ಹೆಣ್ಣಿಗೆ ಮಗುವಿನ ಆರೈಕೆ ಲಾಲನೆ ಪಾಲನೆಯಲ್ಲಿ ಎಷ್ಟು ಸಂತೋಷವಿರುತ್ತದೋ ಅಷ್ಟೇ ಕಾಳಜಿ ಕೂಡ. ಹೆಣ್ಣು ತಾಯಿಯಾಗುತ್ತಿದ್ದಂತೆ ಎಲ್ಲಿಲ್ಲದ ಕಾಳಜಿಪ್ರಾರಂಭವಾಗುತ್ತದೆ.ನಮ್ಮ ಭಾರತದಲ್ಲಿ ಮಗುವಿನ ಆರೈಕೆ ಗೆ ಬಹಳ ಪ್ರಾಮುಖ್ಯತೆ ಕೊಡುತ್ತಾರೆ. ಮಗು ಮತ್ತು ತಾಯಿ ಇಬ್ಬರಿಗೂ ವಿಶೇಷ ರೀತಿಯಲ್ಲಿ ಆರೈಕೆಮಾಡಲಾಗುತ್ತದೆ. ನಮ್ಮ ದೇಶದಲ್ಲಿ ಮಗು ಹುಟ್ಟಿದ ನಂತರ ಕನಿಷ್ಠ ೩ ತಿಂಗಳು ಮನೆಯಿಂದ ಹೊರಬರುವುದಿಲ್ಲ ತಾಯಿ ಮಗು ಇಬ್ಬರನ್ನು ಒಂದು ಕೋಣೆಯಲ್ಲಿಮಲಗಿಸಿಡುತ್ತಾರೆ. ಜೊತೆಗೆ ಪಥ್ಯ ಕೂಡ ಮಾಡಲಾಗುತ್ತದೆ.
ಆದರೆ ಪಾಶ್ಚಾತ್ಯ ದೇಶಗಳಲ್ಲಿ ಈ ರೀತಿಯಲ್ಲ . ಮಗು ಹುಟ್ಟಿದ ತಕ್ಷಣ ತಾಯಿ ಕೆಲಸ ಪ್ರಾರಂಭಿಸಿಬಿದುತ್ತಾಳೆ. ತಾಯಿ ಹೆಚ್ಚು ಚಟುವತಿಕೆಯಿಂದಿದ್ದಷ್ಟು ಮಕ್ಕಳುಹೆಚ್ಚು ಚುರುಕಾಗಿರುತ್ತಾರೆ ಎಂಬುದು ಅವರ ನಂಬಿಕೆ. ಇದು ಸತ್ಯ ಕೂಡ . ಕೇವಲ ಮಕ್ಕಳು ಮಾತ್ರವಲ್ಲ ತಾಯಂದಿರು ಕೂಡ. ಇಂಗ್ಲೆಂಡ್ ನಂತ ದೇಶಗಳಲ್ಲಿಮಗು ಹುಟ್ಟಿದ ಒಂದು ವಾರದಲ್ಲಿ ಪ್ರವಾಸಗಳಿಗೆ ಹೋಗಲು ತಯಾರಾಗುತ್ತಾರೆ.
