ಅದೊಂದು ಕಾಲವಿತ್ತು ವಾರಾಂತ್ಯ ಬಂದರೆ ಮನೆ ಕ್ಲೀನ್ ಮಾಡುವುದು . ಇಂದಿಗೂ ಕೂಡ ಬೆಂಗಳೂರಿನ ಬ್ಯುಸಿ ಲೈಫ್ ನಲ್ಲಿ ಕಳೆದುಹೊಗಿರುವವರು ಭಾನುವಾರವನ್ನು ಮನೆ ಕ್ಲೀನ್ ಮಾಡುವುದು ಇಲ್ಲ ಮನೆಗೆ ಬೇಕಾದ ಸಾಮಾನು ತರುವುದು ಬಿಲ್ ಕಟ್ಟಿ ಬರುವುದು ಹೇರ್ ಕಟ್ ಇಲ್ಲವೇ ಬ್ಯೂಟಿ ಪಾರ್ಲರ್ ಗಳಿಗೆ ಹೋಗುವುದು ಹೀಗೆ ಮೀಸಲಿಡುತ್ತಾರೆ . ಆದರೆ ಈ ಲಂಡನ್ ನಲ್ಲಿ ಹಾಗಲ್ಲ . ವಾರಾಂತ್ಯ ಬಂದರೆ ಹೊಸ ಜಾಗ ನೋಡಲು ಹೋಗುವುದು . ನನಗೆ ಮೊದಲಿನಿಂದಲೂ ಸುತ್ತುವುದೆಂದರೆ ಬಹಳ ಇಷ್ಟ ಅದಕ್ಕೆ ಸರಿಯಾಗಿ ನನ್ನ ಪತಿಗೂ ಶನಿವಾರ ಬಾನುವಾರ ಎಂದರೆ ಹೊರಗೆ ಹೋಗಬೇಕು ಹೊಸಜಾಗ ನೋಡಬೇಕು ೨ ವರ್ಷಗಳಿಂದ ಲಂಡನ್ ಸುತ್ತಿ ಈಗ ಎಲ್ಲ ಹತ್ತಿರದ ಜಾಗಗಳು ಪ್ರವಾಸಿ ಸ್ಥಳಗಳು ಚರಪರಿಚಿತವಾಗಿ ಹೋಗಿವೆ.
ಹಾಗೆ ಹತ್ತಿರದ ಎಲ್ಲ ಸ್ಥಳಗಳನ್ನು ಭೇಟಿ ನೀಡಿ ಆದದ್ದರಿಂದ ಈಗ ಪಾರ್ಕ್ ಗಳು , ಸಿನೇಮ ಗಳಿಗೆ ಹೋಗುವುದು ಪ್ರಾರಮ್ಭಿಸಿಯಾಗಿದೆ . ಆದರೂ ನಮ್ಮದೊಂದು ಫೆವರೆಟ್ ಸ್ಥಳವೆಂದರೆ ಟವರ್ ಬ್ರಿಡ್ಜ್ . ಲಂಡನ್ ನ ಟವರ್ ಬ್ರಿಡ್ಜ್ ಯಾರಿಗೆ ತಾನೇ ಇಷ್ಟವಿಲ್ಲ ಇಲ್ಲಿ ಬಂದ ಎಲ್ಲರಿಗು ಲಂಡನ್ ಬ್ರಿಡ್ಜ್ (ಟವರ್ ಬ್ರಿಡ್ಜ್) ನೋಡುವುದೇ ಒಂದು ಸಂತೋಷ . ಎಷ್ಟು ಭಾರಿ ನೋಡಿದರೂ ಮನ ತಣಿಯದು ಮತ್ತೆ ಮತ್ತೆ ನೋಡಲೇ ಬೇಕು ಎಂದೆನಿಸುವ ಸ್ಥಳವದು. ಹಾಗೆ ನಮ್ಮಿಬ್ಬರಿಗೂ ಈ ಸ್ಥಳ ಬಹಳ ಇಷ್ಟ .
