
Thursday, 13 October 2011
ಧರ್ಮಸ್ಥಳ ಮಂಜುನಾಥ ವಿದ್ಯಾಲಯ
ಆಗಷ್ಟೇ ಪಿ ಯು ಸಿ ಮುಗಿಸಿದ್ದೆ. ಮುಂದೇನು ಮಾಡಬೇಕು ಎಂಬ ಪ್ರಶ್ನೆ ಕಾಡುತ್ತಿತ್ತು.ಯಾವುದಾದರು ಒಳ್ಳೆಯ ಕಾಲೇಜ್ ನಲ್ಲಿ ಓದಬೇಕೆಂಬ ಹಂಬಲವಿತ್ತು.ಅದಕ್ಕಾಗಿ ನಾಲ್ಕಾರು ಕಡೆ ಹುಡುಕಿದಾಗ ಸಿಕ್ಕ ಉತ್ತರವೇ SDM ಕಾಲೇಜ್ ಉಜಿರೆ.ಹೌದು ನಾನೀಗ ಬರೆಯಹೊರಟಿರುವುದು ಮೂರು ವರ್ಷ ನಾನು ಕಳೆದ ಉಜಿರೆಯ ಕಾಲೇಜಿನ ಬಗ್ಗೆ. "ಪ್ರಜ್ವಾಲಿತೋ ಜ್ಞಾನಮಯಃ ಪ್ರದೀಪಃ " ಉಜಿರೆಯ SDM ಕಾಲೇಜ್ ಗೆ ಮೊಟ್ಟಮೊದಲು ಕಾಲಿಟ್ಟಾಗ ಎದುರುಗೊಂಡ ಅರ್ಥಪೂರ್ಣ ಸಾಲುಗಳಿವು.ಜೊತೆಗೆ ಸುಂದರ ಪರಿಸರ ಪಕ್ಕ ತಿರುಗಿದರೆ ಕಾಣುವ ಗಡಯಿಕಲ್ಲು,ಎದುರು ನೋಡಿದರೆ ಸುಂದರ ಉದ್ಯಾನವನ, ಅದರೊಳಗೆ ದೈತ್ಯ ಕಟ್ಟಡ. ಮೂರು ವರ್ಷಗಳಲ್ಲಿ ಅಲ್ಲಿ ಕಲಿತದ್ದು ಬಹಳ ಜೀವನದಲ್ಲಿ ಅಳವಡಿಸಿಕೊಂಡದ್ದು ಬಹಳ. ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಕೆ ಐದು km ಹಿಂದೆ ಈ ಉಜಿರೆ ಕಾಲೇಜ್ ಸಿಗುತ್ತದೆ.ವೀರೇಂದ್ರ ಹೆಗ್ಗಡೆ ಯವರೇ ಈ ಕಾಲೇಜ್ ಅನ್ನು ಈ ಮಟ್ಟಕ್ಕೆ ಬೆಳೆಸಿದವರು. ಉಜಿರೆ ಕಾಲೇಜ್ NAAC ನಲ್ಲಿ A++ ಗ್ರೇಡ್ ಪಡೆದಿದೆ.ಇಲ್ಲಿ ಕೇವಲ ಓದಿಗೆ ಮಾತ್ರವಲ್ಲ ಉಳಿದ ಚಟುವಟಿಕೆಗಳಲ್ಲೂ ಪ್ರೋತ್ಸಾಹವಿದೆ.ಸಂಗೀತ .ಯಕ್ಷಗಾನ.ನಾಟಕ.ಬರವಣಿಗೆ.ಆಟೋಟ .ನೃತ್ಯ .ಕಸೂತಿ . ಹೀಗೆ ನಮ್ಮ ಆಸಕ್ತಿಯನ್ನು ನಾವೇ ಆಯ್ದುಕೊಳ್ಳುವ ಅವಕಾಶವಿದೆ.ಪ್ರತಿಭೆಯನ್ನು ಬೆಳೆಸುವ ಶಕ್ತಿಯಿದೆ ಎಂದರೆ ತಪ್ಪಾಗಲಾರದು.ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆ ಇರುತ್ತದೆ.ಅದರ ಬೆಳವಣಿಗೆಗೆ ಸರಿಯಾದ ವೇದಿಕೆ ಸಿಕ್ಕಾಗ ಅದು ಪ್ರಜ್ವಲಿಸಲು ಸಾದ್ಯ ಅಂತಹ ಒಂದು ವೇದಿಕೆಯನ್ನು ಇಲ್ಲಿ ಒದಗಿಸಿ ಕೊಡಲಾಗುತ್ತದೆ.