ಈ ನನ್ನ ಲೇಖನವು ೨೬/೦೩/೧೩ ಉದಯವಾಣಿಯಲ್ಲಿ ಪ್ರಕಟಗೊಂಡಿದೆ
ಈಗ ಸುಮಾರು ವರ್ಷಗಳ ಹಿಂದಿನ ಕಥೆ ಇದು . ಕಥೆ ಎಂದರೆ ಕಥೆಯಲ್ಲ ನಿಜವಾಗಿ ನಡೆದ ಘಟನೆ .ಆಗ ನಾನು ೭ ನೆ ಕ್ಲಾಸ್ ನಲ್ಲಿದ್ದೆ .ನಮ್ಮದು ಮಲೆನಾಡಿನ ಹಳ್ಳಿ . ಮಳೆಗಾಲದ ಒಂದು ದಿನ ವಾಗಿತ್ತು. ಮಳೆಗಾಲದ ದಿನಗಳಲ್ಲಿ ಅಲ್ಲಿ ಸುರಿಯುವ ಮಳೆ ನೋಡಿಯೇ ಆನಂದಿಸಬೇಕು. ಹೀಗಿರುವಾಗ ಒಂದು ದಿನ ಮಳೆ ಸುರಿಯುತ್ತಿತ್ತು ನಾವೆಲ್ಲಾ ಊಟ ಮಾಡಿ ಬೇಗ ಮಲಗಿದ್ದೆವು . ಅಣ್ಣ ಮಾತ್ರ ಪ್ರತಿ ಬುದವಾರ ಟಿವಿಯಲ್ಲಿ ಬರುವ ಒಂದು ಸಿ ಐ ಡಿ ಷೋ ಒಂದನ್ನು ನೋಡಿಯೇ ಮಲಗುವುದಾಗಿತ್ತು . ಹಾಗೆ ಒಂದು ಬುದವಾರ ಸಿ ಐ ಡಿ ಷೋ ನೋಡುತ್ತಿದ್ದ ಅದರಲ್ಲಿ ತೋರಿಸುತ್ತಿದ್ದ ಕೊಲೆ ಆತನಿಗೆ ಬಹಳ ಭಯ ಹುಟ್ಟಿಸಿತ್ತು .ಆಗಿನ್ನೂ ಆತ ೮ನೆ ತರಗತಿ . ಅದೇ ಸಮಯಕ್ಕೆ ಕರೆಂಟ್ ಹೋಗಿಬಿಟ್ಟಿತ್ತು . ಮಳೆಗಾಲದಲ್ಲಿ ಆಗಾಗ ಕರೆಂಟ್ ತೆಗೆಯುತ್ತಿರುತ್ತಾರೆ.

ಆತ ಹೆದರುತ್ತಲೇ ಮಲಗಲು ನಿಧಾನವಾಗಿ ನಡೆದು ಬರುತ್ತಿದ್ದ . ಆಗೆಲ್ಲ ನಮ್ಮ ಮನೆಯಲ್ಲಿ ಎಲ್ಲರು ಸಾಲಾಗಿ ಮಲಗಿರುತ್ತಿದ್ದೆವು .ಅಣ್ಣ ಒಬ್ಬೊಬ್ಬರನ್ನೇ ದಾಟಿ ಮುಂದೆ ಹೋಗಿ ತನ್ನ ಜಾಗದಲ್ಲಿ ಮಲಗಿಕೊಳ್ಳಬೇಕು. ಹಾಗೆಯೇ ಬರುತ್ತಿದ್ದ ಅಷ್ಟರಲ್ಲಿ ಅಪ್ಪ - ಅಣ್ಣನ ಕೈ ಹಿಡಿದು ಜೋರಾಗಿ ಕೂಗಿಕೊಂಡರು ಅಣ್ಣ ಅಪ್ಪನಿಗಿಂತ ಜೋರಾಗಿ ಕೂಗಿಕೊಂಡ. ಎಲ್ಲರೂ ಏನಾಯಿತು ಎಂದು ಎದ್ದು ಗಾಬರಿಗೊಂಡೆವು . ಅಷ್ಟರಲ್ಲಿ ಹೋದ ಕರೆಂಟ್ ಪುನಃ ಬಂದಿತ್ತು .
