Showing posts with label ಕವನಗಳು. Show all posts
Showing posts with label ಕವನಗಳು. Show all posts

Monday, 21 January 2013

ಬೆಳ್ಳಿ ಮಂಜು


Published in ekanasu ":http://www.ekanasu.com/2013/01/blog-post_3259.html

ಸುತ್ತ ಮುತ್ತ ಎಲ್ಲಿ ನೋಡೇ 
ಬರೀ ಮಂಜು ಮಂಜು 
ಬಿಳಿಯರ ನಾಡಿನಲ್ಲಿ 
ಎಲ್ಲೆಡೆ ಹರಡಿಹುದು ಬಿಳಿ ಬೆಳ್ಳಿ ಮಂಜು 

ಹಸಿರು ಗಿಡವು ಹೊತ್ತಂತಿಹುದು 
ಬಿಳಿ ಮಂಜು ಹೂವ !
ನೋಡಲೆಂದು  ಹತ್ತಿರ ಹೋಗೆ ಬೀಳುವುದು 
ಮೈಯ ಮೇಲೆ ಮಂಜಿನ ಕಲರವ 

ಸುಂದರವೆಂದು ಕೈಯಲ್ಲಿ ಹಿಡಿಯೆ 
ಬರೀ ಕೆಲವೇ ನಿಮಿಷಗಳು 
ನೋಡನೋಡುತ್ತಿದ್ದ ಹಾಗೆ ಕರಗಿಬಿಡು ವುದು ಈ ಬೆಳ್ಳಿ ಮಂಜು 

ಬೆರಗಾಗಲೇ ಬೇಕು ಸೃಷ್ಟಿಕರ್ತನ  
ಈ ಸೊಬಗನೋಡಿ 
ಇದಕೆ ಇಹುದೆ ಸಾಟಿ ಬೇರೆ ಈ ಜಗತ್ತಿನಲ್ಲಿ !!







ಅರ್ಪಿತಾ ಹರ್ಷ 
ಲಂಡನ್ 

Tuesday, 11 December 2012

ಬದುಕು

ಈ ನನ್ನ ಕವನವು ಈ ಕನಸು ವಿನಲ್ಲಿ ಪ್ರಕಟಗೊಂಡಿದೆ <a>"http://www.ekanasu.com/2012/12/blog-post_27.html" <a/>

ಸೂರ್ಯ ಮುಳುಗುವ ಹೊತ್ತು 
ಹಕ್ಕಿಗಳು ಹೊರಟಿವೆ ಮನೆಯ ಕಡೆಗೆ 
ಸಂಜೆ ಬಾನಲಿ ಸೂರ್ಯ 
ಅಣಕಿಸುತಿರುವ  ನನ್ನ ನೋಡಿ 
ನಿನ್ನದೇನಿದು  ಬದುಕು ಬರೀ ರಾಡಿ !

ಹಾರಾಡುವ ಹಕ್ಕಿಗಳಿಗೋ 
ಸ್ವಚ್ಚಂದದ  ಬದುಕು 
ಮಾನವ ನ ಬದುಕೋ 
ಬರೀ ಒಡಕು ಒಡಕು !

ಹಾರಾಡ ಬೇಕಿದೆ ಹಕ್ಕಿಯಂತೆ 
ಇಲ್ಲದಿರೆ ಮನದ  ತುಂಬಾ ಬರೀ ಬೇಡದಾ  ಚಿಂತೆ 
ಕಲಿಯಬೇಕಿದೆ ಹಕ್ಕಿಗಳ ನೋಡಿ 
ಬದುಕೆಂಬುದು ಒಂದು ಮೋಡಿ !

ಮುಳುಗುತಿರುವನೇ  ಸೂರ್ಯ 
ಮುಪ್ಪಿನ ಸುಳಿವು ನೀಡಿ ?
ಮುಗಿದುಹೋಯಿತೇ ಬದುಕು 
ನಾಲ್ಕು ದಿನಗಳು  ಕೂಡಿ ?






