Published in Omanase 22/06/2020 http://www.omanase.com/?p=3848
ಇನ್ನೇನು ಭಾನುವಾರ ಅಪ್ಪಂದಿರ ದಿನ ಬಂದೆ ಬಿಟ್ಟಿತು. ಅಪ್ಪಂದಿರ ದಿನ ಮಾತ್ರವಲ್ಲ ಅಪ್ಪ ಪ್ರತಿದಿನ ಸಾಕಷ್ಟು ಕಾರಣಗಳಿಗೆ ನೆನಪಾಗುತ್ತಾನೆ. ಅಪ್ಪ ಎಂದರೆ ಸಮುದ್ರದಷ್ಟು ವಿಸ್ತಾರ .ಕೇವಲ ಪದಗಳಲ್ಲಿ ಬರೆದು ಮುಗಿಸಬಹುದಾದ ಬಾಂಧವ್ಯವಲ್ಲ .ಅಪ್ಪನ ಬಗ್ಗೆ ಬರೆದಷ್ಟೂ ಮುಗಿಯದಷ್ಟು, ನೆನಪಿಸಿದಷ್ಟೂ ವಿಸ್ತಾರವಾಗುವ ಸಾಕಷ್ಟು ವಿಷಯಗಳಿವೆ. ಹೀಗೆ ಅಪ್ಪನ ಬಗ್ಗೆ ಬರೆಯಬೇಕು ಎಂದಾಗಲೆಲ್ಲಾ ಸೋತಿದ್ದೇನೆ ,ಪದಗಳು ಸಿಗದೇ ಅಥವಾ ಸಿಕ್ಕ ಪದಗಳು ಸರಿಯಾಗಿ ಹೊಂದದೇ ಹೀಗೆ ಅದೆಷ್ಟೋ ಭಾರಿ ಬರೆಯ ಹೊರಟದ್ದೊಂದು ಆಗಿದ್ದು ಇನ್ನೊಂದು .
ಆದರೂ ಈ ಅಪ್ಪಂದಿರ ದಿನಕ್ಕೆ ಅಪ್ಪನಿಗೊಂದು ಶುಭಾಶಯವನ್ನು ದೂರದಲ್ಲಿ ಕೂತು ಹೀಗೆ ತಲುಪಿಸುವ ಆಕಾಂಕ್ಷೆ ನನ್ನದು.
ಚಿಕ್ಕ ಮಕ್ಕಳಿಗೆ ತನ್ನ ಜೊತೆಗೆ ಕಳೆದ ದಿನಗಳು ನೆನಪಿನಲ್ಲಿ ಬಹಳಷ್ಟು ಉಳಿಯುತ್ತವೆ ಮತ್ತು ಹಾಗೆ ಜೊತೆಗೆ ಕಳೆದವರ ಅನುಕರಣೆ ಬೆಳೆಯುತ್ತಾ ಮನಸ್ಸಿನಲ್ಲಿ ಉಳಿದು ಅವರಂತೆಯೇ ಆಗುವ ಪ್ರಯತ್ನ ಮಕ್ಕಳಲ್ಲಿ ಬೆಳೆಯುತ್ತದೆ. ಹಾಗೆ ಅಪ್ಪ ತಾನೇ ಉದಾಹರಣೆಯಾಗಿ ನಿಂತು ತಿದ್ದಿ ತೀಡಿದ್ದು ನನಗೊಂದು ಮಗುವಾಗುವವರೆಗೆ ಅರಿವಿಗೇ ಬಂದಿರಲಿಲ್ಲ. ಇಂದು ಕುಳಿತು ಹಿಂತಿರುಗಿ ನೋಡಿದರೆ ಅಪ್ಪನಂತೆ ಬದುಕಬೇಕು ಎಂಬಷ್ಟು ಅಪ್ಪ ನನ್ನನ್ನು ಆವರಿಸಿಕೊಂಡಿದ್ದಾನೆ .ಹಾಗೆ ಮಗಳನ್ನು ಮಾತ್ರವಲ್ಲ ಅಳಿಯ ,ಮೊಮ್ಮಗನು ಕೂಡ ದಿನಕ್ಕೆರಡು ಬಾರಿ ನೆನಪಿಸಿಕೊಳ್ಳುವಂತೆ ಬದುಕುತ್ತಿರುವ ಅಪ್ಪ ಒಂದು ಮಾದರಿ ಎಂದೇ ಹೇಳಬಹುದು.
