Wednesday 16 May 2012

ಯುರೋಪ್ ಪ್ರವಾಸಿ ಕಥನ ಭಾಗ -5

ಲುಸರ್ನ್ ಅಲ್ಲಿ ಸಾಕಷ್ಟು ಚಲನ ಚಿತ್ರದ ಶೂಟಿಂಗ್ ಗಳನ್ನೂ ಮಾಡಲಾಗಿದೆ ಅಲ್ಲಿ ಚಾಪಲ್ ಬ್ರಿಡ್ಜ್ ಎಂಬ ಬ್ರಿಡ್ಜ್ ಪ್ರಸಿದ್ಧಿ . ಜೊತೆಗೆ ಸ್ವಲ್ಪ ದೂರದಲ್ಲಿ ಲಯನ್ ಮಾನ್ಯುಮೆಂಟ್ ಇದೆ ಅಲ್ಲಿ ಒಂದು ಸಿಂಹವಿದೆ .ಎತ್ತರದಲ್ಲಿ ಸಿಂಹವಿದೆ ಕೆಳಗೆ ಸಾಕಷ್ಟು ನೀರಿನ ಒಂದು ದೊಡ್ಡ ಕೊಳವಿದೆ. ಆ ಕೊಳದ ದಡದಲ್ಲಿ ನಿಂತು ಆಚೆ ದಡದಲ್ಲಿರುವ ಸಿಂಹದ ಬಾಯಿಗೆ ಹಣವನ್ನು ತಲುಪಿಸಿದರೆ ನಾವು ಮನಸ್ಸಿನಲ್ಲಿ ಕೇಳಿಕೊಂಡಿರುವುದು ನೆರವೇರುತ್ತದೆ ಎಂಬ ಮಾತಿದೆ. ನಮ್ಮ ಟೀಮ್ ಅಲ್ಲಿ ಸುಮಾರು ಜನರು ಏನೇನೊ ಕೇಳಿಕೊಂಡು ಚಿಲ್ಲರೆ ಎಸೆದರು ಅದು ಸಿಂಹದ ಹತ್ತಿರ ಕೂಡ ಹೋಗಲಿಲ್ಲ. ಕೊಳ ಅಷ್ಟೊಂದು ದೊಡ್ಡದಿತ್ತು. ನಾವು ಅಲ್ಲಿರುವಾಗಲೇ ಹನಿ ಹನಿ ಯಾಗಿ ಮಂಜು ಬೀಳಲು ಪ್ರಾರಂಭವಾಯಿತು. ಆದ್ದರಿಂದ ಹೆಚ್ಚು ಹೊತ್ತು ಯಾರು ಹೊರಗೆ ಸುತ್ತಲು ಹೋಗಲಿಲ್ಲ .ಎಲ್ಲರೂ ಬೇಗ ಬಂದು ಬಸ್ ಏರಿದೆವು. ಅಷ್ಟು ಹೊತ್ತಿಗಾಗಲೇ ಅಲ್ಲಿ ಸಂಜೆಯಾಗಿತ್ತು. ನಾವು ಅಲ್ಲಿಂದ ಜುರಿಕ್ ಗೆ ಹೊರಟೆವು . ಜುರಿಕ್ ತಲುಪುವಷ್ಟರಲ್ಲಿ ರಾತ್ರಿಯ ದೀಪಗಳು ಹೊತ್ತಿ ಉರಿಯಲು ಪ್ರಾರಂಭಿಸುತ್ತಿದ್ದವು. ಅಲ್ಲಿಯೇ ಇರುವ ಭಾರತದ ಮಹಾರಾಣಿ ಹೋಟೆಲ್ ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಎಲ್ಲರೂ ೪ ದಿನಗಳಿಂದ ಸುತ್ತಿ ದಣಿದಿದ್ದರು ಜೊತೆಗೆ ಅದು ಕೊನೆಯ ದಿನದ ಊಟ ಆದದ್ದರಿಂದ ಹೊಟ್ಟೆ ತುಂಬಾ ತಿಂದು ಅಲ್ಲಿಂದ ನಮ್ಮ ಪ್ರಯಾಣ ಜುರಿಕ್ ನಿಂದ ಸ್ವಲ್ಪ ಹೊರವಲಯದಲ್ಲಿರುವ ಪಾರ್ಕ್ ಇನ್ ಎಂಬ ಹೋಟೆಲ್ ಗೆ ಹೋಗಿ ಅಲ್ಲೇ ಉಳಿದುಕೊಳ್ಳಲು ರೂಂ ಗಳ ವ್ಯವಸ್ಥೆ ಮಾಡಲಾಗಿತ್ತು. ಜುರಿಕ್ ನ ಸಿಟಿಯಲ್ಲಿ ಸ್ವಲ್ಪ ಓಡಾಡಿ ಕೊನೆಯದಿನವಾದದ್ದರಿಂದ ಸ್ನೇಹಿತರೆಲ್ಲರೂ ಸೇರಿ ರಾತ್ರಿ ೧೧ ರವರೆಗೆ ಹರಟೆ ಹೊಡೆದು ನಂತರ ನಮ್ಮ ನಮ್ಮ ರೂಂಗಳಿಗೆ ತೆರಳಿದೆವು. 
ಮರುದಿನ ಬೆಳಗ್ಗಿನ ತಿಂಡಿ ಅದೇ ಹೋಟೆಲ್ ನಲ್ಲೆ ವ್ಯವಸ್ಥೆ ಮಾಡಿದ್ದರು. ಅಲ್ಲಿಂದ ಸುಮಾರು ೮.೩೦ ರ ಹೊತ್ತಿಗೆ ಹೊರಡುವುದಾಗಿ ಮೊದಲೇ ತಿಳಿಸಿದ್ದರಿಂದ ಎಲ್ಲರೂ  ರೂಂ ಖಾಲಿ ಮಾಡಿ ಹೊರಟೆವು.ಎಲ್ಲರ ನೆನಪಿಗೆ ಕೊನೆಯಲ್ಲಿ ಒಂದು ಗ್ರೂಪ್ ಫೋಟೋ ತೆಗೆಯಲಾಯಿತು.  ಅಲ್ಲಿಂದ ಬಸ್ ಹತ್ತಿ ಹೋರಾಟ ನಮ್ಮ ಪ್ರಯಾಣ ದಾರಿ ಉದ್ದಕ್ಕೂ ಹಾಡು ನೃತ್ಯದೊಡನೆ ಸಾಗಿತು. ಮಧ್ಯಾನ ಸುಮಾರು ೨ ಗಂತೆಯಷ್ಟರಲ್ಲಿ ಫ್ರಾನ್ಸ್ ದೇಶವನ್ನು ತಲುಪಿದ್ದೆವು. ಅಲ್ಲಿ ಊಟಕ್ಕಾಗಿ ನಿಲ್ಲಿಸಿದ್ದರು. ಆದರೆ ಅಲ್ಲಿಯ ಜನರಿಗೆ ಕೇವಲ ಫ್ರಾನ್ಸ್ ಭಾಷೆ ಬರುತ್ತಿದ್ದರಿಂದ ಎಲ್ಲರಿಗೂ ಬೇಕಾಗಿರುವುದು ಸಿಗಲಿಲ್ಲ. ಜೊತೆಗೆ ಸಸ್ಯಾಹಾರಿಗಳಿಗೆ ಯಾವುದೇ ಆಹಾರ ಸಿಗುವುದು ಅಲ್ಲಿ ಸ್ವಲ್ಪ ಕಷ್ಟ. ಫ್ರಾನ್ಸ್ ನಿಂದ ನಾವು ಲಂಡನ್ ಗೆ ಬಂದು ತಲುಪಲು ಸುಮಾರು ೬ ತಾಸುಗಳಾಯಿತು. ಜೊತೆಗೆ ಸ್ವಲ್ಪ ಮಟ್ಟಿಗೆ ಮಳೆ ಕೂಡ ಬಂದದ್ದರಿಂದ ಸಂಚಾರ ಸ್ವಲ್ಪ ನಿಧಾನವಾಯಿತು.ನಾವು ಲಂಡನ್ ಗೆ ಬಂದು ತಲುಪುವಷ್ಟರಲ್ಲಿ ಸುಮಾರು ೧೦ ಗಂಟೆಯಾಗಿತ್ತು. ಅಲ್ಲಿಂದ ಎಲ್ಲರಿಗೂ ಗುಡ್ ಬೈ ಹೇಳಿ ಮನೆ ತಲುಪುವಷ್ಟರಲ್ಲಿ ರಾತ್ರಿ ೧೨ ಗಂಟೆಯಾಗಿತ್ತು.



ಅರ್ಪಿತಾ ಹರ್ಷ 

No comments:

Post a Comment