Friday 19 July 2013

ಸ್ತ್ರಾಟ್ ಫೋರ್ಡ್ ಅಪಾನ್ ಅವನ್ (Stratford upon avon) Shakspear's birth place

Published in vijayanext on 19/07/12 


ಶೇಕ್ಸ್ ಪಿಯರ್  ಹೆಸರು ಯಾರು ತಾನೇ ಕೇಳಿಲ್ಲ ? 15 & 16 ನೆ ಶತಮಾನದಲ್ಲಿ ತನ್ನ ಕಾವ್ಯದ ಮೂಲಕ ನಾಟಕದ ಮೂಲಕ ಇಡೀ ಜಗತ್ತಿನ ಮೆಚ್ಚುಗೆ ಗಳಿಸಿದಾತ, ಈತ ಇಂಗ್ಲಿಷ್ ಕವಿ. ಈತನನ್ನು ಇಂಗ್ಲೆಂಡ್ ನ ರಾಷ್ಟ್ರ ಕವಿ ಎಂದು ಕರೆಯಲಾಗುತ್ತಿತ್ತು. ಈತ ಹುಟ್ಟಿದ್ದು,ಬೆಳೆದಿದ್ದು ಸ್ತ್ರಾಟ್ ಫೋರ್ಡ್ ಅಪಾನ್ ಅವನ್ ಎಂಬಲ್ಲಿ. ಈತ ತನ್ನ 18 ನೆ ವಯಸ್ಸಿನಲ್ಲಿ ತನಗಿಂತ ದೊಡ್ಡವಳಾದ 26 ವರ್ಷದ ಆನ್ನೆ ಹ್ಯಾಥವೆ ಎಂಬುವವಳನ್ನು ಮದುವೆಯಾದ. ನಂತರ 3 ಮಕ್ಕಳು. ಇದು ಶೇಕ್ಸ್ ಪಿಯರ್ ನ ವೈಯಕ್ತಿಕ ಜೀವನದ ಕಥೆ. ನಂತರ ಆತ ದೊಡ್ಡ ನಾಕಕಾರನಾದ ಇವನು ಬರೆದ ನಾಟಕಗಳು ಜಗತ್ತಿನಾದ್ಯಂತ ಹೆಸರು ಪಡೆಯಿತು ಇಂದಿಗೂ ಪಡೆಯುತ್ತಲೇ ಇದೆ. ಇಂಗ್ಲಿಷ್ ಸಾಹಿತ್ಯವನ್ನು ಓದಲು ಮುಂದಾದರೆ ಮೊದಲು ಬರುವುದು ಶೇಕ್ಸ್ ಪಿಯರ್ . ಆತನ ಕವನಗಳ ಬಗ್ಗೆ ನಾಟಕಗಳ ಬಗ್ಗೆ ಪಟ್ಟಿ ಮಾಡುತ್ತಾ ಹೋದರೆ ಮುಗಿಯದಷ್ಟು ಎನ್ನಬಹುದು. ಆತನ ಎಷ್ಟೋ ಕವನಗಳು ನಾಟಕಗಳು ಜಗತ್ತಿನ ಬೇರೆಬೇರೆ ಭಾಷೆಗಳಿಗೆ ಸಾಕಷ್ಟು ಅನುವಾದವಾಗಿದೆ ಎಂಬುದೆಲ್ಲ ಎಲ್ಲರಿಗೂ ತಿಳಿದಿರುವ ವಿಷಯ. ಶೇಕ್ಸ್ ಪಿಯರ್ ಹುಟ್ಟಿದ ಈ ಸ್ತ್ರಾಟ್ ಫೋರ್ಡ್ ಲಂಡನ್ ನಿಂದ ೩-೪ ಗಂಟೆಗಳ ಪ್ರಯಾಣವಷ್ಟೆ ಹಾಗಾಗಿ ನಾವು ಇದನ್ನು ನೋಡಲೇ ಬೇಕು ಎಂದು ಅಲ್ಲಿ ಹೋದೆವು. 
