Monday 6 May 2013

ಇದು ಇಂಗ್ಲೆಂಡ್ ನ ತಿರುಪತಿ

This article is published in vijayakarnataka on 4/05/13


ತಿರುಪತಿಯ ಬಾಲಾಜಿ ಎಂದರೆ ಎಲ್ಲರ ಮೆಚ್ಚಿನ ದೇವರು , ಸಂಕಟ ಬಂದಾಗ ವೆಂಕಟರಮಣ ಎಂಬ ಮಾತಿದೆ ಹಾಗೆ
ಕಷ್ಟ ಕಾಲದಲ್ಲೆಲ್ಲ್ಲ ನೆನಪಿಸಿಕೊಳ್ಳುವುದು ನಮ್ಮ ತಿರುಪತಿಯ ವೆಂಕಟರಮಣ ನನ್ನು . ತಿರುಪತಿ ಗೆ ಜೀವನದಲ್ಲಿ ಒಮ್ಮೆಯಾದರೂ  ಹೋಗಬೇಕು ಎಂಬ ಕನಸು ಬಹಳಷ್ಟು ಜನರದಾಗಿರುತ್ತದೆ ಹಾಗೆ ತಿರುಪತಿಗೆ ಹೋದರೆ ಅಂದುಕೊಂಡಿರುವುದೆಲ್ಲ ಆಗುತ್ತದೆ ಎಂಬುದು ಎಲ್ಲರ ಅನಿಸಿಕೆ ಕೂಡ .  ಇಂಗ್ಲೆಂಡಿನಲ್ಲಿ ಸಾಕಷ್ಟು ಭಾರತೀಯರಿದ್ದಾರೆ ಅವರೆಲ್ಲರ ತಿರುಪತಿ ಗೆ ಹೋಗುವ ಕನಸು ಈಡೇರಿಸಲು ಇಂಗ್ಲೆಂಡ್ ನಲ್ಲು ಕೂಡ ಒಂದು ಬಾಲಾಜಿ ದೇವಸ್ಥಾನವಿದೆ . ಇಂಗ್ಲೆಂಡ್ ನಲ್ಲಿ ನೆಲಸಿರುವ ಜನರಿಗೆ ಇದೇ ತಿರುಪತಿ . 
ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ಎಂಬಲ್ಲಿ ವೆಂಕಟರಮಣನ ದೇವಸ್ಥಾನವಿದೆ . ಇದು ಇಂಗ್ಲೆಂಡ್ ನ ಮಧ್ಯಭಾಗದಲ್ಲಿ ಬರುತ್ತದೆ. ಲಂಡನ್ ನಿಂದ ಟ್ರೈನ್ ನಲ್ಲಿ ಸುಮಾರು ೨ ತಾಸಿನ ಪ್ರಯಾಣ . ಇದು ಇಂಗ್ಲೆಂಡ್ ನ ಅತಿ ದೊಡ್ಡ ದೇವಸ್ಥನವಾಗಿದ್ದು ನೋಡಲು  ಸಹ ತಿರುಪತಿ ದೇವಸ್ಥಾನ ದ ರೀತಿಯೇ ಇದೆ. ಬರ್ಮಿಂಗ್ ಹ್ಯಾಮ್ ನಿಂದ ೧ ಗಂಟೆಗಳ ಕಾಲ ಬಸ್ ನಲ್ಲಿ ಹೋಗಬೇಕು . ಇದು ಸ್ವಲ್ಪ ಹಳ್ಳಿಯನ್ತಿರುವ  ಪ್ರದೇಶದಲ್ಲಿ ನಿರ್ಮಿಸಲಾಗಿದೆ . ಗುಡ್ಡದ ಮೇಲೆ ದೇವಸ್ಥಾನವನ್ನು ನಿರ್ಮಿಸಲಾಗಿದೆ . ವಿಶಾಲವಾದ ಜಾಗವನ್ನು ಹೊಂದಿದ ಈ ದೇವಸ್ಥಾನದಲ್ಲಿ ವೆಂಕಟರಮಣ ಮುಖ್ಯ ದೇವರು ಜೊತೆಗೆ ಹನುವಂತ,ಗಣಪತಿ, ನವಗ್ರಹ , ಲಕ್ಷ್ಮಿ ದೇವಿ ಗಳ ಮೂರ್ತಿ ಗಳನ್ನೂ ಕಾಣಬಹುದು . ಆದರೆ ಎಲ್ಲ ದೇವಸ್ಥಾನಗಳಂತೆ ಇಲ್ಲೂ ಕೂಡ ಛಾಯಾಚಿತ್ರ ತೆಗೆಯುವುದನ್ನು ನಿಷೇದಿಸಲಾಗಿದೆ . 

