ಈ ನನ್ನ ಲೇಖನವು ಜೂನ್ ೮ ರ ವಿಜಯ ನೆಕ್ಸ್ಟ್ ನಲ್ಲಿ ಪ್ರಕಟವಾಗಿದೆ -----
"ನಮ್ಮ ಹೊಟ್ಟೆ ಪಾಡಿಗಾಗಿ ಏನಾದರು ಒಂದು ಮಾಡಿಕೊಳ್ಳಲೇ ಬೇಕು ಎಂಬ ಉದ್ ದೇಶದಿಂದ ಇಲ್ಲಿ ಬಂದು ಬಿಸಿನೆಸ್ಸ್ ಪ್ರಾರಂಭಿಸಿದೆ ! ೧೮ ವರ್ಷದ ವರೆಗೆ ಮಕ್ಕಳು ನಮ್ಮ ಜ ವಾಬ್ದಾರಿ ಆ ನಂತರ ಜೊತೆಗೆ ಇರಲಿ ಎಂ ದು ನಾವು ಕಟ್ಟು ಬೀಳುವಂತಿಲ್ಲ ಇಷ್ ಟಕ್ಕೂ ಮಕ್ಕಳು ಸ್ವಂತ ಕಾಲ ಮೇಲೆ ತಾ ವು ನಿಂತರೆ ತಂದೆ ತಾಯಿಗೆ ಕುಶಿಯೇ ಅ ಲ್ವ ? ನನ್ನ ೩ ಮಕ್ಕಳು ಅವರದೇ ಆದ ಸ ್ವಂತ ಮನೆ ಕಟ್ಟಿಕೊಂಡಿದ್ದಾರೆ . ನಾ ವು ಇಲ್ಲಿ ಬಂದಾಗ ಮಕ್ಕಳಿನ್ನು ಬಹಳ ಚಿಕ್ಕವರು ಈಗ ನನಗೆ ೩-೪ ವರ್ಷದ ಮೊ ಮ್ಮಕ್ಕಳಿದ್ದಾರೆ" ಎನ್ನುತ್ತಾರೆ ಕ್ ಯಾಟರಿಂಗ್ ಬಿಸಿನೆಸ್ ಮಾಡಿಕೊಂಡಿರುವ ಮೂಲತಃ ಗುಜರಾತ್ ನವರಾದ ಅರವತ್ತು ವ ರ್ಷದ ವಿಷ್ಣು ಪ್ರಸಾದ್ ರವರು. ತಮ್ ಮದೇ ಸ್ವಂತ ಮನೆಯಲ್ಲಿ ಹೆಂಡತಿಯೊಡನೆ ವಾಸಿಸುತ್ತಿದ್ದಾರೆ. ಭಾರತೀಯ ಶೈಲಿ ಯ ಅಡುಗೆಗಳನ್ನು ಆರ್ಡರ್ ತೆಗೆದುಕೊಂ ಡು ಪ್ರತಿ ಮನೆಗೇ ಹೋಗಿ ತಲುಪಿಸುತ್ತಾರೆ . “ಕೆಲವೊಮ್ಮೆ ೫೦ ಜನರ ಆರ್ಡರ್ ಗಳು ಬ ರುತ್ತವೆ ಕೆಲವೊಮ್ಮೆ ೨ ಜನರ ಆರ್ಡರ್ ಕೂಡ ಇರುತ್ತದೆ ಆದರೆ ನಮ್ಮ ಭಾರತೀ ಯರಿಗೆ ಅಡುಗೆ ಮಾಡಿ ಕೊಡುವುದೇ ಒಂದು ಸಂಭ್ರಮ” ಎನ್ನುತ್ತಾರೆ ವಿಷ್ಣು ಪ್ ರಸಾದ್.

ಅವರು ಇಲ್ಲಿ ಬಂದು ನೆಲೆಸಿ ೪೦ ವರ್ ಷಗಳೇ ಕಳೆದಿದ್ದರೂ ಕೂಡ ತಾಯ್ನಾಡಿನ ವ್ಯಾಮೋಹ ಇದ್ದೆ ಇದೆ ಅದಕ್ಕೋಸ್ ಕರವೇ ಭಾರತೀಯ ಶೈಲಿಯ ಅಡುಗೆ ಮಾಡಿ ಇ ಲ್ಲಿ ನೆಲೆಸಿರುವ ಭಾರತೀಯರ ಮನೆಗಳಿ ಗೆ ತಲುಪಿಸುವುದರ ಮೂಲಕ ಅವರೊಂದಿಗೆ ಭಾಂದವ್ಯ ಬೆಳೆಸಿಕೊಳ್ಳುತ್ತಾರೆ.
