Wednesday 12 October 2011

ಪ್ರವಾಸಿ ಕಥನ -2

ಲಂಡನ್ ನ ಆಕರ್ಷಣೆಗಳಲ್ಲಿ ಒಂದಾದ ಲಂಡನ್ ಐ ಬಗ್ಗೆ ನಿಮಗೆ ತಿಳಿಸಲೇ ಬೇಕು ಅನಿಸಿದ್ದರಿಂದ ಈ ಲೇಖನ ..ಲಂಡನ್ ಅಲ್ಲಿ ಲಂಡನ್ ಐ ಪ್ರಖ್ಯಾತಿ ಸ್ಥಳ .ಪ್ರತಿದಿನ ಸಾವಿರಾರು ಜನರಿಂದ ಗಿಜಿಗಿಜಿ ಎನ್ನುತ್ತಿರುತ್ತದೆ . ಲಂಡನ್ ಐ ನೋಡಲು ಕಣ್ಣಿನ ಆಕಾರ ಹೊಂದಿದೆ .ಬಹುಷಃ ಅದಕ್ಕಾಗಿಯೇ ಲಂಡನ್ ಐ ಎಂಬ ಹೆಸರಿಟ್ಟಿರಬಹುದು.ದೂರದಿಂದ ನೋಡಿದರೆ ನಮ್ಮೂರಿನ ಜಾತ್ರೆಗಳಲ್ಲಿರುವ ಜಾಯಿಂಟ್ ವೀಲ್ ನಂತೆ ಕಾಣುತ್ತದೆ.ಆದರೆ ಇದು ಸುಂದರವಾಗಿದೆ.ದೊಡ್ಡದಾಗಿದೆ.ಒಂದೊಂದು ಐ ನಲ್ಲಿ ಕನಿಷ್ಠ ಹದಿನೈದು ಜನ ಕುಳಿತುಕೊಂಡು ಹೋಗಬಹುದು.ಒಟ್ಟು ಇಪ್ಪತ್ತೈದು ಕಣ್ಣಿನಾಕಾರದ ಬುಟ್ಟಿಗಳಿವೆ . ಇದು ಒಂದು ಸುತ್ತು ತಿರುಗಲು ತೆಗೆದುಕೊಳ್ಳುವ ಅವಧಿ ನಲವತ್ತು ನಿಮಿಷಗಳು.ಚಲಿಸುತ್ತಿದೆ ಎಂಬ ಅನುಭವವೇ ಆಗದಂತೆ ತಿರುಗುತ್ತದೆ.ನಾವು ಸುಮಾರು ರಾತ್ರಿ ಏಳು ಮೂವತೈದಕ್ಕೆ ಲಂಡನ್ ಐ ಯನ್ನು ಹತ್ತಿದ್ದೆವು.ಆ ನಲವತ್ತು ನಿಮಿಷಗಳು ಅದ್ಭುತವಾದ ಪ್ರಪಂಚದರ್ಶನ ಆದಂತಿತ್ತು.ಇದರಲ್ಲಿ ಕುಳಿತು ಹೊರಗಿನ ದೃಶ್ಯಗಳನ್ನು ನೋಡುತ್ತಿದ್ದರೆ ಜಗತ್ತು ಇಷ್ಟೊಂದು ಸುಂದರವಾಗಿದೆಯಲ್ಲವೇ ಎಂದೆನ್ನಿಸುತ್ತದೆ.ದೀಪಗಳಿಂದ ಕಂಗೊಳಿಸುವ ಆ ಲೋಕವನ್ನು ಮತ್ತೆ ಮತ್ತೆ ನೋಡಬೇಕೆನಿಸುತ್ತದೆ .ಲಂಡನ್ ಐ ಯಲ್ಲಿ ಕುಳಿತು ತೆಗೆದಿರುವ ಕೆಲವು ಫೋಟೋ ಗಳು ಇಲ್ಲಿವೆ.

2 comments:

  1. ಲಂಡನ್ Eye ಮೂಲಕ ಸುತ್ತಲಿನ ಜಗತ್ತು ನೋಡಿ ನಮಗೂ ತಿಳಿಸಿದ್ದೀರಿ. ಮಾತ್ರವಲ್ಲ, ಲಂಡನ್ ಐ ನೋಡುವ ಆಸೆ ಹುಟ್ಟಿಸಿದ್ದೀರಿ... ಅಲ್ಲಿಗೆ ಭೇಟಿ ನೀಡೋ ಆ ಸಮಯಕ್ಕಾಗಿ ಕಾಯ್ತೀನಿ.

    ಹೀಗೇ ಬರೀತಾ ಇರಿ...

    ReplyDelete
  2. ಧನ್ಯವಾದಗಳು ಅವಿನಾಶ್ ರವರೆ , ನಿಜಾವಾಗಲು ಒಮ್ಮೆ ನೋಡಲೇ ಬೇಕಾದ ಸ್ಥಳ .ನೋಡಿ ಚೆನ್ನಾಗಿದೆ.

    ReplyDelete