Wednesday 9 May 2012

ಯುರೋಪ್ ಪ್ರವಾಸಿ ಕಥನ ಭಾಗ -3

ಅಂತು ನಾವೆಲ್ಲಾ ಕಾತುರದಿಂದ ಕಾಯುತ್ತಿದ್ದ ರಾತ್ರಿಯ ಭಾರತೀಯ ಊಟ ತಯಾರಾಗಿ ಎದುರು ಬಂದಾಗ ಎಲ್ಲರ ಮುಖದಲ್ಲೂ ಆನಂದ . ನಮ್ಮ ತಂಡವೆಲ್ಲ ರಮದ ಎಂಬ ಹೋಟೆಲ್ಲಿನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ  . ಮೊದಲು ನಾವು ಊಟ ಮಾಡಿ ನಂತರ ಹೋಟೆಲ್ ಗೆ ಹೋಗುವುದಾಗಿ ನಿರ್ಧರಿಸಿದೆವು . ಬಫೆ ಊಟ ಕ್ಕೆ ಎಲ್ಲರೂ ಹೋದೆವು . ರೋಟಿ , ೨ ರೀತಿಯ ಪಲ್ಯ , ಅನ್ನ, ದಾಲ್ , ಜೊತೆಗೆ ಸೂಪ್ , ಸ್ವೀಟ್ ಜೊತೆಗೆ ಒಂದಿಷ್ಟು ಹಸಿ ತರಕಾರಿಗಳು ಹೀಗೆ ದೊಡ್ಡ ಪಟ್ಟಿಯೇ ಇತ್ತು ಎಲ್ಲರೂ ಭಾರಿ ಭೋಜನ ಮಾಡಿ ನಂತರ ತಮ್ಮ ತಮ್ಮ ರೂಂ ಗೆ ಸೇರಿದ್ದಾಯಿತು.ಮರುದಿನ ಬೆಳಗ್ಗೆ ನಮ್ಮನ್ನೆಲ್ಲ ೬.೩೦ ಕ್ಕೆ ಹೊರಡುವಂತೆ ಹೇಳಿದ್ದರು . ಅದರಂತೆ ೬ ಗಂಟೆಗೆಲ್ಲ ಎದ್ದು ಹೊರಟೆವು ೬.೩೦ ಕ್ಕೆ ಅದೇ ಹೋಟೆಲ್ ನಲ್ಲಿ ಬೆಳಗಿನ ತಿಂಡಿಗೆ ತಯಾರು ಮಾಡಿದ್ದರು. ಬೆಳಗಿನ ತಿಂಡಿ ಇಂಗ್ಲಿಷ್ ನವರು ತಿನ್ನುವಂತೆಯೇ ಬ್ರೆಡ್ ಮತ್ತು ಮುಸ್ಲಿ ಗಳನ್ನೂ ನೀಡಿದ್ದರು.ಎಲ್ಲರೂ ಹೊಟ್ಟೆ ತುಂಬಾ ತಿಂದು ಅಲ್ಲಿಂದ ಹೊರಟೆವು . ಆ ದಿನ ನಮಗೆ ಮೊದಲು ಕರೆದುಕೊಂಡು ಹೋಗಿದ್ದು ಯುಂಗ್ ಫ್ರಾ ಎಂಬ ಸ್ಥಳಕ್ಕೆ . ಅದಕ್ಕೂ ಮೊದಲು ಹೋಗುವ  ದಾರಿಯಲ್ಲಿಯೇ ವಿ ವ್ಯಾಲಿ ಎಂಬ ಸ್ಥಳವೊಂದಿದೆ  
ಅಲ್ಲಿ ಸುಮಾರು ೧೫ ನಿಮಿಷಗಳ ವರೆಗೆ ಕೇವಲ ಫೋಟೋ ತೆಗೆಯಲು ಮತ್ತು ದೂರದಿಂದ ನೋಡಲು ನಿಲ್ಲಿಸಿದ್ದರು . ಸಣ್ಣಗೆ ಮಂಜು ಕೂಡ ಬೀಳುತ್ತಿತ್ತು. ಆದ್ದರಿಂದ ಎಲ್ಲರೂ ಬೇಗ ಫೋಟೋ ತೆಗೆದುಕೊಂಡು ಬಸ್ ಸೇರಿಕೊಂಡೆವು .ನಂತರ ಗ್ರಿನ್ದಲ್ ವರ್ಲ್ಡ್ ಎಂಬಲ್ಲಿ ನಮ್ಮ ಬಸ್  ನಿಲ್ಲಿಸಿ ಯುಂಗ್  ಫ್ರಾ ಕ್ಕೆ ನಾವು ಹೋಗಿದ್ದು ರೈಲಿನ ಮೂಲಕ .ಯುಂಗ್ ಫ್ರಾ ಎಂಬುದು ಯೂರೋಪಿನ ತುತ್ತ ತುದಿ . ಇದು ಅತಿ ಎತ್ತರದ  ಪರ್ವತಗಳಲ್ಲಿ ೩ ನೆಯದು . 