ಹಳೆಯ ಕಾಲಮಾನದವರಿಗೂ ಈಗಿನವರಿಗೂ ಸರಿಬರುವುದಿಲ್ಲ ಹೊಂದಾಣಿಕೆ ಸ್ವಲ್ಪ ಕಷ್ಟ ಜೊತೆಗೆ ಇದ್ದು ಸಾಕಷ್ಟು ತೊಂ ದರೆ ಆಗುವುದಕ್ಕಿಂತ ದೂರ ದೂರ ಬದುಕಿ ಸಂಬಂಧವನ್ನು ಚೆನ್ನಾಗಿ ಇಟ್ಟುಕೊಳ್ ಳುವುದು ಸರಿ. ಹಬ್ಬಗಳು , ಹುಟ್ಟು ಹಬ್ಬಗಳಿಗೆಲ್ಲ ಒಟ್ಟು ಸೇರಿ ಸಂತೋ ಷದಿಂದ ಆಚರಿಸಿದರೆ ಮನಸ್ಸಿಗೂ ನೆಮ್ ಮದಿ ಇರುತ್ತದೆ ಇಲ್ಲಿಯ ಪದ್ಧತಿಯೇ ಹ ಾಗೆ ಮಕ್ಕಳು ಬೆಳೆದು ದೊಡ್ದವರಾಗುತ್ ತಿದ್ದಂತೆ ಅವರಿಗೆ ತಮ್ಮದೇ ಆದ ಸ್ ವತಂತ್ರತೆ ಇರುತ್ತದೆ ಆಗಾಗ ಬಂದು ಹೋ ಗುತ್ತಿರುವುದೇ ಒಂದು ಖುಷಿ ಎಂಬುದು ಇಲ್ಲಿಯೇ ಸೆಟಲ್ ಆದ ಹಿರಿಯರ ಅಭಿಪ್ ರಾಯ.ಹಣದ ದಾಹ ತೀರಿಸಿಕೊಳ್ಳಲಿಕ್ಕಾ ಗಿ ಬಂದ ಎಷ್ಟೋ ಭಾರತೀಯರು ಹಣ ಕೈ ಸ ೇರುವುದರ ಜೊತೆಗೆ ಯಾವುದೇ ಜಂಜಡ ಇಲ್ ಲದ ಬದುಕು ಸಿಗುತ್ತಿದೆ ಬಿಟ್ಟು ಹೋ ಗುವುದೇಕೆ ಎಂಬ ನಿರ್ಧಾರದಿಂದ ಇಲ್ಲಿ ಯೇ ನೆಲೆಸಲು ನಿರ್ಧರಿಸಿದ್ದಾರೆ.
“ಭಾರತದಲ್ಲಿ ಕೆಲಸ ಮಾಡುತ್ತಿದ್ದೆ ಸ ಂಬಳ ಸಾಕಾಗುತ್ತಿರಲಿಲ್ಲ ಅಲ್ಲಿಂದ ಇ ಲ್ಲಿ ಬರುವಾಗ ೫-೬ ತಿಂಗಳು ಇದ್ದು ಹ ೋದರಾಯಿತು ಎಂದು ಸಂಸಾರ ಸಮೇತ ಬಂದಿ ದ್ದೆ ಆದರೆ ಇಲ್ಲಿಯ ವಾತಾವರಣ ಯಾವು ದೇ ಚಿಂತೆಯಿಲ್ಲದ, ಸ್ಟ್ರೆಸ್ ಇಲ್ಲದ ಜೀವನ ಇಷ್ಟವಾಯಿತು ಹಾಗಾಗಿ ಇಲ್ಲೇ ಸೆಟಲ್ ಆಗುವ ಯೋಜನೆ ಮಾಡಿದ್ದೇನೆ . ನನ್ನ ತಂದೆಗೆ ನಾನಿಲ್ಲಿರುವುದು ಇಷ್ ಟವಿಲ್ಲ ಆದರೆ ಇಲ್ಲಿಯ ಜೀವನಕ್ಕೆ ಒಗ ್ಗಿ ಹೋಗಿದ್ದೇವೆ ವರ್ಷದಲ್ಲಿ 3 ತಿಂ ಗಳು ಅವರೇ ಇಲ್ಲಿ ಬಂದಿರುತ್ತಾರೆ ೨ ವರ್ಷಕ್ಕೊಮ್ಮೆ ನಾವು ಭಾರತಕ್ಕೆ ಹೋ ಗಿ ಬರುತ್ತೇವೆ ನನ್ನ ಮಗ ಕೂಡ ಇಲ್ಲೇ ಹುಟ್ಟಿರುವುದು ಅವನಿಗೆ ಭಾರತಕ್ಕೆ ಹೋದರೆ ಅಲ್ಲಿಯ ವಾತಾವರಣ ಹಿಡಿಸುವು ದಿಲ್ಲ ಅದಕ್ಕೆ ನಾವು ಇಲ್ಲೇ ಒಂದು ಸ ್ವಂತ ಮನೆ ಕೊಂಡುಕೊಂಡಿದ್ದೇವೆ” ಎನ್ ನುತ್ತಾರೆ ೩೮ ವರ್ಷದ ಮೂಲತಃ ಮಹಾರಾ ಷ್ಟ್ರದವರಾದ ಮಂದಾರ ಎನ್ನುವವರು .
