Monday 11 February 2013

ಲಂಡನ್ ನ ಟಾಪ್ 10 ಪ್ರವಾಸಿತಾಣಗಳು




ಲಂಡನ್ ನಲ್ಲಿ ನೋಡಲು ಸಾಕಷ್ಟು ಸ್ಥಳಗಳಿವೆ ಹಾಗೆಯೇ ಲಂಡನ್ ನ ಸುತ್ತಮುತ್ತ ಕೂಡ ಪ್ರವಾಸಿಗರನ್ನು ಕೈಬೀಸಿ ಕರೆಯುವ ಹಲವಾರು ಪ್ರವಾಸಿ ತಾಣಗಳು ಇವೆ . ಹೊರದೇಶಗಳಿಂದ ಕೂಡ ಲಂಡನ್ ಅನ್ನು ನೋಡಲು ಸಾಕಷ್ಟು ಜನ ಬರುತ್ತಾರೆ . ಆದರೆ ಯಾವ ಪ್ರವಾಸಿ ತಾಣವನ್ನು ನೋಡಬೇಕು ಎಂಬುದು ಗೊಂದಲದ ವಿಷಯವಾಗಬಹುದು .ಕೆಲವೊಮ್ಮೆ ಸಮಯದ ಅಭಾವವು ಇರಬಹುದಾದ ಕಾರಣಗಳಿಂದ ಎಲ್ಲವನ್ನು ನೋಡಲು ಆಗದಿದ್ದರೂ ಕೂಡ ಲಂಡನ್ ನಲ್ಲಿ ತಪ್ಪದೆ ನೋಡಬೇಕಾದ ಟಾಪ್ ಹತ್ತು ಪ್ರವಾಸಿತಾನಗಳ ಬಗ್ಗೆ ಸಣ್ಣ ಮಾಹಿತಿ :

1. ಟವರ್ ಬ್ರಿಡ್ಜ್ : ಇದನ್ನು ಲಂಡನ್ ಬ್ರಿಡ್ಜ್ ಎಂದು ಕೂಡ ಕರೆಯುತ್ತಾರೆ . ಇದು ಲಂಡನ್ ನ ಮೊದಲ ಆಕರ್ಷಣೆ. ಲಂಡನ್ ಎಂದ ಕೂಡಲೇ ಜನ ನೆನಪಿಸಿಕೊಳ್ಳುವುದು ಲಂಡನ್ ಬ್ರಿಡ್ಜ್ (ಟವರ್ ಬ್ರಿಡ್ಜ್ ) ಇದು ಜಗತ್ಪ್ರಸಿದ್ದಿ ಹೊಂದಿದೆ .ಇದನ್ನು ಥೇಮ್ಸ್ ನದಿಗೆ ಕಟ್ಟಲಾಗಿದೆ .ಇದರ ಉದ್ದ 244 ಮೀಟರ್ ಇದರ ಮೇಲೆ ಎಲ್ಲ ವಾಹನಗಳು ಓಡಾಡುವುದು ಇದರ ವಿಶೇಷ ಜೊತೆಗೆ ಇಲ್ಲಿ ನಡೆದುಕೊಂಡು ಹೋಗಲು ಕೂಡ ಅವಕಾಶವಿದೆ (ವಾಕಿಂಗ್ ಪಾತ್ ಇದೆ ) . ಇದು ಥೇಮ್ಸ್ ನದಿಯಿಂದ ಹಡಗುಗಳು ಬಂದಾಗ 2 ಭಾಗವಾಗಿ ವಿಭಾಗ ಹೊಂದುವುದು ಇದರ ವಿಶೇಷ .

2. ಲಂಡನ್ ಐ : ಹೆಸರೇ ಹೇಳುವಂತೆ ಇದು ನೋಡಲು ಕಣ್ಣಿನ ಆಕಾರದಲ್ಲಿದೆ . ಇದನ್ನು 2000 ಇಸವಿಯಲ್ಲಿ ಪ್ರಾರಂಭಿಸಲಾಯಿತು .ಇದು ಕೂಡ ಥೇಮ್ಸ್ ನದಿಯ ದಡದಲ್ಲಿದೆ. 135 ಅಡಿ ಎತ್ತರದಲ್ಲಿದೆ . ಇದರಲ್ಲಿ 25 ಕಣ್ಣಿನ ಆಕಾರದ ಬುಟ್ಟಿಗಳಿವೆ . ಬಹಳ ನಿಧಾನವಾಗಿ ಚಲಿಸುವ ಇದು ಹತ್ತಿರದ ಎಲ್ಲ ಆಕರ್ಷಣೀಯ ಸ್ಥಳಗಳನ್ನು ಎತ್ತರದಿಂದ ನೋಡುವ ಅವಕಾಶ ನೀಡುತ್ತದೆ .

