ಈ ನನ್ನ ಕವನವು ಈ ಕನಸು ವಿನಲ್ಲಿ ಪ್ರಕಟಗೊಂಡಿದೆ <a>"http://www.ekanasu.com/2012/12/blog-post_27.html" <a/>
ಸೂರ್ಯ ಮುಳುಗುವ ಹೊತ್ತು
ಸೂರ್ಯ ಮುಳುಗುವ ಹೊತ್ತು
ಹಕ್ಕಿಗಳು ಹೊರಟಿವೆ ಮನೆಯ ಕಡೆಗೆ
ಸಂಜೆ ಬಾನಲಿ ಸೂರ್ಯ
ಅಣಕಿಸುತಿರುವ ನನ್ನ ನೋಡಿ
ನಿನ್ನದೇನಿದು ಬದುಕು ಬರೀ ರಾಡಿ !
ಹಾರಾಡುವ ಹಕ್ಕಿಗಳಿಗೋ
ಸ್ವಚ್ಚಂದದ ಬದುಕು
ಮಾನವ ನ ಬದುಕೋ
ಬರೀ ಒಡಕು ಒಡಕು !
ಹಾರಾಡ ಬೇಕಿದೆ ಹಕ್ಕಿಯಂತೆ
ಇಲ್ಲದಿರೆ ಮನದ ತುಂಬಾ ಬರೀ ಬೇಡದಾ ಚಿಂತೆ
ಕಲಿಯಬೇಕಿದೆ ಹಕ್ಕಿಗಳ ನೋಡಿ
ಬದುಕೆಂಬುದು ಒಂದು ಮೋಡಿ !
ಮುಳುಗುತಿರುವನೇ ಸೂರ್ಯ
ಮುಪ್ಪಿನ ಸುಳಿವು ನೀಡಿ ?
ಮುಗಿದುಹೋಯಿತೇ ಬದುಕು
ನಾಲ್ಕು ದಿನಗಳು ಕೂಡಿ ?
ಅರ್ಪಿತಾ ರಾವ್
No comments:
Post a Comment