ಅರ್ಪಿತಾ ರಾವ್ 



Monday, 10 December 2012

ಬದಲಾಗದಿರು

ಈ ನನ್ನ ಕವನವು ಈ ಕನಸುವಿನಲ್ಲಿ ಪ್ರಕಟಗೊಂಡಿದೆ  http://www.ekanasu.com/2012/12/blog-post_26.html

ಕಳೆಯಬೇಕಿದೆ ಬದುಕಿನ ಬಹಳಷ್ಟು ದಿನಗಳನ್ನು 
ಕಲಿಯಬೇಕಿದೆ ಬದುಕು ಹಸನಾಗಿಸುವುದನ್ನು 

ನೆನ್ನೆಯ ನಿನ್ನೆಗಳು ಇಂದು 
ದಿನಗಳಾಗಿ ಉಳಿದಿಲ್ಲ 
ಅದು ಬರಿ ನೆನಪಾಗಿಹೊಯಿತಲ್ಲ !

ಬದುಕಿನ ಪ್ರತಿ ಕ್ಷಣಗಳಲ್ಲಿ 
ಜೊತೆಯಾಗಿರುವೆ ಎಂದು ಬಂದೆ 
ದಿನಕಳೆದಂತೆ ನಿನ್ನಲ್ಲೇ ನೀ ಕಳೆದುಹೋದೆ 

ನಗು ತುಂಬಿ ಹರಟುತ್ತಿರುವ 
ಆ ದಿನಗಳು ಇಂದು ಬರೀ ನೆನಪು 
ಉಸಿರಾಟದ ಶಬ್ದ ಕಿವಿಗೆ ರಾಚುತ್ತಿರುವ 
ಈ ಕರಾಳ ದಿನಗಳೇ ಇಂದಿನ ಬದುಕು !!

ಕಳೆಯಬೇಕಿದೆ ಇನ್ನೂ  ಸಾಕಷ್ಟು 
ದಿನಗಳು ಜೊತೆಯಲ್ಲಿ 
ಸುಂದರ ದಿನಗಳು ಮರೆಯಾಗಲು 
ನಾ ತಪ್ಪು ಮಾಡಿದ್ದೆಲ್ಲಿ ?

ಬರಬಹುದು ಬದುಕಿನಲ್ಲಿ ಸಾಕಷ್ಟು ಗೊಂದಲಗಳು 
ನೀ ಕೊಟ್ಟಿದ್ದೆ ಮಾತು ಆಗೆಲ್ಲ 
ನಾ ನಿನ್ನೊಂದಿಗಿರುವೆ ಹಗಲು ಇರುಳು 

ಬೆಳಗು ಕತ್ತಲು  ಎಂಬುದು ಪ್ರಕೃತಿ ನಿಯಮ 
ಹಾಗೆಯೇ ಬದುಕೆಂಬುದು 
ನೋವು ನಲಿವುಗಳ ಸಂಗಮ 

ನಾ ಬಲ್ಲೆ ಪರಿವರ್ತನೆ ಜಗದ ನಿಯಮ 
ಆದರೂ  ನಾ ಕೆಳುವುದೊಂದೇ 
ಬದಲಾಗದಿರು ನೀ ಕಳೆದುಕೊಂಡು ಸಂಯಮ !!



ಅರ್ಪಿತಾ ರಾವ್ 
ಲಂಡನ್




Wednesday, 28 November 2012

ಮನಸ್ಸೆಂಬ ಚಿಟ್ಟೆ

ಈ ನನ್ನ ಕವನವು ೦೪.೦೨.೧೩ ರ ಪಂಜುವಿನಲ್ಲಿ ಪ್ರಕಟಗೊಂಡಿದೆ http://www.panjumagazine.com/?p=462


ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ 
ನೋಡಲು ಕಣ್ಣುಗಳು ಸಾಲದು
ಮೈಯ ಮೇಲೆಲ್ಲಾ ಕಪ್ಪು ಕಂಗಳು
ನೋಡುಗರ ಕಣ್ಮನ ಸೆಳೆಯುವುದು 