ಪ್ರತಿಯೊಬ್ಬರಲ್ಲೂ ಆಸಕ್ತಿ ಹುಟ್ಟಿಸುತ್ತದೆ.ಈ ಕಾಲೇಜಿನಲ್ಲಿ ಶಿಸ್ತಿದೆ.ಬದುಕಿಗೆ ಯಾವುದೂ ಕೊರತೆಯಾಗದಂತೆ ಕಾಲೇಜ್ ಕ್ಯಾಂಪಸ್ ನಲ್ಲಿ ವಿಜಯಬ್ಯಾಂಕ್ ಇದೆ.ಪಕ್ಕದಲ್ಲೇ ATM ಇದೆ .ಮನೆಯನೆನಪಾದರೆ ಬರೆದುಹಾಕಲು ಪೋಸ್ಟ್ ಆಫೀಸ್ ಇದೆ.ಹಸಿವಾದರೆ ತಿನ್ನಲು ಕ್ಯಾಂಟೀನ್ ಇದೆ.ಸ್ವಲ್ಪ ನಡೆದು ಹೋದರೆ ಗುರುಕುಲವನ್ನು ನೆನಪಿಸಲು ಸಿದ್ದವನ ಎಂಬ ಬಾಯ್ಸ್ ಹಾಸ್ಟೆಲ್ ಇದೆ.ಹುಡುಗಿಯರಿಗಾಗಿಯೇ ಮೈತ್ರೀಯಿ ಎಂಬ ವಿದ್ಯಾರ್ಥಿನಿ ನಿಲಯವಿದೆ.ಜೊತೆಗೆ ತಪ್ಪುಮಾಡಿದಲ್ಲಿ ತಿದ್ದುವ ಎಡವದಂತೆ ನೋಡಿಕೊಳ್ಳುವ ಶ್ರದ್ಧೆ ಇಟ್ಟು ಕಲಿಸುವ ಶಿಕ್ಷಕರಿದ್ದಾರೆ.ಎಲ್ಲಕ್ಕಿಂತ ಹೆಚ್ಚಾಗಿ ಧರ್ಮಸ್ಥಳ ಮಂಜುನಾಥನ ದಯೆ ಇದೆ.ಹೀಗೆ ಬರೆದಷ್ಟು ಮುಗಿಯದ ದಾಖಲೆಗಳಿವೆ ಈ ಕಾಲೇಜ್ ನಲ್ಲಿ.ಎಷ್ಟೋ ಬಾರಿ ಸುಮ್ಮನೆ ಕುಳಿತಾಗ ನಾನು ಅಲ್ಲಿ ಓದುತ್ತಿರುವಾಗ ಹೇಳುತ್ತಿದ್ದ ಆಲಯ ಆಲಯ ನಮ್ಮ ಆಲಯ ಧರ್ಮಸ್ಥಳ ಮಂಜುನಾಥ ವಿದ್ಯಾಲಯ ಹಾಡು ನೆನಪಿಗೆಬರುತ್ತದೆ.ಸಾದ್ಯವಾದರೆ ನೀವು ಒಮ್ಮೆ ಭೇಟಿ ಕೊಡಿ ಹಿಂದಿರುಗುವಾಗ ನಿಮ್ಮಲ್ಲೂ ಹೊಸ ಚೈತನ್ಯ ತುಂಬುತ್ತದೆ.
Subscribe to:
Post Comments (Atom)
ನಾನೂ ಎರಡು ವರ್ಷ (ಪಿಯುಸಿ) ಓದಿದ್ದೆ... ಅಲ್ಲಿ ಕಂಡ ಕನಸುಗಳೆಷ್ಟೋ... ಸಿಲ್ವರ್ ಜುಬಿಲಿಗೆ ಆಡಿಟೋರಿಯಂ ಉದ್ಘಾಟನೆಯಾದಾಗ ನಾನಲ್ಲಿದ್ದೆ ಎಂಬ ಹೆಮ್ಮೆ ನನಗೆ. ಕಾಲೇಜು ಎದುರಿನ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ, ಅಂದಿನ ಪ್ರಧಾನಿ ರಾಜೀವ್ ಗಾಂಧಿ ಬಂದು ಇಳಿದಿದ್ದರು, ಅದನ್ನೂ ನೋಡಿದ್ದೆ...
ReplyDeleteಮತ್ತೆ ಮಾಮೂಲಿ ಇದ್ದೇ ಇದೆಯಲ್ಲ... ಪೋಲಿತನ ಇತ್ಯಾದಿ... :) ಚೆನ್ನಾಗಿ ನೆನಪಿಸಿದಿರಿ.
ಬರೀತಾ ಇರಿ...
(Avisblog.wordpress.com)
ಧನ್ಯವಾದಗಳು :)
ReplyDelete