Thursday 14 June 2012

ನೆರೆಹೊರೆಯವರೊಂದಿಗಿನ ಸಲುಗೆಗೆ ಮಿತಿ ಇರಲಿ

ಸ್ವಂತ ಮನೆಯಿಲ್ಲದವರಿಗೆ ಎಷ್ಟೋ ಭಾರಿ ತಕ್ಷಣಕ್ಕೆ ಬೇರೆ ಮನೆಯೊಂದಕ್ಕೆ ಶಿಫ್ಟ್ ಆಗುವ ಅನಿವಾರ್ಯತೆ ಬಂದೊದಗುತ್ತದೆ . ಹಲವಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ವಾಸವಾಗಿದ್ದು ಬೇರೆ ಸ್ಥಳಕ್ಕೆ ಹೋಗಬೇಕಾದಾಗ ಎಲ್ಲವೂ ಹೊಸದು. ಪರಿಚಯವಾದ ಹಲವಾರು ಸ್ನೇಹಿತರು ದೂರವಾಗುವುದು ಅನಿವಾರ್ಯವಾಗುತ್ತದೆ.ಹೊಸ ಮನೆ ಹೊಸ ಜಾಗಗಳಿಗೆ ಹೋಗಬೇಕಾಗುವುದು ಅನಿವಾರ್ಯ ಆದರೆ ಹೋದ ಬಳಿಕ ಜಾಗರೂಕರಾಗಿರಬೇಕು . ಹೊಸ ಜಾಗಗಳಿಗೆ ಹೋದಮೇಲೆ ಹೊಸ ಪರಿಚಯ ಆಗಲೇ ಬೇಕು . ಅದರಲ್ಲೂ ಮನೆಯಲ್ಲಿಯೇ ಇರುವ ಮಹಿಳೆಯರಿಗೆ ಜೊತೆಗಾರರು ಬೇಕೇ ಬೇಕು . ಅಕ್ಕ -ಪಕ್ಕ ಇರುವವರ ಪರಿಚಯ ಮಾಡಿಕೊಳ್ಳಬೇಕಾಗುತ್ತದೆ . ಒಂಟಿಯಾಗಿ ಇರುವ ಸಂದರ್ಭಗಳು ಬಂದಾಗ ಪರಿಚಯದವರು ಅಕ್ಕಪಕ್ಕದಲ್ಲಿದ್ದಾರೆ ಎಂದರೆ ಏನೋ ಒಂದು ರೀತಿಯ ಧೈರ್ಯ . ದಿನದಲ್ಲಿ ಕೆಲವು ಕ್ಷಣ ಗಳನ್ನಾದರು
ಮಾತನಾಡುತ್ತ ಕಳೆಯಬಹುದು ಮನಸ್ಸನ್ನು ಫ್ರೆಶ್ ಮಾಡಿಕೊಳ್ಳಬಹುದು .
ಆದರೆ ಹೀಗೆ ಅಪರಿಚಿತರನ್ನು ಪರಿಚಯ ಮಾಡಿಕೊಳ್ಳುವಲ್ಲಿ ಎಚ್ಚರವಿರಬೇಕು . ಸ್ನೇಹಿತರನ್ನಾಗಿ ಮಾಡಿಕೊಳ್ಳುವುದು ಹೆಚ್ಚು ಹೊತ್ತಿನ ಕೆಲಸವಲ್ಲ. ಆದರೆ ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಕಷ್ಟದ ಕೆಲಸ. ಎಲ್ಲರ ಮನೋಭಿಪ್ರಾಯಗಳು ಒಂದೇ ರೀತಿಯಾಗಿ ಇರುವುದಿಲ್ಲ. ಕೆಲವೊಮ್ಮೆ ಗುರುತು ಪರಿಚಯ ಇಲ್ಲದವರು ಬೇಗ ಸ್ನೇಹಿತರಾಗುತ್ತಾರೆ ಇನ್ನು ಕೆಲವೊಮ್ಮೆ ಅನುಮಾನಸ್ಪದವಾಗಿ ವರ್ತಿಸುತ್ತಾರೆ. ದಿನ ಕಳೆಯಲು ಒಂದು ಸಾಥ್ ಬೇಕು ನಿಜ .ಆದರೆ ಈಗಿನ ಕಾಲದಲ್ಲಿ ಸ್ನೇಹಿತರನ್ನು ಮಾಡಿಕೊಲ್ಲುವಾಗ ಕೂಡ ಬಹಳಷ್ಟು ಎಚ್ಚರಿಕೆ ಇಟ್ಟಿರುವುದು ಒಳ್ಳೆಯದು.