ಒಂದು ಅಂದಾಜಿನ ಪ್ರಕಾರ ಪ್ರತಿ ವರ್ಷ ಇಲ್ಲಿಗೆ 3 ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಸ್ಥಳಕ್ಕೆ ಪ್ರವೇಶಿಸುತ್ತಿದ್ದಂತೆ ನಮಗೆ ಸ್ತ್ರಾಟ್ಫೋರ್ಡ್ ಆನ್ ಅವನ್ ನ ಕ್ಲಾಕ್ ಸಿಗುತ್ತದೆ ಮತ್ತು ಅಲ್ಲೇ ಪಕ್ಕದಲ್ಲಿ ದೊಡ್ಡ ಮಾರ್ಕೆಟ್ ಇದೆ ಇದು ಇಲ್ಲಿನ ಜನಪ್ರಿಯ ಮಾರ್ಕೆಟ್ ಆಗಿದೆ. ಪ್ರತಿ ವಾರ ಇಲ್ಲಿ ಸಂತೆ ನಡೆಯುತ್ತದೆ ರಸ್ತೆ ಬದಿಗಳಲ್ಲಿ ವಿವಿಧ ವಸ್ತುಗಳನ್ನು ಮಾರಟಕ್ಕೆ ಇಟ್ಟುಕೊಂಡಿರುತ್ತಾರೆ.ಇಲ್ಲಿ ರಸ್ತೆ ಬದಿಗಳಲ್ಲಿ ಸ್ಟ್ರೀಟ್ ಪ್ಲೇ ಮಾಡಿ ತೋರಿಸ್ತುತ್ತಾರೆ ಇದು ಹೆಚ್ಚಿನ ಜನರನ್ನು ಆಕರ್ಷಿಸುತ್ತದೆ. ಶೇಕ್ಸ್ಪಿಯರ್ ನ ನಾಟಕಗಳ ತುಣುಕನ್ನು ಇಲ್ಲಿ ನೋಡಬಹುದು. 
ವಿಲಿಯಂ ಶೇಕ್ಸ್ಪಿಯರ್ ಹುಟ್ಟಿದ ಮನೆಯನ್ನು ಪ್ರವಾಸಿ ಸ್ಥಳವಾಗಿಸಲಾಗಿದೆ. ಇಲ್ಲಿ ಪ್ರವೇಶಿಸುತ್ತಿದ್ದಂತೆ ಶೇಕ್ಸ್ ಪಿಯರ್ ನ ಹುಟ್ಟು ಮತ್ತು ಆತನ ವೈಯಕ್ತಿಕ ಜೀವನದ ಬಗ್ಗೆ ಮಾಹಿತಿ ನೀಡಲಾಗುತ್ತದೆ ನಂತರ ಆತನ ಮನೆಗೆ ಪ್ರವೇಶ ನೀಡಲಾಗುತ್ತದೆ. ಶೇಕ್ಸ್ ಪಿಯರ್ ಮಗುವಾಗಿದ್ದಾಗಿನಿಂದ ಆತನ ತಾಯಿ ಮೇರಿ ಕಾಲ್ಪನಿಕ ಕಥೆಗಳನ್ನು ಹೇಳುತ್ತಿದ್ದಳಂತೆ ಇದರಿಂದ ಪ್ರೇರಿತನಾದ ಈತ ಕವನ,ನಾಟಕಗಳನ್ನು ರಚಿಸಲು ಯಶಸ್ವಿಯಾದ ಎನ್ನಲಾಗುತ್ತದೆ .  ಈ ಮನೆ ಸುಮಾರು 600 ವರ್ಷಗಳ ಹಿಂದಿನದಾಗಿದ್ದು ಸುತ್ತಲು ಉದ್ಯಾನವನವನ್ನು ಕಟ್ಟಿ ಸುಂದರವಾಗಿ ನಿರ್ವಹಿಸಲಾಗುತ್ತಿದೆ.ಇದನ್ನು ಈಗ ವಸ್ತು ಸಂಗ್ರಹಾಲಯವನ್ನಾಗಿ ಮಾಡಲಾಗಿದೆ .  ಒಳಭಾಗದಲ್ಲಿ ಶೇಕ್ಸ್ಪಿಯರ್ ಬಳಸಿದ ತೊಟ್ಟಿಲು ಮನೆಯ ಅಡುಗೆ ಮನೆ ವಸ್ತುಗಳು,ಮನೆಯಲ್ಲಿ ಬಳಸುತ್ತಿದ್ದ ಇತರ ವಸ್ತುಗಳನ್ನು ಇಡೀ ಮನೆಯನ್ನು ಆಟ ನಾಟಕಗಳಿಗೆ ಬಳಸುತ್ತಿದ್ದ ವಸ್ತ್ರಗಳನ್ನು ಕಾಣಬಹುದು. ಅಲ್ಲಿಯೇ ಒಂದು ಪುಸ್ತಕ ಮಳಿಗೆ ಕೂಡ ಇದೆ ಇಲ್ಲಿ ಶೇಕ್ಸ್ಪಿಯರ್ ಬರೆದ ಎಲ್ಲಾ ಪುಸ್ತಕಗಳು ಲಭ್ಯವಿದೆ. 

