ಈ ನನ್ನ ಲೇಖನವು ೧೫/೦೩/೨೦೧೩ ವಿಜಯನೆಕ್ಸ್ಟ್ ನಲ್ಲಿ ಪ್ರಕಟಗೊಂಡಿದೆ
ಮಿಸ್ಸಲ್ ಪಾವ್ ಎಂಬುದೊಂದು ಮಹಾರಾಷ್ಟ್ರದ ಚಾಟ್ . ಇದು ಬಹಳ ಪ್ರಖ್ಯಾತಿ ಹೊಂದಿದ ಚಾಟ್ . ಇದನ್ನು ಮುಂಬೈ ಮತ್ತು ಪುಣೆಯಲ್ಲಿ ಚಾಟ್ ರೀತಿಯಲ್ಲೂ ಸೇವಿಸುತ್ತಾರೆ ಮತ್ತು ಕೆಲವೊಮ್ಮೆ ಊಟದ ಜೊತೆಯೂ ಇದು ಹೊಂದುತ್ತದೆ .
ಮಿಸ್ಸಲ್ ಪಾವ್ ಎಂಬುದೊಂದು ಮಹಾರಾಷ್ಟ್ರದ ಚಾಟ್ . ಇದು ಬಹಳ ಪ್ರಖ್ಯಾತಿ ಹೊಂದಿದ ಚಾಟ್ . ಇದನ್ನು ಮುಂಬೈ ಮತ್ತು ಪುಣೆಯಲ್ಲಿ ಚಾಟ್ ರೀತಿಯಲ್ಲೂ ಸೇವಿಸುತ್ತಾರೆ ಮತ್ತು ಕೆಲವೊಮ್ಮೆ ಊಟದ ಜೊತೆಯೂ ಇದು ಹೊಂದುತ್ತದೆ .
ಮಿಸ್ಸಲ್ ಪಾವ್ ಮಾಡಲು ಬೇಕಾದ ಸಾಮಗ್ರಿಗಳು :
೧ . ಮೊಳಕೆ ಬರಿಸಿದ ಹೆಸರು ಕಾಳು ಅರ್ಧ ಕಪ್
೨. ಶೇವಿಗೆ / ಕಾರದ ಕಾಳು ಅರ್ಧ ಕಪ್
೩. ಪಾವ್ ಅಥವಾ ಬ್ರೆಡ್ ೫
೪. ಹಸಿ ಮೆಣಸಿನ ಕಾಯಿ ೨
೫. ಈರುಳ್ಳಿ ಅರ್ಧ ಕಪ್ ಹೆಚ್ಚಿದ್ದು
೬. ಟೊಮೇಟೊ ಅರ್ಧ ಕಪ್ ಹೆಚ್ಚಿದ್ದು
೭. ತುರಿದ ಕಾಯಿ ಅರ್ಧ ಕಪ್
೮.ಚಕ್ಕೆ -೧
೯.ಲವಂಗ ೨
೧೦. ಮೆಣಸಿನ ಪುಡಿ ಅರ್ಧ ಚಮಚ
೧೧. ಕೊತ್ತುಂಬರಿ ಪುಡಿ ಅರ್ಧ ಚಮಚ
೧೨. ಜೀರಿಗೆ ಅರ್ಧ ಚಮಚ
೧೩ ಬೆಳ್ಳುಳ್ಳಿ ೧
೧೪. ರುಚಿಗೆ ತಕ್ಕಷ್ಟು ಉಪ್ಪು
೧೫. ಹುಣಸೆ ಹಣ್ಣಿನ ರಸ ಸ್ವಲ್ಪ
ಮಾಡುವ ವಿಧಾನ :
೧.ಮೊದಲು ಮೊಳಕೆಬರಿಸಿದ ಹೆಸರು ಕಾಳನ್ನು ಕುಕ್ಕರ್ ನಲ್ಲಿಟ್ಟು ಬೇಯಿಸಿಕೊಳ್ಳಬೇಕು . ನಂತರ ಅದಕ್ಕೆ ಕಾರದ ಪುಡಿ ,ಉಪ್ಪು , ನಿಂಬೆ ಹುಳಿ ಹಾಕಿ ಕೊಸಂಬರಿಯ ರೀತಿ ತಯಾರಿಸಿಟ್ಟುಕೊಳ್ಳಬೇಕು .
೩. ತುರಿದಿಟ್ಟ ಕಾಯಿಗೆ ಮೆಣಸಿನ ಪುಡಿ , ಕೊತ್ತುಂಬರಿ ಪುಡಿ, ಜೀರಿಗೆ, ಬೆಳ್ಳುಳ್ಳಿ , ಹುಣಸೆಹಣ್ಣಿನ ರಸ ಹಾಕಿ ರುಬ್ಬಿಕೊಳ್ಳಬೇಕು .
೪. ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಸಾಸಿವೆ ಉದ್ದಿನಬೇಳೆ ಹಾಕಿ ಬೆಂದ ನಂತರ ರುಬ್ಬಿದ ಮಸಾಲವನ್ನು ಅದಕ್ಕೆ ಹಾಕಿ ೫ ನಿಮಿಷ ಚೆನ್ನಾಗಿ ತಿರುಗಿಸಬೇಕು .
೫. ಈಗ ಪ್ಲೇಟ್ ಗೆ ಮಾಡಿಟ್ಟ ಹೆಸರುಕಾಳು ಮಸಾಲ ಮೊದಲು ಹಾಕಿ ನಂತರ ರುಪ್ಪಿದ ಬಿಸಿ ಮಸಾಲವನ್ನು ಅದರ ಮೇಲೆ ಹಾಕಿ ನಂತರ ಹೆಚ್ಚಿತ್ತ ಈರುಳ್ಳಿ ಮತ್ತು ಟೊಮೇಟೊ ಹಾಕಿ ಅದರ ಮೇಲೆ ಶಾವಿಗೆ ಕಾಳು ಹಾಕಿ ಮೇಲೆ ಕೊತ್ತುಂಬರಿ ಸೊಪ್ಪು ಉದುರಿಸಿ ಪಕ್ಕದಲ್ಲಿ ಪಾವ್ ಅಥವಾ ಬ್ರೆಡ್ ಇಟ್ಟು ತಿನ್ನಲು ಕೊಡಿ . ೨ ಬ್ರೆಡ್ ನೊಂದಿಗೆ ತಿಂದರೆ ಹೊಟ್ಟೆ ತುಂಬುತ್ತದೆ . ಮಕ್ಕಳು ಕೂಡ ಇಷ್ಟಪಡುವ ಚಾಟ್ ಇದು .
Arpitha Harsha
No comments:
Post a Comment