Tuesday 15 May 2012

ಕಸದಿಂದ ರಸ

ಈ ನನ್ನ ಲೇಖನವು ದಟ್ಸ್ ಕನ್ನಡದಲ್ಲಿ ಪ್ರಕಟಗೊಂಡಿದೆ http://kannada.boldsky.com/home-garden/decor/2012/home-decoration-by-trash-003674.html

ಮನೆಯಲ್ಲಿಯೇ ಇರುವ ಗೃಹಿಣಿಯರಿಗೆ ಮನೆಕೆಲಸ ಮುಗಿದ ನಂತರ ಸಮಯ ವ್ಯರ್ಥ ಮಾಡುವ ಬದಲು  ಮನೆಯಲ್ಲಿಯೇ ಇರುವ ಹಲವಾರು ಬೇಡದ ವಸ್ತುಗಳಿಂದ ಹೆಚ್ಚಿನ ಖರ್ಚಿಲ್ಲದೆ ಆಕರ್ಷಕ ವಸ್ತುಗಳನ್ನು ತಯಾರಿಸಿ ಮನೆಯನ್ನು ಅಲಂಕರಿಸಬಹುದು . 
೧.ಎಲ್ಲರ ಮನೆಯಲ್ಲೂ ಹಲವಾರು ಸ್ಟೀಲ್ ಪ್ಲೇಟ್ ಗಳು ಇದ್ದೆ ಇರುತ್ತದೆ . ಸ್ಟೀಲ್ ಪ್ಲೇಟ್ ಗಳು ಹೆಚ್ಚಾಗಿ ಮೂಳೆ ಸೇರುವ ಬದಲು ಅದರಿಂದ ಒಂದು ಆರತಿಯ ತಟ್ಟೆ ಯನ್ನೇ ತಯಾರಿಸಬಹುದು . ನಮಗೆ ಇಷ್ಟವಾದ ಬಣ್ಣವನ್ನು ತಂದು ಪ್ಲೇಟ್ ನ ಮೇಲ್ಭಾಗದಲ್ಲಿ ಹಚ್ಚಬೇಕು ದೇವರ ವಸ್ತು ವಾಗಿದ್ದರಿಂದ ಹಳದಿ ಅಥವಾ ಕೆಂಪು ಬಣ್ಣ ಚೆನ್ನಾಗಿ ಕಾಣುತ್ತದೆ ಬಣ್ಣ ಒಣಗುವ ವರೆಗೆ ಬಿಸಿಲಿನಲ್ಲಿ ಇಟ್ಟು ನಂತರ ಅದರ ಮೇಲೆ ಗೊತ್ತಿರುವ ಯಾವುದಾದರು ಡಿಸೈನ್ ಅಥವಾ ರಂಗೋಲಿಯನ್ನು ಬಿಳಿ ಬಣ್ಣದಲ್ಲಿ ಆಕರ್ಷಕವಾಗಿ ಬಿಡಿಸಿದರೆ ಪ್ರತಿ ದಿನ ದೇವರಿಗೆ ಆರತಿ ಮಾಡುವಾಗ ಆಕರ್ಷಕ ಆರತಿ ತಟ್ಟೆ ರೆಡಿ .
೨. ಚಾಕೊಲೆಟ್ ಕವರ್ ಗಳು ಎಲ್ಲರ ಮನೆಯಲ್ಲೂ ಇದ್ದೆ ಇರುತ್ತದೆ(ಚಿಕ್ಕ ಚಾಕೊಲೆಟ್ ಗಳು ) ಚಾಕಲೇಟ್ ತಿಂದನಂತರ ಕವರ್ ಅನ್ನು ಎಸೆಯುವ ಬದಲು ಎಲ್ಲವನ್ನು ಒಟ್ಟು ಹಾಕಿ ಒಂದು ೨೦ ಕವರ್ ಆದ ನಂತರ ಅದನ್ನು ಒಂದು ಸುರುಳಿ ಸುತ್ತಿ ಮಧ್ಯದಲ್ಲಿ ಒಂದು ಗಂಟು ಕಟ್ಟಿ ಹೀಗೆ ಎಲ್ಲ ಕವರ್ ಗಳನ್ನೂ ಗಂಟು ಕಟ್ಟಿ ಯಾದ ನಂತರ ಅದನ್ನು ದಾರದಿಂದ ಒಂದಕೊಂದು ಸೇರಿಸಿ ಹೊಳೆಯಿರಿ ಆಗ ಸುಂದರವಾದ ತೋರಣ ತಯಾರಾಗುತ್ತದೆ . ದೇವರ ಮೆನೆಎದುರು ಅಥವಾ ಅಡುಗೆ ಮನೆಯೆದುರು ಬಾಗಿಲಿಗೆ ಆಕರ್ಷಕವಾಗಿ ಕಾಣುವಂತೆ ನೇತು ಹಾಕಬಹುದು.
೩.ಮನೆಗೆ ಬರುವ ಹಲವಾರು ಪೋಸ್ಟ್ ಲೆಟರ್ ಗಳು ಬಿಳಿ ಬಣ್ಣದ್ದಗಿರುತ್ತದೆ ಒಲೆಗಿನ ಲೆಟರ್ ತೆಗೆದು ಮೇಲಿನ ಕವರ್ ಅನ್ನು ಎಸೆಯದೆ ಅದಕ್ಕೆ ನಮಗೆ ಇಷ್ಟವಿರುವ ಬಣ್ಣ ಹಚ್ಚಿ ಸುರಳಿ ಸುತ್ತಿ ನಂತರ ಕೆಳಗೆ ಒಂದು ಸಣ್ಣ ಹಿಡಿಕಡ್ಡಿ ಅಥವಾ ಬೆಂಕಿ ಕಡ್ಡಿ ಹಾಕಿ ಹೂವನ್ನು ತಯಾರಿಸಬಹುದು , ಬೇರೆಬೇರೆ  ರೀತಿಯ ಹೂವುಗಳನ್ನು ತಯಾರಿಸಿ ಒಂದು ಗಾಜಿನ ಆಕರ್ಷಕ ಸ್ಟ್ಯಾಂಡ್ ಒಳಗೆ ಹಾಕಿ ಮೇಜಿನ  ಮೇಲೆ ಇಟ್ಟರೆ ನೋಡಲು ಸುಂದರವಾಗಿರುತ್ತದೆ.
೪. ಹಳ್ಳಿ ಮನೆಗಳಲ್ಲಿ ತಾವರೆ , ನೆಲಸಂಪಿಗೆ ಹೂಗಳು ಸಾಕಷ್ಟು ಬೆಳೆಯುತ್ತಾರೆ  ಮನೆಯಲ್ಲಿ ಇರುವ ಹಳೆಯ ಬಾಟಲಿಯನ್ನು ಚೆನ್ನಾಗಿ ತೊಳೆದು ಅದರ ಮೇಲೆ ಬಣ್ಣದಿಂದ ಡಿಸೈನ್ ಗಳನ್ನು ಬಿಡಿಸಿ ಒಣಗಿದ ನಂತರ ಸ್ವಲ್ಪ ನೀರು ಹಾಕಿ ಮನೆಯಲ್ಲಿಯೇ ಬೆಳೆದ ಸುಂದರ ಹೂವುಗಳನ್ನು ಹಾಕಿ ಟಿಪಾಯಿಯ ಮೇಲೆ ಇಟ್ಟರೆ ನೋಡುಗರ ಮನ ಸೆಳೆಯುತ್ತದೆ ಮತ್ತು ಒಳಗೆ ನೀರು ಹಾಕಿ ಇಟ್ಟಿರುವುದರಿಂದ ಬೇಗ ಒಣಗುವುದಿಲ್ಲ.

ಅರ್ಪಿತಾ ಹರ್ಷ
ಲಂಡನ್


No comments:

Post a Comment