ಒಮ್ಮೆ ಲಂಡನ್ ನ ಮೇಡಂ ಟುಸ್ಸಾದ್ ಅನ್ನು ನೋಡಲು ಸ್ನೇಹಿತರ ಜೊತೆಗೂಡಿ ಹೋಗಿದ್ದೆವು. ಅಲ್ಲಿ ಟಿಕೆಟ್ ತೆಗೆದುಕೊಳ್ಳಲು ಸುಮಾರು ೨ ಗಂಟೆ ಸಾಲಿನಲ್ಲಿನಿಂತು ಕಾಯಬೇಕಾಯಿತು. ಹೀಗೆ ಕಾಯುತ್ತಿರುವಾಗ ನಮ್ಮ ಮುಂದೆ ಒಬ್ಬ ಹೆಣ್ಣುಮಗಳು ಸಣ್ಣ ಮಗುವೊಂದನ್ನು ಎತ್ತಿಕೊಂಡು ನಿಂತಿದ್ದಳು . ಆ ಮಗುಸೂರ್ಯನ ಕಿರಣಗಳಿಗೆ ಕಣ್ಣು ಬಿಡಲು ಹೆದರುತ್ತಿತ್ತು. ಮಗು ನೋಡಿದರೆ ಹೇಳಬಹುದು ಇದು ೪-೫ ದಿನದ ಹಿಂದೆ ಹುಟ್ಟಿದ ಮಗುವಿರಬಹುದು ಎಂದು. ಹಾಗೆ ಆಮಹಿಳೆಯೊಡನೆ ಕೇಳಿದರೆ ೧ ವಾರದ ಮಗು ಎಂದು ಉತ್ತರಿಸಿದಳು. ಒಂದು ವಾರದ ಮಗುವನ್ನು ಕೈಯಲ್ಲಿ ಹಿಡಿದು ಆ ಮಗುವಿನ ತಾಯಿ ೨ ಗಂಟೆಗಳ ಕಾಲಕ್ಯುಅಲ್ಲಿ ನಿಂತು ನಂತರ ಒಳ ಹೋದ ನಂತರ ೨ ತಾಸು ಓಡಾಡಿದ ಆಕೆಯನ್ನು ನಿಜಕ್ಕೂ ಮೆಚ್ಚಬೇಕು.
ಇಲ್ಲಿಯ ಹೆಣ್ಣು ಮಕ್ಕಳು ಒಂಬತ್ತು ತಿಂಗಳು ತುಂಬುವವರೆಗೆ ಕೆಲಸಕ್ಕೆ ಹೋಗಿ ದುಡಿದು ಬರುತ್ತಾರೆ ಪ್ರವಾಸಿ ತಾಣಗಳಿಗೂ ಹೋಗಿಸಂತೋಷಪಡುತ್ತಾರೆ.ಜೊತೆಗೆ ಇಲ್ಲಿ ಡಾಕ್ಟರ್ ಗಳು ಕೂಡ ನಾರ್ಮಲ್ ಡೆಲಿವರಿ ಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಮಗು ಹುಟ್ಟಿದ ದಿನವೇ ಮನೆಗೆಕಳುಹಿಸುತ್ತಾರೆ. ಹುಟ್ಟಿದ ೧ ವಾರದಲ್ಲಿ ಮಗುವನ್ನು ಹೊರ ಕರೆದುಕೊಂಡು ಹೋಗಲು ಪ್ರಾರಂಭಿಸುತ್ತಾರೆ.ಮಕ್ಕಳಿಗೋಸ್ ಕರವೇ ಅಂಗಡಿಗಳಲ್ಲಿ ವಿಶೇಷರೀತಿಯ ಆಹಾರ ಕೂಡ ದೊರೆಯುತ್ತದೆ. ಅವುಗಳನ್ನು ತಿನಿಸುವುದರ ಮೂಲಕ ಮಕ್ಕಳನ್ನು ಬೆಳೆಸುತ್ತಾರೆ. ಮಕ್ಕಳು ಕೂಡ ನೋಡಲು ದಷ್ಟಪುಷ್ಟವಾಗಿರುತ್ತವೆ ಜೊತೆಗೆ ಅಳುವುದು ಕಿರಿಕಿರಿ ಮಾಡುವುದು ಈ ರೀತಿ ಮಾಡುವುದಿಲ್ಲ.
ಇಲ್ಲಿ ಮಕ್ಕಳಿಗೆ ಹೊಡೆಯುವಂತಿಲ್ಲ . ಮಕ್ಕಳು ಗಲಾಟಿ ಮಾಡುತ್ತಿದ್ದರೆ ಅವರನ್ನು ಮನವೊಲಿಕೆ ಮಾಡಿ ಸಮಾಧಾನಿಸಬೇಕೆ ಹೊರತು ಹೊಡೆದು ಮಕ್ಕಳಿಗೆ ಬುದ್ದಿಕಲಿಸುವ ಪ್ರಯತ್ನ ಮಾಡುವಂತಿಲ್ಲ.
