Friday 31 May 2013

ಕೆಂಟರ್ಬರಿ (ಇಂಗ್ಲೆಂಡ್) ಪ್ರವಾಸಿ ಕಥೆ

Published in Sakhi Magazine

ಇದು ಮೇ ತಿಂಗಳು ಲಂಡನ್ ನಲ್ಲೀಗ ಬೇಸಿಗೆ ಸುಮಾರು ೬ ತಿಂಗಳು ಕೊರೆಯುವ ಚಳಿಯಿಂದ ಬೇಸತ್ತ ಜನರೆಲ್ಲಾ ಹೊರಹೊರಟು ಪ್ರವಾಸ ಕೈಗೊಳ್ಳುವ ಸಮಯ . ಮೇ ತಿಂಗಳು ಬಂತೆಂದರೆ ಪ್ರವಾಸಿ ತಾಣಗಳು ಗಿಜಿ ಗಿಜಿ . ಟಿಕೆಟ್ ಗಳಿಗೆ ಉದ್ದದ ಕ್ಯೂ . ಇಲ್ಲಿಯ ಚಳಿ ಎಷ್ಟು ಕಷ್ಟವೋ ಹಾಗೆಯೇ ಇಲ್ಲಿಯ ಬೇಸಿಗೆಯ ಸೂರ್ಯನ ಪ್ರಖರತೆಯನ್ನು ಎದುರಿಸುವುದೂ ಕೂಡ ಅಷ್ಟೇ ಕಷ್ಟ . ಕೇವಲ ಹದಿನೈದು ಡಿಗ್ರಿ ಇದ್ದರೂ ಕೂಡ ಸನ್ ಬರ್ನ್ ಆಗುವ ಸಾದ್ಯತೆ ಬಹಳ ಹೆಚ್ಚು ಹಾಗಿರುತ್ತದೆ ಇಲ್ಲಿಯ ವಾತಾವರಣ . ಅದೇನೇ ಇರಲಿ ಅದಕ್ಕೆಲ್ಲ ಬದಲಿ ಪರಿಹಾರವನ್ನು ಕಂಡುಕೊಂಡು ಇಲ್ಲಿನ ಜನ ಹೊರಹೊರಟು ಬಿಡುತ್ತಾರೆ ಮೇ ಬಂತೆಂದರೆ . ಹಾಗೆಯೇ ನಾವು ಸ್ನೇಹಿತರೆಲ್ಲ ಕೂಡ ಸೇರಿ ಪ್ರವಾಸಕ್ಕೆ ಹೊರಟೆವು .


ಹೊರದೇಶಗಳು ಸಾಕಷ್ಟು ಅಭಿವೃದ್ದಿ ಹೊಂದಿದ ದೇಶಗಳು ಸಾಕಷ್ಟು ಮುಂದುವರೆದಿದೆ ಎಂಬುದು ಎಲ್ಲಾರಿಗೂ  ಗೊತ್ತಿರುವ ವಿಷಯಗಳೇ . ಹಾಗೆಯೇ ಇಂಗ್ಲೆಂಡ್ ಕೂಡ . ಆದರೆ ಇಲ್ಲಿನ ಕೆಲವೊಂದು ಪ್ರದೇಶಗಳನ್ನು ಹಾಗೆಯೇ ನೋಡಲು ಚಂದ . ಹಿಂದೆ ಹೇಗಿತ್ತು ಎಂಬುದನ್ನು ನೋಡುತ್ತಿದ್ದಂತೆಯೇ ತಿಳಿಸುವಂತೆ ಅಷ್ಟೇ ಸ್ವಚ್ಚವಾಗಿ ಇಟ್ಟುಕೊಂಡಿರುವುದು ಇಂಗ್ಲೆಂಡ್ . ಇದನ್ನು ಖಂಡಿತ ಮೆಚ್ಚಲೇ ಬೇಕು . ನಮ್ಮ ಭಾರತದವರಿಗೆ ಹಸಿರು , ಮರಗಿಡಗಳು , ದಟ್ಟ ಕಾಡುಗಳು  ಬಹಳಷ್ಟು ಇಷ್ಟವಾಗುತ್ತವೆ ಕಾರಣವೆಂದರೆ ನಾವು ಬೆಳೆದು ಬಂದಿರುವುದು ಅಂತಹ ಪ್ರದೇಶದಲ್ಲಿಯೇ . ಹಾಗೆ ಇಷ್ಟಪಟ್ಟು ನಾವು ಹೋದ ಸ್ಥಳವೆ ಕೆಂಟರ್ಬರಿ .

