ಈ ನನ್ನ ಲೇಖನವು 11/1/13 ವಿಜಯ ನೆಕ್ಸ್ಟ್ ನಲ್ಲಿ ಪ್ರಕಟಗೊಂಡಿದೆ <a> http://www.vijayanextepaper.com/Details.aspx?id=643&boxid=1961916<a/>
ಈಗ 3 ತಿಂಗಳ ಹಿಂದೊಮ್ಮೆ ಲಂಡನ್ ನಿಂದ ಭಾರತಕ್ಕೆ ಹೋಗಿದ್ದೆವು . ನಾನು ಸ್ವಲ್ಪ ಮುಂಚಿತವಾಗಿ ಭಾರತ ಸೇರಿದ್ದೆ . ನನ್ನ ಪತಿ ಗೆ ಕೇವಲ 15 ದಿನ ರಜಾ ಸಿಕ್ಕಿದ್ದರಿಂದ ಸ್ವಲ್ಪ ತಡವಾಗಿ ಬಂದರು . ಬೆಂಗಳೂರಿಗೆ ಬಂದು ಇಳಿಯುವಾಗ ಸುಮಾರು 4 ಗಂಟೆ ಆಗಿತ್ತು .ಏರ್ಪೋರ್ಟ್ ನಲ್ಲಿ ಸಿಗುವ ಕ್ಯಾಬ್ ನಲ್ಲಿ ಮನೆಗೆ ಬರಲು ನಿರ್ಧರಿಸಿದ್ದರಿಂದ ಕ್ಯಾಬ್ ಡ್ರೈವರ್ ಹತ್ತಿರ ಇರುವ ಫೋನ್ ನಿಂದ ನನಗೆ ಕಾಲ್ ಮಾಡಿ ಕ್ಯಾಬ್ ಸಿಕ್ಕಿರುವ ಬಗ್ಗೆ ತಿಳಿಸಿದ್ದರು . ಇದಾದ ಸುಮಾರು 2 ತಾಸಿನ ನಂತರ ಮನೆ ತಲುಪಿದರು . ತಲುಪುದ್ದಿದ್ದಂತೆ ಅಲ್ಲಿ ಕಾಯುತ್ತಿದ್ದ ಎಲ್ಲರನ್ನು ನೋಡಿದ ಕುಶಿಯಲ್ಲಿ ( 1 ವರೆ ವರ್ಷದ ನಂತರ ಭಾರತಕ್ಕೆ ಬಂದಿದ್ದ ಕುಶಿಯಲ್ಲಿ ) ಒಳ ಬಂದರು . ಕಾರಿನ ಹಿಂದೆ ಡಿಕ್ಕಿಯಲ್ಲಿ ಇದ್ದ 2 ಬ್ಯಾಗ್ ಅನ್ನು ಡ್ರೈವರ್ ಇಳಿಸಿ ಕೊಟ್ಟು ಹೋದ. ನಂತರ ಸುಮಾರು 2 ತಾಸು ಮಾತನಾಡುತ್ತ ಕುಳಿತಿದ್ದೆವು.
ಆಗ ನನ್ನ ಮೊಬೈಲ್ ಗೆ ಒಂದು ಫೋನ್ ಬಂತು ಮೊದಲು ಈ ನಂಬರ್ ನಿಂದಲೇ ನನ್ನ ಪತಿ ನನಗೆ ಫೋನ್ ಮಾಡಿದ್ದರಿಂದ ಇದು ಡ್ರೈವರ್ ನಂಬರ್ ಎಂದು ತಿಳಿಯಿತು .ಫೋನ್ ರಿಸೀವ್ ಮಾಡುತ್ತಿದ್ದಂತೆ ಆತ ಮೇಡಂ ಈಗ ಲಂಡನ್ ನಿಂದ ನನ್ನ ಕ್ಯಾಬ್ ನಲ್ಲಿ ಬಂದರಲ್ಲ ಅವರದ್ದೊಂದು ಬ್ಯಾಗ್ ನನ್ನ ಕಾರ್ ನಲ್ಲಿಯೇ ಇದೆ ಎಂದರು. ಆಗ ನೆನಪಿಗೆ ಬಂದದ್ದು ಲ್ಯಾಪ್ ಟಾಪ್, ಕ್ಯಾಮರ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ವೀಸಾ ಪಾಸ್ಪೋರ್ಟ್.