ಚಿಕ್ಕಂದಿನಿಂದ ನನ್ನ ಓದು ಮುಗಿಸಿ ಮದುವೆಯಾಗುವವರೆಗೆ ಅಪ್ಪನೊಂದಿಗೇ ದಿನದ ಬಹುಪಾಲು ಕಳೆದ ನನಗೆ ಇಂದಿಗೂ ಕಾಡುವುದು ಅಪ್ಪನ ತಾಳ್ಮೆ . ಅದೆಷ್ಟು ತಾಳ್ಮೆ ಎಂದರೆ ಬಹುಶಃ ಅಪ್ಪ ತನ್ನ ಸಹನೆಯನ್ನು ಕಳೆದುಕೊಂಡ ದಿನವನ್ನು ನಾನೆಂದೂ ನೋಡಿಯೇ ಇಲ್ಲ ,ಅಪ್ಪ ಎಂದ ತಕ್ಷಣ ನೆನಪಿಗೆ ಬರುವುದು ಆತನ ಸಹನೆ ಮತ್ತು ಭರಪೂರ ಕಾಳಜಿ ತುಂಬಿದ ಮಾದರಿ ಬದುಕು.
ತನಗಿಲ್ಲದಿದ್ದರೂ ಮಕ್ಕಳಿಗೋಸ್ಕರ ಏನನ್ನಾದರೂ ತಂದು ಕೊಟ್ಟು ಸಾಕಿ ಸಲಹಿದ ಅಪ್ಪನಲ್ಲಿರುವ ತಾಳ್ಮೆ ಈಗಲೂ ನನ್ನನ್ನು ಚಕಿತಗೊಳಿಸುತ್ತದೆ . ತನ್ನ ಜೀವಮಾನದಲ್ಲೆಂದೂ ತಾಳ್ಮೆ ಕಳೆದುಕೊಂಡು ಯಾರಿಗಾದರೂ ರೇಗಿದ್ದನ್ನು ಇಂದಿನವರೆಗೂ ನಾನು ಕಂಡದ್ದಿಲ್ಲ. ಚಿಕ್ಕಂದಿನಿಂದಲೂ ಕಣ್ಣಲ್ಲಿ ಕಣ್ಣಿಟ್ಟು ಸಾಕಿದ್ದ ಅಪ್ಪನಿಂದ ಬಹುದೂರದ ದೇಶಕ್ಕೆ ಬಂದು ಆಗಲೇ ಹತ್ತು ವರ್ಷಗಳಾಗುತ್ತಾ ಬಂತು .ಇಂದಿಗೂ ವರ್ಷಕ್ಕೊಮ್ಮೆ ಊರಿಗೆ ಹೋಗಿ ಹಿಂದಿರುಗುವಾಗ ಅಪ್ಪ ಕೈ ಹಿಡಿದು ಹಾಕುವ ಕಣ್ಣೀರು ಮನಸ್ಸಿಗೆ ಸಂಕಟ ತರುತ್ತದೆ .ರಾಜಕೀಯ ,ಬ್ಯಾಂಕ್ ,ಬರವಣಿಗೆ ಹೀಗೆ ಸಾಕಷ್ಟು ವಿಷಯಗಳ ಬಗ್ಗೆ ನನ್ನೊಂದಿಗೆ ಪ್ರತಿಭಾರಿ ಚರ್ಚಿಸುವ ಅಪ್ಪ ಸಂಬಂಧಗಳ ಬಗ್ಗೆ ಮತ್ತು ಅದನ್ನು ಅಷ್ಟೇ ನಾಜೂಕಾಗಿ ನಿಭಾಯಿಸುವ ಬಗ್ಗೆ ಸಣ್ಣದೊಂದು ಸುಳಿವು ,ಭರವಸೆ ನೀಡಿ ಸಂತೈಸುವ ಬಗೆ ಕೂಡ ಸಾಕಷ್ಟು ಭಾರಿ ಸಂತಸ ನೀಡಿದೆ. ಎಷ್ಟೋ ಬಾರಿ ಯೋಚಿಸಿದಾಗ ಅನ್ನಿಸುವುದು ಅಪ್ಪನೇ ಒಂದು ತವರು . ಅಪ್ಪನಿಗೆ ಅಪ್ಪಂದಿರ ದಿನದ ಶುಭಾಶಯಗಳು ದೂರದೂರಿಂದ !!
ಅರ್ಪಿತಾ ರಾವ್

ಬ್ಯಾನ್ಬರಿ
ಯುನೈಟೆಡ್ ಕಿಂಗ್ಡಮ್
ಯುನೈಟೆಡ್ ಕಿಂಗ್ಡಮ್
No comments:
Post a Comment