ಮಕ್ಕಳು ಕೂಡ ಅಳುವುದಿಲ್ಲ . ಇಲ್ಲಿನ ಜನರು ಮಕ್ಕಳನ್ನು ಪ್ರೀತಿಯಿಂದ ಸಾಕುವುದರ ಜೊತೆಗೆ ಅವರಿಗೆ ಸ್ವತಂತ್ರವಾಗಿ ಬದುಕುವುದನ್ನು ಕೂಡ ಕಲಿಸುತ್ತಾರೆ. ೪ತಿಂಗಳ ಮಗುವನ್ನು ಹೊರಗೆ ಹೋಗುವಾಗ ಕಾರಿನಲ್ಲಿ ಹೋಗುತ್ತಿದ್ದರೆ ಹಿಂದಿನ ಸೀಟಿನಲ್ಲಿ ಮಗುವೊಂದನ್ನೇ ಸೀಟ್ ಬೆಲ್ಟ್ ಹಾಕಿ ಕೂರಿಸಿಬಿಡುತ್ತಾರೆ. ಮಗುತನ್ನಷ್ಟಕ್ಕೆ ಆಟವಾಡಿಕೊಂಡು ಹೊರಗಿನ ಪ್ರಪಂಚ ನೋಡುತ್ತಾ ಹೊರಡುತ್ತದೆ . ಹೀಗೆ ಮಾಡುವುದರಿಂದ ಮಗು ಅಪ್ಪ ಅಮ್ಮಂದಿರ ಮೇಲೆ ಹೆಚ್ಚುಅವಲಂಬಿತರಾಗುವುದಿಲ್ಲ . ಇಲ್ಲಿಯ ಜನರು ಹೇಳುವ ಪ್ರಕಾರ ಆ ರೀತಿ ಚಟುವಟಿಕೆಯಿಂದ ಇರುವುದರಿಂದ ಮಗು ಕೂಡ ಬೇಗ ಬೆಳೆಯುತ್ತದೆ ಹೊರ ಜಗತ್ತಿಗೆಬೇಗ ಹೊಂದಿಕೊಳ್ಳುತ್ತದೆ. ಜ್ವರ ಕೆಮ್ಮುಗಳಂತ ಸಣ್ಣ ಪುಟ್ಟ ಕಾಯಿಲೆಗಳು ಬಹಳ ಕಡಿಮೆ .
ಕೊರೆಯುವ ಚಳಿಯಲ್ಲೂ ಕೂಡ ಮಕ್ಕಳು ಬೇಗ ಹೊಂದಿಕೊಳ್ಳುತಾರೆ.
ಜೊತೆಗೆ ಶಾಲೆಗಳಲ್ಲೂ ಕೂಡ ಮಕ್ಕಳಿಗೆ ಆಟದ ಮೂಲಕ ಪಾಠ ಹೇಳಿಕೊಡುತ್ತಾರೆ. ಆಟಕ್ಕೆ ಹೆಚ್ಚಿನ ಪ್ರಾಮುಕ್ಯತೆ ಕೊಡುತ್ತಾರೆ. ಮಕ್ಕಳು ಬೇರೆಯವರೊಂದಿಗೆಬೆಳೆಯುವುದನ್ನು ಕಲಿಸುತ್ತಾರೆ. ಬೇರೆಯವರ ಮೇಲೆ ಅವಲಂಬಿತರಾಗಿರುವುದಿಲ್ಲ . ತಂದೆ ತಾಯಿಗಳನ್ನು ಬಿಟ್ಟು ಇರಲು ಕಲಿತುಕೊಂದಿರುತ್ತವೆ.ಓದುತ್ತಿರುವಾಗಲೇ ತಮ್ಮ ಕಾಲಮೇಲೆ ತಾವು ನಿಲ್ಲಬೇಕೆಂಬ ಛಲ ಇರುತ್ತದೆ.ಆದ್ದರಿಂದಲೇ ಹದಿನೆಂಟು ವರ್ಷವಾಗುತ್ತಿದ್ದಂತೆ ಮನೆಯಿಂದ ಹೊರಹೊರಟುಬಿಡುತ್ತಾರೆ ಅವರ ಬದುಕನ್ನು ಅವರೇ ರೂಪಿಸಿಕೊಳ್ಳುತ್ತಾರೆ. ತಂದೆ ತಾಯಿಗಳು ಕೂಡ ಮಕ್ಕಳು ತಮ್ಮ ಜೀವನ ತಾವೇ ನೋಡಿಕೊಂಡರೆ ಸಂತೋಷಪಡುತ್ತಾರೆ.
ಅರ್ಪಿತಾ ಹರ್ಷ
ಲಂಡನ್
No comments:
Post a Comment