Thursday 10 May 2012

ಯುರೋಪ್ ಪ್ರವಾಸಿ ಕಥನ ಭಾಗ - 4

ಮಾರನೆ ದಿನ ಬೆಳಗ್ಗೆ ಎಂದಿನಂತೆ ೬ ಗಂಟೆಗೆಲ್ಲ ಎದ್ದು ತಯಾರಾಗಿ ತಿಂಡಿ ತಿಂದು ರೆಡಿ ಆದೆವು ಆ ದಿನ ರಮಾದ ಹೋಟೆಲ್ ಅನ್ನು ಖಾಲಿ ಮಾಡಬೇಕಾಗಿದ್ದರಿಂದ ನಮ್ಮ ೧೪ ಕುಟುಂಬದವರು ಎಲ್ಲ ರೂಂಗಳನ್ನು ಬಿಟ್ಟು ಕೊಡುವಷ್ಟರಲ್ಲಿ ೮ ಗಂಟೆಯಾಗಿತ್ತು . ಆ ದಿನ ಹಿಂದಿನ ದಿನವೇ ಡಿಸೈಡ್ ಮಾಡಿದಂತೆ ಟಿಟ್ ಲೀಸ್ ಗೆ ಹೋಗುವುದೆಂದು ತಯಾರಾಗಿದ್ದೆವು . ಆ ದಿನ ಬೆಳಗಿನಿಂದ ಅಲ್ಲಿ ಮಂಜು ಬೀಳುತ್ತಿತ್ತು . ರಸ್ತೆಗಳೆಲ್ಲ ಹಿಮದಿಂದ ಮುಚ್ಚಿಕೊಂಡಿತ್ತು. ಹೊರಗೆ ಕಾಲಿಡಲು ಆಗದಷ್ಟು ಜೋರಾಗಿ ಹಿಮ ಬೀಳುತ್ತಿತ್ತು. ಆ ಅನುಭವ ಎಲ್ಲರಿಗೂ ಹೊಸತಾಗಿದ್ದರಿಂದ ಎಲ್ಲರೂ ಹಿಮದಲ್ಲೇ ಆಟವಾಡಲು ಪ್ರಾರಂಭಿಸಿದೆವು . ಸುಮಾರು ೧ ತಾಸಿನ ಬಳಿಕ ಸ್ವಲ್ಪ ಮಟ್ಟಿಗೆ ಹಿಮ ಬೀಳುವುದು ಕಡಿಮೆ ಆದದ್ದರಿಂದ ಅಲ್ಲಿಂದ ಟಿಟ್ ಲೀಸ್ ಗೆ ಹೋಗಲು ಯಾವುದೇ ರೀತಿಯ ತೊಂದರೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಹೊರಟೆವು . ಯೆನ್ಗಲ್ಬರ್ಗ್ ನಿಂದ ಟಿಟ್ ಲೀಸ್ ಗೆ ಹೋಗಲು ಬಸ್ ನಲ್ಲಿ ಕೇವಲ ೧೫ ನಿಮಿಷ . ೧೫ ನಿಮಿಷದಲ್ಲಿ ಟಿಟ್ ಲೀಸ್ ನಲ್ಲಿದ್ದೆವು.ಟಿಟ್ ಲೀಸ್ ಕೂಡ ಒಂದು ಪರ್ವತ ಇದು ಸ್ವಿಡ್ಸ್ ರ್ ಲ್ಯಾಂಡ್ ನ ಬರ್ನ್ ಮತ್ತು ಊಬ್ವಾಲ್ದನ್ ಎಂಬುದರ ಮಧ್ಯದಲ್ಲಿದೆ .ಟಿಟ್ ಲೀಸ್ ಐಸ್ ಫ್ಲ್ಯ್ಯೇರ್ ಮತ್ತು ಕೇಬಲ್ ಕಾರ್ ಗಳಿಗೆ ಜೊತೆಗೆ ಸ್ಕೀಯಿಂಗ್ ಗೆ ಕೂಡ ಪ್ರಸಿದ್ಧಿ ಇಲ್ಲಿಗೆ ಜನ ಕೇಬಲ್ ಕಾರ್ ನಲ್ಲಿ ಪರ್ವತದ ತುದಿಯವರೆಗೆ ಹೋಗಿ ಅಲ್ಲಿಂದ ಸ್ಕೀಯಿಂಗ್ ಮಾಡಿಕೊಂಡು ಕೆಳಗೆ ಬಂದು ತಲುಪುತ್ತಾರೆ.
 ನಾವು ಹೋದಾಗ ಇಲ್ಲಿ -೧೪ ತಾಪಮಾನವಿತ್ತು. ಮೇ ತಿಂಗಳಿನಿಂದ ಜುಲೈ ತಿಂಗಳಿನ ವರೆಗೆ ಇಲ್ಲಿನ ವಾತಾವರಣ ಸ್ಕೀಯಿಂಗ್ ಗೆ ಯೋಗ್ಯವಾಗಿರುವುದರಿಂದ ಆ ಸಮಯಗಳಲ್ಲಿ ಇಲ್ಲಿ ಪ್ರಾವಾಸಿ ಜನರು ಅತಿ ಹೆಚ್ಚು ಜನರಿತುತ್ತಾರೆ. ಅದರಲ್ಲೂ ಸ್ವಿಡ್ಸ್ ರ್ ಲ್ಯಾಂಡ್ ನಲ್ಲಿ ಹೆಚ್ಚು ಪ್ರಾವಾಸಿಗರು ಭಾರತೀಯರು ಎಂಬುದು ಅಲ್ಲಿಯ ಜನರ ಅಭಿಪ್ರಾಯ . ಅಲ್ಲಿ ನಮಗೆ ಅಲ್ಲಿಯ ಸಾಂಪ್ರದಾಯಿಕ ಉಡುಗೆಯನ್ನು ಹಾಕಿ ಫೋಟೋ ತೆಗೆದುಕೊಡುತ್ತಾರೆ .






 ಟ್ರಿಪ್ ಗೆ ಬಂದ ಎಲ್ಲ ಪ್ರವಾಸಿಗರು ನೆನಪಿಗೋಸ್ಕರ ಆ ಫೋಟೋ ತೆಗೆಸಿಕೊಂಡೆವು . ಅಲ್ಲಿಂದ ನಾವು ಹೊರಬರುವಾಗ ಮಧ್ಯಾನ್ಹ ೨ ಗಂಟೆಯಾಗಿತ್ತು .ಕೆಳಗೆ ಬಂದ ನಂತರ ಅಲ್ಲಿಯೇ ಊಟ ಮಾಡಿ ನಾವು ಅಲ್ಲಿಂದ ಲುಸರ್ನ್ ಎಂಬ ಸ್ಥಳಕ್ಕೆ ಹೋದೆವು .

No comments:

Post a Comment