ಅಲ್ಲಿಂದಿಲ್ಲಿಗೆ ಹಾರುವೆ 
ಹಿಡಿಯಲು ಹೋದರೆ ಓಡುವೆ 
ಜಗದ ಸೃಷ್ಟಿಯ ಮೆಚ್ಚಲೇ ಬೇಕು 
ನಿನಗೆ ನೀನೆ ಸಾಟಿಯಿರಬೇಕು 

ಒಮ್ಮೆ ಇಲ್ಲಿ ಒಮ್ಮೆ ಇನ್ನೆಲ್ಲೋ 
ಹಾರುವ ನಿನ್ನನು ನೋಡಿದರೆ 
ಮನಸು ಕೂಡ ನಿನ್ನೊಡನೆಯೇ 
ಕುಣಿಯುತ ಹೊರಡುವುದು ಬೇರೆಡೆಗೆ !!



Thursday, 12 July 2012

ಕನವರಿಕೆ

ಮನದ ಮೂಲೆಯಲ್ಲೆಲ್ಲೋ ನೆನಪುಗಳ
ಚಡಪಡಿಕೆ
ಬೇಸರ ಕಳೆಯಲು ನಿನ್ನದೇ ಹಾಡಿನ
ಸಾಲುಗಳ ಗುನುಗುನಿಸುವಿಕೆ
 ಹಗಲು ಇರುಳು ನಿನದೆ ಕನವರಿಕೆ
ಸಾಕು ನಿನ್ನ ಅಗಲುವಿಕೆ
ಬಾ ಬೇಗ ಸನಿಹಕೆ .

-ಅರ್ಪಿತಾ ಹರ್ಷ
 

Friday, 1 June 2012

ದಾರಿ

ಹಣತೆಯ ಬೆಂಕಿಯಲಿ 
ಆಟವಾಡುವ ಚಿಟ್ಟೆ ನೀನಾದರೆ
ದೀಪ ಹಚ್ಚಲು ಬಳಸುವ 
ಬತ್ತಿ ನಾನು
ನಾ ಹೊತ್ತಿ ಉರಿಯುತ್ತಿದ್ದರೆ 
 ನೀ ಬಂದು ಹಾರಾಡುವೆ 
ನಿನಗೆ ತಪ್ಪಿಸಿಕೊಳ್ಳುವ 
ಅವಕಾಶವಾದರೂ ಇದೆ 
ನನಗೆ ದಗದಗಿಸಿ ಉರಿಯುವುದೊಂದೇ ದಾರಿ


ಅರ್ಪಿತಾ ಹರ್ಷ 



Wednesday, 8 February 2012

ಪ್ರಶ್ನೆ ?

ಅಂದು ನೀ ಬರುವೆ ಎಂದಿದ್ದೆ
ಬರುವ ದಾರಿಯ ಕಾದು ಸೋತೆ ನಾನು
ಕೊಟ್ಟ ಭರವಸೆಗಳ ಮರೆತೆಯೇಕೆ?
ನನ್ನ ಬಿಟ್ಟು ನೀ ಬರಲಾರದ
ಜಾಗಕ್ಕೆ ಹೋದೆ ಏಕೆ ?
ಬರಲಿಲ್ಲ ಏಕೆ ಎಂದು ಪ್ರಶ್ನಿಸುವ
ಅವಕಾಶ ನೀ ಕೊಡಲಿಲ್ಲ ನನಗೆ
ನೀ ಕೊಟ್ಟಿದ್ದರೆ ಇನ್ನೊಮ್ಮೆ
ಎಲ್ಲೂ ಹೋಗದಂತೆ ಬಿಗಿದಪ್ಪಿ
ನಿಲ್ಲಿಸಿಬಿಡುತ್ತಿದ್ದೆ ಅದಿಲ್ಲದಿದ್ದರೆ
ನಿನ್ನೊಡನೆ ನಾನೂ ಬಂದುಬಿಡುತ್ತಿದ್ದೆ .


