ಬೇಕಾಗುವ ಸಾಮಗ್ರಿಗಳು
ರವೆ ೨ ಕಪ್
ಸಕ್ಕರೆ ೪ ಕಪ್
ಹಾಲು ಅರ್ಧ ಕಪ್
ತುಪ್ಪ
ಕೇಸರಿ ಬಣ್ಣ ಸ್ವಲ್ಪ
ಏಲಕ್ಕಿ ಪುಡಿ ಸ್ವಲ್ಪ
ಗೋಡಂಬಿ , ದ್ರಾಕ್ಷಿ ಅಲಂಕರಿಸಲು
ಮಾಡುವ ವಿಧಾನ : ರವೆಯನ್ನು ಸಣ್ಣ ಉರಿಯಲ್ಲಿ ಹುರಿದುಕೊಳ್ಳಬೇಕು . ಸ್ವಲ್ಪ ಕೆಂಪು ಬಣ್ಣ ಬಂದ ನಂತರ ಸಕ್ಕರೆಯನ್ನು ಹಾಕಬೇಕು ಜೊತೆಗೆ ಹಾಲು ಹಾಕಿ ಕಲಕಬೇಕು . ಬೇಕಾದಲ್ಲಿ ಸ್ವಲ್ಪ ನೀರು ಹಾಕಬಹುದು ಕುದಿಯುತ್ತಿರುವಾಗ ತುಪ್ಪ ಹಾಕಬೇಕು ತಳ ಹಿಡಿಯದಂತೆ ಸೌಟಿನಿಂದ ತಿರಿಸುತ್ತಿರಬೇಕು ನಂತರ ಸ್ವಲ್ಪ ಕೇಸರಿ ಬಣ್ಣ ಹಾಕಿ ತಿರುಗಿಸಬೇಕು ಸ್ವಲ್ಪ ಸಮಯದ ನಂತರ ಗಟ್ಟಿಯಾಗುತ್ತದೆ ಹಲ್ವದ ಹದ ಬಂದ ನಂತರ ಕೆಳಗಿಳಿಸಿ ಏಲಕ್ಕಿ ಪುಡಿ ಹಾಕಿ ಪ್ಲೇಟ್ ನಲ್ಲಿ ಹಾಕಿ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಬಹುದು ನಂತರ ಒಂದೊಂದು ಪೀಸ್ ನ ಮೇಲು ಒಂದೊಂದು ಗೋಡಂಬಿ ಮತ್ತು ದ್ರಾಕ್ಷಿ ಇತ್ತು ಅಲಂಕರಿಸಬೇಕು . ಈಗ ರುಚಿಯಾದ ಅಶೋಕ ಹಲ್ವಾ ರೆಡಿ .
ಅರ್ಪಿತಾ ಹರ್ಷ
ಲಂಡನ್
ಈ ನನ್ನ ಲೇಖನವು ಕನ್ನಡ ಟೈಮ್ ನಲ್ಲಿ ಪ್ರಕಟಗೊಂಡಿದೆ http://www.kannadatimes.com/archives/1095
Showing posts with label ಕನ್ನಡ ಟೈಮ್ಸ್ ನಲ್ಲಿ ಪ್ರಕಟಗೊಂಡ ಲೇಖನಗಳು. Show all posts
Showing posts with label ಕನ್ನಡ ಟೈಮ್ಸ್ ನಲ್ಲಿ ಪ್ರಕಟಗೊಂಡ ಲೇಖನಗಳು. Show all posts
Thursday, 1 March 2012
Wednesday, 15 February 2012
ಬಲು ರುಚಿ ಈ ದೂದ್ ಪೇಡ
ಬೇಕರಿಗಳಲ್ಲಿ ಸಿಗುವ ದೂದ್ ಪೇಡ ತಿಂದು ಎಷ್ಟೊಂದು ರುಚಿಯಾಗಿದೆ ಹೇಗೆ ಮಾಡಬಹುದು ಎಂದು ಯೋಚಿಸುತ್ತಿದ್ದೀರಾ ? ಬಲು ಸುಲಭ. ಈ ಪೇಡ ಮನೆಯಲ್ಲಿಯೇ ಬಲು ಬೇಗ ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು :
೧. ಹಾಲು ೨ ಕಪ್
೨. ಸಕ್ಕರೆ ೨ ಕಪ್
೩. ಮಿಲ್ಕ್ ಪೌಡರ್ ಅಥವಾ ಮಿಲ್ಕ್ ಕ್ರೀಂ
೪.ತುಪ್ಪ ೧ ಚಮಚ
ಮೊದಲಿಗೆ ಹಾಲನ್ನು ಚೆನ್ನಾಗಿ ಕುದಿಸಬೇಕು , ಕುದಿಯುತ್ತಿರುವ ಹಾಲಿಗೆ ಸಕ್ಕರೆ ಮಿಶ್ರ ಮಾಡಿ ಹಾಲು ಸ್ವಲ್ಪ ಬತ್ತುವವರೆಗೆ ಕಾಯಬೇಕು. ನಂತರ ಇದಕ್ಕೆ ಮಿಲ್ಕ್ ಪೌಡರ್ ಅಥವಾ ಮಿಲ್ಕ್ ಕ್ರೀಂ ಅನ್ನು ಹಾಕಿ ಚೆನ್ನಾಗಿ (ಸೌಟಿನಿಂದ ) ತಳಹಿಡಿಯದಂತೆ ಕಲಕುತ್ತಿರಬೇಕು. ಗಟ್ಟಿ ಆಗುತ್ತಾ ಬಂದ ನಂತರ ಉಂಡೆ ಮಾಡಬಹುದಾದ ಹದ ತಲುಪುತ್ತಿದ್ದಂತೆ ಒಲೆಯಿಂದ ತೆಗೆದು ಆರಲು ಬಿಡಬೇಕು ಸ್ವಲ್ಪ ಸಮಯದ ನಂತರ ಬೇಕಾದ ಆಕಾರದಲ್ಲಿ ಉಂಡೆ ಮಾಡಬಹುದು. ರುಚಿಯಾದ ದೂದ್ ಪೇಡ ರೆಡಿ .