ಎಲ್ಲ ಆ ಬ್ಯಾಗ್ ನಲ್ಲಿಯೇ ಇತ್ತು ಅದು ಈಗ ಕಾರ್ ನಲ್ಲೆ ಉಳಿದುಹೋಗಿದೆ . ಆಗಲೇ ಸಮಯ 7 ಗಂಟೆ ಆಗಿದ್ದರಿಂದ ಮತ್ತೆ ಏರ್ಪೋರ್ಟ್ ಗೆ ಹೋಗಿ ತರುವುದು ಕಷ್ಟದ ಕೆಲಸ ಬೇರೆ. ಕ್ಯಾಬ್ ಡ್ರೈವರ್ ಹತ್ತಿರ ದಯವಿಟ್ಟು ನೀವೇ ತಂದುಕೊಡಿ ಎಂದು ಕೇಳಿಕೊಂಡೆವು ಆತ ತಂದುಕೊಡಲು ಒಪ್ಪಿಕೊಂಡ ಸುಮಾರು 2 ತಾಸಿನ ನಂತರ ನಮಗೆ ಆ ಬ್ಯಾಗ್ ಸಿಕ್ಕಿತು .
ಆ ಡ್ರೈವರ್ ಬ್ಯಾಗ್ ನಲ್ಲಿ ಏನಿದೆ ಎಂದು ಕೂಡ ತೆಗೆದು ನೋಡಿರಲಿಲ್ಲ . ಇಂದಿನ ಕಾಲದಲ್ಲೂ ಪ್ರಾಮಾಣಿಕರು ಇರುವುದನ್ನು ನೋಡಿ ಕುಶಿಯಾಯಿತು. ಅದಲ್ಲದೆ ಇನ್ನು 15 ದಿನದಲ್ಲಿ ವಾಪಾಸ್ ಹೋಗಲು ರಿಟರ್ನ್ ಟಿಕೆಟ್ ಬುಕ್ ಆಗಿತ್ತು ಜೊತೆಗೆ ವೀಸಾ ಮಾಡಿಸುವುದು ಬಹಳ ಕಷ್ಟದ ಕೆಲಸ 15 ದಿನದಲ್ಲಿ ಹೊಸದಾಗಿ ಪಾಸ್ಪೋರ್ಟ್ ಮತ್ತು ವೀಸಾ ಮಾಡಿಸುವುದು ಸಾಧ್ಯವೇ ಆಗುತ್ತಿರಲ್ಲಿಲ್ಲ . ಜೊತೆಗೆ ಆತ ಫೋನ್ ಮಾಡದೆ ಇರುತ್ತಿದ್ದರೆ ಅಥವಾ ನಮ್ಮ ಫೋನ್ ರಿಸೀವ್ ಮಾಡದೆ ಇರುತ್ತಿದ್ದರೆ ನಮಗೆ ನಮ್ಮ ಲ್ಯಾಪ್ ಟಾಪ್ , ಕ್ಯಾಮರ, ಮತ್ತು ವೀಸಾ ಪಾಸ್ಪೋರ್ಟ್ ಯಾವುದೂ ಸಿಗುತ್ತಲೇ ಇರುತ್ತಿರಲಿಲ್ಲ.
ಆತನ ಪ್ರಾಮಾಣಿಕತೆಗೆ ನನ್ನ ಕಡೆಯಿಂದೊಂದು ಸಲಾಂ .
ಅರ್ಪಿತಾ ಹರ್ಷ
ಲಂಡನ್
nandoo ondu salam :)
ReplyDelete:)
ReplyDelete