3. ಮೇಡಂ ತುಸ್ಸಾಡ್ಸ್  : ಇದು ಮೇಣ ದಿಂದ  ಮಾಡಿದ ದೊಡ್ಡ ವ್ಯಕ್ತಿಗಳ ವಸ್ತುಸಂಗ್ರಹಾಲಯ . ಜಗತ್ತಿನ ಖ್ಯಾತ ವ್ಯಕ್ತಿಗಳ ಮತ್ತು ಸೆಲೆಬ್ರಿಟಿ ಗಳ ವ್ಯಾಕ್ಸ್ ಕೆತ್ತನೆ ಇಲ್ಲಿವೆ ಇದರಲ್ಲಿ ನಮ್ಮ ದೇಶದ ಮಹಾತ್ಮಾ ಗಾಂಧೀ, ಇಂದಿರಾ ಗಾಂಧಿ, ಸಚಿನ್ ತೆಂಡೂಲ್ಕರ್, ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಹೃತಿಕ್ ರೋಶನ್, ಐಶ್ವರ್ಯ ರೈ , ಸಲ್ಮಾನ್ ಖಾನ್, ಮತ್ತು ಇತ್ತೀಚಿಗೆ ಕರೀನಾ ಕಪೂರ್ ಮತ್ತು ಮದುರಿ ದೀಕ್ಷಿತ್ ವ್ಯಾಕ್ಸ್ ಆಕೃತಿಗಳನ್ನು ಕೂಡ ಕೆತ್ತಲಾಗಿದೆ . ಇದನ್ನು ತುಸ್ಸಾದ್ ಎಂಬುವವರು ಪ್ರಾರಂಭಿಸಿದ್ದರಿಂದ ಮೇಡಂ ತುಸ್ಸಾದ್ ಎಂಬ ಹೆಸರನ್ನು ಇಡಲಾಗಿದೆ . ಸುಮಾರು 2 ಗಂಟೆಗಳ ಕಾಲ ನೋಡಬಹುದಾದ ಅತಿ ದೊಡ್ಡ ಸಂಗ್ರಹಾಲಯ ಇದಾಗಿದ್ದು ಮನಸ್ಸಿಗೆ ಮುದ ನೀಡುವುದು ಖಂಡಿತ .

4. ಗ್ರೀನ್ ವಿಚ್ ಮೆರಿಡಿಯನ್ : ಇಲ್ಲಿ ಹೋಗುವಾಗ ಕ್ರೂಸ್ ನಲ್ಲಿ ಹೋಗಬಹುದು ಆಗ ಕೂಡ ಸಾಕಷ್ಟು ಪ್ರವಾಸಿ ತಾಣಗಳ ಬಗ್ಗೆ ತೋರಿಸಿಕೊಂಡು ಹೋಗಲಾಗುತ್ತದೆ . ಇದು ರಿವರ್ ಥೇಮ್ಸ್ ನಲ್ಲಿ ಒಂದು ಸುತ್ತಿ ಸುತ್ತಿಸಿ ಅಲ್ಲೇ ಥೇಮ್ಸ್ ನದಿಗೆ ಕಟ್ಟಲಾದ ಬ್ಯಾರಿಯರ್ ನ ಬಗ್ಗೆ ಕೂಡ ಮಾಹಿತಿಯನ್ನು ನೀಡಿ ನಂತರ ಗ್ರೀನ್ ವಿಚ್ ತಲುಪಿಸುತ್ತದೆ . ಜಗತ್ತಿನ ಸಮಯ ಪ್ರಾರಂಭವಾಗುವುದೇ ಈ ಗ್ರೀನ್ವಿಚ್ ನ ಮೆರಿಡಿಯನ್ ನಿಂದ ಇಲ್ಲಿ ಅಕ್ಷಾಂಶ ಮತ್ತು ರೆಖಾಂಕ್ಷ ಗಳಾಗಿ ವಿಭಾಗ ಹೊಂದಿದ  ಗೆರೆಗಳು ಕೂಡ ನೋಡಬಹುದು . 