ಈ ನನ್ನ ಲೇಖನವು ಕನ್ನಡ ಟೈಮ್ ನಲ್ಲಿ ಪ್ರಕಟಗೊಂಡಿದೆ http://www.kannadatimes.com/archives/1013"
ಅರ್ಪಿತಾ ಹರ್ಷ ಲಂಡನ್
Wednesday, 8 February 2012
ತೀರ್ಥ ಕ್ಷೇತ್ರ ವರದಪುರ
ಈ ನನ್ನ ಲೇಖನವು ಕನ್ನಡ ಟೈಮ್ ನಲ್ಲಿ ಪ್ರಕಟಗೊಂಡಿದೆ http://www.kannadatimes.com/archives/971
ಅದು ಮಲೆನಾಡಿನ ಪುಟ್ಟಹಳ್ಳಿ ಆದರೆ ಅಲ್ಲಿ ಸದಾ ಭಕ್ತ ಸಾಗರದಿಂದ ಸಾವಿರಾರು ಜನ ಪ್ರತಿದಿನ ಒಗ್ಗೂಡುವ ತೀರ್ಥ ಕ್ಷೇತ್ರ ಅದುವೇ ವರದಪುರ. ಸುತ್ತಮುತ್ತಲಿನ ಜನರಿಗೆ ವರದಳ್ಳಿ .(ವರದ ಹಳ್ಳಿ )
ಇದು ಶಿವಮೊಗ್ಗ ಜಿಲ್ಲೆಯ ಸಾಗರ ತಾಳುಕಿನಿಂದ ೬ಕಿ. ಮಿ ನಲ್ಲಿದೆ.ಪವಾಡ ಪುರುಷರೆಂದೇ ಪ್ರಸಿದ್ಧರಾದ ಶ್ರೀಧರ ಗುರುಗಳ ಪುಣ್ಯ ಕ್ಷೇತ್ರವಿದು .ಹಲವಾರು ವರ್ಷಗಳು ತಪಸ್ಸನ್ನು ಮಾಡಿ ಶ್ರೀಧರರು ಮುಕ್ತಿಹೊಂದಿದ ಸ್ಥಳವಿದು ಈಗ ಇಲ್ಲಿ ಅವರ ಸಮಾಧಿ ಇದೆ. ಆದರು ಭಕ್ತ ಜನರ ಆಗಮನಕ್ಕೆನು ಕೊರತೆ ಇಲ್ಲ . ಪ್ರತಿದಿನ ಸಾವಿರಾರು ಜನ ಬಂದು ಭಕ್ತಿ ಇಂದ ಬೇಡಿಕೊಂಡು ತಮ್ಮ ಇಷ್ಟಾರ್ಥ ನೆರವೆರಿಸಿಕೊಳ್ಳುವ ದೇಶವಿದೆಶಗಳಲ್ಲು ಪ್ರಸಿದ್ದ ಹೊಂದಿದ ಕ್ಷೇತ್ರ .