ಕೆಂಟರ್ಬರಿ ಇರುವುದು ಸೌತ್ಈಸ್ಟ್ ಇಂಗ್ಲೆಂಡ್ ನಲ್ಲಿ . ಇದನ್ನು ಕೆಥೆದ್ರಲ್ ಸಿಟಿ ಎಂದೇ ಕರೆಯುತ್ತಾರೆ . ಹೆಸರಿಗೆ ತಕ್ಕಂತೆ ಕೆಂಟರ್ಬರಿ ಕೆಥೆದ್ರಲ್ ತುಂಬಾ ಪ್ರಖ್ಯಾತಿ ಹೊಂದಿದೆ . ಮತ್ತು ನೋಡಲೇ ಬೇಕಾದ ಸ್ಥಳ ಕೂಡ . ಇದು ಕೆಂಟ್ ಎಂಬ ಪ್ರದೇಶಕ್ಕೆ ಸೇರಿದೆ . ಕೆಂಟ್ ನಲ್ಲಿ  ಕೆಂಟರ್ಬರಿ, ವಿಸ್ಟೆಬಲ್  ಮತ್ತು ಹೆರ್ನ್ ಬೇ ಎಂಬ ೩ ಸ್ಥಳಗಳು ಪ್ರವಾಸಿ ಯೋಗ್ಯ ಸ್ಥಳಗಳಾಗಿವೆ .  

ಕ್ಯಾಂಟರ್ ಬರಿ ಪೂರ್ವ ಇಂಗ್ಲೆಂಡ್ ನ ಹಳೆಯ ಕಾಲದ ನಿದರ್ಶನ ಎನ್ನಬಹುದು . ೧೧ ನೆ ಶತಮಾನದ ಇತಿಹಾಸಾವನ್ನು ಇಲ್ಲಿ ಕಾಣಬಹುದು . ಕಿಂಗ್ ಹೆನ್ರಿ ಎಬುವವರು ಇದನ್ನು ಕಟ್ಟಿದರು ಎಂದು ಹೇಳಲಾಗುತ್ತದೆ . ಕ್ಯಾಂಟರ್ ಬರಿ ಕೋಟೆ ಈಗ ಪಾಳುಬಿದ್ದ ಕೊತೆಯಾಗಿದೆ ಇದು ೧೦೭೦ ರಲ್ಲಿ ಕಲ್ಲಿನಿಂದ ಕತ್ತಲಾಗಿತ್ತು ಇಲ್ಲಿ ಈಗ ಕೇವಲ ಅರ್ಧ ಕೆಡವಿ ಬಿದ್ದ ಕೋಟೆಯನ್ನು ಕಾಣಬಹುದು . 

ಅಲ್ಲಿಯೇ ಪಕ್ಕದಲ್ಲಿ ದೊಡ್ಡದಾದ ಗಾರ್ಡನ್ ನಿರ್ಮಿಸಲಾಗಿದೆ ನೋಡಲು ಸುಂದರವಾಗಿದ್ದು ಒಳಗೆ ಕಾರಂಜಿ ಮತ್ತು ಟುಲಿಪ್ ಹೂಗಳು ಕಣ್ಮನ ಸೆಳೆಯುತ್ತವೆ . ಅಲ್ಲಿಂದ ಮುಂದೆ ನಮ್ಮ ಪ್ರಯಾಣ ಹೊರಟಿದ್ದು ಕ್ಯಾಂಟರ್ಬರಿ ಪಂಟಿಂಗ್ ಗೆ . ಇದು ಸುಮಾರು ೪೫ ನಿಮಿಷಗಳ ಕಾಲ ನೀರಿನಲ್ಲಿ ಬೋಟಿಂಗ್ ಮೂಲಕ ಕ್ಯಾಂಟರ್ಬರಿಯನ್ನು ತೊರಿಸಲಾಗುತ್ತದೆ.  ಸುತ್ತಲೂ ಹಸಿರಿನಿಂದ ಕೂಡಿದ ಈ ಸ್ಥಳ ಹಳೆಯ ಕಾಲದ ಮನೆಗಳು ಆಗಿನ ಹಳ್ಳಿ ಹೇಗಿತ್ತು ಎಂಬುದರ ಸಣ್ಣ ಮಾಹಿತಿಯನ್ನು ನೀಡಿತು . 

