Published in Vijayanext 24/01/2014
ಪಿಜ್ಜಾವನ್ನು ಆಗಾಗ ತಂದು ತಿನ್ನುವುದು ನನಗೆ ಬಹಳ ಇಷ್ಟದ ಸಂಗತಿ.ಅಡುಗೆ ಮಾಡಲು ಬೇಸರವಾದಾಗ ಲಂಡನ್ ನಲ್ಲಿ ನಮ್ಮ ಮನೆಯ ಹತ್ತಿರ ಒಳ್ಳೆಯ ಇಂಡಿಯನ್ ಹೋಟೆಲ್ ಇರದಿರುವ ಕಾರಣ ಪಿಜ್ಜಾ ದ ಮೊರೆ ಹೋಗುವುದು ಅನಿವಾರ್ಯವಾಗಿದೆ.ಹೀಗೆ ಪಿಜ್ಜಾ ಪ್ರತಿ ಭಾರಿ ತರಿಸುವಾಗಲೆಲ್ಲ ಯೋಚಿಸುತ್ತಿದ್ದೆ ನಾವ್ಯಾಕೆ ಇಷ್ಟು ದುಡ್ಡು ಕೊಟ್ಟು ತರಿಸಬೇಕು ಮನೆಯಲ್ಲಿಯೇ ಮಾಡಿದರೆ ಹೇಗೆ ಎಂದು.ಯೋಚನೆ ತಲೆಗೆ ಬಂದ ತಕ್ಷಣ ಒಂದು ನಿಮಿಶವೂ ತಡ ಮಾಡದೆ ನೆಟ್ ನಲ್ಲಿ ಹುಡುಕಿ ಕೊನೆಗೆ ಒಂದು ಸುಲಭ ವಿಧಾನ ನೋಡಿ ಹಾಗೆಯೇ ಮಾಡುವುದು ಎಂದು ತೀರ್ಮಾನಿಸಿದೆ.ಆರ್ಡರ್ ಮಾಡಬೇಕಾದ ಪಿಜ್ಜಾವನ್ನು ತಕ್ಷಣ ಕ್ಯಾನ್ಸಲ್ ಮಾಡಿ ಅಡುಗೆ ಮನೆಗೆ ಹೊರಟೆ.

ಅದಕ್ಕಾಗಿ ಬೇಕಾದ ಟೊಮೇಟೊ,ಈರುಳ್ಳಿ,ಕ್ಯಾಪ್ಸಿಕಂ ಎಲ್ಲವನ್ನು ಸ್ಲೈಸ್ ಮಾಡಿಟ್ಟುಕೊಂಡು,ಮೈದಾ ಹಿಟ್ಟನ್ನು ಚಪಾತಿ ಹದಕ್ಕೆ ಅಡುಗೆ ಸೋಡಾ ಬೆರೆಸಿ ಕಲೆಸಿದೆ.ನಂತರ ಅದನ್ನು ಪಿಜ್ಜಾ ಎಷ್ಟು ದೊಡ್ಡ ಬೇಕು ಆ ಆಕಾರ ಬರುವಂತೆ ತಟ್ಟಿ ಅದರ ಮೇಲೆ ಹೆಚ್ಚಿಟ್ಟುಕೊಂಡ ತರಕಾರಿಗಳನ್ನು ಉದುರಿಸಿದೆ.
ನಂತರ ಓವನ್ ನಲ್ಲಿ ಇದನ್ನು ಸರಿಯಾಗಿ ಇಟ್ಟು ಅವರು ತಿಳಿಸಿದಂತೆಯೇ ಸರಿಯಾಗಿ ಬೇಯಲು ಇಟ್ಟೆ.ಎಲ್ಲ ಸರಿಯಾಗಿಯೇ ಇತ್ತು ಚೀಸ್ ಒಂದು ಹಾಕಬೇಕಿತ್ತು.ಆದರೆ ಚೀಸ್ ಮನೆಯಲ್ಲಿ ಇರಲಿಲ್ಲ.ದಿಡೀರ್ ನಿರ್ಧಾರವಾದ್ದರಿಂದ ಹೋಗಿ ತರುವಷ್ಟು ತಾಳ್ಮೆ ಇರಲಿಲ್ಲ.ಸ್ವಲ್ಪ ಹೊತ್ತಿನ ನಂತರ ಬಿಸಿಬಿಸಿ ಹೊಗೆಯಾಡುವ ಪಿಜ್ಜಾ ತಯಾರಾಗಿತ್ತು.ಚೀಸ್ ಇಲ್ಲದ ಪಿಜ್ಜಾ! .
ನೋಡಿದ ತಕ್ಷಣ ನನಗೆ ಏನೋ ಮಿಸ್ ಆಗಿದೆ ಎನಿಸಿದರೂ ಸಮಾಧಾನ ಮಾಡಿಕೊಂಡು ಪತಿಯ ಮುಂದೆ ತೆಗೆದುಕೊಂಡು ಹೋಗಿ ಇಟ್ಟೊಡನೆ ಒಮ್ಮೆ ಗಾಬರಿಯಾದರು.ಅದಾರೂ ನೋಡೇ ಬಿಡೋಣ ಎಂದೆನಿಸಿ ಇಬ್ಬರೂ ತಿನ್ನಲು ಪ್ರಾರಂಭಿಸಿದೆವು.ಎಲ್ಲವೂ ಸರಿ ಇತ್ತು ಆದರೆ ಚೀಸ್ ಮಾತ್ರ ಇರಲಿಲ್ಲ.ಅಷ್ಟು ರುಚಿಕರವಾದ ಪಿಜ್ಜಾ ಸಿಗುವಾಗ ಈ ರೀತಿ ಕಷ್ಟ ಪಟ್ಟು ತಿನ್ನಲು ಕಷ್ಟಪಡಬೇಕಾದ ಪಿಜ್ಜಾ ಮಾಡುವ ಅವಶ್ಯಕತೆ ಇತ್ತಾ ಎಂದು ನನಗೆ ಅನ್ನಿಸಿತು.ತಕ್ಷಣ ಆನ್ಲೈನ್ ನಲ್ಲಿ ೨ ಪಿಜ್ಜಾ ಆರ್ಡರ್ ಮಾಡಿಬಿಟ್ಟೆವು. ನನ್ನ ನಂಬಿ ಮತ್ತೆಂದೂ ನಾನು ಪಿಜ್ಜಾ ಮಾಡುವ ಪ್ರಯತ್ನ ಮಾಡಲಿಲ್ಲ.ಮಾಡುವುದೂ ಇಲ್ಲ!!
ಅರ್ಪಿತಾ ಹರ್ಷ
ಲಂಡನ್