲ್ಲಿಯ ಹೆಣ್ಣು ಮಕ್ಕಳು ಒಂಬತ್ತು ತಿಂಗಳು ತುಂಬುವವರೆಗೆ ಕೆಲಸಕ್ಕೆ ಹೋಗಿ ದುಡಿದು ಬರುತ್ತಾರೆ ಪ್ರವಾಸಿ ತಾಣಗಳಿಗೂ ಹೋಗಿಸಂತೋಷಪಡುತ್ತಾರೆ.ಜೊತೆಗೆ ಇಲ್ಲಿ ಡಾಕ್ಟರ್ ಗಳು ಕೂಡ ನಾರ್ಮಲ್ ಡೆಲಿವರಿ ಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆಮಗು ಹುಟ್ಟಿದ ದಿನವೇ ಮನೆಗೆಕಳುಹಿಸುತ್ತಾರೆಹುಟ್ಟಿದ  ವಾರದಲ್ಲಿ ಮಗುವನ್ನು ಹೊರ ಕರೆದುಕೊಂಡು ಹೋಗಲು ಪ್ರಾರಂಭಿಸುತ್ತಾರೆ.ಮಕ್ಕಳಿಗೋಸ್ಕರವೇ ಅಂಗಡಿಗಳಲ್ಲಿ ವಿಶೇಷರೀತಿಯ ಆಹಾರ ಕೂಡ ದೊರೆಯುತ್ತದೆಅವುಗಳನ್ನು ತಿನಿಸುವುದರ ಮೂಲಕ ಮಕ್ಕಳನ್ನು  ಬೆಳೆಸುತ್ತಾರೆ. ಮಕ್ಕಳು ಕೂಡ ನೋಡಲು ದಷ್ಟಪುಷ್ಟವಾಗಿರುತ್ತವೆ ಜೊತೆಗೆ ಅಳುವುದು ಕಿರಿಕಿರಿ ಮಾಡುವುದು  ರೀತಿ ಮಾಡುವುದಿಲ್ಲ.
ಇಲ್ಲಿ ಮಕ್ಕಳಿಗೆ ಹೊಡೆಯುವಂತಿಲ್ಲ . ಮಕ್ಕಳು ಗಲಾಟಿ ಮಾಡುತ್ತಿದ್ದರೆ ಅವರನ್ನು ಮನವೊಲಿಕೆ ಮಾಡಿ ಸಮಾಧಾನಿಸಬೇಕೆ ಹೊರತು ಹೊಡೆದು ಮಕ್ಕಳಿಗೆ ಬುದ್ದಿಕಲಿಸುವ ಪ್ರಯತ್ನ ಮಾಡುವಂತಿಲ್ಲ
ಮಕ್ಕಳು ಕೂಡ ಅಳುವುದಿಲ್ಲ . ಇಲ್ಲಿನ ಜನರು ಮಕ್ಕಳನ್ನು ಪ್ರೀತಿಯಿಂದ ಸಾಕುವುದರ ಜೊತೆಗೆ ಅವರಿಗೆ ಸ್ವತಂತ್ರವಾಗಿ ಬದುಕುವುದನ್ನು ಕೂಡ ಕಲಿಸುತ್ತಾರೆತಿಂಗಳ ಮಗುವನ್ನು ಹೊರಗೆ ಹೋಗುವಾಗ ಕಾರಿನಲ್ಲಿ ಹೋಗುತ್ತಿದ್ದರೆ ಹಿಂದಿನ ಸೀಟಿನಲ್ಲಿ ಮಗುವೊಂದನ್ನೇ ಸೀಟ್ ಬೆಲ್ಟ್ ಹಾಕಿ ಕೂರಿಸಿಬಿಡುತ್ತಾರೆಮಗುತನ್ನಷ್ಟಕ್ಕೆ ಆಟವಾಡಿಕೊಂಡು ಹೊರಗಿನ ಪ್ರಪಂಚ ನೋಡುತ್ತಾ ಹೊರಡುತ್ತದೆ . ಹೀಗೆ ಮಾಡುವುದರಿಂದ ಮಗು ಅಪ್ಪ ಅಮ್ಮಂದಿರ ಮೇಲೆ ಹೆಚ್ಚುಅವಲಂಬಿತರಾಗುವುದಿಲ್ಲ . ಇಲ್ಲಿಯ ಜನರು  ಹೇಳುವ ಪ್ರಕಾರ  ರೀತಿ ಚಟುವಟಿಕೆಯಿಂದ ಇರುವುದರಿಂದ ಮಗು ಕೂಡ ಬೇಗ ಬೆಳೆಯುತ್ತದೆ ಹೊರ ಜಗತ್ತಿಗೆಬೇಗ ಹೊಂದಿಕೊಳ್ಳುತ್ತದೆಜ್ವರ ಕೆಮ್ಮುಗಳಂತ ಸಣ್ಣ ಪುಟ್ಟ ಕಾಯಿಲೆಗಳು ಬಹಳ ಕಡಿಮೆ .
ಕೊರೆಯುವ ಚಳಿಯಲ್ಲೂ ಕೂಡ ಮಕ್ಕಳು ಬೇಗ ಹೊಂದಿಕೊಳ್ಳುತಾರೆ.
ಜೊತೆಗೆ ಶಾಲೆಗಳಲ್ಲೂ ಕೂಡ ಮಕ್ಕಳಿಗೆ ಆಟದ ಮೂಲಕ ಪಾಠ ಹೇಳಿಕೊಡುತ್ತಾರೆಆಟಕ್ಕೆ ಹೆಚ್ಚಿನ ಪ್ರಾಮುಕ್ಯತೆ ಕೊಡುತ್ತಾರೆಮಕ್ಕಳು ಬೇರೆಯವರೊಂದಿಗೆಬೆಳೆಯುವುದನ್ನು ಕಲಿಸುತ್ತಾರೆಬೇರೆಯವರ ಮೇಲೆ ಅವಲಂಬಿತರಾಗಿರುವುದಿಲ್ಲ . ತಂದೆ ತಾಯಿಗಳನ್ನು ಬಿಟ್ಟು ಇರಲು ಕಲಿತುಕೊಂದಿರುತ್ತವೆ.ಓದುತ್ತಿರುವಾಗಲೇ ತಮ್ಮ ಕಾಲಮೇಲೆ ತಾವು ನಿಲ್ಲಬೇಕೆಂಬ ಛಲ ಇರುತ್ತದೆ.ಆದ್ದರಿಂದಲೇ ಹದಿನೆಂಟು ವರ್ಷವಾಗುತ್ತಿದ್ದಂತೆ ಮನೆಯಿಂದ ಹೊರಹೊರಟುಬಿಡುತ್ತಾರೆ ಅವರ ಬದುಕನ್ನು ಅವರೇ ರೂಪಿಸಿಕೊಳ್ಳುತ್ತಾರೆ. ತಂದೆ ತಾಯಿಗಳು ಕೂಡ ಮಕ್ಕಳು ತಮ್ಮ ಜೀವನ ತಾವೇ ನೋಡಿಕೊಂಡರೆ ಸಂತೋಷಪಡುತ್ತಾರೆ.


ಅರ್ಪಿತಾ ಹರ್ಷ 
ಲಂಡನ್