ಇನ್ನು ಕೆಲವರು ಇಲ್ಲಿ ಒಂಟಿ ಎನಿಸು ತ್ತದೆ ಈಗಿನ ಮಕ್ಕಳಿಗೆ ಸಂಬಂಧಿಕರ ಜ ೊತೆ ಯಾವುದೇ ರೀತಿಯ ಸಂಪರ್ಕವೇ ಇರು ವುದಿಲ್ಲ . ಅಜ್ಜ ಅಜ್ಜಿ ತುಂಬು ಸಂ ಸಾರದಲ್ಲಿ ಬೆಳೆಯುವ ಮಕ್ಕಳು ಹೆಚ್ಚು ಚಟುವಟಿಕೆ ಯಿಂದ ಕೂಡಿರುತ್ತದೆ ಆದರ ೆ ಇಲ್ಲಿ ಯಾರ ಸಂಪರ್ಕವು ಇರುವುದಿಲ್ ಲ ಕೇವಲ ಅಪ್ಪ ಅಮ್ಮ ಇದರಿಂದ ಮಕ್ಕಳು ಬೇರೆಯವರೊಂದಿಗೆ ಹೊಂದಾಣಿಕೆ ಮಾಡಿ ಕೊಳ್ಳಲು ಕಷ್ಟಪಡುತ್ತಾರೆ ಒಂದು ಎರಡ ು ವರ್ಷಗಳವರೆಗೆ ಇಲ್ಲಿದ್ದರೆ ಸರಿ ಆ ದರೆ ಮಕ್ಕಳು ಶಾಲೆಗೆ ಹೋಗುವಂತಾದ ಮೇ ಲೆ ಭಾರತವೇ ಚಂದ ನಮ್ಮ ಭಾರತದಲ್ಲಿ ಸ ಿಕ್ಕುವಷ್ಟು ವಿದ್ಯಾಭ್ಯಾಸ ಇಲ್ಲಿ ಸ ಿಗುವುದಿಲ್ಲ ಇಲ್ಲಿ ಮಕ್ಕಳಿಗೆ ಆಟಕ್ ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾ ರೆ ಆದರೆ ಮಧ್ಯದಲ್ಲಿ ಬಿಟ್ಟು ಭಾ ರತಕ್ಕೆ ಹಿಂತಿರುಗಿ ಹೋದರೆ ಮಕ್ಕಳ ಓದಿಗೆ ಕಷ್ಟವಾಗುತ್ತದೆ ಭಾರತದಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಮಕ್ಕಳ ಪ್ರಾರಂಭದ ವಿದ್ಯಾಭ್ಯಾಸ ಭಾರತದಲ್ಲೇ ಆಗಬೇಕು ಆಗ ಮಕ್ಕಳು ಇನ್ನೂ ಬುದ್ಧಿವಂತರಾಗುತ್ತಾರೆ ಇಲ್ಲದಿದ್ದರೆ ಕಷ್ಟವಾಗುತ್ತದೆ ಎನ್ ನುತ್ತಾರೆ ೧-೨ ವರ್ಷದ ಮಕ್ಕಳಿರುವ ತಾಯಂದಿರು.