"ಓಂ ನಮಃ ಶಂತಾಯ ದಿವ್ಯಾಯ ಸತ್ಯ ಧರ್ಮ ಸ್ವರೂಪಿಣಿ ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮಃ "
ಇದು ಶಾಂತ ಮೂರ್ತಿಯು ಸತ್ಯ ಧರ್ಮ ಸ್ವರುಪಿಯೂ ಆದ ಶ್ರೀಧರ ಸ್ವಾಮೀಜಿಯ ಪಟಣಾ ಸ್ತೋತ್ರ . ಶ್ರೀಧರ ಸ್ವಾಮಿಜಿಯು ದತ್ತಾತ್ರೆಯರ ಇನ್ನೊಂದು ಸ್ವರೂಪ .ದಿವ್ಯ ತೇಜಸ್ಸನ್ನು ಹೊಂದಿದ ಶಾಂತ ಸ್ವರೂಪಿ ಶ್ರೀಧರರು ದೇಶದ ಒಳಿತಿಗಾಗಿ ಸನ್ಯಾಸತ್ವವನ್ನು ಪಡೆದು ಹಲವು ಕಾಲ ನೆಲಸಿ ಭಕ್ತ ರಿಗೆ ಮಾರ್ಗದರ್ಶನ ನೀಡಿ ಮುಕ್ತಿ ಹೊಂದಿದ ಶಾಂತ ಪ್ರದೇಶವಿದು.ಮಲೆನಾಡ ಹಸಿರಿನ ನಡುವೆ ಇರುವ ಕಣ್ಣನ್ನು ತಂಪಾಗಿಸುವ ಆಶ್ರಮ .
ಇಲ್ಲ್ಲಿ ಒಂದು ವಿಶೇಷತೆ ಇದೆ ಸದಾ ಕಾಲ ಗೋಮುಖದಿಂದ ತೀರ್ಥ ಹರಿದು ಬರುತ್ತಿರುತ್ತದೆ . ಈ ತೀರ್ಥವನ್ನು ತುಂಬಿ ಇಟ್ಟರೆ ಎಷ್ಟು ವರ್ಷಗಳಾದರೂ ಹಾಳಾಗದೆ ಉಳಿಯುವುದು ಖಂಡಿತ .ಇದು ಔಷಧೀಯ ಗುಣಗಳನ್ನು ಹೊಂದಿದ ಜಲ ಎಂದೇ ಪ್ರಸಿದ್ಧಿ ಪಡೆದಿದೆ.ಈ ತೀರ್ಥ ದಿಂದ ಸ್ನಾನ ಮಾಡಿದಲ್ಲಿ ಎಂತಹ ಕಾಯಿಲೆ ಇದ್ದರು ಕೂಡ ಗುಣಮುಖ ಆಗುವುದು ಎಂಬ ನಂಬಿಕೆ ಇದೆ. ಗುಣಮುಖವಾಗಿರುವುದಕ್ಕೆ ಸಾಕಷ್ಟು ಉದಾಹರಣೆಗಳು ಕೂಡ ಇವೆ.ಆದ್ದರಿಂದ ಇದು ತೀರ್ಥ ಕ್ಷೇತ್ರ ಎಂದೇ ಪ್ರಸಿದ್ದಿ ಹೊಂದಿದೆ.ಇಲ್ಲಿ ಪ್ರತಿದಿನ ಅನ್ನಸಂತರ್ಪಣೆ ಯನ್ನುಕೂಡ ಮಾಡಲಾಗುತ್ತದೆ.
ಇಲ್ಲಿ ಒಮ್ಮೆ ಭೇಟಿಕೊಟ್ಟರೆ ಮನಸ್ಸು ಪ್ರಶಾಂತ ವಾಗುತ್ತದೆ.ಮನಸ್ಸಿಗೊಂದು ಚೈತನ್ಯ ಮೂಡುತ್ತದೆ.ಹೊರ ರಾಜ್ಯ ದೇಶಗಳಿಂದ ಕೂಡ ಇಲ್ಲಿಗೆ ಪ್ರತಿದಿನ ಭಕ್ತಾದಿಗಳು ಬರುತ್ತಾರೆ . ಇವರ ಇನ್ನೊಂದು ಶಾಖೆಯು ಬೆಂಗಳೂರಿನ ವಸಂತಪುರ ದಲ್ಲೂ ಕೂಡ ಇದೆ ನೀವು ಒಮ್ಮೆ ಭೇಟಿಕೊಡಿ ಮನಸ್ಸನ್ನು ಶಾಂತವಾಗಿಸಿಕೊಳ್ಳಿ.
ಅರ್ಪಿತಾ ಹರ್ಷ
Tuesday, 7 February 2012
ಮನೆಯಲ್ಲೇ ಮಾಡಿ ಗೋಬಿ ಮಂಚೂರಿ
ಗೋಬಿ ಮಂಚೂರಿ ಎಂದರೆ ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರ ಬಾಯಲ್ಲೂ ನೀರು ಬರುವುದು ಖಂಡಿತ . ಇದಕ್ಕಾಗಿ ಹೋಟೆಲ್ ಗಳಿಗೆ ಹೋಗಬೇಕೆಂದಿಲ್ಲ .