ಆನ್ ಹ್ಯಾಥವೇ  ಕಾಟೇಜ್ :
ಶೇಕ್ಸ್ಪಿಯರ್ ಮನೆಯಿಂದ ಒಂದು ಕಿ ಮೀ ಅಂತರದಲ್ಲಿ ಶೇಕ್ಸ್ ಪಿಯರ್ ಹೆಂಡತಿ ಹ್ಯಾಥವೆ ಮನೆಯಿದೆ. ಆಕೆ ತನ್ನ ಬಾಲ್ಯದ ದಿನಗಳನ್ನು ಇಲ್ಲಿ ಕಳೆದಳು ಎನ್ನಲಾಗಿದೆ. ಇಲ್ಲಿ 12 ರೂಮುಗಳಿದ್ದು ಆಗಿನ ಕಾಲದಲ್ಲಿ ಬಳಸಲಾದ ಎಲ್ಲಾ ವಸ್ತುಗಳನ್ನು ಇಡಲಾಗಿದೆ. ಹೊರಗೆ ದೊಡ್ಡ ಉದ್ಯಾನವನ ಜೊತೆಗೆ ಇಲ್ಲಿ ಫಾರ್ಮ್ ಇದೆ ಇದರಲ್ಲಿ ವಿವಿಧ ರೀತಿಯ ತರಕಾರಿಗಳನ್ನು ಬೆಳೆಯಲಾಗುತ್ತದೆ. 90 ಎಕರೆ ಭೂಮಿಯಲ್ಲಿ ಇರುವ ಈ ಕಾಟೇಜ್ ನಲ್ಲಿ ಕಾಡು ಕೂಡ ಇದೆ .  ಜೊತೆಗೆ ಸುಂದರವಾದ ಉದ್ಯಾನವನವಿದೆ ಇಡೀ ಸ್ಥಳವನ್ನು ನೋಡಲು ಸುಮಾರು ೩ ತಾಸು ಬೇಕು. 1969 ರಲ್ಲಿ ಇದು ಬೆಂಕಿಬಿದ್ದು ಸಂಪೂರ್ಣ ನಾಶ ಹೊಂದುವ ಹಂತದಲ್ಲಿತ್ತು ನಂತರ ಇದನ್ನು ಮತ್ತೆ ನವೀಕರಿಸಲಾಯಿತು. 