ನಮ್ಮ ದೇಶದಲ್ಲೇ ಹುಟ್ಟಿ ಬೆಳೆದು ಓದ ಲು ಅಥವಾ ಮನೆಕಟ್ಟಲು ಮಾಡಿಕೊಂಡ ಸಾ ಲ ತೀರಿಸಲು ಅಥವಾ ಹಣಕ್ಕೋಸ್ಕರ ಬಂದ ಎಷ್ಟೋ ಮಂದಿ ಹೆಂಡತಿ ಮಕ್ಕಳನ್ನು ಅಲ ್ಲೇ ಬಿಟ್ಟು ಇಲ್ಲಿ ಒಂಟಿ ಜೀವನ ಸಾ ಗಿಸುತ್ತಿದ್ದಾರೆ. ಹಣಕ್ಕಾಗಿ ಏನಾ ದರು ಹೊಂದಾಣಿಕೆ ಮಾಡಿಕೊಳ್ಳಲೇ ಬೇಕು . ಭಾರತದಲ್ಲಿ ಗಗನಕ್ಕೆ ಏರುತ್ತಿರುವ ಎಲ್ಲ ವಸ್ತುಗಳ ಬೆಲೆ ಹಿಂತಿರುಗಿ ಹ ೋಗಲು ಭಯ ಹುಟ್ಟಿಸುತ್ತದೆ ಎಂದು ಹೇ ಳುವವರೂ ಇದ್ದಾರೆ. ಅಲ್ಪ ಸಮಯಕ್ಕೊಸ್ ಕರ ಬಂದು ೩ ತಿಂಗಳು ಗಳಿದ್ದು ಕೂಡ ಹ ಣ ಮಾಡಿಕೊಂಡು ಹೋಗಬಹುದು ಆದರೆ ಅದರಿ ಂದ ಒಂದು ಹಂತದ ಸಾಲಗಳನ್ನು ತೀರಿ ಸಬಹುದಷ್ಟೇ ಆದ್ದರಿಂದ ,ಬಂದರೆ ಕೊನೆ ಪಕ್ಷ ಒಂದು ವರ್ಷಕ್ಕಾದರೂ ಬರಬೇಕು . ಕುಟುಂಬ ಸಮೇತ ಬಂದು ನೆಲೆಸಿ ದೇಶ ನೋ ಡಿಕೊಂಡು ಹೋಗಲು ಈ ದೇಶ ಸೂಕ್ತ ,ಇಲ್ ಲೇ ಪೆರ್ಮನೆಂಟ್ ಆಗಿ ನೆಲೆಸಲು ಕಷ್ಟ ಎಂಬುದು ಇಲ್ಲಿ ಹೊಸದಾಗಿ ಬಂದ ಅಂ ದರೆ ೧-೨ ವರ್ಷಗಳಿಂದ ಇಲ್ಲಿರುವ ೩೦- ೩೫ ಆಸುಪಾಸಿನವರ ಅಭಿಪ್ರಾಯ .
ಆದರೆ ಬಹಳ ಹಿಂದೆಯೇ ಅಂದರೆ ಭಾರತಕ್ ಕೆ ಸ್ವತಂತ್ರ ಸಿಗುವ ಸಂದರ್ಭದಲ್ಲಿ ಬಂದು ನೆಲೆಸಿದ ಹಿರಿಯರು ಇಲ್ಲಿಯ ಬದ ುಕಿನ ರೀತಿಗೆ ಹೊಂದಿಕೊಂಡು ಬಿಟ್ಟಿ ದ್ದಾರೆ ಇಲ್ಲಿಯೇ ಸಾಕಷ್ಟು ಭಾ ರತದವರಿದ್ದಾರೆ ದೇವಸ್ಥಾನಗಳಿವೆ ವಾ ಕಿಂಗ್ ಗಳಿಗೆ ಪಾರ್ಕ್ ಗಳಿವೆ . ಲಂ ಡನ್ ನಲ್ಲಿ ಒಂದು ಈಸ್ಟ್ಹ್ ಹ್ಯಾಮ್ ಎಂಬ ಸ್ಥಳದಲ್ಲಿ ಕೇವಲ ಏಷ್ಯ ದವರೆ ಇರುವುದು ಅದರಲ್ಲೂ ಹೆಚ್ಚು ಭಾರತೀಯರು ,ಅಲ್ಲಿ ಹೋಟೆಲ್ ಗಳು ಕೂಡ ಭಾರತದ್ದೆ ೨ ದೇವಸ್ಥಾನಗಳು ಹತ್ತಿರದಲ್ಲೇ ಇದೆ . ಇಲ್ಲಿ ನಮಗೆ ಏನು ತೊಂದರೆ ಎನಿಸು ವುದೇ ಇಲ್ಲ ಬೇಕಾದಷ್ಟು ಸ್ನೇಹಿತರು ಸಿಗುತ್ತಾರೆ ಭಾರತಕ್ಕೆ ನಾವು ಹೋಗು ವುದೇ ಇಲ್ಲ ಎನ್ನುತ್ತಾರೆ ಹಿರಿಯರು .
