ಈ ನನ್ನ ಕವನವು ಈ ಕನಸುವಿನಲ್ಲಿ ಪ್ರಕಟಗೊಂಡಿದೆ http://www.ekanasu.com/2012/12/blog-post_26.html
ಕಳೆಯಬೇಕಿದೆ ಬದುಕಿನ ಬಹಳಷ್ಟು ದಿನಗಳನ್ನು
ಕಲಿಯಬೇಕಿದೆ ಬದುಕು ಹಸನಾಗಿಸುವುದನ್ನು
ನೆನ್ನೆಯ ನಿನ್ನೆಗಳು ಇಂದು
ದಿನಗಳಾಗಿ ಉಳಿದಿಲ್ಲ
ಅದು ಬರಿ ನೆನಪಾಗಿಹೊಯಿತಲ್ಲ !
ಬದುಕಿನ ಪ್ರತಿ ಕ್ಷಣಗಳಲ್ಲಿ
ಜೊತೆಯಾಗಿರುವೆ ಎಂದು ಬಂದೆ
ದಿನಕಳೆದಂತೆ ನಿನ್ನಲ್ಲೇ ನೀ ಕಳೆದುಹೋದೆ
ನಗು ತುಂಬಿ ಹರಟುತ್ತಿರುವ
ಆ ದಿನಗಳು ಇಂದು ಬರೀ ನೆನಪು
ಉಸಿರಾಟದ ಶಬ್ದ ಕಿವಿಗೆ ರಾಚುತ್ತಿರುವ
ಈ ಕರಾಳ ದಿನಗಳೇ ಇಂದಿನ ಬದುಕು !!
ಕಳೆಯಬೇಕಿದೆ ಇನ್ನೂ ಸಾಕಷ್ಟು
ದಿನಗಳು ಜೊತೆಯಲ್ಲಿ
ಸುಂದರ ದಿನಗಳು ಮರೆಯಾಗಲು
ನಾ ತಪ್ಪು ಮಾಡಿದ್ದೆಲ್ಲಿ ?
ಬರಬಹುದು ಬದುಕಿನಲ್ಲಿ ಸಾಕಷ್ಟು ಗೊಂದಲಗಳು
ನೀ ಕೊಟ್ಟಿದ್ದೆ ಮಾತು ಆಗೆಲ್ಲ
ನಾ ನಿನ್ನೊಂದಿಗಿರುವೆ ಹಗಲು ಇರುಳು
ಬೆಳಗು ಕತ್ತಲು ಎಂಬುದು ಪ್ರಕೃತಿ ನಿಯಮ
ಹಾಗೆಯೇ ಬದುಕೆಂಬುದು
ನೋವು ನಲಿವುಗಳ ಸಂಗಮ
ನಾ ಬಲ್ಲೆ ಪರಿವರ್ತನೆ ಜಗದ ನಿಯಮ
ಆದರೂ ನಾ ಕೆಳುವುದೊಂದೇ
ಬದಲಾಗದಿರು ನೀ ಕಳೆದುಕೊಂಡು ಸಂಯಮ !!
ಅರ್ಪಿತಾ ರಾವ್
ಲಂಡನ್
No comments:
Post a Comment