ಇಲ್ಲಿ ಹೋಗಲು ಎಲ್ಲ ದಿನಗಳು ಕೂಡ ಪಸಕ್ತ ದಿನಗಳೇ ವರ್ಷದ ೩೬ ೫  ದಿನಗಳು ಕೂಡ ಇದು ತೆರೆದಿರುತ್ತದೆ. ಮತ್ತು ಸದಾ ಬಕ್ತಾದಿಗಳಿಂದ ತುಮ್ಬಿರುತ್ತದೆ. ಉತ್ತರ ಭಾರತ ದಕ್ಷಿಣ ಭಾರತದ ಸಾಕಷ್ಟು ಭಕ್ತಾದಿಗಳನ್ನು ಪ್ರತಿದಿನ ಕಾಣಬಹುದು . ಜೊತೆಗೆ ಪ್ರತಿ ದಿನ ಅನ್ನಸಂತರ್ಪಣೆ ವ್ಯವಸ್ಥೆ ಕೂಡ ಮಾದಲಾಗಿದೆ. ವಿಶೇಷ ಹಬ್ಬದ ದಿನಗಳಲ್ಲಿ ಸಾವಿರಾರು ಜನರಿಗೆ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಆಂದ್ರ ಸ್ಟೈಲ್ ಅಡುಗೆ ಮಾಡ ಲಾಗುತ್ತದೆ. 

ತಿರುಪತಿ ಯಲ್ಲಿ ದೊರೆಯುವಂತೆ ಇಲ್ಲೂ ಕೂಡ ಲಾಡು ದೊರೆಯುತ್ತದೆ. ವಿವಿಧ ರೀತಿಯ ಪೂಜೆ ಮಾದುವ ಅವಕಾಶವಿದೆ ಅದರೊಂದಿಗೆ ತಿರುಪತಿಯ ಲಾಡನ್ನು ಕೂಡ ನೀಡಲಾಗುತ್ತದೆ .ಹೆಚ್ಚು ಬೇಕಾದಲ್ಲಿ ಕೊಂಡುಕೊಳ್ಳಬಹುದು .  ಪ್ರತಿ ದಿನ ಸಾವಿರಾರು ಲಾಡುಗಳು ಸೇಲ್ ಆಗುತ್ತದೆ . ವಿವಿದ ರೀತಿಯ ಪೂಜೆಗಳನ್ನು ಕೂಡ ಮಾಡಲಾಗುತ್ತದೆ. ಮದ್ಯಾನ್ಹ 1 2 ಗಂಟೆಗೆ ಮಹಾಮಂಗಳಾರತಿ ಮಾಡಲಾಗುತ್ತದೆ . ಅದಲ್ಲದೆ ಸಂಜೆ ೪ ಗಂಟೆಗೆ ಪುನಃ ಅರ್ಚನೆ ಮಾಡಲಾಗುತ್ತದೆ. ಮದ್ಯಾನ್ಹ 1 ರಿಂದ ಊಟದ ವ್ಯವಸ್ಥೆ ಪ್ರತ್ಯೇಕ ಕೊನೆಯಲ್ಲಿ ಮಾಡಲಾಗಿದ್ದು ೩ ಗಂಟೆಯವರೆಗೂ ಉದ್ದವಾದ ಕ್ಯು ಇರುತ್ತದೆ. 

 ತಿರುಪತಿಯಲ್ಲಿ ೨ ನಿಮಿಷದಲ್ಲಿ ವೆಂಕಟರಮಣನ ದರ್ಶನ ಮಾಡಿಕೊಂಡು ಮುಂದೆ ಹೋಗಬೇಕಾಗಬಹುದು ಆದರೆ ಇಲ್ಲಿ ೨ ಗಂಟೆ ಬೇಕಾದರೂ ಅಲ್ಲೇ ಕುಳಿತುಕೊಳ್ಳುವ ಅವಕಾಶವಿರುತ್ತದೆ. ಜೊತೆಗೆ ಸತ್ಯನಾರಾಯಣ ಪೂಜೆ ಇನ್ನಿತರ ಪೂಜೆಗಳನ್ನು ಕೂಡ ಅಲ್ಲೇ ಮಾಡಿಸ ಲಾಗುತ್ತದೆ . ಲಂಡನ್ ನಿಂದ ಮಿಡ್ ಲ್ಯಾಂಡ್ ಮತ್ತು ವರ್ಜೀನಿಯಾ ಟ್ರೈನ್ ಗಳು ಬಿರ್ಮಿಂಗ್ ಹ್ಯಾಮ್ ಗೆ ಹೊಗುತ್ತದೆ.


ಅರ್ಪಿತಾ ಹರ್ಷ 
ಲಂಡನ್

No comments:

Post a Comment