ಭಾರತದಲ್ಲಿ ದೇವಸ್ಥಾನಗಳ ಸಂಖ್ಯೆ ಬಹಳಷ್ಟು. ಹೇಳಿಕೇಳಿ ಲಂಡನ್ ಒಂದು ಕ್ರಿಶ್ಚಿಯನ್ ದೇಶ ಇಲ್ಲಿ ಎಲ್ಲಿ ನೋಡಿದರು ಚರ್ಚು ಗಳು ಇದ್ದೆ ಇರುತ್ತದೆ ಜೊತೆಗೆ ಡಿಸೆಂಬರ್ ತಿಂಗಳು ಬಂತೆಂದರೆ ಎಲ್ಲೆಡೆಗಳಲ್ಲಿ ಜಗಜಗಿಸುವ ದೀಪಗಳು ಪಟಾಕಿಯ ಸಿಡಿಮದ್ದು ಜೊತೆಗೊಂದಿಷ್ಟು ಇಂಗ್ಲಿಷ್ ಹಾಡುಗಳು ಇದು ಲಂಡನ್ ನ ಬಗ್ಗೆ ಎಲ್ಲರಿಗೂ ಗೊತ್ತಿರುವ ಸಂಗತಿ . ಇಲ್ಲೂ ಕೂಡ ದೇವಸ್ಥಾನಗಳಿವೆ ಎಂದರೆ ಸಾಕಷ್ಟು ಜನರು ಆಶ್ಚರ್ಯ ಪಡಬಹುದು ಜೊತೆಗೊಂದಿಷ್ಟು ಕುತೂಹಲ ಕೂಡ ಮೂಡಬಹುದು .
ಹೌದು ಎಲ್ಲ ದೇಶಗಳಲ್ಲಿರುವಂತೆ ಲಂಡನ್ ನಲ್ಲೂ ಕೂಡ ಚರ್ಚ್ ಗಳಿವೆ ಮಸೀದಿಗಳಿವೆ ಜೊತೆಗೆ ಸಾಕಷ್ಟು ದೇವಸ್ಥಾನಗಳು ಕೂಡ ಇವೆ. ಕೆಲವೊಂದು ಜಾಗಗಳಲ್ಲಿ ಭಾರತೀಯರ ಸಂಖ್ಯೆ ಬಹಳಷ್ಟಿದೆ ಅಲ್ಲೆಲ್ಲ ಮಹಾಲಕ್ಷ್ಮಿ , ಮುರುಗನ್, ಗಣಪತಿ ಹೀಗೆ ಬೇರೆಬೇರೆ ದೇವಸ್ಥಾನಗಳು ಇವೆ. ಹಾಗೆಯೇ ಇಲ್ಲಿ ಭಕ್ತಾದಿಗಳ ಸಂಖ್ಯೆಯು ಕೂಡ ಪ್ರತಿ ದಿನ ಇದ್ದೆ ಇರುತ್ತದೆ. ಪ್ರತಿ ದಿನ ಆರತಿ ಪೂಜೆ ಪ್ರಸಾದ ಹಂಚಿಕೆ ಜೊತೆಗೆ ಕೆಲವೊಂದು ದೇವಸ್ಥಾನಗಳಲ್ಲಿ ಪ್ರತಿದಿನ ಅನ್ನಸಂತರ್ಪಣೆ ಕೂಡ ನಡೆಯುತ್ತದೆ .
ಪ್ರತಿಯೊಂದು ಏರಿಯಾ ಗಳಲ್ಲೂ ಸಾಮಾನ್ಯವಾಗಿ ದೇವಸ್ಥಾನಗಳು ಇದ್ದೇ ಇದೆ ಅದರಲ್ಲೂ ಭಾರತೀಯರು ಇರುವಂತಹ ಜಾಗಗಳಾದ ಕ್ರೊಯ್ದನ್ , ಟ್ರೋನ್ತನ್ ಹೀಥ್ , ಗುಡ್ ಮೇಸ್ , ಇಲ್ ಫೋರ್ಡ್ ಈಸ್ಟ್ ಹ್ಯಾಮ್ , ಸೌತ್ ಹಾಲ್ ಗಳಲ್ಲಿ ದೇವಸ್ಥಾನಗಳನ್ನು ಕಾಣಬಹುದು. ಭಾರತದ ಬಹಳಷ್ಟು ದೇವಸ್ಥಾನಗಳಲ್ಲಿರುವಂತೆ ಇಲ್ಲೂ ಕೂಡ ದೇವಸ್ಥಾನದ ಒಳ ಭಾಗಗಳಲ್ಲಿ ಫೋಟೋ ತೆಗೆಯುವುದನ್ನು ನಿಷೇದಿಸಲಾಗಿದೆ.ಕೆಲವೊಂದು
ಈಸ್ಟ್ ಹ್ಯಾಮ್ ನ ಮಹಾಲಕ್ಷ್ಮಿ ದೇವಸ್ಥಾನ :
ಈಸ್ಟ್ ಹ್ಯಾಮ್ ನಲ್ಲಿ ಮಹಾಲಕ್ಷ್ಮಿ ದೇವಸ್ಥಾನ ಇದೆ ಇದನ್ನು 1989 ರಲ್ಲಿ ಕಟ್ಟಲು ಪ್ರಾರಂಭಿಸಿದರು ಇದನ್ನು ಅಧಿಕೃತವಾಗಿ ಪ್ರಾರಂಭವಾಗಿದ್ದು 1990 ರಲ್ಲಿ . ಅಂದಿನಿಂದ ಇಂದಿಗೂ ಕೂಡ ಸದಾ ಭಕ್ತಾದಿಗಳಿಂದ ತುಂಬಿರುವ ದೇವಸ್ಥಾನವಿದು. ಈ ದೇವಸ್ಥಾನದ ಒಳಗೆ ರುದ್ರ , ಶನೀಶ್ವರ, ಅಂಜನೇಯ , ಗಣೇಶ , ಗಾಯತ್ರಿ ಹಾಗು ಲಕ್ಷ್ಮಿ ನಾರಾಯಣ ವಿಗ್ರಹಗಳು ಇವೆ.ಹಾಗೆಯೇ ಬೇರೆ ಬೇರೆ ರೀತಿಯ ಪೂಜೆಗಳನ್ನು ಕೂಡ ಇಲ್ಲಿ ಮಾಡಿಸುವ ಅವಕಾಶವಿದೆ .