ಅದು ಬಹಳ ಇಷ್ಟವಾಗಲು ಕಾರಣಗಳೂ ಇವೆ. ನಮ್ಮವರನ್ನೆಲ್ಲ ಬಿಟ್ಟು ಬಹು ದೂರ ಬಂದಾಗ ಹಳೆಯ ನೆನಪುಗಳು ಬಹಳ ಕಾಡುತ್ತದೆ. ಆ ಬಾಲ್ಯ , ಅಪ್ಪ ಅಮ್ಮನೊಂದಿಗೆ ಮಾಡಿದ ಹಠ, ಅವರ ಜೊತೆ ಕಳೆದ ನೆನಪುಗಳು , ಹಾಗೆ ನಮ್ಮ ಊರು , ಅಲ್ಲಿಯ ಬೋರ್ಗರೆಯುವ ಮಳೆ, ಮಳೆಯಲ್ಲಿ ಅಲೆದ ದಿನಗಳು , ಹೀಗೆ ಸಾಕಷ್ಟು . ಅದರಲ್ಲೂ ನಾನು ನನ್ನ ಪತಿ ಇಬ್ಬರೂ ಒಂದೆಕಡೆಯವರಾಗಿದ್ದರಿಂದ (ಮಲೆನಾಡಿನವರಾಗಿದ್ದರಿಂದ) ನಮಗೆ ಆ ನೆನಪುಗಳು ಆ ಹಸಿರು , ಮಳೆ , ಅಲ್ಲಿ ಕಳೆದ ಬಾಲ್ಯದ ದಿನಗಳು ಬಹಳ ಕಾಡುತ್ತದೆ . ಅದು ನಮಗೆ ಕಾಡುವುದು ಮತ್ತು ನಾವು ಅದನ್ನು ಕುಳಿತು ನೆನಪಿಸಿಕೊಂಡು ಒಬ್ಬರಿಗೊಬ್ಬರು ಹಂಚಿಕೊಳ್ಳುವುದು ಲಂಡನ್ ಬ್ರಿಡ್ಜ್ ನ ಪಕ್ಕದಲ್ಲಿ ಇರುವ ಕಲ್ಲಿನ ಹಾಸಿನ ಮೇಲೆ ಕುಳಿತುಕೊಂಡಾಗ. ಹಾಗೆ ಮಾತನಾಡುತ್ತ ಕುಳಿತುಕೊಂಡರೆ ನಮಗೆ ಲಂಡನ್ ಬ್ರಿಡ್ಜ್ ನ ದೀಪಗಳು ಜಗಮಗಿಸಹತ್ತಿದಾಗ ಎಚ್ಚರವಾಗುತ್ತದೆ ಒಹ್ ಎಷ್ಟು ಕತ್ತಲಾಗಿಬಿಟ್ಟಿತು ಮಾತನಾಡುತ್ತ ಸಮಯ ಕಳೆದದ್ದೇ ತಿಳಿಯಲಿಲ್ಲ ಎಂಬುದು.
ಹಾಗೆ ನಾವಿಬ್ಬರೂ ಒಟ್ಟು ಕುಳಿತು ಮಾತನಾಡಿ ಬಂದರೆ ನಮಗೆ ವೀಕೆಂಡ್ ಚನ್ನಾಗಿ ಕಳೆದೆವು ಸಾರ್ಥಕ ಎಂಬ ಭಾವ ಕೂಡ . ಮಧುರ ನೆನಪುಗಳು ಬೇಕು ಸವಿಯಲು ಈ ಬದುಕು ಎಂದು ಹೀಗೆ ಜೊತೆ ಕುಳಿತು ಹರಟಿದಾಗೆಲ್ಲ ಅನ್ನಿಸುತ್ತದೆ . ನಮ್ಮಲ್ಲಿ ನಾವು ಕಳೆದು ಹೋಗುವಂತೆ ಮಾಡುವ ಆ ಬಾಲ್ಯ ಜೊತೆಗೆ ಈ ಲಂಡನ್ ನ ಟವರ್ ಬ್ರಿಡ್ಜ್ ನಮ್ಮಿಬ್ಬರಿಗೂ ಬಹಳ ಇಷ್ಟ .
No comments:
Post a Comment