೧೧೩೩೨ ಫೀಟ್ ಎತ್ತರಕ್ಕೆ ಸುಮಾರು ೧೦೦ ವರ್ಷಗಳ ಹಿಂದೆಯೇ ಟ್ರೈನ್ ಅನ್ನು ಹೋಗುವಂತೆ ಮಾಡಿದ್ದಾರೆಂಬುದು ನಿಜಕ್ಕೂ ಅಚ್ಚರಿ ಉಂಟು ಮಾಡುತ್ತದೆ. ಹಿಮಗಳ ನಡುವೆ ರೈಲು ಹೋಗಲು ಟ್ರಾಕ್ ಅನ್ನು ಕೊರೆದಿರುವುದು ನಿಜಕ್ಕೂ ಮೆಚ್ಚುವಂತದ್ದು. ಇದು ಪರ್ವತದ ತುತ್ತ ತುದಿಯಾದ್ದರಿಂದ ಇಲ್ಲಿ ಉಸಿರಾಡಲು ಸ್ವಲ್ಪ ತೊಂದರೆಯಾಗುತ್ತದೆ. ನಾವು ಹೋದಾಗ ಇಲ್ಲಿ ಹಿಮ ಸುರಿಯುತ್ತಿತ್ತು . ಇಲ್ಲಿಯೇ ಒಂದು ಐಸ್ ನ ಗುಹೆಯನ್ನು ಕೆತ್ತಿದ್ದಾರೆ . ಜೊತೆಗೆ ಇಂಡಿಯಾ ದ ಹೋಟೆಲ್ ಕೂಡ ಇಲ್ಲಿದೆ ಇಲ್ಲಿಗೆ ಭಾರತದಿಂದ ಪ್ರವಾಸಕ್ಕೆ ಚಲನಚಿತ್ರಗಳ ಶೂಟಿಂಗ್ ಗಳಿಗೆ ಬರುವವರು ಹೆಚ್ಚು ಎಂಬ ಕಾರಣಕ್ಕೆ ಇಲ್ಲಿ ಭಾರತದ ಒಂದು ಹೋಟೆಲ್ ಅನ್ನು ಕೂಡ ಇಟ್ಟಿದ್ದಾರೆ. ಇಲ್ಲಿ ಕೇಬಲ್ ಕಾರ್ ಗಳ ವ್ಯವಸ್ಥೆ ಕೂಡ ಇದೆ ಜೊತೆಗೆ ಇಲ್ಲಿ ಸ್ಕೀಯಿಂಗ್ ತುಂಬಾ ಪ್ರಸಿದ್ದಿ ತುದಿಯವರೆಗೆ ಹೋಗಿ ಅಲ್ಲಿಂದ ಸ್ಕೀಯಿಂಗ್ ಮಾಡುವುದನ್ನು ಕಾಣಬಹುದು ಸುಮಾರು ೪ ತಾಸುಗಳನ್ನು ಅಲ್ಲಿ ಕಳೆದ ನಂತರ ನಾವು ಅಲ್ಲಿಂದ ಹೋಗಿದ್ದು ಇಂಟರ್ ಲೆಕನ್ ಎಂಬ ಸ್ಥಳಕ್ಕೆ . ಇಂಟರ್ ಲೆಕನ್ ಶೂಟಿಂಗ್ ಗಳಿಗೆ ಪ್ರಸಿದ್ಧಿ ಪಡೆದ ಸ್ಥಳ ಇಲ್ಲಿ ಕನ್ನಡದ ಹಲವಾರು ಚಿತ್ರಗಳ ಶೂಟಿಂಗ್ ಮಾಡಲಾಗಿದೆ . ಜೊತೆಗೆ ಹಿಂದಿಯಲ್ಲಿ ಪ್ರಸಿದ್ಧಿ ಪಡೆದ ಡಿ ಡಿ ಎಲ್ ಜೆ ಎಂಬ ಚಲನಚಿತ್ರದ ಶೂಟಿಂಗ್ ಕೂಡ ಇಲ್ಲೇ ಆಗಿದೆ .ನಂತರ ನಾವು ಅಲ್ಲಿಂದ      
ಪುನಃ ಯೆನ್ಗಲ್ಬುರ್ಗ್ ಎಂಬಲ್ಲಿಗೆ ಬಂದು ಆ ರಾತ್ರಿ ಕೂಡ  ಅಲ್ಲೇ ಭಾರತೀಯ ಊಟ ಮಾಡಿ ರಮದ ಹೋಟೆಲ್ ನಲ್ಲೆ ಉಳಿದುಕೊಂಡೆವು.



No comments:

Post a Comment