ಇಲ್ ಫೋರ್ಡ್ ನ ಮುರುಗನ್ ದೇವಸ್ಥಾನ :
ಇಲ್ ಫೋರ್ಡ್ ನಲ್ಲಿ ಮುರುಗನ್ ದೇವಸ್ಥಾನವನ್ನು ಇದು ಈಸ್ಟ್ ಹ್ಯಾಮ್ ಗೆ ಹತ್ತಿರವಿರುವುದರಿಂದ ಇದನ್ನು ಈಸ್ಟ್ ಹ್ಯಾಮ್ ಮುರುಗನ್ ಟೆಂಪಲ್ ಎಂದು ಕೂಡ ಕರೆಯುತಾರೆ.ಇಲ್ಲಿ ನವಗ್ರಹ ವಿಗ್ರಹಗಳು ಮತ್ತು ದಕ್ಷಿಣ ಮೂರ್ತಿ ಮತ್ತು ದುರ್ಗಾ ದೇವಿ ವಿಗ್ರಹಗಳನ್ನು ಕಾಣಬಹುದು ಈ ದೇವಸ್ಥಾನ ವಿಶಾಲವಾಗಿದ್ದು ಭಕ್ತಿ ಮೂಡಿ ಬರುವಂತ ದೇವಸ್ಥಾನ ಜೊತೆಗೆ ಪ್ರತಿದಿನ ಇಲ್ಲಿ ಪ್ರಸಾದ ರೂಪದಲ್ಲಿ ಅಣ್ಣ ಸಂತರ್ಪಣೆ ಯನ್ನು ನಡೆಸಲಾಗುತ್ತದೆ.ಬೆಳಗ್ಗೆ 8 ರಿಂದ ಸಂಜೆ 8 ರವರೆಗೆ ತೆರೆದಿರುತ್ತದೆ. ಮತ್ತು ಮಹಾಮಂಗಳಾರತಿ ಕೂಡ ಪ್ರತಿದಿನ ನಡೆಯುತ್ತದೆ.
ವೆಂಬ್ಲಿಯ ಸನಾತನ ದೇವಸ್ಥಾನ :
ಇತ್ತೀಚಿಗೆ ಪ್ರಾರಂಭವಾದ ದೇವಸ್ಥಾನ ವೆಂಬ್ಲಿ ಯ ಸನಾತನ ದೇವಸ್ಥಾನ . ಇದು 2010 ರಲ್ಲಿ ಪ್ರಾರಂಭವಾಯಿತು ಇದನ್ನು ಕಟ್ಟಲು 14 ವರ್ಷಗಳು ಬೇಕಾದವು ಎಂಬುದು ಅಲ್ಲಿಯ ಮಾಹಿತಿದಾರರಿಂದ ತಿಳಿದುಬಂದ ವಿಷಯ . ಸುಮಾರು 2.4 ಎಕರೆಯಷ್ಟು ಜಾಗದಲ್ಲಿ ಈ ದೇವಸ್ಥಾನವನ್ನು ಕಟ್ಟಲಾಗಿದೆ.ಇದು ಗುಜರಾತಿ ಮಾದರಿಯ ದೇವಸ್ಥಾನವಾಗಿದೆ .ಹೆಸರೇ ಹೇಳುವಂತೆ ಇದು ಹಳೆಯ ದೇವಸ್ಥಾನದಂತೆ ತೋರುತ್ತದೆ. ದೇವಸ್ಥಾನದ ಶಿಖರವು 66 ಅಡಿ ಉದ್ದ ಹೊಂದಿದ್ದು ಪ್ರಸಿದ್ಧಿ ಪಡೆದಿದೆ.