ಗೋಬಿಮಂಚುರಿ ಯನ್ನು ರುಚಿಯಾಗಿ ಶುಚಿಯಾಗಿ ಮನೆಯಲ್ಲೇ ಮಾಡಿ ಆನಂದಿಸಬಹುದು .ಒಂದು ವೇಳೆ ಗೋಬಿ (ಹೂಕೋಸು) ಸಿಕ್ಕದಿದ್ದಲ್ಲಿ ಕ್ಯಾಬೇಜ್ (ಎಲೆಕೋಸು) ಕೂಡ ಬಳಸಬಹುದು.
ಗೋಬಿ ಮಂಚೂರಿ ಮಾಡಲು ಬೇಕಾಗುವ ಸಾಮಗ್ರಿಗಳು :
ಗೋಬಿ (ಹೂಕೋಸು) ೧
ಈರುಳ್ಳಿ ೧
ಹಸಿಮೆಣಸಿನಕಾಯಿ ೧
ಗರಂ ಮಸಾಲ ಪುಡಿ ೧/೨ ಚಮಚ
ಮೈದಾ ಹಿಟ್ಟು / ಜೋಳದ ಹಿಟ್ಟು ೧ ಕಪ್
ಬೆಳ್ಳುಳ್ಳಿ ಶುಂಟಿ ಪೇಸ್ಟ್ ೧ ಚಮಚ
ಟೊಮೇಟೊ ಸಾಸ್ ೨ಚಮಚ
ಉಪ್ಪು (ರುಚಿಗೆ ತಕ್ಕಷ್ಟು )
ಕೆಂಪು ಮೆಣಸಿನ ಪುಡಿ ೨ಚಮಚ
ಎಣ್ಣೆ ೧ ಕಪ್ (ಕರಿಯಲು)
ಸಕ್ಕರೆ ೧ ಚಮಚ
ಕೊತ್ತುಂಬರಿ ಸೊಪ್ಪು (ಅಲಂಕಾರಕ್ಕೆ )
ಮಾಡುವ ವಿದಾನ :
೧. ಈರುಳ್ಳಿ , ಗೋಬಿ /ಕ್ಯಾಬೇಜ್ ಮತ್ತು ಕೊತ್ತುಂಬರಿ ಸೊಪ್ಪನ್ನು ತೊಳೆದು ಹೆಚ್ಚಿಟ್ಟುಕೊಳ್ಳಿ .
೨. ಬಾಣಲೆ ಗೆ 2 ಚಮಚ ಎಣ್ಣೆ ಹಾಕಿ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು ತೆಗೆದು ಪಕ್ಕದಲ್ಲಿಡಿ.
೩. ಪಾತ್ರೆಗೆ ಮೈದಾ ಅಥವಾ ಜೋಳದ ಹಿಟ್ಟು , ಮೆಣಸಿನ ಪುಡಿ, ೧ ಚಮಚ ಸಕ್ಕರೆ ,ಉಪ್ಪು ಹಾಕಿ ನೀರು ಬೆರಸಿ ಅದರಲ್ಲಿ ಹುಕೊಸನ್ನು ಅದ್ದಿ ಎಣ್ಣೆಗೆ ಹಾಕಿ ಕರಿದು ಪಕ್ಕದಲ್ಲಿ ತೆಗೆದಿಟ್ಟುಕೊಳ್ಳಿ .
೪. ಬಾಣಲೆಗೆ ೨ ಎಣ್ಣೆ ಚಮಚ ಹಾಕಿ ಕರಿದ ಗೋಭಿ ಮತ್ತು ಕರಿದಿಟ್ಟ ಈರುಳ್ಳಿ ,ಶುಂಟಿ ಬೆಳ್ಳುಳ್ಳಿ ಪೇಸ್ಟ್ ಗರಂ ಮಸಾಲ ಪುಡಿ,ಟೊಮೇಟೊ ಸಾಸ್ ಹಾಕಿ ಮತ್ತೊಮ್ಮೆ ಚೆನ್ನಾಗಿ ಕರಿಯಿರಿ ಮೇಲಿನಿಂದ ಕೊತ್ತುಂಬರಿ ಸೊಪ್ಪನ್ನು ಉದುರಿಸಿ .
ಈಗ ಬಿಸಿಬಿಸಿ ಗೋಬಿ ಮನ್ಚುರಿಯನ್ ಸವಿಯಲು ರೆಡಿ .
ಅರ್ಪಿತ ಹರ್ಷ
ಈ ನನ್ನ ಲೇಖನವು ಕನ್ನಡ ಟೈಮ್ ನಲ್ಲಿ ಪ್ರಕಟಗೊಂಡಿದೆ. http://www.kannadatimes.com/archives/968
Subscribe to:
Posts (Atom)