ನಷ್ಸ್ ಹೌಸ್ ಮತ್ತು ನ್ಯೂ ಪ್ಲೇಸ್ 

ಇದು ಶೇಕ್ಸ್ಪಿಯರ್ ನ ಮೊಮ್ಮಗಳ ಗಂಡನ ಮನೆ ಎನ್ನಲಾಗಿದೆ ಇದನ್ನು ಈಗ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದ್ದು . ಇದು
17 ನೆ ಶತಮಾನದ ಮನೆ. ಇದರ ಸುತ್ತಲು ಸುಂದರವಾದ ಉದ್ಯಾನವನ ನಿರ್ಮಿಸಲಾಗಿದೆ . ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 5 ರ ವರೆಗೆ ಪ್ರವಾಸಿಗರಿಗೆ ನೋಡಲು ಅವಕಾಶ ಕಲ್ಪಿಸಿಕೊದಲಾಗುತ್ತದೆ. ಮನೆಯ ಮೇಲ್ಬಾಗದಲ್ಲಿ ಶೇಕ್ಸ್ ಪಿಯರ್ ಬರೆದ ಪುಸ್ತಕಗಳಲ್ಲಿ ಬರುವ ವ್ಯಕ್ತಿಗಳ ಸಣ್ಣ ಮಾಹಿತಿ ನೀಡುವ ಫಲಕ ನೇತು ಹಾಕಲಾಗಿದೆ. ಇದನ್ನು ನೋಡಿದವರಿಗೆ ಶೇಕ್ಸ್ಪಿಯರ್ ನ ಒಥೆಲೊ ,ಹ್ಯಾಮ್ಲೆಟ್,ರೋಮಿಯೋ ಜೂಲಿಯಟ್ ಇವುಗಳನ್ನೆಲ್ಲ ಓದಲೇ ಬೇಕು ಎಂದೆನಿಸದೆ ಇರಲಾರದು. 

ಇಷ್ಟೇ ಅಲ್ಲದೆ ಇಲ್ಲಿ 3 ಥಿಯೇಟರ್ ಗಳಿದ್ದು ಅವುಗಳಲ್ಲಿ ಶೇಕ್ಸ್ ಪಿಯರ್ ನ ಡ್ರಾಮ ನಡೆಯುತ್ತಿರುತ್ತದೆ. ಒಂದು ದಿನಪೂರ್ತಿ ನೋಡಿದರೂ ಮುಗಿಯದ ಮನ ತಣಿಯದ ಹಳ್ಳಿ ಈ ಸ್ತ್ರಾಟ್ಫೋರ್ಡ್ ಅವನ್ . ಒಟ್ಟಾರೆಯಾಗಿ ಇಂಗ್ಲೆಂಡ್ ನ ಚಿಕ್ಕ ಹಳ್ಳಿಯ ಸಣ್ಣ ಮನೆಯಲ್ಲಿ ಬೆಳೆದ ಈತ ಜಗತ್ಪ್ರಸಿದ್ದವಾದದ್ದು ನಿಜವಾಗಲು ಮಹತ್ ಸಾಧನೆ. 

ಇದು ಉತ್ತರ ಇಂಗ್ಲೆಂಡ್ ನಲ್ಲಿ ಬರುತ್ತದೆ. ಬರ್ಮಿಂಗ್ ಹ್ಯಾಮ್ ನಿಂದ 1 ಗಂಟೆ ಪ್ರಯಾಣ.ಭಾತರದಿಂದ ಲಂಡನ್ ಪ್ರವಾಸಕ್ಕೆ ಬಂದವರು  ಲಂಡನ್ ನಿಂದ ರೈಲಿನಲ್ಲಿ 3 ತಾಸಿನಲ್ಲಿ ತಲುಪಬಹುದು. ನಗರದ ಮದ್ಯದಲ್ಲಿಯೆ ಎಲ್ಲ ಸ್ಥಳಗಳಿರುವುದರಿಂದ ಬಸ್ ನಲ್ಲಿ ಎಲ್ಲಿ ಬೇಕಾದರೂ ಸುಲಭವಾಗಿ ತಲುಪಬಹುದು. ನಡೆದುಕೊಂಡು ಹೋದರು ಕೂಡ ಇದೊಂದು ಸುಂದರ ಸ್ಥಳ. 

ವರ್ಷದ 6 ತಿಂಗಳು ಚಳಿಯಿಂದ ಕೂಡಿರುವುದರಿಂದ ಇಲ್ಲಿ ಹೋಗಲು ಸೂಕ್ತ ಸಮಯ ಜೂನ್ ನಿಂದ ಸೆಪ್ಟೆಂಬರ್ . 

ಅರ್ಪಿತಾ ಹರ್ಷ 
ಲಂಡನ್