ಲಂಡನ್ ನಲ್ಲಿ ಇದ್ದು ಬಹಳ ದಿನಗಳಾದ ಮೇಲೆ ಯುರೋಪ್ ಗೆ ಅದರಲ್ಲೂ ಸ್ವಿಸ್ಸ್ ಎಂಬ ಕನಸಿನ ಸ್ಥಳಕ್ಕೆ ಒಮ್ಮೆ ಭೇಟಿ ನೀಡಲೇ ಬೇಕು ಎಂದು ಮನಸ್ಸು ಮಾಡಿದ್ದಾಗಿತ್ತು . ಹಾಗೆಯೇ ಸುಮಾರು ದಿನಗಳ ಮೀನಾ ಮೇಶಗಳ ನಂತರ ಹೋಗುವುದು ಎಂಬುದನ್ನು ಖಚಿತ ಪಡಿಸಿಕೊಂಡು ಭಾರತದವರದ್ದೆ ಆದ ಸ್ಟಾರ್ ಟೂರ್ಸ್ ಎಂಬ ಪ್ರವಾಸಿ ವಿಭಾಗದವರನ್ನು ಫೋನ್ ಮೂಲಕ ವಿಚರಿಸಿದ್ದಾಯಿತು . ಅವರು ಹೇಳುವ ಪ್ರಕಾರ ಸ್ಟಾರ್ ಟೂರ್ಸ್ ನಲ್ಲೆ ಹೋದರೆ ಅವರದೇ ಆದ ಬಸ್ ಎಲ್ಲ ಸ್ಥಳಗಳಿಗೆ ಕರೆದುಕೊಂಡು ಹೋಗಿ ಸರಿಯಾದ ಮಾಹಿತಿ ನೀಡುತ್ತದೆ ಜೊತೆಗೆ ಊಟದ ಮತ್ತು ತಿಂಡಿಯ ವ್ಯವಸ್ಥೆ ಕೂಡ ಇರುತ್ತದೆ ಹೊಸ ಸ್ಥಳ ಗಳಾಗಿದ್ದರಿಂದ ಎಲ್ಲಿ ಹೋಗಬೇಕು ಹೇಗೆ ಹೋಗಬೇಕು ಎಂಬ ಗೊಂದಲಗಳಿರುವುದಿಲ್ಲ ಎಲ್ಲ ದೃಷ್ಟಿ ಇಂದ ಸ್ಟಾರ್ ಟೂರ್ಸ್ ನಲ್ಲಿ ಹೋಗುವುದೇ ಒಳ್ಳೆಯದು ಎಂಬ ನಿರ್ಧಾರಕ್ಕೆ ಬಂದ ನನ್ನ ಪತಿ ಹರ್ಷ ಇಬ್ಬರಿಗೂ ಟಿಕೆಟ್ ಬುಕ್ ಮಾಡಿದರು. ಅಲ್ಲಿಂದ ಪ್ರಾರಂಭವಾಯಿತು ನಮ್ಮ ಸ್ವಿಡ್ಜ್ ರ್ ಲ್ಯಾಂಡ್ ಗೆ ಹೋಗುವ ಸಂಭ್ರಮ.
ಹೋಗುವ ತೀರ್ಮಾನ ವನ್ನು ಸುಮಾರು ೨ ತಿಂಗಳ ಮೊದಲೇ ಅಂದರೆ ಫೆಬ್ರವರಿ ಯಲ್ಲೇ ಮಾಡಿದರೂ ಅದಕ್ಕೆ ವೀಸಾ ನಮ್ಮ ಕೈ ಸೇರಲು ಸುಮಾರು ೧ ತಿಂಗಳು ಹಿಡಿಯಿತು . ಅದಾದ ನಂತರ ನಮ್ಮ ಶಾಪಿಂಗ್ ಮಾಡುವ ಆಸೆಯನ್ನು ತೀರಿಸಿಕೊಂಡದ್ದು ಆಯಿತು .ಸುಮಾರು ದಿನಗಳಿಂದ ಮನಸಿನಲ್ಲೇ ಇದ್ದ ಆಸೆಗಳೆಲ್ಲ ಗರಿಗೆದರಿ ಎಲ್ಲ ಆಸೆ ಯನ್ನು ಸಾಧ್ಯವಾದಷ್ಟು ತೀರಿಸಿಕೊಳ್ಳುವ ಪ್ರಯತ್ನವನ್ನು ನಾನು ಮಾಡಿದ್ದೆ.ಇದು ಮುಗಿಯದ ಆಸೆ ಎಂದು ಅರಿತೋ ಏನೋ ಹರ್ಷ ಇನ್ನೊಮ್ಮೆ ಎಲ್ಲವನ್ನು ಕೊಡಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿ ಮನೆಗೆ ಕರೆದುಕೊಂಡು ಬಂದಿದ್ದರು. ಬಟ್ಟೆ ಕೊಂದು ತಂದರೆ ಮುಗಿಯಿತೇ ಯಾವ ದಿನ ಯಾವ ಬಟ್ಟೆ ಹಾಕಿಕೊಳ್ಳಬೇಕು ಎಷ್ಟು ಬಟ್ಟೆ ತೆಗೆದುಕೊಳ್ಳಬೇಕು ಹೀಗೆ ಜಿಜ್ಞಾಸೆ ಯೊಂದಿಗೆ ಪ್ಯಾಕಿಂಗ್ ಕೂಡ ಭರದಿಂದಲೇ ಆರಂಭಿಸಿ ಬೇಗ ಮುಗಿಸಿದ್ದು ಆಯಿತು.
ಬೆಳಗ್ಗಿನ ತಿಂಡಿ ಮತ್ತು ರಾತ್ರಿಯ ಊಟದ ವ್ಯವಸ್ಥೆಯನ್ನು ಪ್ಯಾಕೇಜ್ ಟೂರ್ ನವರೇ ಕೊಡುವುದಾಗಿ ಹೇಳಿದ್ದರಿಂದ ಎನನ್ನು ಹೊಸದಾಗಿ ಮಾಡುವ ಅವಶ್ಯಕತೆ ಇರಲಿಲ್ಲ. ಅದು ಅಲ್ಲದೆ ಅವರು ಅಪ್ಪಟ ಭಾರತದ ಆಹಾರ ನೀಡುವುದಾಗಿ ಹೇಳಿದ್ದು ಪ್ರವಾಸಕ್ಕೆ ಹೋಗಲು ಇನ್ನಷ್ಟು ಹುಮ್ಮಸ್ಸು ನೀಡಿತ್ತು .
ಹೊರದೇಶಗಳಲ್ಲಿ ಭಾರತದ ಆಹಾರ ಸಿಗುವುದು ಅದರಲ್ಲೂ ಸಸ್ಯಾಹಾರಿ ಆಹಾರ ಸಿಗುವುದು ಬಹಳ ಕಷ್ಟ ನನಗೆ ಅಡುಗೆಯ ಬಗ್ಗೆ ಹೆಚ್ಚು ಆಸಕ್ತಿ ಇದೆ ಆದರು ಎಲ್ಲವನ್ನು ಒಂದೇ ಭಾರಿ ಮಾಡುಲು ಆಗುವುದಿಲ್ಲ ಮತ್ತು ಕೆಲವೊಮ್ಮೆ ಹೋಟೆಲ್ ಗಳಿಗೆ ಹೋದರು ಸಿಕ್ಕಾಪಟ್ಟೆ ದುಭಾರಿ ಆದದ್ದರಿಂದ ಎಲ್ಲವನ್ನು ತಿನ್ನಲು ಆಗುವುದಿಲ್ಲ . ಆದ್ದರಿಂದ ಪ್ಯಾಕೆಜ್ ಟೂರ್ ನಲ್ಲಿ ಹೋದರೆ ಭಾರತೀಯ ಊಟ ಸಿಗುವುದು ಎಂಬುದು ಸಂತೋಷ ನೀಡಿತ್ತು.ಎಪ್ರಿಲ್ ತಿಂಗಳಿನಲ್ಲಿ ಸ್ವಿಸ್ಸ್ ತುಂಬಾ ಚೆನ್ನಾಗಿರುತ್ತದೆ ಅಲ್ಲಿಯ ವಾತಾವರಣ ಬೇಸಿಗೆಯು ಅಲ್ಲ ಚಳಿಗಾಲವು ಅಲ್ಲ ಹಾಗಿರುತ್ತದೆ ಆದ್ದರಿಂದ ಈಗ ಹೋಗುವುದೇ ಒಳಿತು ಎಂದು ಏಪ್ರಿಲ್ನಲ್ಲೇ ಹೊರಟಿದ್ದೆವು .