ಇತ್ತ ನಿದ್ದೆಗೆ ಜಾರುತ್ತಿದ್ದ ಅಪ್ಪನಿಗೆ ಕನಸೊಂದು ಬೀಳುತ್ತಿತ್ತು . ಕನಸಿನಲ್ಲಿ ಮನೆಯಲ್ಲಿರುವ ಅಡಕೆಯನ್ನು ಕದಿಯಲು ಕಳ್ಳರು ಮನೆಗೆ ನುಗ್ಗಿದ್ದರು . ಅಪ್ಪ ಅದನ್ನು ನೋಡುತ್ತಿದ್ದಾರೆ ದೂರದಲ್ಲೆಲ್ಲೋ ಅಡಿಕೆಯನ್ನು ಸುರಿಯುವ ಶಬ್ದ ಕೂಡ ಕೇಳುತ್ತಿದೆ . ಆದರೆ ಕಣ್ಣು ಬಿಟ್ಟು ಹಿಡಿಯಲು ಆಗುತ್ತಿಲ್ಲ.
ಕಣ್ಣು ಬಿಡಲು ಆಗದಂತೆ ಏನೋ ಮಾಡಿದ್ದರೆ ಹೀಗೆ ಕನಸು ಮುಂದುವರೆಯುತ್ತಿರುವಾಗ ಅಣ್ಣ ಅಪ್ಪನನ್ನು ದಾಟಿಕೊಂಡು ಮುಂದೆ ಹೋಗುತ್ತಿದ್ದ ಅಪ್ಪ ಕಳ್ಳ ಎಂದುಕೊಂಡು ಹಿಡಿದುಕೊಂದುಬಿಟ್ಟರು .
ಇನ್ನೇನು ಹೊಡೆಯಬೇಕು ಅನ್ನುವಷ್ಟರಲ್ಲಿ ಅಣ್ಣ ನು ಕೂಗಿಕೊಂಡ ಅಪ್ಪನು ಕೂಗಿಕೊಂಡರು.
ಮಳೆಗಾಲ ವಾದದ್ದರಿಂದ ಮನೆಯ ಹಿಂದೆ ಕಟ್ಟಿದ್ದ ತಗಡಿನ ಮೇಲೆ ನೀರು ರಭಸವಾಗಿ ಬೀಳುತ್ತಿತ್ತು . ಆ ನೀರು ಬೀಳುವ ಶಬ್ದ ಅಡಿಕೆಯನ್ನು ಸುರಿದರೆ ಬೀಳುವ ಶಬ್ದದಂತೆಯೇ ಇತ್ತು ಅದು ಅಪ್ಪನಿಗೆ ದೂರದಲ್ಲಿ ಕೇಳುತ್ತಿದುದ್ದರಿಂದ ಅಡಿಕೆ ಕಡಿಯುತ್ತಿದ್ದಾರೆ ಎಂದು ಕೊಂಡಿದ್ದರು. ಆಗಷ್ಟೇ ದಾರವಾಹಿನೋಡಿ ಬರುತ್ತಿದ್ದ ಅಣ್ಣನಿಗೆ ಹಿಂದಿನಿಂದ ಯಾರೋ ಹಿಂಬಾಲಿಸುತ್ತಿದ್ದಾರೆ ಎನ್ನಿಸುತ್ತಿತ್ತು . ಹಾಗಾಗಿ ಅವನಿಗೆ ಅಪ್ಪ ಕೈಹಿಡಿದ ತಕ್ಷಣ ಭಯವಾಗಿ ಕೂಗಿಕೊಂಡಿದ್ದ .
ಅದೇ ಸಮಯಕ್ಕೆ ಹೋಗಿದ್ದ ಕರೆಂಟ್ ಪುನಃ ಬಂದಿತ್ತು . ಇಲ್ಲದಿದ್ದರೆ ಅನಾಹುತವಾಗುತ್ತಿತ್ತು .
ಅರ್ಪಿತಾ ಹರ್ಷ
ಲಂಡನ್
No comments:
Post a Comment