ಅರ್ಪಿತಾ

ಸಂದೇಹ

ಕಣ್ಣಲ್ಲಿ ಒಂದು ಹನಿಯೊಂದು ಬಂದು
ನೀರಾಗಿ ಬೀಳುತಿಹುದೇ ?
ನೀ ನಲ್ಲಿ ಇಂದು ನಾನಿಲ್ಲದೆಯೇ
ಹೀಗೇಕೆ ಕೊರಗುತಿರುವೆ
ಒಂದು ಗಳಿಗೆ ಬಂದು ಎದುರು ನಿಂತು
ನೀ ಕೇಳಬಾರದೇಕೆ?
ಮನಸಲ್ಲೇ ಎಲ್ಲ ನೆನೆನೆನೆಸಿಕೊಂಡು
ಕನಸನ್ನು ಕಾಣುವುದೇಕೆ?
ನಿನಗಾಗಿ ನಾನು ನನಗಾಗಿ ನೀನು
ಇದು ನಿಜವೇ ಎಂಬ ಸಂದೇಹವೇಕೆ ?

Thursday, 15 December 2011

ಬೋಳು ಮರ


ಬದಲಾದ ಋತುವಿಗೆ
ಉದುರಿವೆ ಎಲೆಗಳು
ಬದುಕಿನ ಜೊತೆ ಆಟ
ಇದು ಯಾವ ಹೋರಾಟ
ಹತ್ತಿರ ಸುಳಿಯದ
ಹಕ್ಕಿಗಳು ,ಖಾಲಿಯಾದ
ಗೂಡು ,ಕೇಳದ ಚಿಲಿಪಿಲಿಗಳು
ನಡುಗುತಿಹುದು ಜೀವ
ಒಂಟಿ ಒಂಟಿ ಎನಿಸಿ
ಮನದಲೇನೋ ಬೇಸರ
ನೋಡಿ ಆ ಬೋಳು ಮರ

Tuesday, 25 October 2011

ಸಂಜೆ

ನಮ್ಮ ಮನೆಯ ಕಿಟಕಿಯಿಂದ ಒಂದು ಸಂಜೆ ನಾ ತೆಗೆದ ಚಿತ್ರ ಅದನ್ನು ನೋಡುತ್ತಾ ನನ್ನ ಮನದಲ್ಲಿ ಮೂಡಿದ ಕವಿತೆ ಇದು


ಬೆಳಕ ಸರಿಸಿ
ಮುಸುಕು ಕವಿದು
ಆವರಿಸುತಿದೆ ಕತ್ತಲು
ಬಾಳ ಸವೆಸಿ
ಮುಗಿದ ಬದುಕು
ಸಾಗುತಿದೆ ಎತ್ತಲೋ ?
ಮುಗಿದ ದಿನದ
ಸೂಚನೆಯೋ ಕೂಗುತಿಹುದು
ಹಕ್ಕಿಗಳು
ಬಾನ ದಾಟಿ ಗೂಡು
ಸೇರಹೊರಟಿಹುದು
ಬಯಕೆಗಳು

Tuesday, 18 October 2011

ಆಸೆ

ಬಿರುಗಾಳಿಯಲ್ಲೊಮ್ಮೆ ಗಟ್ಟಿಯಾಗಿ ನಿನ್ನ ತಬ್ಬಿ
ತಿರುಗುವಾಸೆ
ಮಳೆಯ ಆರ್ಭಟದಲ್ಲಿ ಕೊಡೆಯಿಲ್ಲದೆ
ನಿನ್ನ ಕೈ ಹಿಡಿದು ನಡೆಯುವಾಸೆ
ದಟ್ಟಕಾನನದ ನಡುವೆ ನಿನ್ನ ಜೊತೆಗೂಡಿ
ಹೆಜ್ಜಇಡುವಾಸೆ
ಕತ್ತಲಲ್ಲಿ ಕುಳಿತು ನಿನ್ನ
ಪಿಸುಮಾತ ಕೇಳುವಾಸೆ