ಆದರೆ ಒಬ್ಬಬ್ಬರು ಮಾಡುವ ಅಡುಗೆ ಒಂದೊಂದು ರೀತಿಯಲ್ಲಿರುತ್ತದೆ . ಕೆಲವರ ಕೈ ರುಚಿಯೇ ಬೇರೆ . ನನ್ನ ಪತಿಯ ಚಿಕ್ಕಮ್ಮ ಪಲಾವ್ ಚೆನ್ನಾಗಿ ಮಾಡುತ್ತಾರೆ . ಈ ಭಾರಿ ಊರಿಗೆ ಹೋದಾಗ ನಮ್ಮ ಚಿಕ್ಕ ಅತ್ತೆ ಕೈಯಲ್ಲಿ ಪಲಾವ್ ಮಾಡುವುದು ಹೇಳಿಸಿ ಕೊಳ್ಳಬೇಕು ಎಂಬ ಆಸೆ ಇತ್ತು .
ನಾನು ಅವರ ಮನೆಗೆ ಹೋಗಿದ್ದೆ . ಒಂದು ದಿನ ಹೇಗೆ ಪಲಾವ್ ಮಾಡುವುದು ಎಂದು ಹೇಳಿಕೊಟ್ಟರು ಹಸಿರು ಪಲಾವ್ . ರುಬ್ಬಿ ಮಾಡುವ ಪಲಾವ್ ಆದ್ದರಿಂದ ಅದು ತುಂಬಾ ಟೇಸ್ಟ್ ಕೊಡುತ್ತದೆ ಮತ್ತು ಅದು ತುಂಬಾ ಚನ್ನಾಗಿತ್ತು .
ಮತ್ತೊಂದು ದಿನ ಮನೆಗೆ ತುಂಬಾ ಜನ ನೆಂಟರು ಬರುವವರಿದ್ದರು . ಒಬ್ಬೊಬ್ಬರು ಒಂದೊಂದು ಅಡುಗೆ ಮಾಡಿದರೆ ಬೇಗ ಆಗುತ್ತದೆ ಎಂದು ತೀರ್ಮಾನಿಸಿದೆವು. ನನಗೆ ನಾನು ಕಲಿತ ಪಲಾವ್ ಅನ್ನು ಮತ್ತೊಮ್ಮೆ ಮಾಡಬೇಕು ಎಂಬ ಆಸೆ ಇತ್ತು . ನಾನು ಪಲಾವ್ ಮಾಡುವುದಾಗಿ ಹೇಳಿದೆ . ಅವರು ಕುಶಿಯಿಂದ ಒಪ್ಪಿದರು ನಾನು ಅವ್ರು ಹೇಳಿಕೊಟ್ಟಂತ ರೀತಿಯಲ್ಲೇ ಪಲಾವ್ ಮಾಡಿದೆ .
ನಾನು ಮಾಡಿದ ಪಲಾವ್ ಎಲ್ಲ ರೆಡಿ ಆಗಿತ್ತು ಅನ್ನ ಹಾಕಿ ಕಲೆಸಿಯೂ ಆಗಿತ್ತು . ಅವರು ಒಲೆಯಮೇಲೆ ಒಗ್ಗರಣೆಗೆ ಇಟ್ಟಿದ್ದರು ನಾನು ಯೋಚಿಸಿದೆ ಮೊನ್ನೆ ಹೇಳಿಕೊಟ್ಟ ಪಲಾವ್ ನಲ್ಲಿ ಒಗ್ಗರಣೆ ಇರಲಿಲ್ಲವಲ್ಲ ಎಂದು .ಅದು ಬೆಂದ ಕಾರಣ ನಾನು ಕೇಳಿದೆ ಹಾಕಲಾ ಎಂದು ಅವರು ಹಾಕು ಹಾಕಿದರೆ ಇನ್ನೂ ಟೇಸ್ಟ್ ಬರುತ್ತದೆ ಎಂದರು ನಾನು ಒಗ್ಗರಣೆ ತೆಗೆದು ಪಲಾವ್ ಗೆ ಸುರಿದುಬಿಟ್ಟೆ . ಆದರೆ ಅವರು ಒಗ್ಗರಣೆ ಮಾಡಲು ಹೇಳಿದ್ದು ರಾಯತಕ್ಕಾಗಿತ್ತು .ನಾನು ಕೇಳದೆಯೇ ಪಲಾವ್ ಗೆ ಹಾಕಿಬಿಟ್ಟಿದ್ದೆ .
ಪಲಾವ್ ಏನು ಹಾಳಾಗಲಿಲ್ಲ ಆದರೆ ನಾನು ಮಾಡಿದ ಎಡವಟ್ಟು ಕೆಲಸದಿಂದ ಎಲ್ಲರೂ ಜೋರಾಗಿ ನಕ್ಕೆವು .
ಅರ್ಪಿತಾ ಹರ್ಷ
ಲಂಡನ್
No comments:
Post a Comment