Published in ekanasu ":http://www.ekanasu.com/2013/01/blog-post_3259.html
ಸುತ್ತ ಮುತ್ತ ಎಲ್ಲಿ ನೋಡೇ
ಬರೀ ಮಂಜು ಮಂಜು
ಬಿಳಿಯರ ನಾಡಿನಲ್ಲಿ
ಎಲ್ಲೆಡೆ ಹರಡಿಹುದು ಬಿಳಿ ಬೆಳ್ಳಿ ಮಂಜು
ಹಸಿರು ಗಿಡವು ಹೊತ್ತಂತಿಹುದು
ಬಿಳಿ ಮಂಜು ಹೂವ !
ನೋಡಲೆಂದು ಹತ್ತಿರ ಹೋಗೆ ಬೀಳುವುದು
ಮೈಯ ಮೇಲೆ ಮಂಜಿನ ಕಲರವ
ಸುಂದರವೆಂದು ಕೈಯಲ್ಲಿ ಹಿಡಿಯೆ
ಬರೀ ಕೆಲವೇ ನಿಮಿಷಗಳು
ನೋಡನೋಡುತ್ತಿದ್ದ ಹಾಗೆ ಕರಗಿಬಿಡು ವುದು ಈ ಬೆಳ್ಳಿ ಮಂಜು
ಬೆರಗಾಗಲೇ ಬೇಕು ಸೃಷ್ಟಿಕರ್ತನ
ಈ ಸೊಬಗನೋಡಿ
ಇದಕೆ ಇಹುದೆ ಸಾಟಿ ಬೇರೆ ಈ ಜಗತ್ತಿನಲ್ಲಿ !!
ಲಂಡನ್
No comments:
Post a Comment