ಇದು ಕೂಡ ಗುಜರಾತಿ ದೇವಸ್ಥಾನ ಇದು ಲಂಡನ್ ನಲ್ಲಿರುವ ಎಲ್ಲ ದೇವಸ್ಥಾನಗಳಲ್ಲಿ ಅತಿ ವಿಶಾಲವಾದ ಜಾಗವನ್ನು ಹೊಂದಿರುವ ದೇವಸ್ಥಾನ . ಇದನ್ನು ಆಗಸ್ಟ್ 20, 1995 ರಲ್ಲಿ ಪ್ರಾರಂಭಿಸಲಾಯಿತು .ಇದನ್ನು ನೀಸ್ಡನ್ ದೇವಸ್ಥಾನ ಎಂದು ಕರೆಯುತ್ತಾರೆ. ಈ ದೇವಸ್ಥಾನದ ಎದುರಿಗೆ ಇವರದೇ ಸಂಸ್ಥೆಯ ಶಾಲೆಯನ್ನು ಕೂಡ ಕಟ್ಟಲಾಗಿದೆ . ಜೊತೆಗೆ ಇವರದೇ ಆದ ಚಾರಿಟಿ ಗಳು ಕೂಡ ಇವೆ.ಇದನ್ನು ಪ್ರಾಚೀನ ವೈದಿಕ ದರ್ಮದ ಪ್ರಕಾರವಾಗಿ ಮತ್ತು ಭಾರತೀಯ ವಸ್ತು ಶಾಸ್ತ್ರದ ಪ್ರಕಾರ ಕಟ್ಟಲಾಗಿದೆ ಎನ್ನಲಾಗುತ್ತದೆ. ಜೊತೆಗೆ ಈ ದೇವಸ್ಥಾನ ಸಂಪೂರ್ಣವಾಗಿ ಬಲ್ಗೇರಿಯನ್ ಲೈಮ್ ಸ್ಟೋನ್ ಮತ್ತು ಇಟಾಲಿಯನ್ ಮಾರ್ಬಲ್ ಮತ್ತು ಭಾರತದ ಅಂಬಾಜಿ ಕಲ್ಲಿನಿಂದ 2 ವರೆ ವರ್ಷಗಳೊಳಗೆ ಕಟ್ಟಲಾಗಿದೆ. ಇಲ್ಲಿ ಶ್ರೀಕೃಷ್ಣ , ಸ್ವಾಮಿನಾರಾಯಣ ನ ಮೂರ್ತಿಗಳಿವೆ. ದೇವಸ್ಥಾನದ ಹೊರಗೂ ಕೂಡ ವಿಶಾಲವಾದ ಸ್ಥಳವಿದ್ದು ಅಲ್ಲಿ ಸಣ್ಣದೊಂದು ಉದ್ಯಾನವನವನ್ನು ಕೂಡ ನಿರ್ಮಿಸಲಾಗಿದೆ .ಇದಲ್ಲದೆ ಭಾರತದಿಂದ ಬಂದ ಎಲ್ಲ ರಾಷ್ಟ್ರಪತಿ ಪ್ರಧಾನಮಂತ್ರಿಗಳು ಗಣ್ಯ ವ್ಯಕ್ತಿಗಳು ಭೇಟಿನೀಡುವ ದೇವಸ್ಥಾನ ಇದಾಗಿದೆ.
ಇದಿಷ್ಟೇ ಅಲ್ಲ ಲಂಡನ್ ನಿಂದ ಹೊರಗೆ ಅಂದರೆ ಸುಮಾರು ಒಂದು ಗಂಟೆ ಪ್ರಯಾಣದಲ್ಲಿ ಸಿಗುವ ಬರ್ಮಿಂಗ್ ಹ್ಯಾಮ್ ನ ದೇವಸ್ಥಾನ ಕೂಡ ಇಲ್ಲಿ ಪ್ರಸಿದ್ಧಿ . ಹೀಗೆ ಸಾಕಷ್ಟು ದೇವಾಲಯಗಳು ಪ್ರತಿದಿನವೂ ಭಾರತೀಯ ಪೂಜೆ ಪುನಸ್ಕಾರಗಳಲ್ಲಿ ನಡೆಯುತ್ತಿದೆ .
ಇದಿಷ್ಟೇ ಅಲ್ಲ ಲಂಡನ್ ನಿಂದ ಹೊರಗೆ ಅಂದರೆ ಸುಮಾರು ಒಂದು ಗಂಟೆ ಪ್ರಯಾಣದಲ್ಲಿ ಸಿಗುವ ಬರ್ಮಿಂಗ್ ಹ್ಯಾಮ್ ನ ದೇವಸ್ಥಾನ ಕೂಡ ಇಲ್ಲಿ ಪ್ರಸಿದ್ಧಿ . ಹೀಗೆ ಸಾಕಷ್ಟು ದೇವಾಲಯಗಳು ಪ್ರತಿದಿನವೂ ಭಾರತೀಯ ಪೂಜೆ ಪುನಸ್ಕಾರಗಳಲ್ಲಿ ನಡೆಯುತ್ತಿದೆ .
No comments:
Post a Comment