 ಈಗ ಸಾಕಷ್ಟು ಕಟ್ಟಡಗಳು ಅವನತಿಯ ಹಂತದಲ್ಲಿದ್ದರು ಕೂಡ ೧೧ ನೆ ಶತಮಾನದ ಇತಿಹಾಸವನ್ನು ಇಷ್ಟು ಚೆನ್ನಾಗಿ ಇಟ್ಟುಕೊಂಡಿರುವುದು ನಿಜಕ್ಕೂ ಆಶ್ಚರ್ಯವೆ ಸರಿ .  ಇಂಗ್ಲೆಂಡ್ ನಲ್ಲಿ ಸಾಮಾನ್ಯವಾಗಿ (ಕಂಟ್ರಿ ಸೈಡ್ ) ಹಸಿರಿನಿಂದ ತುಂಬಿದ ಹಳ್ಳಯಂತೆ ಭಾಸವಾಗುವ ಸ್ಥಳಗಳಿಗೆ ಹೋದರೆ ಅಲ್ಲೆಲ್ಲ ಪಂಟಿಂಗ್ (ಬೋಟಿಂಗ್) ಇದ್ದೆ ಇರುತ್ತದೆ . ಒಮ್ಮೆ ಈ ಪಂಟಿಂಗ್ ನಲ್ಲಿ ಹೋಗಿಬಂದರೆ ಇಡೀ ಹಳ್ಳಿಯನ್ನು ನೋಡಬಹುದು ಹಸಿರಿನಿಂದ ತುಂಬಿದ ಪ್ರಕೃತಿಯ ಸೊಬಗನ್ನು ಸವಿಯಬಹುದು  . 

ಕೆಂಟರ್ಬರಿ ಕೆಂಟ್ (ಕಂಟ್ರಿ ಸೈಡ್) ನಲ್ಲಿ ಬರುವ ಒಂದು ಸ್ಥಳವಷ್ಟೇ . ಇಂತಹ ಸಾಕಷ್ಟು ಹಳ್ಳಿ ಗಳು ಆಸುಪಾಸುಗಳಲ್ಲಿ ಸಾಕಷ್ಟಿದೆ .ಈಗ ಬೇಸಿಗೆಯ ಸಮಯವಾದ್ದರಿಂದ ಬೀಚ್ ಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ ಇಲ್ಲಿನ ಜನ . ವರ್ಷದ ೫ ತಿಂಗಳು ಕೊರೆಯುವ ಚಳಿಯಲ್ಲಿ ಇರಬೇಕಾದುದರಿಂದ ಮೇ ತಿಂಗಳು ಬಂತೆಂದರೆ ಸನ್ ಬಾತ್ ಗಾಳಿ ಕಾಯುತ್ತಿರುತ್ತಾರೆ. ಕೆಂಟ್ ನಲ್ಲಿರುವ ಬೀಚ್ಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ . ನೀರನ್ನು ಇಷ್ಟಪಡುವವರು ಬೇಕಾದಷ್ಟು ಆಟವಾಡಲು ಇದೊಂದು ಒಳ್ಳೆ ಅವಕಾಶ . ಕೆಂಟರ್ಬರಿ ಇಂದ ಸುಮಾರು ಅರ್ಧಗಂಟೆ ಬಸ್ ನಲ್ಲಿ ಪ್ರಯಾಣಿಸಿದರೆ ವಿಸ್ತೆಬಲ್ ಎಂಬ ಹಳ್ಳಿಯಿದೆ ಇಲ್ಲಿಯಾ ದೊಡ್ಡ ಬೀಚ್ ಪ್ರಸಿದ್ಧಿ ಹೊಂದಿದೆ . ಬೇಸಿಗೆ ಬಿಸಿಲಿಗೆ ಜನ ಬೀಚ್ ನಲ್ಲಿ ಸನ್ ಬಾತ್ ಗೆ ತಯಾರಾಗಿದ್ದರು . 




ಒಟ್ಟಾರೆಯಾಗಿ ಕೆಂಟರ್ಬರಿ ಇಂಗ್ಲೆಂಡ್ ನ ಇತಿಹಾಸಕ್ಕೊಂದು ಮಾದರಿಯಂತಿದೆ . ಹಸಿರು , ಹೂವು , ಬೀಚ್ ಗಳು ಮನಸ್ಸಿಗೆ ಉಲ್ಲಾಸ ತುಂಬಿತು . 


No comments:

Post a Comment