ನೆರೆಹೊರೆಯವರೊಂದಿಗೆ ಸಂಪರ್ಕ ಬೆಳೆಸುವ ಮುನ್ನ ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು .
1.ದಿನವನ್ನು ಒಳ್ಳೆಯ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಹರಟೆ ಹೊಡೆಯುವುದು ಮನೆಯ ವಿಷಯಗಳನ್ನು ಇತರರೊಂದಿಗೆ ಹೇಳಿಕೊಳ್ಳುವುದು ಮಾಡುವುದರಿಂದ ಯಾವುದೇ ರೀತಿಯ ಪ್ರಯೋಜನವಿಲ್ಲ ಕಷ್ಟದಲ್ಲಿ ಸಾಂತ್ವನ ಅಥವಾ ಕನಿಕರದ ಮಾತನಾಡಬಹುದು ಆದರೆ ನಮ್ಮ ಸಮಸ್ಯೆಗಳಿಗೆ ನಾವೇ ಉತ್ತರ ಕಂಡುಕೊಳ್ಳಬೇಕು. 
2.ದಿನದ ಕೆಲವಷ್ಟು ಗಂಟೆಗಳನ್ನು ಪುಸ್ತಕ ಓದುವುದು ಅಥವಾ ಬರವಣಿಗೆ ಅಥವಾ ಕಸೂತಿ ಹೀಗೆ ಸದುಪಯೋಗಪಡಿಸಿಕೊಂಡರೆ ಬೇಸರವೆನಿಸುವುದಿಲ್ಲ . ಜೊತೆಗೆ ದಿನದಲ್ಲಿ ಒಂದಾದರು ಒಳ್ಳೆಯ ಕೆಲಸ ಮಾಡಿದ್ದರ ಸಂತೋಷ ಸಿಗುತ್ತದೆ.
 3.ಅಕ್ಕಪಕ್ಕದವರೊಂದಿಗೆ ಹೆಚ್ಚು ಸಲಿಗೆ ಬೇಡ.
4.ಆದಷ್ಟು ಕುಶಲೋಪರಿ ಮತ್ತು ಲೋಕಾಭಿರಾಮ ವಿಷಯಗಳನ್ನು ಮಾತ್ರ ಮಾತನಾಡುವುದು ಸೂಕ್ತ.
ಮನೆಯ ಒಳಗಿನ  ವಿಷಯಗಳನ್ನು ಹೇಳುವುದು ಮತ್ತು ಅವರ ಮನೆಯ ವಿಷಯಗಳನ್ನು 
ಕೇಳುವುದು ಎರಡು ಹಿತಕರವಲ್ಲ. ಸಣ್ಣ ವಿಷಯಗಳು ಬಿನ್ನಭಿಪ್ರಾಯ ತಂದಿಡಬಹುದು.
5.ಎಲ್ಲರಿಗೂ ಹೆಚ್ಚು ಸಲುಗೆ ಕೊಡಬಾರದು. ಒಂದು ಎರಡು ಜನರನ್ನು ಮಾತ್ರ ಸ್ನೇಹಿತರನ್ನಾಗಿ ಮಾಡಿಕೊಂಡರೆ ಉತ್ತಮ.
ಒಟ್ಟಾರೆಯಾಗಿ ಅಕ್ಕಪಕ್ಕದವರು ಜೊತೆಗೆ ಬೇಕು ನಿಜ ಅವರೊಂದಿಗೆ ಸಂಪರ್ಕದಲ್ಲಿರುವುದರಲ್ಲಿ ತಪ್ಪಿಲ್ಲ ಆದರೆ ಅವರ ವ್ಯಕ್ತಿತ್ವವನ್ನು ಮೊದಲು ಅರಿತು ನಂತರ ಗಾಢ ಸ್ನೇಹ ಮಾಡಿಕೊಳ್ಳುವುದು ಉತ್ತಮ ಇಲ್ಲವಾದಲ್ಲಿ ನೆರೆ ನಿಜವಾದ ಹೊರೆಯಾಗಿಬಿದಬಹುದು .


ಅರ್ಪಿತಾ ಹರ್ಷ .

No comments:

Post a Comment