5. ಬ್ರಿಟಿಷ್ ಮ್ಯೂಸಿಯಂ : ಇದು ಅತಿ ದೊಡ್ಡ ವಸ್ತು ಸಂಗ್ರಹಾಲಯ ಇಲ್ಲಿ ಪ್ರಪಂಚದ ಎಲ್ಲ ದೇಶಗಳಿಂದ ತಂದ ಬೆಲೆಬಾಳುವ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ .  ಬ್ರಿಟೀಷರು ಬೇರೆ ಬೇರೆ ದೇಶಗಳಿಗೆ ಹೋದಾಗ ಸಿಕ್ಕ ಎಲ್ಲ ಸಂಗ್ರಹ ಗಳನ್ನೂ ಇಲ್ಲಿ ಕಾಣಬಹುದು ಇದನ್ನು ಸಂಪೂರ್ಣವಾಗಿ ನೋಡಲು 3 ದಿನವಾದರೂ ಬೇಕು .1759 ರಿಂದ ಇದನ್ನು ಪ್ರವಾಸಿಗರಿಗೋಸ್ಕರ ತೆರೆಯಲಾಯಿತು .ಅವರು ನೀಡುವ ಮಾಹಿತಿ ಪ್ರಕಾರ ಇಲ್ಲಿ ಹೆಚ್ಚು ಕಡಿಮೆ 800 ಮಿಲಿಯನ್ ನಷ್ಟು ವಸ್ತುಗಳ ಸಂಗ್ರಹವಿದೆ .ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ವರೆಗೆ ತೆರೆದಿರುವುದರ ಜೊತೆಗೆ ಇದು ಫ್ರೀ ಯಾಗಿ ನೋಡಿ ಬರಬಹುದಾದ ವಸ್ತುಸಂಗ್ರಹಾಲಯ .

6. ಸೆಂಟ್ ಪೌಲ್ ಕ್ಯಾಥೆಡ್ರಾಲ್ : ಇದು ಒಂದು ಅತ್ಯಂತ ಪುರಾತನ ಚರ್ಚ್ . ಇದರ ಎತ್ತರ ೩೬೫ ಅಡಿ  ನಷ್ಟು . ಇದನ್ನು ಹತ್ತಿ ಮೇಲೆ ನಿಂತು ಲಂಡನ್ ಅನ್ನು ನೋಡುವ ಸೊಗಸೇ ಬೇರೆ ಅದನ್ನು ನೋಡಿಯೇ ಆನಂದಿಸಬೇಕು . ಆದ್ದರಿಂದಲೇ ಇದು ಲಂಡನ್ ನ ಅತಿ ಮುಖ್ಯ ಆಕರ್ಷನೀಯತೆ ಗಳಲ್ಲಿ .ಒಂದಾಗಿದೆ .

7.ಬಿಗ್ ಬೆನ್   :ಲಂಡನ್ ಎಂದ ತಕ್ಷಣ ಮೊದಲು ನೆನಪಿಗೆ ಬರುವುದು ಲಂಡನ್ ಬ್ರಿದ್ಜ್  ಆದರೆ ನಂತರ ನೆನಪಿಗೆ ಬರುವುದು ಬಿಗ್ ಬೆನ್. ಇದು ಒಂದು ಕ್ಲಾಕ್ ಟವರ್ . ಇದನ್ನು ಎಲಿಜಬೆತ್ ಟವರ್ ಎಂದು ಕೂಡ ಕರೆಯುತ್ತಾರೆ . ಇದನ್ನು ೧೮೫೮ ರಲ್ಲಿ ಕತ್ತಲಾಯಿತು. ಇಂದು ಇದು ಲಂಡನ್ ಮತ್ತು ಇಡೀ ಇಂಗ್ಲೆಂಡಿನ ಆಕರ್ಷಣೆ ಆಗಿದೆ .ಪ್ರತಿ ಅರ್ಧ ಗಂಟೆಗೊಮ್ಮೆ ಇದು ಬೆಲ್ ಹೊಡೆದುಕೊಳ್ಳುತ್ತದೆ . ಲಂಡನ್ ನಲ್ಲಿ ಪ್ರತಿ ಹೊಸ ವರ್ಷದ ದಿನ ಅಂದರೆ ಡಿಸೆಂಬರ್ ೩೧ ರ ಮಧ್ಯರಾತ್ರಿ ೧೨ ಗಂಟೆಗೆ ಪಟಾಕಿಗಳ ಉತ್ಸವವೇ ನಡೆಯುತ್ತದೆ . ಆ ೧೨ ಗಂಟೆ ಈ ಬಿಗ್  ಬೆನ್ ನಲ್ಲಿ ಅಲ್ಲಿ ನೆರೆದಿರುವ ಲಕ್ಷಗಟ್ಟಲೆ ಜನರಿಗೆ ಕೇಳಿಸುವಷ್ಟು ಜೋರಾಗಿ ಹೊಡೆದುಕೊಳ್ಳುತ್ತದೆ  ಇದೇ  ಆ ಗಡಿಯಾರದ ವಿಶೇಷ .  

