Monday 6 February 2012

ಗುಲಾಬಿ ಹೂವಿಗಾಗಿ ಕಾದುಕುಳಿತಿರುವ ಜೀವದ ಗೆಳತಿ

ಈ ನನ್ನ ಲೇಖನವು ದಟ್ಸ್ ಕನ್ನಡ ದಲ್ಲಿ ಪ್ರಕಟಗೊಂಡಿದೆhttp://kannada.boldsky.com/relationship/2012/02/0206-will-you-again-present-me-rose-on-vday-aid0038.html


ಜೀವದ ಒಡೆಯ,

ಕಳೆದ ದಿನಗಳ ಮೆಲುಕು ಎಂದೆಂದು ಅದ್ಬುತ. ಸ್ನೇಹ ಪ್ರೀತಿಯಾಗಿ ಹೊರಹೊಮ್ಮುವಾಗ ಆಗುವ ಆನಂದ ಬಣ್ಣಿಸಲು ಅಸಾದ್ಯ. ನಿನ್ನೊಡನೆ ಕಳೆದ ನೆನಪುಗಳು ಸುಂದರ ಅತಿಸುಂದರ. ಮೊದಲ ಭೇಟಿಯಲ್ಲೇ ಕಣ್ಣ ಸೆಳೆದ ನೀನು ಕಣ್ಣಲ್ಲೇ ಒಪ್ಪಿಗೆ ಸೂಸಿದಾಗ ಮನ ಸಂತೋಷದಿಂದ ಕುಣಿದಿತ್ತು. ನೀ ಕೈಗಿತ್ತ ಆ ಗುಲಾಬಿ ಇಂದು ನನ್ನ ಮುಡಿ ಸೇರಿ ನಗುತ್ತಿದೆ. ಮೊದಲ ಪ್ರೇಮಿಗಳ ದಿನದಂದು ಕಳುಹಿಸಿದ ಆ ಹದಿನೆಂಟು ಕೆಂಪು ಗುಲಾಬಿ ನೋಡಿದಷ್ಟು ಮತ್ತೆ ಮತ್ತೆ ನೋಡಬೇಕೆಂಬ ಹಂಬಲ ತರಿಸಿತ್ತು.

ನೆನಪಿದೆಯ ಗೆಳೆಯ ಅದೇ ಮೊದಲ ಬಾರಿ ನಾನು ನಿಮ್ಮನ್ನು ಭೇಟಿ ಮಾಡಿದಾಗ ಸಮಯ ಕಳೆದುದೇ ತಿಳಿಯದಂತೆ ಹರಟಿದ್ದೆವು. ಆ ದಿನ ನಿಮ್ಮ ಪ್ರತಿ ಮಾತು ಅರ್ಥಪೂರ್ಣವಾಗಿದ್ದವು. ನನ್ನ ಮನ ತಟ್ಟುವಂತೆ ನಿಮ್ಮ ಮಾತಿನಿಂದಲೇ ನನ್ನ ಮೋಡಿ ಮಾಡಿದ್ದಿರಿ. ಮೊದಲ ಭಾರಿಯ ಪ್ರೇಮಿಗಳ ದಿನದಂದು ಬೆಳಗಿನ ಮುಂಜಾವಿನಲಿ ಎದುರು ಬಂದು ನಿಂತು ಕೆಂಪು ಗುಲಾಬಿಯನ್ನು ಕೈಗಿತ್ತಾಗ ಸ್ವರ್ಗಕ್ಕೆ ಮೂರೇ ಗೇಣು ಎಂಬ ನುಡಿ ಮನದಲ್ಲೊಮ್ಮೆ ಮಿಂಚಿತ್ತು.

ಆ ದಿನ ನನ್ನ ಜೀವನದ ಅತ್ಯಂತ ಸಂತೋಷದ ದಿನವಾಗಿತ್ತು. ಅಂದಿನಿಂದ ನನ್ನ ಎಲ್ಲ ಕ್ಷಣಗಳು ಸಂತೋಷವಾಗಿರುವಂತೆ ನೋಡಿಕೊಂಡ ನಿನಗೆ ನನ್ನ ಒಲವೆ ಕಾಣಿಕೆ. ಆ ಪ್ರೇಮಿಗಳ ದಿನದಂದು ಪ್ರಾರಂಭವಾದ ನಮ್ಮ ಜೀವನ ಪ್ರತಿದಿನವೂ ಪ್ರೆಮಿಗಳ ದಿನದಂತೆಯೇ ಸಾಗುತ್ತಿದೆ. ಆದರೂ ನಮ್ಮಿಬ್ಬರ ಆ ಮೊದಲ ಬಾರಿಯ ಪ್ರೇಮಿಗಳ ದಿನ ಎಂದೆಂದಿಗೂ ಹಚ್ಚ ಹಸಿರು. ನೀ ಕೊಟ್ಟ ಆ ಗುಲಾಬಿ ಹೂಗಳ ಎಸಳುಗಳು ನನ್ನ ಡೈರಿಯ ಒಂದೊಂದು ಪುಟದಲ್ಲೂ ನೆನಪುಗಳ ಸರಮಾಲೆಯಾಗಿ ಬೆಚ್ಚಗೆ ಕುಳಿತಿವೆ.

ಮತ್ತೆ ಈ ವರುಷದ ಪ್ರೇಮಿಗಳ ದಿನ ಸನಿಹ ಬಂದಿದೆ. ನಿನ್ನ ಆ ಕೆಂಪು ಗುಲಾಬಿಗಾಗಿ ಕಾಯುತ್ತಾ ಕುಳಿತಿರುವೆ.


No comments:

Post a Comment