ಮೊದಲ ದಿನ ರಾತ್ರಿ ನಮ್ಮ ಪ್ರವಾಸ ಪ್ರಾರಂಭವಾಯಿತು ನಾವಿರುವುದು ಗ್ರೇಟರ್ ಲಂಡನ್ ನಲ್ಲಾಗಿರುವುದರಿಂದ ಲಂಡನ್ ನ ಈಸ್ಟ್ ಹ್ಯಾಮ್ ಎಂಬಲ್ಲಿಗೆ ಹೋಗಲು ಸುಮಾರು ೨ ತಾಸುಗಳು ಬೇಕು ಅದ್ದರಿಂದ ೮.೩೦ ಕ್ಕೆ ಅಲ್ಲಿ ಸೇರಬೇಕೆಂದು ೬ ಗಂಟೆಗೆ ಹೊರಟೆವು ಅಲ್ಲಿ ಹೋಗಿ ಊಟ ಮಾಡುವಷ್ಟು ಸಮಯ ಇರುವುದಿಲ್ಲ ಎಂದು ಮನೆಯಲ್ಲಿಯೇ ಸ್ವಲ್ಪ ಊಟ ಮಾಡಿ ಹೊರಟೆವು . ನಮ್ಮ ಮನೆಯಿಂದ ಈಸ್ಟ್ ಹ್ಯಾಮ್ ಅನ್ನು ತಲುಪಲು ಕನಿಷ್ಠ ೪ ಟ್ರೈನ್ ಅನ್ನು ಹತ್ತಿ ಇಳಿಯಲೇ ಬೇಕು ಹಾಗೆಯೇ ನಾವು ಅಲ್ಲಿ ತಲುಪುವಷ್ಟರಲ್ಲಿ ಊಟ ಮಾಡಿರುವುದು ಮರೆತುಹೊದಂತಾಗಿತ್ತು. ಇನ್ನು ಬೆಳಗಿನವರೆಗೂ ಹೇಗೆ ಕಳೆಯುವುದು ಎಂಬ ಚಿಂತೆ ಬೇರೆ ಸರಿ ಅಲ್ಲಿಯೇ ಇದ್ದ ಮೆಕ್ ದೊನಾಲ್ದ್ಸ್ ಅನ್ನು ಹೊಕ್ಕು ತಕ್ಕ ಮಟ್ಟಿಗೆ ಹೊಟ್ಟೆ ತುಂಬಿಸಿಕೊಂಡು ಹೊರಟೆವು.ಅಷ್ಟರಲ್ಲಿ ಬಸ್ ಹೊರಡಲು ತಯಾರಾಗಿ ನಮ್ಮನ್ನು ಬಿಟ್ಟು ಇನ್ನೊಂದಿಬ್ಬರು ಬರುವವರು ಇದ್ದದ್ದರಿಂದ ಕಾಯುತ್ತಿದ್ದರು. ಬಸ್ ನಲ್ಲಿ ನಮಗೆ ನಿಗದಿ ಇರಿಸಿದ ಸೀಟ್ ಅನ್ನು ಹಿಡಿದು ಆಸೀನರಾದೆವು . ಅಲ್ಲಿಂದ ಪ್ರಾರಂಭವಾಯಿತು ನಮ್ಮ ಪ್ರವಾಸ.
ಅರ್ಪಿತಾ ಹರ್ಷ
ಅರ್ಪಿತಾ ಹರ್ಷ
No comments:
Post a Comment