ಲಂಡನ್ ನಲ್ಲಿ ಕರ್ನಾಟಕದ ಜನರ ಸಂಖ್ ಯೆ ಕಡಿಮೆಯೇ ಎನ್ನಬಹುದು ಇಲ್ಲಿ ಹೆ ಚ್ಚು ತಮಿಳುನಾಡಿನವರನ್ನು ನೋಡಬಹುದು ಅದರಲ್ಲೂ ಬಹಳ ವರ್ಷಗಳಿಂದ ಇಲ್ಲಿಯೇ ನೆಲೆ ಹೊಂದಿರುವವರಲ್ಲಿ ತಮಿಳಿನವರು ಹೆಚ್ಚು .
"ನಮ್ಮ ಮಗ ಇಲ್ಲೇ ಮನೆ ತೆಗೆದುಕೊಂಡಿದ್ದಾನೆ ಭಾರತೀಯ ಹುಡುಗಿಯನ್ನೇ ನೋಡಿ ಮಾಡುವೆ ಮಾಡಿದೆವು ಈಗ ಒಂದು ಮಗು ಇದೆ ಅದನ್ನು ನೋಡಿಕೊಳ್ಳಲು ಇಲ್ಲಿ ಬಂದಿದ್ದೇವೆ ಇಲ್ಲಿಯ ವಾತಾವರಣ ನಮಗೆ ಸರಿ ಹೋಗುವುದಿಲ್ಲ ತುಂಬಾ ಚಳಿ ಹೊರಗೆ ಕಾಲಿಡಲಾಗದು, ಮನೆಯಲ್ಲಿಯೇ ಕುಳಿತು ಬೇಜಾರು ಎಷ್ಟಾದರೂ ನಮ್ಮ ನಾಡೆ ನಮಗೆ ಚಂದ ಮಕ್ಕಳು ಜೊತೆಗಿಲ್ಲ ಎಂದು ಬೇಸರವಾಗುತ್ತದೆ ಆದರು ಬೇರೆ ದಾರಿ ಇಲ್ಲ ಇರಲೇ ಬೇಕು "ಎಂಬುದು ಭಾರತದಿಂದ ೨-೩ ತಿಂಗಳಿಗೆ ಬಂದಿರುವ ದೆಹಲಿಯ ವರುಣ್ ಶರ್ಮ ರವರ ಅಳಲು .
ಜನರೇಶನ್ ಗ್ಯಾಪ್ ಎಲ್ಲ ಕಡೆ ಇದೆ ಇಲ್ಲಿಯೇ ನೆಲೆಸಿರುವ ಹಿರಿಯರು ಮತ್ತು ಕಿರಿಯರ ನಡುವೆ ಇದರ ಬಗ್ಗೆ ವಿಚಾರಿಸಿದಾಗ ಹಿರಿಯರಿಂದ ಕೇಳಿಬಂದ ಮಾತುಗಳೆಂದರೆ " ನಾವು ಭಾರತದಿಂದ ಹೊರಗಿದ್ದರೂ ನಮ್ಮ ಆಚಾರ ಸಂಸ್ಕೃತಿಗಳನ್ನು ಬಿಟ್ಟಿಲ್ಲ ಪ್ರತಿದಿನ ದೇವರ ಪೂಜೆ , ಭಾರತೀಯ ಅಡುಗೆ , ಹಬ್ಬ ಗಳನ್ನೂ ತಪ್ಪದೆ ಆಚರಿಸಿಕೊಂಡು ಬರುತ್ತಿದ್ದೇವೆ ನಾವು ಇಲ್ಲೇ ನೆಲಸಿದರು ನಮ್ಮ ಭಾರತದ ಆಚರಣೆ ಎಂದಿಗೂ ಬಿಡಲಾರೆವು ಆದರೆ ಮಕ್ಕಳು ಕುಡಿತ ಸಿಗರೇಟ್ ಇವುಗಳೆಲ್ಲ ಇಲ್ಲಿ ಸಾಮಾನ್ಯ ಎನ್ನುತ್ತಾರೆ ನಮ್ಮ ಮನಸ್ಥಿತಿ ಅವರೊಂದಿಗೆ ಸ್ವಲ್ಪವು ಹೊಂದಾಣಿಕೆ ಬರುವುದಿಲ್ಲ " ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಅದೇ ರೀತಿ ಯುವಕರನ್ನು ಕೇಳಿದರೆ ನಾವು ಬೆಳೆದಿದ್ದು ಇಲ್ಲಿಯೇ ಸ್ನೇಹಿತರೆಲ್ಲ ಇಲ್ಲಿನವರೇ ಅವರೊಂದಿಗೆ ಬೆರೆಯಲೇ ಬೇಕು ಸಿಗರೆಟ್, ಕುಡಿತ ಇವೆಲ್ಲ ಇಲ್ಲಿ ಸಾಮಾನ್ಯವಾದುದು ಇಲ್ಲಿಯ ರೂಲ್ಸ್ ಗಳೇ ಹಾಗೆ ಮಕ್ಕಳು ಬೆಳೆದು ದೊಡ್ದವರಾಗುತ್ತಿದ್ದಂತೆ ಅವರಿಗೆ ಸ್ವತಂತ್ರರಾಗಲು ಹಕ್ಕಿದೆ ಅದಕ್ಕೆ ನಮ್ಮ ದಾರಿ ನಮಗೆ .ತಂದೆ ತಾಯಿ ಬಗ್ಗೆ ಗೌರವ ಇದೆ ಸಮಯವಿದ್ದಾಗ ಹೋಗಿ ನೋಡಿಕೊಂಡು ಬರುತ್ತೇವೆ . ಈಗಿನ ವಾತಾವರಣಕ್ಕೆ ತಕ್ಕ ಹಾಗೆ ಇರಬೇಕು ಎಂಬ ಉಡಾಫೆಯ ಮಾತು ಕೂಡ ಕೇಳಿಬಂತು .
ಒಟ್ಟಾರೆಯಾಗಿ ಇಲ್ಲಿಯೇ ಬಂದು ಪೆರ್ಮನೆಂಟ್ ಆಗಿ ಸೆಟಲ್ ಆದ ಹಿರಿಯರು ಮತ್ತು ಯುವಕರಿಗೆ ಭಾರತಕ್ಕೆ ಹೋಗುವ ಬಗ್ಗೆ ಯಾವುದೇ ಯೋಜನೆಯಿಲ್ಲ ಅವರು ಇಲ್ಲಿಯ ವಾತಾವರಣ ಮತ್ತು ಪರಿಸ್ಥಿತಿಗಳಿಗೆ ಸಂಪೂರ್ಣವಾಗಿ ಹೊಂದಿಕೊಂಡಿದ್ದಾರೆ ಇಲ್ಲಿಯ ಜೀವನ ಚೆನ್ನಾಗಿದೆ ಯಾವುದೇ ಟೆನ್ಶನ್ ಗಳಿಲ್ಲ ಎನ್ನುತ್ತಾರೆ . ಆದರೆ ಭಾರತದಲ್ಲೇ ಹುಟ್ಟಿ ಬೆಳೆದು ಅಲ್ಲೇ ವಿಧ್ಯಾಭ್ಯಾಸ ಮಾಡಿ ಹಣಕ್ಕೋಸ್ಕರ ಇಲ್ಲಿ ಬಂದಿರುವ ಇತ್ತೀಚಿನ ಹೆಚ್ಚಿನ ಯುವಕರಲ್ಲಿ ನಮ್ಮ ನಾಡೇ ಚಂದ ಇಲ್ಲಿ ಇದ್ದರೆ ಸಂಬಂಧಗಳು ಚೆನ್ನಾಗಿರುವುದಿಲ್ಲ ಸಂಬಂಧಿಕರೊಂ ದಿಗೆ ಯಾವುದೇ ರೀತಿಯ ಒಡನಾಟವಿರುವುದಿಲ್ಲ ಸ್ವಲ್ಪ ದಿನಗಳ ವರೆಗೆ ಇರಲು ಇದು ಸೂಕ್ತ ಎಂಬ ಅಭಿಪ್ರಾಯವಿದೆ .
- ಅರ್ಪಿತಾ ಹರ್ಷ
No comments:
Post a Comment