Tuesday 24 April 2012

ಡಬ್ಬಿಂಗ್ ಮಾರಕ ಅಲ್ಲವೇ ಅಲ್ಲ

ದಟ್ಸ್ ಕನ್ನಡದಲ್ಲಿ ಪ್ರಕಟಗೊಂಡಿದೆ http://kannada.oneindia.in/movies/news/2012/04/25-kannada-needs-dubbing-films-says-arpita-rao-aid0052.html

ಬೇರೆ ಭಾಷೆಯಲ್ಲಿ ಬರುವ ಕಾರ್ಯಕ್ರಮಗಳನ್ನು ಅಥವಾ ಸಿನೆಮಾಗಳನ್ನು ಡಬ್ಬಿಂಗ್ ಮಾಡುವುದು ಪೂರಕವೋ ಅಥವಾ ಮಾರಕವೋ ಎಂಬ ಬಗ್ಗೆ ದಟ್ಸ್ ಕನ್ನಡದಲ್ಲಿ ನಡೆದ ಚರ್ಚೆಗೆ ಬರೆದ ಲೇಖನವಿದು .

ಡಬ್ಬಿಂಗ್ ಎನ್ನುವುದು ಕೇವಲ ಕನ್ನಡ ರಂಗದಲ್ಲಿ ಮಾತ್ರ ಇರುವಂತಹದಲ್ಲ ಇದು ಎಲ್ಲ ಭಾಷೆಗಳಲ್ಲೂ ಇದೆ .ಬೇರೆಬೇರೆ ಭಾಷೆಗಳಲ್ಲಿ ಪ್ರಸಿದ್ಧಿ ಪಡೆದ ಕಾರ್ಯಕ್ರಮಗಳು ಸಿನಿಮಾಗಳನ್ನು ತಮ್ಮ ಭಾಷೆಗೆ ಡಬ್ಬಿಂಗ್ ಮಾಡುವುದು ಹೊಸತಲ್ಲ .ಹೀಗಿರುವಾಗ ಕನ್ನಡದಲ್ಲೂ ಮಾಡಿದರೆ ಇದರಲ್ಲಿ ಯಾವುದೇ ರೀತಿಯ ತಪ್ಪಿಲ್ಲ . ಜೊತೆಗೆ ಇಲ್ಲಿ ಮಾರಕವಾಗುವುದು ಏನೂ ಇಲ್ಲ. ನಮ್ಮ ಕರ್ನಾಟಕದಲ್ಲಿರುವವರಿಗೆ ಕನ್ನಡಿಗರಿಗೆ ತಮ್ಮ ಮಾತೃ ಭಾಷೆ ಕನ್ನಡ ಎಲ್ಲರಿಗೂ ಗೊತ್ತಿರುತ್ತದೆ ಎಲ್ಲೊ ಓದಿದವರಿಗೆ ಬೇರೆ ಭಾಷೆಯ ಒಡನಾಟ ಇರುವವರಿಗೆ ಕನ್ನಡವಲ್ಲದೆ ಹಲವು ಭಾಷೆ ತಿಳಿದಿರುತ್ತದೆ ಮತ್ತು ಅಂತವರು ಬೇರೆ ಭಾಷೆಯಲ್ಲಿ ಜನಪ್ರಿಯತೆ ಹೊಂದಿದ ಕಾರ್ಯಕ್ರಮಗಳನ್ನು ಅಥವಾ ಚಲನಚಿತ್ರಗಳನ್ನು ವೀಕ್ಷಿಸಬಹುದು. ಆದರೆ ಕೇವಲ ಕನ್ನಡವೊಂದೆ ತಿಳಿದಿರುವವರು ಬೇರೆ ಭಾಷೆಯ ಕಾರ್ಯಕ್ರಮಗಳನ್ನು ನೋಡುವ ಪ್ರಯತ್ನ ಮಾಡುವುದಿಲ್ಲ. ಅದರಲ್ಲೂ ಹಳ್ಳಿಗಳಲ್ಲಿರುವ ಕನ್ನಡಿಗರು  ಕನ್ನಡ ಚಲನಚಿತ್ರಗಳನ್ನು  ಥಿಯೇಟರ್ ಗಳಿಗೆ ಹೋಗಿ ವೀಕ್ಷಿಸುವುದು ಬಹಳ ಕಡಿಮೆ ಇನ್ನು ಬೇರೆ ಭಾಷೆಯ ಚಲನಚಿತ್ರಗಳನ್ನು ಅಥವಾ ಟಿವಿ ಕಾರ್ಯಕ್ರಮಗಳನ್ನು ನೋಡುವುದು ಸತ್ಯಕ್ಕೆ ದೂರದ ಸಂಗತಿ .ಉದಾಹರಣೆಗೆ ನಾಗವಲ್ಲಿ ಅಂತಹ ಚಲನಚಿತ್ರಗಳು ತಮಿಳು ತೆಲುಗಿನಲ್ಲಿ ಪ್ರಸಿದ್ಧಿ ಪಡೆದಿದ್ದರೂ ಕೂಡ ಕನ್ನಡದಲ್ಲಿ ಇದನ್ನು ತರದಿದ್ದರೆ ಕನ್ನಡ ಚಿತ್ರರಂಗಕ್ಕೆ ಒಂದು ನಷ್ಟವಾಗುತ್ತಿತ್ತು .
ಇನ್ನು ಡಿಸ್ಕವರಿ ಪೋಗೋ ದಂತ ಚಾನೆಲ್ ಗಳು ಜನರಿಗೆ ಒಳ್ಳೆಯ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಪ್ರಕತಿಸುವುದರಿಂದ ಅಂತಹದನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡುವುದರಿಂದ ಎಲ್ಲ ಕನ್ನಡಿಗರು ನೋಡಲು ಪ್ರಾರಂಭಿಸುತ್ತಾರೆ ಮತ್ತು ಇದರಿಂದ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳುತ್ತಾರೆ . ಜೊತೆಗೆ ಕೆಲವೊಂದು ಸಿನೆಮಾಗಳಲ್ಲು ಕೂಡ ತಿಳಿದುಕೊಳ್ಳುವುದು ಇರುತ್ತದೆ ಅಂತಹವನ್ನು ಡಬ್ಬಿಂಗ್ ಮಾಡುವುದರಿಂದ ಅನುಕೂಲವೇ ಹೊರತು ಯಾವುದೇ ರೀತಿಯ ಅನಾನುಕೂಲತೆಗಳು ಇಲ್ಲ  .ಆದ್ದರಿಂದ ಡಬ್ಬಿಂಗ್ ಯಾವುದೇ ರೀತಿಯಲ್ಲೂ ಕೂಡ ಮಾರಕವಾಗಲಾರದು .


No comments:

Post a Comment