Tuesday 13 March 2012

ಮೊಬೈಲ್ ಲೋಕ

ಗೆಳತಿಯೊಬ್ಬಳಿಗೆ ಮದುವೆ ಫಿಕ್ಸ್ ಆಗಿರುವುದು ತಿಳಿದು ಕುಶಿ ಆಯಿತು ಒಂದು ಫೋನ್ ಮಾಡಿ ವಿಶ್ ಮಾಡೋಣ ಎಂದು ಕಾಲ್ ಮಾಡಿದೆ ಬ್ಯುಸಿ ಬಂತು ಒಂದು ಅರ್ಧ ಗಂಟೆ ಬಿಟ್ಟು ಮತ್ತೆ ಫೋನ್ ಮಾಡಿದೆ ಆಗಲು ನೀವು ಕರೆಮಾಡಿದ ಚಂದಾದಾರರು ಬೇರೆ ಕರೆಯಲ್ಲಿ ಕಾರ್ಯ ನಿರತರಾಗಿದ್ದಾರೆ ಎಂದಿತು ಒಂದು ಹೆಣ್ಣು ದ್ವನಿ. ಸರಿ ಎಂದು ಸುಮಾರು ೪-೫ ಗಂಟೆಗಳ ಬಳಿಕ ಮತ್ತೆ ಕರೆ ಮಾಡಿದೆ ಆಗಲು ಅದೇ ಉತ್ತರ . ಪ್ರತಿದಿನ ಹೀಗೆ ಕಾಲ್ ಮಾಡುತ್ತಲೇ ಇದ್ದೆ ಒಮ್ಮೊಮ್ಮೆ ಬೇರೆಕರೆಯಲ್ಲಿ ಕಾರ್ಯ ನಿರತರಾಗಿದ್ದರೆ ,ಕೆಲವೊಮ್ಮೆ ಸ್ವಿಚ್ ಆಫ್ ಎಂದು ಹೇಳುತ್ತಿತ್ತು. ಒಂದು ವಾರದ ಬಳಿಕ ಅವಳಿಗೆ ಟೆಲಿಪತಿ ಯಾಯಿತೋ ಅಥವಾ ಮಿಸ್ಸಕಾಲ್ ನೋಡಿಯು ತಿರುಗಿ ಕಾಲ್ ಮಾಡದಿದ್ದಕ್ಕೆ ಬೈಯುತ್ತಾಳೆಂಬ ಭಯದಿಂದಲೋ ಅವಳೇ ಕಾಲ್ ಮಾಡಿದಳು .
ಹ್ಮ್ಮ್ ಅಂತು ಇವಾಗ ನಿನ್ನ ಜೊತೆ ಮಾತಾಡುವ ಅವಕಾಶ ಕೂಡಿ ಬಂತು ಎಂದೆ. ಸಾರೀ ಕಣೆ ಬೆಳಗ್ಗೆ ಇಂದ ಸಂಜೆ ವರೆಗೆ ನನ್ನ ಹುಡುಗನ ಜೊತೆ ಫೋನ್ ಮಾಡೋದ್ರಲ್ಲಿ ಬೇರೆಯವರಿಗೆ ಫೋನ್ ಮಾಡಲು ಸಮಯವೆಲ್ಲಿ ಎಂದಳು ನನ್ನ ಗೆಳತಿ . ಇದು ಇಂದಿನ ಎಲ್ಲ ಮದುವೆ ಫಿಕ್ಸ್ ಆದವರ,ಅಥವಾ ಲವ್ ನಲ್ಲಿ ಬಿದ್ದವರ ನಿತ್ಯದ ಕಥೆ ಯಾಗಿಬಿಟ್ಟಿದೆ. ಬೆಳಗ್ಗೆ ಫೋನ್ ಹೊಡೆದುಕೊಂಡ ಮೇಲೆ ಮಾತನಾಡುತ್ತಲೇ ಎದ್ದು ದಿನ ಪ್ರಾರಂಭಿಸಿ, ಮಧ್ಯ ರಾತ್ರಿ ಗುಡ್ ನೈಟ್ ಹೇಳುವವರೆಗೆ ಮೊಬೈಲ್ ಕೈಬಿಡದಂತಾಗಿದೆ. ಹಿಂದಿನ ಕಾಲಗಳಲ್ಲಿ ಪತ್ರದ ಮೂಲಕ ನಮ್ಮ ಮನದ ಭಾವನೆಗಳನ್ನು ಹೊರಹಾಕ ಬೇಕಿತ್ತು ಆದರೆ ಇಂದು ಎಲ್ಲವೂ ಮೊಬೈಲ್ ಅಲ್ಲಿಯೇ . ಒಟ್ಟಾರೆ ಮೊಬೈಲ್ ಲೋಕ ವಾಗಿಹೋಗಿದೆ .ನಾನು ನನ್ನ ಗೆಳತಿಗೆ ಒಳ್ಳೆ ಕೆಲಸ ಮಾದುತ್ತಿದ್ದೀಯೇ ಎಂದು ಹುರಿದುಂಬಿಸಿದೆ ಆ ಮೂಲಕವಾದರೂ ಮದುವೆಯ ಮೊದಲೇ ಒಬ್ಬರ ಮನಸ್ಸನ್ನು ಸ್ವಲ್ಪಮಟ್ಟಿಗಾದರೂ ತಿಳಿದುಕೊಳ್ಳುವ ಅವಕಾಶ ಮೊಬೈಲ್ ಮೂಲಕ ಸಿಗುತ್ತಿದೆ . ಇದರಿಂದ ಬಿ ಎಸ್ ಯನ್ ಎಲ್ . ಏರ್ಟೆಲ್ ಗಳಿಗೆ ಒಳ್ಳೆಯ ಲಾಭವಾಗಿ ಹೊಸ ಹೊಸ ಆಫರ್ ಗಳನ್ನೂ ಕೂಡ ಕೊಡಲು ಪ್ರಾರಂಭಿಸಿದ್ದಾರೆ ಎಂಬುದು ಸಂತೋಷದ ವಿಷಯ .

ಅರ್ಪಿತಾ ಹರ್ಷ

No comments:

Post a Comment