This article is published in vijayakarnataka on 4/05/13
ಇಲ್ಲಿ ಹೋಗಲು ಎಲ್ಲ ದಿನಗಳು ಕೂಡ ಪಸಕ್ತ ದಿನಗಳೇ ವರ್ಷದ ೩೬ ೫ ದಿನಗಳು ಕೂಡ ಇದು ತೆರೆದಿರುತ್ತದೆ. ಮತ್ತು ಸದಾ ಬಕ್ತಾದಿಗಳಿಂದ ತುಮ್ಬಿರುತ್ತದೆ. ಉತ್ತರ ಭಾರತ ದಕ್ಷಿಣ ಭಾರತದ ಸಾಕಷ್ಟು ಭಕ್ತಾದಿಗಳನ್ನು ಪ್ರತಿದಿನ ಕಾಣಬಹುದು . ಜೊತೆಗೆ ಪ್ರತಿ ದಿನ ಅನ್ನಸಂತರ್ಪಣೆ ವ್ಯವಸ್ಥೆ ಕೂಡ ಮಾದಲಾಗಿದೆ. ವಿಶೇಷ ಹಬ್ಬದ ದಿನಗಳಲ್ಲಿ ಸಾವಿರಾರು ಜನರಿಗೆ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಆಂದ್ರ ಸ್ಟೈಲ್ ಅಡುಗೆ ಮಾಡ ಲಾಗುತ್ತದೆ.
ತಿರುಪತಿಯ ಬಾಲಾಜಿ ಎಂದರೆ ಎಲ್ಲರ ಮೆಚ್ಚಿನ ದೇವರು , ಸಂಕಟ ಬಂದಾಗ ವೆಂಕಟರಮಣ ಎಂಬ ಮಾತಿದೆ ಹಾಗೆ
ಕಷ್ಟ ಕಾಲದಲ್ಲೆಲ್ಲ್ಲ ನೆನಪಿಸಿಕೊಳ್ಳುವುದು ನಮ್ಮ ತಿರುಪತಿಯ ವೆಂಕಟರಮಣ ನನ್ನು . ತಿರುಪತಿ ಗೆ ಜೀವನದಲ್ಲಿ ಒಮ್ಮೆಯಾದರೂ ಹೋಗಬೇಕು ಎಂಬ ಕನಸು ಬಹಳಷ್ಟು ಜನರದಾಗಿರುತ್ತದೆ ಹಾಗೆ ತಿರುಪತಿಗೆ ಹೋದರೆ ಅಂದುಕೊಂಡಿರುವುದೆಲ್ಲ ಆಗುತ್ತದೆ ಎಂಬುದು ಎಲ್ಲರ ಅನಿಸಿಕೆ ಕೂಡ . ಇಂಗ್ಲೆಂಡಿನಲ್ಲಿ ಸಾಕಷ್ಟು ಭಾರತೀಯರಿದ್ದಾರೆ ಅವರೆಲ್ಲರ ತಿರುಪತಿ ಗೆ ಹೋಗುವ ಕನಸು ಈಡೇರಿಸಲು ಇಂಗ್ಲೆಂಡ್ ನಲ್ಲು ಕೂಡ ಒಂದು ಬಾಲಾಜಿ ದೇವಸ್ಥಾನವಿದೆ . ಇಂಗ್ಲೆಂಡ್ ನಲ್ಲಿ ನೆಲಸಿರುವ ಜನರಿಗೆ ಇದೇ ತಿರುಪತಿ .
ಕಷ್ಟ ಕಾಲದಲ್ಲೆಲ್ಲ್ಲ ನೆನಪಿಸಿಕೊಳ್ಳುವುದು ನಮ್ಮ ತಿರುಪತಿಯ ವೆಂಕಟರಮಣ ನನ್ನು . ತಿರುಪತಿ ಗೆ ಜೀವನದಲ್ಲಿ ಒಮ್ಮೆಯಾದರೂ ಹೋಗಬೇಕು ಎಂಬ ಕನಸು ಬಹಳಷ್ಟು ಜನರದಾಗಿರುತ್ತದೆ ಹಾಗೆ ತಿರುಪತಿಗೆ ಹೋದರೆ ಅಂದುಕೊಂಡಿರುವುದೆಲ್ಲ ಆಗುತ್ತದೆ ಎಂಬುದು ಎಲ್ಲರ ಅನಿಸಿಕೆ ಕೂಡ . ಇಂಗ್ಲೆಂಡಿನಲ್ಲಿ ಸಾಕಷ್ಟು ಭಾರತೀಯರಿದ್ದಾರೆ ಅವರೆಲ್ಲರ ತಿರುಪತಿ ಗೆ ಹೋಗುವ ಕನಸು ಈಡೇರಿಸಲು ಇಂಗ್ಲೆಂಡ್ ನಲ್ಲು ಕೂಡ ಒಂದು ಬಾಲಾಜಿ ದೇವಸ್ಥಾನವಿದೆ . ಇಂಗ್ಲೆಂಡ್ ನಲ್ಲಿ ನೆಲಸಿರುವ ಜನರಿಗೆ ಇದೇ ತಿರುಪತಿ .
ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಮ್ ಎಂಬಲ್ಲಿ ವೆಂಕಟರಮಣನ ದೇವಸ್ಥಾನವಿದೆ . ಇದು ಇಂಗ್ಲೆಂಡ್ ನ ಮಧ್ಯಭಾಗದಲ್ಲಿ ಬರುತ್ತದೆ. ಲಂಡನ್ ನಿಂದ ಟ್ರೈನ್ ನಲ್ಲಿ ಸುಮಾರು ೨ ತಾಸಿನ ಪ್ರಯಾಣ . ಇದು ಇಂಗ್ಲೆಂಡ್ ನ ಅತಿ ದೊಡ್ಡ ದೇವಸ್ಥನವಾಗಿದ್ದು ನೋಡಲು ಸಹ ತಿರುಪತಿ ದೇವಸ್ಥಾನ ದ ರೀತಿಯೇ ಇದೆ. ಬರ್ಮಿಂಗ್ ಹ್ಯಾಮ್ ನಿಂದ ೧ ಗಂಟೆಗಳ ಕಾಲ ಬಸ್ ನಲ್ಲಿ ಹೋಗಬೇಕು . ಇದು ಸ್ವಲ್ಪ ಹಳ್ಳಿಯನ್ತಿರುವ ಪ್ರದೇಶದಲ್ಲಿ ನಿರ್ಮಿಸಲಾಗಿದೆ . ಗುಡ್ಡದ ಮೇಲೆ ದೇವಸ್ಥಾನವನ್ನು ನಿರ್ಮಿಸಲಾಗಿದೆ . ವಿಶಾಲವಾದ ಜಾಗವನ್ನು ಹೊಂದಿದ ಈ ದೇವಸ್ಥಾನದಲ್ಲಿ ವೆಂಕಟರಮಣ ಮುಖ್ಯ ದೇವರು ಜೊತೆಗೆ ಹನುವಂತ,ಗಣಪತಿ, ನವಗ್ರಹ , ಲಕ್ಷ್ಮಿ ದೇವಿ ಗಳ ಮೂರ್ತಿ ಗಳನ್ನೂ ಕಾಣಬಹುದು . ಆದರೆ ಎಲ್ಲ ದೇವಸ್ಥಾನಗಳಂತೆ ಇಲ್ಲೂ ಕೂಡ ಛಾಯಾಚಿತ್ರ ತೆಗೆಯುವುದನ್ನು ನಿಷೇದಿಸಲಾಗಿದೆ .
ತಿರುಪತಿ ಯಲ್ಲಿ ದೊರೆಯುವಂತೆ ಇಲ್ಲೂ ಕೂಡ ಲಾಡು ದೊರೆಯುತ್ತದೆ. ವಿವಿಧ ರೀತಿಯ ಪೂಜೆ ಮಾದುವ ಅವಕಾಶವಿದೆ ಅದರೊಂದಿಗೆ ತಿರುಪತಿಯ ಲಾಡನ್ನು ಕೂಡ ನೀಡಲಾಗುತ್ತದೆ .ಹೆಚ್ಚು ಬೇಕಾದಲ್ಲಿ ಕೊಂಡುಕೊಳ್ಳಬಹುದು . ಪ್ರತಿ ದಿನ ಸಾವಿರಾರು ಲಾಡುಗಳು ಸೇಲ್ ಆಗುತ್ತದೆ . ವಿವಿದ ರೀತಿಯ ಪೂಜೆಗಳನ್ನು ಕೂಡ ಮಾಡಲಾಗುತ್ತದೆ. ಮದ್ಯಾನ್ಹ 1 2 ಗಂಟೆಗೆ ಮಹಾಮಂಗಳಾರತಿ ಮಾಡಲಾಗುತ್ತದೆ . ಅದಲ್ಲದೆ ಸಂಜೆ ೪ ಗಂಟೆಗೆ ಪುನಃ ಅರ್ಚನೆ ಮಾಡಲಾಗುತ್ತದೆ. ಮದ್ಯಾನ್ಹ 1 ರಿಂದ ಊಟದ ವ್ಯವಸ್ಥೆ ಪ್ರತ್ಯೇಕ ಕೊನೆಯಲ್ಲಿ ಮಾಡಲಾಗಿದ್ದು ೩ ಗಂಟೆಯವರೆಗೂ ಉದ್ದವಾದ ಕ್ಯು ಇರುತ್ತದೆ.
ತಿರುಪತಿಯಲ್ಲಿ ೨ ನಿಮಿಷದಲ್ಲಿ ವೆಂಕಟರಮಣನ ದರ್ಶನ ಮಾಡಿಕೊಂಡು ಮುಂದೆ ಹೋಗಬೇಕಾಗಬಹುದು ಆದರೆ ಇಲ್ಲಿ ೨ ಗಂಟೆ ಬೇಕಾದರೂ ಅಲ್ಲೇ ಕುಳಿತುಕೊಳ್ಳುವ ಅವಕಾಶವಿರುತ್ತದೆ. ಜೊತೆಗೆ ಸತ್ಯನಾರಾಯಣ ಪೂಜೆ ಇನ್ನಿತರ ಪೂಜೆಗಳನ್ನು ಕೂಡ ಅಲ್ಲೇ ಮಾಡಿಸ ಲಾಗುತ್ತದೆ . ಲಂಡನ್ ನಿಂದ ಮಿಡ್ ಲ್ಯಾಂಡ್ ಮತ್ತು ವರ್ಜೀನಿಯಾ ಟ್ರೈನ್ ಗಳು ಬಿರ್ಮಿಂಗ್ ಹ್ಯಾಮ್ ಗೆ ಹೊಗುತ್ತದೆ.
ಅರ್ಪಿತಾ ಹರ್ಷ
ಲಂಡನ್
No comments:
Post a Comment