8.ಬಕ್ಕಿಂಗ್ ಹ್ಯಾಮ್ ಅರಮನೆ /ಬಕ್ಕಿಂಗ್ ಹ್ಯಾಮ್ ಪ್ಯಾಲೇಸ್ : ಇದು ರಾಯಲ್ ಕುಟುಂಬದವರು ಇರುವ ಸ್ಥಳ .೧೭೦೫ ರಲ್ಲಿ ಇದನ್ನು ಕಟ್ಟಲಾಯಿತು .ಇದನ್ನು ವರ್ಷದ ಕೆಲವಷ್ಟು ದಿನಗಳಲ್ಲಿ ಮಾತ್ರ ನೋಡುಗರಿಗೆ ಒಳಭಾಗವನ್ನು ನೋಡುವ ಅವಕಾಶ ಒದಗಿಸಿ ಕೊಡಲಾಗುತ್ತದೆ.ಈ ಅರಮನೆ ೮೩೦.೦೦ ಸ್ಕ್ವಯರ್ ಫೀಟ್ ನಷ್ಟು ಜಾಗವನ್ನು ಹೊಂದಿದೆ ಎನ್ನಲಾಗಿದೆ . ಅಲ್ಲಿನ ವೈಭವವನ್ನು ಹೋಗಿಯೇ ನೋಡಬೇಕು . ಒಳಭಾಗದಲ್ಲಿ ಫೋಟೋ ತೆಗೆಯುವುದನ್ನು ನಿಷೇಧಿಸಲಾಗಿದೆ . 

9.ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ. ಸೈನ್ಸ್ ಮ್ಯೂಸಿಯಂ : ಇವೆರಡು ಇರುವುದು ಲಂಡನ್ ನ ಕೆನ್ಸಿಂಗ್ ಟನ್ ನಲ್ಲಿ .   ಇದು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುವ ಮ್ಯೂಸಿಯಮ್ ಗಳಾಗಿದೆ . ಸೈನ್ಸ್ ಮ್ಯೂಸಿಯಂ ಸೈನ್ಸ್ ಬಗ್ಗೆ  ಮಾಹಿತಿ ನೀಡುವ ಜೊತೆಗೆ ಚಿಕ್ಕ ಮಕ್ಕಳು ಕೂಡ ಆಟದ ಮೂಲಕ ತಿಲಿದುಕೊಲ್ಲಬಹುದಾದ ಸಂಗ್ರಹಾಲಯ . ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ನಲ್ಲಿ ಎಲ್ಲ ರೀತಿಯ ಅಂದರೆ ಸಸ್ಯಶಾಸ್ತ್ರ, ಕೀಟಶಾಸ್ತ್ರ,ಖನಿಜಗಳ ಬಗ್ಗೆ,ಪ್ರಾಗ್ಜೀವ ಶಾಸ್ತ್ರಗಳ ಸಂಗ್ರಹಾಲಯವನ್ನು ಇರಿಸಲಾಗಿದ್ದು ಒಂದು ದಿನ ಪೂರ್ತಿ ಇದನ್ನು ನೋಡಲು ಬೇಕಾಗುತ್ತದೆ .

10.ವಿಂಡ್ಸರ್ ಕ್ಯಾಸೆಲ್ : ಇದು ಲಂಡನ್ ನಿಂದ ಸ್ವಲ್ಪ ಹೊರಭಾಗದಲ್ಲಿದೆ. ಅತಿ ದೊಡ್ಡ ಕ್ಯಾಸೆಲ್ ಎಂಬ ಹೆಸರುಪಡೆದಿದೆ . ಇದನ್ನು ನೋಡುವುದಕ್ಕೊಸ್ಕರವೇ ಸುತ್ತಲಿನ ದೇಶಗಳಿಂದ ಬರುವವರ ಸಂಖ್ಯೆ ದೊಡ್ಡದಿದೆ. ಪ್ರತಿದಿನ ಅತಿ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ಕೋಟೆ ಇದು . ಇದನ್ನು ನೋಡಲು ಒಂದು ದಿನ ಪೂರ್ತಿ ಮೀಸಲಿಡಬೇಕು . 

ಇವಿಷ್ಟು ಲಂಡನ್ ಗೆ ಬಂದವರು ಅಥವಾ ಬರುವ ಯೋಜನೆಯಿರುವವರು ಮೊದಲೇ ಪ್ಲಾನ್ ಮಾಡಿತ್ತು ಕೊಳ್ಳಬೇಕಾದ ಮತ್ತು  ನೋಡಲೇ ಬೇಕಾದ ಸ್ಥಳಗಳು .

ಅರ್ಪಿತಾ ಹರ್ಷ 
ಲಂಡನ್ 

No comments:

Post a Comment